Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಕಾಮ್ರೇಡ್ ಪ್ರಸನ್ನಕುಮಾರ್ ಅವರಿಗೆ ಭಾವಪೂರ್ಣ ಶ್ರಧ್ಧಾಂಜಲಿ

Thursday, 24 December 2015

ಭಾರತ ಕಮ್ಮುನಿಷ್ಠ ಪಕ್ಷ (ಮಾರ್ಕ್ಸ್ ವಾದಿ)ದ ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮತ್ತು ಸೆಂಟರ್ ಅಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ ನ ರಾಜ್ಯದ ಪ್ರಧಾನ ಕಾರ್ಯದರ್ಶಿಗಳು ಆಗಿದ್ದ ಕಾಮ್ರೆಡ್ ಪ್ರಸನ್ನಕುಮಾರ್ ರವರು ನೆನ್ನೆ ಬೆಳಿಗ್ಗೆ ಹೃದಯಾಘಾತದಿಂದ ಮೃತರಾಗಿದ್ದು ಅಗಲಿದ ಸಂಗಾತಿಗೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯು ಹೃದಯ ಪೂರ್ವಕ ಭಾವಪೂರ್ಣ ಶ್ರಧ್ಧಾಂಜಲಿಯನ್ನು ಸಲ್ಲಿಸುತ್ತದೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಅದೇ ರೀತಿ, ಚಿಕ್ಕ ವಯಸ್ಸಿನ ಅಕಾಲಿಕ ಅಗಲಿಕೆಯಿಂದ ನೊಂದ ಅವರ ಕುಟುಂಬz ಎಲ್ಲಾ ಸದಸ್ಯರಿಗೆ ತನ್ನ ತೀವ್ರಸಂತಾಪವನ್ನು ವ್ಯಕ್ತಪಡಿಸುತ್ತದೆ.

