Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಮುಂದುವರೆದಿದೆ ಗ್ಯಾಸ್ ಟ್ಯಾಂಕರ್ ಚಾಲಕರ ಹೋರಾಟ

Monday, 4 January 2016

ಮಂಗಳೂರಿನ ಎಂಆರ್ ಪಿಎಲ್ ಮತ್ತು ಹೆಚ್ ಪಿಸಿಎಲ್ ಗ್ಯಾಸ್ ಸಾಗಾಟದ ಬುಲೆಟ್ ಟ್ಯಾಂಕರ್ ಚಾಲಕ, ನಿರ್ವಾಹಕರ ಪ್ರತಿಭಟನೆಯಲ್ಲಿ ಕಳೆದ 6 ದಿನಗಳಿಂದ ಹೋರಾಟಕ್ಕೆ ಇಳಿದಿದ್ದಾರೆ. 2015 ನನ್ನ ಚಳವಳಿಯ ಬದುಕಿನ ಮಹತ್ವದ ವರ್ಷ. ಈ ವರ್ಷವಿಡೀ ಸಂಘರ್ಷಮಯ ಹೋರಾಟದಲ್ಲೆ ಕಳೆದೆ. ವರ್ಷದ ಕಡೆಯ ದಿನವೂ ಎಂಆರ್ ಪಿಎಲ್ ಮತ್ತು ಹೆಚ್ ಪಿಸಿಎಲ್ ಕಾರ್ಮಿಕರು ಹೋರಾಟದ ಮೂಲಕ 2016ನ್ನು ಸ್ವಾಗತ ಮಾಡಿದರು.

ಎಂಆರ್ ಪಿಎಲ್ಉತ್ಪಾದಿಸುವ ಅಡುಗೆ ಅನಿಲವನ್ನು ದೇಶದ ಮೂಲೆ ಮೂಲೆಗೆ ಸಾಗಿಸುವ ನಾಲ್ಕು ಸಾವಿರಕ್ಕೂ ಹೆಚ್ಚು ಬುಲೆಟ್ ಟ್ಯಾಂಕರ್ ಗಳಿವೆ. ಈ ಟ್ಯಾಂಕರ್ ಗಳ ಮಾಲೀಕರು, ಚಾಲಕ ನಿರ್ವಾಹಕರು ತಮಿಳುನಾಡಿನವರು. ಬಲಾಡ್ಯ ಮಾಲೀಕರು ಸಂಘಟಿತರಾಗಿದ್ದರೆ, ಬಡಪಾಯಿ ಚಾಲಕರು ಅಸಂಘಟಿತರು. ಇಬ್ಬರು ಚಾಲಕರಿಂದ ನಿರ್ವಹಿಸಬೇಕಾದ ಬೃಹತ್ ಟ್ಯಾಂಕರ್ ಗಳನ್ನು ಓರ್ವ ಚಾಲಕನಿಂದ ನಿರ್ವಹಿಸುವ ಮಾಲೀಕರು ಇವರಿಗೆ ನೀಡೋದು ಜುಜುಬಿ ಹದಿನೈದು ಸಾವಿರ ಸಂಬಳ. ಉಳಿದ ಯಾವುದೇ ಸವಲತ್ತು ಪಡೆಯದ ಇವರದ್ದು ಒಂದು ರೀತಿಯ ಜೀತದಂತ ದುಡಿಮೆ.

ಸಾಮಾನ್ಯವಾಗಿ ರಸ್ತೆಯುದ್ದಕ್ಕೂ ಉಳಿದವರಿಂದ ನಿಂದನೆ ಬೈಗುಳಗಳಿಗೆ ಗುರಿಯಾಗುತ್ತಲೇ ಸಾಗುವ ಇವರು ಆಗಾಗ ದೈಹಿಕ ಹಲ್ಲೆಗಳಿಗೆ ಒಳಗಾಗುತ್ತಾರೆ. ಡಿಸೆಂಬರ್ 20 ರಂದು ಹೈದರಾಬಾದ್ ಬಳಿ ಇದರ ಅತಿರೇಕವೊಂದು ನಡೆದು ಹೋಗಿದೆ. ಪ್ರಭಾವಿ ರಾಜಕಾರಣಿಯೊಬ್ಬನ ಪುತ್ರನ ಕಾರ್ ಒಂದಕ್ಕೆ ದಾರಿಬಿಟ್ಟು ಕೊಡದ ನೆಪವನ್ನು ಮುಂದಿಟ್ಟು ಟ್ಯಾಂಕರ್ ಒಂದರ ಚಾಲಕ ಮತ್ತು ಕ್ಲೀನರ್ ನನ್ನುಗುಂಪೊಂದು ರಸ್ತೆ ಮಧ್ಯೆ ಎಳೆದು ಹಾಕಿ ಭೀಕರವಾಗಿ ಥಳಿಸಿದೆ. ಹೊಡೆತದ ತೀವ್ರತೆಗೆ ಶ್ರಮಜೀವಿ ಚಾಲಕ ಶರವಣ ರಸ್ತೆ ಮಧ್ಯೆ ಪ್ರಾಣ ತ್ಯಜಿಸಿದರೆ, ಕೋಮಾ ತಲುಪಿರುವ ಕ್ಲೀನರ್ ಆಸ್ಪತ್ರೆಯಲ್ಲಿ ಜೀವಂತ ಶವದಂತೆ ಬಿದ್ದಿದ್ದಾನೆ.

ಇದುವರೆಗೆ ಎಲ್ಲವನ್ನೂ ಸಹಿಸಿಕೊಂಡು ಪಶುಗಳಂತೆ ದುಡಿಯುತ್ತಿದ್ದ ಚಾಲಕರು ಈ ಬಾರಿ ತಿರುಗಿ ಬಿದ್ದಿದ್ದಾರೆ. ಕೊಲೆಗಡುಕರನ್ನು ಬಂದಿಸಬೇಕು. ಬೀದಿಗೆ ಬಿದ್ದಿರುವ ತಮ್ಮವರ ಕುಟುಂಬಕ್ಕೆ ಮಾಲೀಕರ ಸಂಘ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಡಿ.29 ರಿಂದ ಮಂಗಳೂರು ಮತ್ತು ಚೆನ್ನೈನಲ್ಲಿ ಮುಷ್ಕರ ಹೂಡಿದ್ದಾರೆ. ಎಂಆರ್ ಪಿಎಲ್ ಸುತ್ತಮುತ್ತ ಸಾವಿರಾರು ಟ್ಯಾಂಕರುಗಳು ಅನಿಲ ತುಂಬಿಸದೆ ಖಾಲಿ ನಿಂತಿವೆ. ಮಂಗಳೂರಿನಲ್ಲಿ ಚಾಲಕರ ವಿನಂತಿಯಂತೆ ಹೋರಾಟದ ನೇತೃತ್ವವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸಂಘಟನೆ ವಹಿಸಿಕೊಂಡಿವೆ.

ಆದರೆ ತಮಿಳುನಾಡಿನ ನಾಮಕ್ಕಲ್ ಭಾಗದ ಬಲಾಢ್ಯ ಫ್ಯೂಡಲ್ ಧಣಿಗಳಾದ ಮಾಲೀಕರು ಇವರ ಕನಿಷ್ಟ ಬೇಡಿಕೆಗಳನ್ನು ಈಡೇರಿಸಲು ಸಿದ್ದರಿಲ್ಲ. ತೆಲಂಗಾಣ ಸರಕಾರ ಪ್ರಭಾವಿ ಕೊಲೆಗಡುಕರನ್ನು ಬಂಧಿಸಲು ಸಿದ್ದರಿಲ್ಲ. ತಮಿಳುನಾಡಿನ ಅಧಿಕಾರಸ್ಥರ ಸ್ನೇಹಿತರಾದ ಮಾಲೀಕರ ಸಂಘದವರು ಚೆನ್ನೈನಲ್ಲಿ ಪ್ರತಿಭಟನಾ ನಿರತ ಚಾಲಕರ ಮುಂಚೂಣಿಯಲ್ಲಿದ್ದ ಐದಾರು ಮಂದಿಯನ್ನು ಜೈಲಿಗಟ್ಟಿ ಹೋರಾಟವನ್ನು ಹತ್ತಿಕ್ಕಿದ್ದಾರೆ. ಆನಂತರ ಸೀದಾ ಇಂದು ಮಂಗಳೂರಿಗೆ ಬಂದು ತಮ್ಮ ಗೂಂಡಾಗಿರಿಪ್ರದರ್ಶಿಸಲು ನೋಡಿದ್ದಾರೆ. ಆದರೆ ಡಿವೈಎಫ್ಐ ಮತ್ತು ಸಿಐಟಿಯು ನೇತೃತ್ವವನ್ನು ಹೊಂದಿರುವ ಚಾಲಕರು ಬೆದರಿಕೆಗಳಿಗೆ ಬಗ್ಗಿಲ್ಲ. ಕೊನೆಗೆ ನೆನ್ನೆ(03-01-2016)ಸಂಜೆಯ ವರಗೆ ಬೇಷರತ್ ಕರ್ತವ್ಯಕ್ಕೆ ಹಾಜರಾಗದಿದ್ದರೆ ಪೊಲೀಸರ ರಕ್ಷಣೆ ಪಡೆದು ಬದಲಿ ಚಾಲಕರನ್ನು ನೇಮಿಸುವುದಾಗಿ ಬೆದರಿಕೆಹಾಕದ್ದಾರೆ.

