ತಮಿಳುನಾಡು-ಸಿಪಿಐ(ಎಂ) ಕಾರ್ಯಕರ್ತರು ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ್ದಾರೆ

ಸಂಪುಟ: 
9
ಸಂಚಿಕೆ: 
50
Sunday, 6 December 2015

ತಮಿಳುನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಮತ್ತು ಇತರೆಡೆಗಳಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಪ್ರವಾಹಪೀಡಿತರ ನೆರವಿಗೆ ಧಾವಿಸಿದ್ದಾರೆ. ವೈದ್ಯಕೀಯ ಕ್ಯಾಂಪುಗಳನ್ನು ಏರ್ಪಡಿಸಲಾಗುತ್ತಿದೆ. ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಪಕ್ಷದ ತಮಿಳುನಾಡು ಶಾಸಕರು ಪ್ರವಾಹ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ವೇತನವನ್ನು ಕೊಟ್ಟಿದ್ದಾರೆ. ಸಂಸತ್ತಿನಲ್ಲಿ ಸಿಪಿಐ(ಎಂ) ಸದಸ್ಯರು ಎಂಪಿಗಳು ತಮ್ಮ ಎಂಪಿಎಲ್‍ಎಡಿಯಿಂದ ತಮಿಳುನಾಡು ಪ್ರವಾಹ ಪೀಡಿತರಿಗೆ ಸಾಧ್ಯವಾದಷ್ಟು ನೆರವು ಕಳಿಸಬೇಕಾಗಿ ಸೂಚಿಸಿದರು. ಎಲ್ಲ ಎಂಪಿಗಳು ಇದಕ್ಕೆ ಒಪ್ಪಿದ್ದಾರೆ. ಕಡಲೂರಿನಲ್ಲಿ ಪ್ರವಾಹ ಪರಿಹಾರ ಕೆಲಸಕ್ಕೆ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣನ್ ನೇತೃತ್ವ ನೀಡಿದರು. ಸಿಪಿಐ(ಎಂ)ನ ಕೇರಳ ಮತ್ತು ಪಶ್ಚಿಮ ಬಂಗಾಲ ಘಟಕಗಳು ತಲಾ 10 ಲಕ್ಷ ರೂ. ಮತ್ತು ಆಂಧ್ರಪ್ರದೇಶ ಘಟಕ 5 ಲಕ್ಷ ರೂ.ಗಳನ್ನು ತಮಿಳುನಾಡು ಘಟಕಕ್ಕೆ ಆರಂಭಿಕ ಕೊಡುಗೆಯಾಗಿ ಕಳಿಸಿವೆ. ಪಕ್ಷದ ಸಮಿತಿಗಳು ಮತ್ತು ಸಾಮೂಹಿಕ ಸಂಘಟನೆಗಳು ಪರಿಹಾರ ನಿಧಿ ಮತ್ತು ಸಾಮಗ್ರಿಗಳನ್ನು ಸಂಗ್ರಹಿಸುತ್ತಿವೆ.