Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಅಂಬೇಡ್ಕರ್ ರಚಿಸಿದ ಸಂವಿಧಾನವೇ ಧರ್ಮಗ್ರಂಥವಾಗಬೇಕು – ವಿ.ಜೆ. ನಾಯಕ

Saturday, 12 December 2015

“ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ನಮ್ಮ ಮೇಲೆ ಪ್ರಬಾವ ಬೀರಿದ ಕೆಲವರಲ್ಲಿ ಅಂಬೇಡ್ಕರ್ ಮುಖ್ಯರು. ಅವರು ಶೇಣಿಕೃತ ಅಸಮಾನ ಸಮಾಜವನ್ನು ಅಲ್ಲಗಳೆದು ಸಮಾನತೆ ಮತ್ತು ಸ್ವಾಭಿಮಾನವನ್ನು ಬಿತ್ತಿದರು. ಸಮಾಜ ಮತ್ತು ಸಮಾನತೆ (ಸೊಸೈಟಿ ಎಂಡ್ ಇಕ್ವಾಲಿಟಿ) ಯನ್ನು ಪ್ರತಿಪಾದಿಸಿದ ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಬಾರತದ ಸಂವಿಧಾನವೇ ನಮ್ಮ ಧರ್ಮಗ್ರಂಥವಾಗಬೇಕು. ಭಾರತೀಯರಿಗೆ ಬೇರೆ ಯಾವುದೇ ಗ್ರಂಥ ಧರ್ಮಗ್ರಂಥವಾಗಲು ಸಾಧ್ಯವಿಲ್ಲ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಬೇಕಾದದ್ದು, ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕಾದುದು ಈ ಸಂವಿಧಾನವನ್ನು” ಎಂದು ಹಿರಿಯ ಹೋರಾಟಗಾರ ಲೇಖಕ ಶ್ರೀ ವಿ.ಜೆ.ನಾಯಕ ಹೇಳಿದರು. ಅವರು ಇತ್ತೀಚೆಗೆ ಅಂಕೋಲೆಯ ಡಾ. ಆರ್.ಜಿ.ಗುಂದಿಯವರ ಮನೆಯಂಗಳದಲ್ಲಿ ಸಹಯಾನ ಸಂಘಟಿಸಿದ ‘ಅಂಬೇಡ್ಕರ್ 125 ವರ್ಷಾಚರಣೆ’ ಉದ್ಘಾಟನೆ ಸಮಾರಂಭದಲ್ಲಿ ಎಂ.ಎ. ಖತೀಬರವರ ಎಚ್ಚರವಿದ್ದ ಕಾಶಿ ಮತ್ತು ಬಾಳುಸನ ಔಷಧಿ ಕಥಾಸಂಕಲನ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ‘ಅತ್ಯಂತ ಸರಳವಾಗಿ ಮತ್ತು ಸಮಾಜವನ್ನು ಬದಲಿಸಬೇಕೆನ್ನುವ ಅಂಬೇಡ್ಕರ್ ಅವರ ಆಶಯವನ್ನು ಕಥಾರೂಪದಲ್ಲಿ ಸೃಜಿಸಿದ ಈ ಪುಸ್ತಕ ಅಮೂಲ್ಯವಾದುದು’ ಎಂದರು.