ಅಷ್ಟಕ್ಕು ಚಾಲಕರ ಬೇಡಿಕೆ ಇರುವುದು ಮರಣ ಹೊಂದಿದ ಶರವಣ ಕುಟುಂಬಕ್ಕೆಹತ್ತು ಲಕ್ಷ ರೂಪಾಯಿ ಪರಿಹಾರ. ಆದರೆ ಗುಲಾಮರ ಹೋರಾಟಕ್ಕೆ ಮನಿಯೆವು ಎಂದು ಫ್ಯೂಡಲ್ ಧಣಿಗಳ ಹಠ. ಸಿಐಟಿಯು ಮತ್ತು ಡಿವೈಎಫ್ಐ ಮಾಲೀಕರ ಸಂಘದ ಚಾಲೆಂಜನ್ನು ಸ್ವೀಕರಿಸಿದೆ. ಹೋರಾಟ ಮುಂದುವರೆಸಿದೆ.ವರ್ಷದ ಕೊನೆಯ ದಿನವೂ ಹೀಗೆ ಮಹತ್ವದ ಹೋರಾಟದಲ್ಲೇ ಕಳೆದು ಹೋಯಿತು.

ಗ್ಯಾಸ್ ಟ್ಯಾಂಕರ್ ಚಾಲಕ ಶರವಣ ಎರಡು ಪುಟ್ಟ ಮಕ್ಕಳ ತಂದೆ. ಕಳೆದ ಹಲವಾರು ವರ್ಷಗಳಿಂದ ಜುಜುಬಿ ಹದಿನೈದು ಸಾವಿರ ಸಂಬಳಕ್ಕೆ ದುಡಿಮೆ ಎಂಬ ಜೀತ ಮಾಡಿ ಮಾಲೀಕರ ಬದುಕು ಬೆಳಗಿದಾತ. ಅಂತಹ ಶರವಣ ಕರ್ತವ್ಯದಲ್ಲಿದ್ದಾಗಲೇ ತೆಲಂಗಾಣದ ಹೆದ್ದಾರಿಯಲ್ಲಿ ಸ್ಥಳೀಯ ಸಿರಿವಂತರ ಕಾಕಧೃಷ್ಟಿಗೆ ಬಿದ್ದ. ಸೈಡ್ ಕೊಡದ ನೆಪವನ್ನೊಡ್ಡಿದ ಈ ಸಿರಿವಂತರ ಮಕ್ಕಳು ಶರವಣನನ್ನು ಟ್ಯಾಂಕರ್ ನಿಂದ ಎಳೆದು ಹಾಕಿ ಭೀಕರವಾಗಿ ಥಳಿಸುತ್ತಾರೆ. ಸುಸ್ತಾದ ನಂತರ ಯಾವುದೊ ನಿರುಪಯೋಗಿ ವಸ್ತುವನ್ನು ಎಸೆಯುವಂತೆ ಮೇಲ್ಸೇತುವೆಯ ಕೆಳಗೆ ಎಸೆಯುತ್ತಾರೆ. ಅಲ್ಲಿಗೆ ಶ್ರಮಜೀವಿ ಶರವಣ ಬೀದಿನಾಯಿಯಂತೆ ಹೆಣವಾಗುತ್ತಾನೆ.

ಈ ಘಟನೆ ಇಷ್ಟರವರಗೆ ಜೀತದಾಳುಗಳಂತೆ ದುಡಿಯುತ್ತಿದ್ದ ನಾಲ್ಕು ಸಾವಿರ ಗ್ಯಾಸ್ ಟ್ಯಾಂಕರ್ ಚಾಲಕರು ಸಿಡಿದು ನಿಲ್ಲುವಂತೆ ಮಾಡಿದೆ. ಕೊಲೆಗಡುಕರನ್ನು ಬಂಧಿಸಬೇಕು. ಕರ್ತವ್ಯ ನಿರತವಾದಾಗಲೆ ಕೊಲೆಗೀಡಾದ ಶರವಣನ ಅನಾಥ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಬೇಕು ಎಂಬ ಬೇಡಿಕೆ ಮುಂದಿಡುತ್ತಾರೆ. ಆದರೆ ಶ್ರೀಮಂತಿಕೆಯ ಅಮಲಿನಲ್ಲಿ ಮನುಷ್ಯತ್ವವನ್ನೇ ಮರೆತ ಮಾಲೀಕರು ಪರಿಹಾರ ನೀಡಲು ನಿರಾಕರಿಸುತ್ತಾರೆ.

