ಬಿ.ಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡಲು ಎಸ್ಎಫ್ಐ ಒತ್ತಾಯ

Friday, 18 December 2015

ತುಮಕೂರ ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಬರುವ ನಯಲ, ಭಾರತಿ, ಕೃಷ್ಣ ಬಿಎಡ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ತುಮಕೂರು ವಿಶ್ವವಿದ್ಯಾನಿಲಯವು ಪರೀಕ್ಷೆಗಳನ್ನು ನೀಡದೆಯಿರುವುದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಿದ್ದು ಸರ್ಕಾರವು ಈ ಕೂಡಡಲೇ ಮಧ್ಯಪ್ರವೇಶಿಸಿ ಬಿಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಭಾರತ ವಿದ್ಯರ್ಥಿ ಫೆಡರೇಷನ್ ಎಸ್.ಎಫ್.ಐ ತುಮಕೂರು ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸ್ಥಾಪನೆಗೊಂಡು ತುಮಕೂರು ವಿ.ವಿ ಗ್ರಾಮೀಣ ಪ್ರದೆಶದ ವಿದ್ಯಾರ್ಥಿಗಳನ್ನೆ ಉನ್ನತ್ತ ಶಿಕ್ಷಣದಿಂದ ವಂಚಿಸುವ ಕೆಲಸವನ್ನು ಮಾಡುತ್ತಿದೆ. ಈ ಹಿಂದೆಯೂ ಸಹ ಹಿಂದಿನ ಕುಲಪತಿಗಳಾದ ಡಾ|| ಎಸ್.ಸಿ ಶರ್ಮಾರವರು ಮೂಲಭೂತ ಸೌಲಭ್ಯಗಳ ನೆಪವೊಡ್ಡಿ ಜಿಲ್ಲೆಯ ಯಾವುದೇ ಬಿಎಡ್ ಕಾಲೇಜುಗಳಿಗೆ ಅನುಮತಿಯನ್ನು ನೀಡದೆ ಜಿಲ್ಲೆಯ ವಿದ್ಯಾರ್ಥಿಗಳ ಬಿಎಡ್ ಶಿಕ್ಷಣಕ್ಕೆ ಕತ್ತರಿಯಾಕಿದ್ದರು. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಪದವಿ ವಿದ್ಯಾರ್ಥಿಗಳ ಸಂಖ್ಯೆಗಳನ್ನು ಕಡಿಮೆ ಮಾಡಲಾಗಿತ್ತು ಈ ರೀತಿಯಾದ ಒಂದೊಂದು ರೀತಿಯ ಸಮಸ್ಯೆಗಳನ್ನು ನಡೆಸಿಕೊಂಡೆ ಬರುತ್ತಿರುವ ತುಮಕೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ನೀಡುತ್ತಲೇ ಇದೆ.

ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಪರಿತಪಿಸಬೇಕಾದ್ ಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಸರ್ಕರವು ಈ ಕೂಡಲೇ ಮಧ್ಯಪ್ರವೇಶಿಸಿ ವಿದ್ಯರ್ಥಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಪರೀಕ್ಷೆ ಬರೆಯಲು ಅನುವುಮಾಡಿಕೊಡಬೇಕೆಂದು  ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್‍ಎಫ್‍ಐ ಆಗ್ರಹಿಸುತ್ತದೆ.