ಕಾಮ್ರೇಡ್ ಪ್ರಸನ್ನಕುಮಾರ್ ದಿವಂಗತ ಶ್ರೀಯುತರಾದ ಶ್ರೀರಾಂ ಮತ್ತು ಶ್ರೀಮತಿ ಲಕ್ಷ್ಮಿದೇವಿ ಇವರ ಏಕೈಕ ಪುತ್ರರಾಗಿದ್ದರು. ಅವರು ಬಳ್ಳಾರಿಯಲ್ಲಿಯೇ ಬಿಕಾಂ ಎಲ್‍ಎಲ್‍ಬಿ ಪದವಿ ವ್ಯಾಸಂಗ ಮಾಡಿದ್ದರು. ತಮ್ಮ ಕಾಲೇಜಿನ ಆರಂಭಿಕ ಹಂತದಿಂದಲೇ ಇಡೀ ಜೀವನವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸದೇ ಉದ್ಯೋಗವನ್ನು ನಿರಾಕರಿಸಿ ಸಮಾಜ ಬದಲಾವಣೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟು ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು, ರೈತರು, ಕೂಲಿಕಾರರು ಮತ್ತು ದಲಿತರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸಿದರು.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಎಡ ಚಳುವಳಿಗೆ ಆಕರ್ಷಿತರಾದವರು ಬಳ್ಳಾರಿಯ ವಿದ್ಯಾರ್ಥಿ ಚಳುವಳಿಯ ಮೂಲಕ ಎಡ ಚಳುವಳಿಯ ಪ್ರವೇಶ ಪಡೆದ ಪ್ರಸನ್ನಕುಮಾರ್ 1982 ರಿಂದ 1986 ರವರೆಗೆ ವಿದ್ಯಾರ್ಥಿಸಂಘ (ಎಸ್‍ಎಫ್‍ಐ)ವನ್ನು ಬಳ್ಳಾರಿ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದರು. ಅನಂತರ ಸುಮಾರು ಮೂರು ವರ್ಷಗಳ ಕಾಲ ಯುವಜನ (ಡಿವೈಎಫ್‍ಐ)ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುಂದೆ ಬಳ್ಳಾರಿಯ ಅಂಗಡಿ ಮತ್ತಿತರೇ ಸಂಸ್ಥೆಗಳ ಕಾರ್ಮಿಕರ ಸಂಘ ಹಾಗೂ ಮುನಿಸಿಪಲ್ ಕಾರ್ಮಿಕರ ಚಳುವಳಿಯ ಮೂಲಕ ಕಾರ್ಮಿಕ ಸಂಘದ ಮುಂದಾಳುವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಮಿಕ ಚಳುವಳಿಯನ್ನು ಕಟ್ಟುವಲ್ಲಿ ಸಕ್ರಿಯರಾದರು. ಬಿಎಸ್‍ಏಎಲ್ ಕಾರ್ಮಿಕರ, ಅದೇರೀತಿ, ಜಿಲ್ಲೆಯ ಸಕ್ಕರೆ ಕೈಗಾರಿಕೆಗಳ ಕಾರ್ಮಿಕರ ರೈಸ್‍ಮಿಲ್ ಹಾಗೂ ಸ್ಪಿನ್ನಿಂಗ್ ಮಿಲ್ ಕಾರ್ಮಿಕರ ಚಳುವಳಿಯನ್ನು ಕಟ್ಟಿ ಬೆಳಸಿದ್ದರು. ನಂತರ ರಾಜ್ಯದ ಬೆಂಗಳೂರು ಕೇಂದ್ರವಾಗಿಸಿಕೊಂಡು ಹಲವು ಘನ ಕೈಗಾರಿಕೆಗಳ ಕಾರ್ಮಿಕರ ಚಳುವಳಿಗೆ ನೇತೃತ್ವ ನೀಡಿದ್ದಾರೆ. ಸಿಐಟಿಯುವಿನ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಸಮ್ಮೇಳನದಲ್ಲಿ ಸಿಐಟಿಯುನ ಅಖಿಲ ಭಾರತ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಲವು ಅಂತರಾಷ್ಠ್ರೀಯ ಕಾರ್ಮಿಕರ ವೇದಿಕೆಗಳಲ್ಲಿ ಭಾಗಿಯಾಗಿ ತಮ್ಮ ವಿಚಾರ ಮಂಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಸಿಪಿಐ(ಎಂ) ಪಕ್ಷವನ್ನು ಸುಮಾರು ಒಂದು ದಶಕಗಳ ಕಾಲ ಕಾರ್ಯನಿರ್ವಹಿಸಿ ಜಿಲ್ಲೆಯಾದ್ಯಂತ ಪಕ್ಷವನ್ನು ವಿಸ್ತರಿಸಲು ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ರಾಜ್ಯ ಕಾರ್ಯದರ್ಶಿ ಮಂಡಳಿಸದಸ್ಯರಾಗಿದ್ದರು. ಬಳ್ಳಾರಿಯಲ್ಲಿ ನಡೆದ ಹಲವು ಮಹತ್ವದ ಪೋಲೀಸರು ಗೋಲಿಬಾರು ಮತ್ತು ಲಾಟಿಛಾರ್ಜ ನಡೆಸಿ ದಮನಿಸಲು ಯತ್ನಿಸಿದ ನಾಗರೀಕ ಚಳುವಳಿಗಳÀಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಚಳುವಳಿಯ ಕಾರಣದಿಂದ ಹಲವು ಬಾರಿ ಜೈಲುವಾಸವನ್ನು ಒಮ್ಮೆ ಭೂಗತ ಜೀವನವನ್ನು ಅನುಭವಿಸಿದ್ದಾರೆ.

ಅವರು ರೈತರು ಮತ್ತು ಕೃಷಿಕೂಲಿಕಾರರ ವಿಮೋಚನೆಯ ಕನಸನ್ನು ಹೊತ್ತಿದ್ದರು ರೈತರ ಚಳುವಳಿಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ ನಾಗರೀಕರು ಮತ್ತು ರೈತರು ತಮ್ಮ ಪ್ರಾಣ ಮಿತ್ರನನ್ನು ಕಳೆದು ಕೊಂಡಂತಾಗಿದೆ.

ಯು. ಬಸವರಾಜ