ಬೇಸತ್ತ ಚಾಲಕರು ಸಾವಿರಾರು ಸಂಖ್ಯೆಯಲ್ಲಿ ಮುಷ್ಕರ ಹೂಡುತ್ತಾರೆ. ಎಂಆರ್ ಪಿಎಎಲ್ ನಿಂದ ಅಡುಗೆ ಅನಿಲ ಸಾಗಾಟದ ಎಲ್ಲಾ ನಾಲ್ಕು ಸಾವಿರ ಟ್ಯಾಂಕರ್ ಗಳು ಮುಷ್ಕರ ಹೂಡಿದ್ದರಿಂದ ಇಡೀ ದಕ್ಷಿಣ ಭಾರತಕ್ಕೆ ಅನಿಲ ಸರಬರಾಜು ಸ್ಥಗಿತಗೊಳ್ಳುತ್ತದೆ. ಇಂತಹ ಸಂಧರ್ಭವನ್ನು ಮಾನವೀಯ ನೆಲೆಯಲ್ಲಿ ಪರಿಹರಿಸಬೇಕಾದ ಮಾಲಕರ ಸಂಘದವರು ಯಾವುದೇ ಕಾರಣಕ್ಕೆ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸುತ್ತಾರೆ. ಚಾಲಕರನ್ನು ಬೆದರಿಸಿ ಪಳಗಿಸಲು ನೋಡುತ್ತಾರೆ. ಆದರೆ ಡಿವೈಎಫ್ಐ ಮತ್ತು ಸಿಐಟಿಯು ಬೆಂಬಲದಿಂದ ಆತ್ಮವಿಶ್ವಾಸಗಳಿಸಿಕೊಂಡಚಾಲಕರು ಮಣಿಯಲು ನಿರಾಕರಿಸುತ್ತಾರೆ.

ಇಷ್ಟಕ್ಕೆ ಜಿದ್ದಿಗೆ ಬೀಳುವ ಮಾಲಕರ ಸಂಘ ಸ್ಥಳೀಯ ಎಸಿಪಿ ಮದನ್ ಗಾಂವ್ಕರ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದು, ಹಣದ ಹೊಳೆ ಹರಿಸುತ್ತಾರೆ. ಹೊರಗಿನ ಚಾಲಕರು, ಗೂಂಡಾಗಳು, ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ ಕೆಲವು ಟ್ಯಾಂಕರ್ ಗಳನ್ನು ಬಲವಂತವಾಗಿ ಬೀದಿಗಿಳಿಸುತ್ತಾರೆ.

ಇಂತಹ ಬಲಪ್ರಯೋಗವನ್ನು ವಿರೋಧಿಸಿ ತಡೆಒಡ್ಡಿದ ಬಡಪಾಯಿ ತಮಿಳು ಚಾಲಕರು, ಡಿವೈಎಫ್ಐ ಕಾರ್ಯಕರ್ತರನ್ನು ಲಾಠಿಬೀಸಿ, ಟೆಂಟ್ ಕಿತ್ತು ಪೊಲೀಸರು ವಶಕ್ಕೆ ಪಡೆದು ಅಕ್ರಮ ಬಂಧನದಲ್ಲಿ ಇಟ್ಟಿದ್ದಾರೆ.

ಧಣಿಗಳು ಸರ್ವಾಧಿಕಾರಿಗಳಾಗೋದು, ಪೊಲೀಸ್ ಅಧಿಕಾರಿಗಳು ಅವರ ಕ್ರೂರಿ ಸೇವಕರಾಗೋದು, ಶರವಣನನಂತಹ ರಕ್ತವನ್ನು ಬೆವರಾಗಿಸಿ ಧಣಿಯ ಸಂಪತ್ತು ಹೆಚ್ಚಿಸುವವನು ಬೇವರು ಹರಿಸಿಹೆಣವಾಗೋದು., ಮಕ್ಕಳು ಬೀದಿಗೆ ಬೀಳೋದು, ಅಂತವರ ಪರ ನ್ಯಾಯ ಕೇಳಿದವರು ಜೈಲುಪಾಲೋಗೋದು ಇಂಡಿಯಾದ ಪ್ರಜಾಪ್ರಭುತ್ವದ ಸೊಗಸು.

ವರದಿ : ಮುನೀರ್ ಕಾಟಿಪಳ್ಳ