ತಮ್ಮ ಆತ್ಮ ಚರಿತೆಯ ಒಂದು ಭಾಗವನ್ನು ಓದುವ ಮೂಲಕ ಅಂಬೇಡ್ಕರ್ 125 ವರ್ಷಾಚರಣೆಯನ್ನು ಉದ್ಘಾಟಿಸಿದ ಡಾ. ಆರ್.ಜಿ.ಗುಂದಿ ಮಾತನಾಡಿ ‘ಸಂಸ್ಕøತ ಕಲಿಯಬೇಕೆಂದು ಪುಸ್ತಕ ತೆಗೆದುಕೊಂಡು ಶಾಲೆಗೆ ಹೋದರೆ ಶಿಕ್ಷಕರ ತಾತ್ಸಾರ ಮತ್ತು ದಲಿತನೆನ್ನುವ ತಿರಸ್ಕಾರದಿಂದಾಗಿ ಕಲಿಕೆ ಸಾಧ್ಯವಾಗಲಿಲ್ಲ. ಕಲಿಕೆಯ ಸಹವಾಸವೇ ಸಾಕೆನಿಸಿತು. ಪುಸ್ತಕವನ್ನು ಅರ್ಧಬೆಲೆಗೆ ಮಾರಾಟ ಮಾಡಿದೆ. ಕಾಲೇಜಿಗೆ ಹೋದಾಗ ಹಠ ಹಿಡಿದು ಮತ್ತೆ ಸಂಸ್ಕøತವನ್ನು ಕಲಿತೆ. ಆದರೆ ಇದರಿಂದ ಸಂಸ್ಕøತ ಪಂಡಿತನಾಗಲಿಲ್ಲ. ಆದರೆ ಯಕ್ಷಗಾನ ಪಾತ್ರಮಾಡುವಾಗ ಮಧ್ಯೆ ಎರಡು ಶ್ಲೋಕ ಹೇಳಲು ಉಪಯೋಗವಾಗಿದ್ದನ್ನು ಬಿಟ್ಟರೆ ಇದರಿಂದ ಬೇರೆಯಾವ ಪ್ರಯೋಜನವೂ ಆಗಲಿಲ್ಲ’ ಎಂದು ತನ್ನ ಶಾಲಾ ದಿನಗಳಲ್ಲಿ ಕಾಡಿದ ಜಾತಿಯತೆಯ ನೆನಪನ್ನು ಮಾಡಿಕೊಂಡರು.

ಲೇಖಕರಾದ ಎಂ.ಎ.ಖತೀಬ್ ಮಾತನಾಡಿ ದಲಿತರು ಮತ್ತು ತಳವರ್ಗದವರನ್ನು ಮೊದಲು ನಾವು ಪ್ರೀತಿಯಿಂದ ಕಾಣಬೇಕು. ನಮ್ಮ ಮನೆಯ ಸದಸ್ಯರನ್ನು ಕೂಡ ಈ ಜಾತಿ ಆಚರಣೆಯ ಮೌಢ್ಯದಿಂದ ಆಚೆ ತರಬೇಕು. ನಾನೂ ಕೂಡ ಈ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದೇನೆ. ಇದು ನನ್ನ ಕಥೆಯ ಭಾಗವೂ ಆಗಿದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಚರಣಾ ಸಮಿತಿ ಗೌರವಾಧ್ಯಕ್ಷರೂ ಆದ ವಿಷ್ಣು ನಾಯ್ಕ ‘ಆಚರಣೆಗಳು ಜಾತಿ/ಸಮುದಾಯ ಕೇಂದ್ರಿತವಾಗಿ ರೂಪುಗೊಳ್ಳುತ್ತಿವೆ. ಹಾಗೆಯೇ ಅಂಬೇಡ್ಕರ್ ದಿನಾಚರಣೆ ಕೂಡ ಕೇವಲ ದಲಿತರದು ಎಂದು ತಿಳಿದು ಸೀಮಿತ ಮಾಡುವುದು ಮೂರ್ಖತನ. ನಮ್ಮ ಸಂವಿಧಾನವನ್ನು ಎಲ್ಲಿಯ ವರೆಗೆ ಎದೆಗೊತ್ತಿಕೊಳ್ಳುವುದಿಲ್ಲವೋ, ಸಂವಿಧಾನವೇ ನಮ್ಮ ಪವಿತ್ರ ಗ್ರಂಥ ಎಂದು ತಿಳಿದು ಆಚರಣೆಗೆ ತರುವುದಿಲ್ಲವೋ ಅಲ್ಲಿಯ ವರೆಗೆ ದಿನಾಚರಣೆಗಳಿಗೆ ಯಾವ ಅರ್ಥವೂ ಇಲ್ಲ. ಅಂಬೇಡ್ಕರ್ ನಿಃಸ್ಸಂದೇಹವಾಗಿ ಮನುಷ್ಯ ಕುಲದ ನಾಯಕರು. ಹಾಗಾಗಿ ಮುಂದಿನ ಇಡೀ ವರ್ಷ ಅಂಬೇಡ್ಕರ್ ವಿಚಾರಧಾರೆಯನ್ನು ಕುರಿತ ಹಲವು ಕಾರ್ಯಕ್ರಮಗಳನ್ನು ಸಹಯಾನ ಹಮ್ಮಿಕೊಂಡಿದ್ದು ಜಿಲ್ಲೆಯ ಜನತೆ ಪಾಲ್ಗೊಳ್ಳಬೇಕೆಂದು ಕರೆನೀಡಿದರು.

