ಕಾರ್ಮಿಕ ಚಳುವಳಿಯ ಮುಂದಾಳು ಪ್ರಸನ್ನ ಕುಮಾರ ಇನ್ನಿಲ್ಲ

Wednesday, 23 December 2015

ಕಾರ್ಮಿಕ ಚಳುವಳಿಯ ಮುಂದಾಳು ಸಿಐಟಿಯು ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ ಇನ್ನಿಲ್ಲ. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಅಖಿಲ ಭಾರತ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ (50 ವರ್ಷ) ಇಂದು(23.12.2015) ಬೆಳಿಗ್ಗೆ ಹೃದಯಾಘಾತದಿಂದ ತೀರಿಕೊಂಡರು. ಸಾರ್ವಜನಿಕ ವಲಯದ ಕೈಗಾರಿಕೆಗಳ ಕಾರ್ಮಿಕರ ಕರ್ನಾಟಕ ರಾಜ್ಯದ ಸಮನ್ವಯಕಾರಾಗಿ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಗೌರವಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಸಾರಿಗೆ ನೌಕರರ ಸಂಘದ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಗುತ್ತಿಗೆ ಪೌರ ಕಾರ್ಮಿಕರ ಹಾಗೂ ಹಮಾಲಿ ಕಾರ್ಮಿಕರ ರಾಜ್ಯ ಮುಖಂಡರಾಗಿ ಹೀಗೆ ಕರ್ನಾಟಕದ ದುಡಿಯುವ ಜನರ ಚಳುವಳಿಯ ಮಹತ್ವದ ಮತ್ತು ಗೌರವಾನ್ವಿತ ಪ್ರೀತಿಯ ಸಂಗಾತಿ ಪ್ರಸನ್ನ ಮೂಲತಃ ಬಳ್ಳಾರಿ ಜಿಲ್ಲೆಯವರು. ಕಾರ್ಮಿಕರಿಗೆ ಸಂಬಂಧಿಸಿದ ಸರಕಾರದ ವಿವಿಧ ಸಮಿತಿಗಳಲ್ಲಿ ಕೂಡ ಕಾಮ್ರೇಡ್ ಸಂಘಗಳ ಪ್ರತಿನಿಧಿಸಿ ಸದಸ್ಯರಾಗಿದ್ದರು. ರಾಜ್ಯದ ದುಡಿಯುವ ಮಹಿಳೆಯರ ಚಳುವಳಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದರು. ದಾಂಡೇಲಿ ಪೇಪರ್ ಮಿಲ್ ಕಾರ್ಮಿಕರ ಅಧ್ಯಕ್ಷರಾಗಿ ಪ್ರಾರಂಭದ ದಿನಗಳಲ್ಲಿ ಎಡ ವಿಚಾರಧಾರೆಯ ವಿದ್ಯಾರ್ಥಿ ಚಳುವಳಿ ಹಾಗೂ ಸಾಂಸ್ಕೃತಿಕ ಚಳುವಳಿಯಲ್ಲಿ ಗುರುತಿಸಿಕೊಂಡ ಇವರು, ನಿರಂತರ ಅಧ್ಯಯನ, ಹೋರಾಟದ ಮೂಲಕವೇ ಮಾರ್ಕ್ಸ್ ವಾದಿ ವಿಚಾರಧಾರೆಯಿಂದ ಪ್ರಭಾವಿತರಾಗಿ ಬಳ್ಳಾರಿಯಲ್ಲಿ ಸಿಪಿಐ(ಎಂ) ಜಿಲ್ಲಾ ಮುಂದಾಳುವಾಗಿ, ಪ್ರಸಕ್ತ ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದಾರೆ. ಕಾರ್ಮಿಕರ ಪ್ರೀತಿಯ ಗೌರವಾನ್ವಿತ ಮುಂದಾಳುವಾದ ಕಾಮ್ರೇಡ್ ಪ್ರಸನ್ನಕುಮಾರರಿಗೆ ಸಿಪಿಐಎಂ ಮತ್ತು ಸಿಐಟಿಯು ಸಮಿತಿಗಳು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತದೆ.

ದೇಶದ ಜನವಿರೋಧಿಯಾದ ಇಂದಿನ ಅಪಾಯಕಾರಿ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾರ್ಮಿಕರನ್ನು ಎಚ್ಚರ ಗೊಳಿಸಲು ಶ್ರಮಿಸುತ್ತಲೇ ಕೋಮುವಾದದ ಅಪಾಯ, ನವ ಉದಾರವಾದದ ಪ್ರತಿಪಾದಿಸುವ ತಪ್ಪು ಆರ್ಥಿಕ ವಿರುದ್ಧ ಚಳುವಳಿಯನ್ನು ಬಲಗೊಳಿಸುವುದೇ ಅವರು ಕಟ್ಟಲು ಶ್ರಮಿಸಿದ ಚಳುವಳಿಯನ್ನು ಅರ್ಧಕ್ಕೆ ನಿಂತ ಕೆಲಸವನ್ನು ಮುಂದಕ್ಕೊಯ್ಯುವುದು ನಮ್ಮ ಆದ್ಯ ಕೆಲಸವೆಂದು ಶ್ರದ್ಧಾಂಜಲಿಯಲ್ಲಿ ತಿಳಿಸಿದ್ದಾರೆ.