ಸಿಕಾರ್ ಎಸ್‍ಎಫ್‍ಐ ಕಾರ್ಯದರ್ಶಿ ಮೇಲೆ ಆರ್‍ಎಸ್‍ಎಸ್‍ ಗೂಂಡಾಗಳ ಹಲ್ಲೆ-ಖಂಡನೆ

Tuesday, 22 December 2015

ಸಿಕಾರ್ ಜಿಲ್ಲೆಯ ಎಸ್‍.ಎಫ್.ಐ. ಜಿಲ್ಲಾ ಕಾರ್ಯದರ್ಶಿ ಸುಭಾಸ್ ಜಾಕರ್ ಮೇಲೆ ಎಬಿವಿಪಿ, ಆರ್‍.ಎಸ್.ಎಸ್. ಗೂಂಡಾಗಳು ನಡೆಸಿದ ಮಾರಣಾಂತಿಕ ಹಲ್ಲೆ ಖಂಡಿಸಿ ಎಸ್.ಎಫ್.ಐ ಸಂಘಟನೆ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕೆಂದು ಕರೆ ನೀಡಿದ ಪರಿಣಾಮವಾಗಿ ಬೆಂಗಳೂರಿನ  ಮೈಸೂರ್ ಬ್ಯಾಂಕ್ ವೃತ್ತದ ಬಳಿ ಭಾರತ ವಿದ್ಯಾರ್ಥಿ ಫೆಡರೇಷನ್‍(ಎಸ್.ಎಫ್.ಐ.) ಕಾರ್ಯಕರ್ತರು ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಎಸ್.ಎಫ್‍.ಐ. ರಾಜ್ಯಾಧ್ಯಕ್ಷ ಮಾತನಾಡಿ ವಿ.ಅಂಬರೀಶ್ "ಈ ಘಟನೆ ಅಮಾನವೀಯ ಎಬಿವಿಪಿ ಮತ್ತು ಆರ್‍.ಎಸ್.ಎಸ್. ಗುಂಡಾಗಳೂ ಪ್ರಜಾಸತ್ತಾತ್ಮಕ ಹಕ್ಕಯಗಳ ದಮನ ಮಾಡಲು ಮುಂದಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಯವರು ಈ ಗುಂಡಾಗಳನ್ನು ಸಾಕುತ್ತಿದ್ದಾರೆ ಎಂದರು. ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿ ಗುರುರಾಜ್ ಮಾತನಾಡಿ ''ಶಿಕ್ಷಣದ ವ್ಯಾಪಾರೀಕರಣ ಮತ್ತು ಕೋಮುವಾದವನ್ನು ವಿರೋಸಿ ಪ್ರತಿಭಟನೆ ನಡೆಸಿದ ಸುಭಾಷ್ ಮೇಲೆ ಹಲ್ಲೆ ನಡೆಸಿದ ಆರೆಸ್ಸೆಸ್ ಮತ್ತು ಎಬಿವಿಪಿ ಕಾರ್ಯಕರ್ತರನ್ನು ಶೀಘ್ರ ಬಂದಿಸಬೇಕು. ಈ ಹಲ್ಲೆಯನ್ನು ನಡೆಸುವ ಮೂಲಕ ಎಬಿವಿಪಿ ಮತ್ತು ಆರ್ ಎಸ್ ಎಸ್ ಶಿಕ್ಷಣದ ವ್ಯಾಪಾರೀಕರಣದ ಪರವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಎಂದರು.

ಈ ಹಿಂದೆ ಸುಭಾಸ್ ರವರು ರಾಜಸ್ಥಾನದಲ್ಲಿನ ಶುಲ್ಕ ಏರಿಕೆ ಹಾಗೂ ಆರ್‍.ಎಸ್.ಎಸ್. ಹಿಡಿತದಲ್ಲಿರುವ ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಖಂಡಿಸಿ ವ್ಯಾಪಕ ಹೋರಾಟ ನಡೆಸಿದ್ದರು. ವಿದ್ಯಾರ್ಥಿಗಳನ್ನು ಸಂಘಟಿಸಿ ಐಕ್ಯತೆಯಿಂದ ಶಿಕ್ಷಣದ ಉಳಿವಿಗಾಗಿ ಎಸ್.ಎಫ್.ಐ. ನಡೆಸಿದ ಚಳುವಳಿಯನ್ನು ಸಹಿಸದ ಎಬಿವಿಪಿ ಈ ಕೃತ್ಯ ವೆಸಗಿದೆ ಎಂದರು.

ಪ್ರತಿಭಟನೆಯಲ್ಲಿ ಎಸ್ಎಫ್.ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ, ಜಿಲ್ಲಾಧ್ಯಕ್ಷರಾದ ಚಿಕ್ಕರಾಜು ಎಸ್., ವೆಂಕಟೇಶ್.ಕೆ., ವೇಗಾನಂದ, ಮಹೇಶ್, ಹನುಮಂತ ದುರ್ಗದ್, ಶೃತಿ, ಪ್ರೀಯಾ, ದೀಲಿಪ್, ಸೇರಿದಂತೆ ಅನೇಕರಿದ್ದರು.

ಇದಲ್ಲದೇ ಎಸ್.ಎಫ್.ಐ. ಸಂಘಟನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.