‘ಜಿಲ್ಲೆಯಲ್ಲಿ ಹಲವು ಅಭಿಯಾನಗಳು ನಡೆಯುತ್ತಿವೆ. ಇವೆಲ್ಲವೂ ಸಮಾಜದಲ್ಲಿ ಈಗಿರುವ ಅಸಮಾನತೆ, ತಾರತಮ್ಯಗಳನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಮತ್ತು ಜಾತಿ-ಧರ್ಮದ ನಡುವೆ ಸಂಶಯದ ಬಿರುಕು ಹುಟ್ಟಿಸುವಲ್ಲಿ ಮುಕ್ತಾಯಗೊಳ್ಳುತ್ತಿವೆ. ಹಾಗಾಗಿ ನಾವು ಸಂವಿಧಾನದ ಅಭಿಯಾನದ ಮೂಲಕ ಅಸಮಾನತೆಯ ಕಂದಕ ಮುಚ್ಚಿ ಸಮಾನತೆಯ ಬೆಳೆ ಬೆಳೆಯುವುದಕ್ಕಾಗಿ ಅಂಬೇಡ್ಕರ್ ವಿಚಾರಧಾರೆಯ ಅನುಸಂಧಾನ ನಡೆಸಲು ಉತ್ಸುಕರಾಗಿದ್ದೇವೆ’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವಿಠ್ಠಲ ಭಂಡಾರಿ ಮುಂದೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಕೂಡ ವಿವರಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಚಿಂತನ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ದಲಿತ ಸಂವೇದನೆ ಕುರಿತ ಚಿತ್ರಕಲಾಕೃತಿಗಳ ಪ್ರದರ್ಶನ ಮತ್ತು ಅಂಬೇಡ್ಕರ್ ಬರಹಗಳ ಸಂಪುಟಗಳ ಮಾರಾಟ ಕೂಡ ನಡೆಯಿತು. ವೇದಿಕೆಯಲ್ಲಿ ಆಚರಣಾ ಸಮಿತಿ ಅಧ್ಯಕ್ಷರಾದ ಡಾ. ಎಂ.ಜಿ. ಹೆಗಡೆ ಮತ್ತು ಪುಸ್ತಕ ಪರಿಚಯಿಸಿದ ಕವಿ ಉಮೇಶ ನಾಯ್ಕ ಉಪಸ್ಥಿತರಿದ್ದರು.

ಸಭೆಯಲ್ಲಿ ಬನವಾಸಿ ಶಿವಾಜಿ ಮತ್ತು ಶಾಂತಾರಾಮ ನಾಯಕ ಹಿಚ್ಕಡ ನೆನಪಿನ ಪುಸ್ತಕ ಕಾಣಿಕೆ ವಿತರಿಸಿದರು. ಪ್ರಾರಂಭದಲ್ಲಿ ಆಚರಣಾ ಸಮಿತಿ ಕಾರ್ಯದರ್ಶಿ ಕೃಷ್ಣ ನಾಯಕ ಹಿಚ್ಕಡ್ ಸ್ವಾಗತಿಸಿದರು. ಜಯಶೀಲ ಆಗೇರ ವಂದಿಸಿದರು. ಅಂಬೇಡ್ಕರ್ 125ನೇ ವರ್ಷಾಚರಣೆ ಸಮಿತಿಯ ಪದಾಧಿಕಾರಿಗಳು, ಗೌರವ ಸದಸ್ಯರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.