ಹಾಲು ಉತ್ಪಾದಕರಿಂದ ರಾಜ್ಯಮಟ್ಟದ ಪ್ರತಿಭಟನೆ

ಸಂಪುಟ: 
9
ಸಂಚಿಕೆ: 
49
Sunday, 29 November 2015

ಹಾಲು ಉತ್ಪಾದಕರಿಗೆ ವೈಜ್ಞಾನಿಕ ರೀತಿಯಲ್ಲಿ ಬೆಲೆ ನೀಡಬೇಕು, ಕಡಿಮೆ ಬೆಲೆಯಲ್ಲಿ ಪಶುಗಳ ಆಹಾರ ಒದಗಿಸಬೇಕು, ಖಡಿತಗೊಳಿಸಿರುವ ಹಾಳಿನ ಬೆಲೆಯನ್ನು ವಾಪಸ್ಸು ಪಡೆಯಬೇಕು, ಪ್ರಾಥಮಿಕ ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು, ಸರ್ಕಾರಿ ಕಾನೂನಿನ ಪ್ರಕಾರ ಇವರಿಗೆ ಸಿಗುವ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ನವೆಂಬರ್ 24, 2015ರಂದು ಕರ್ನಾಟಕ ರಾಜ್ಯ ಹಾಲು ಉತ್ಪಾದಕರು ಮತ್ತು ನೌಕರರ ಹೋರಾಟ ಸಮಿತಿ ವತಿಯಿಂದ ರಾಜ್ಯಮಟ್ಟದ ಪ್ರತಿಭಟನೆಯನ್ನು ನಡೆಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕರಗಳ ಜಾಗತೀಕರಣ ಮತ್ತು ಖಾಸಗೀಕರಣ ನೀತಿಯಿಂದಾಗಿ ಸರ್ಕಾರಗಳು ತಳೆದ ರೈತ ವಿರೋಧಿ ನೀತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕೃಷಿ ಬಿಕ್ಕಟ್ಟು ಬಿಗಡಾಯಿಸಿರುವುದರಿಂದ, ರೈತರು ಆಹಾರ ಬೆಳೆಗಳಾದ, ಭತ್ತ, ರೇಷ್ಮೆ, ಕಬ್ಬು, ರಾಗಿ ಮತ್ತು ಇತರೆ ಬೆಳೆಗಳನ್ನು ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಇದರ ಜೊತೆಯಲ್ಲಿ ರೈತಕೊಳ್ಳುವ ರಾಸಾಯನಿಕ ಗೊಬ್ಬರ, ಪಶುವಿನ ಆಹಾರ, ಔಷಧ ಸಾಮಗ್ರಿಗಳು, ಬಿತ್ತನೆ ಬೀಜ ಇತ್ಯಾದಿ ಬೆಲೆಗಳು ದುಬಾರಿಯಾಗಿರುವುದೂ ಅಹ ಆತ್ಮಹತ್ಯೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ರೈತರು ತನ್ನ ಭೂಮಿಯನ್ನು ಕಳೆದುಕೊಳ್ಳುತ್ತಿದ್ದು ಈ ಭೂಮಿ ಕಾರ್ಪೋರೇಟ್ ಕಂಪನಿಗಳು ಮತ್ತು ಸ್ಥಳೀಯ ಬಂಡವಾಳಿಗರ ಪಾಲಾಗುವಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಹಾಲು ಉತ್ಪಾದಕರು ಮತ್ತು ನೌಕರರೇತರಿಗೆ ತೊಂದರೆಯಾಗಿದೆ. ಕರ್ನಾಟಕದಲ್ಲಿ ಸುಮಾರು 14 ಹಾಲು ಒಕ್ಕೂಟಗಳಿದ್ದು ಸುಮಾರು 12992 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಸಹಕಾರ ಸಂಘಗಳಲ್ಲಿ 23.13 ಲಕ್ಷ ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಇವರ ಸಮಸ್ಯೆಗಳು ಮತ್ತು ಬೇಡಿಕೆಗಳತ್ತ ಸರಕಾರ ಗಮನ ಹರಿಸುವಂತೆ ಮಾಡಲು ನವೆಂಬರ್ 24ರಂದು ಬೆಂಗಳೂರು ನಗರ ರೈಲ್ವೆ ಸ್ಟೇಷನ್‍ನಿಂದ ಮೆರವಣಿಗೆ ಮೂಲಕ ಬಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಾಗಿದೆ.