Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಎಡ ಐಕ್ಯ ವೇದಿಕೆಯಲ್ಲಿ ಸಿಪಿಐ(ಮಾವೋವಾದಿ) ಪಕ್ಷವನ್ನು ಯಾಕೆ ಸೇರಿಸಿಕೊಳ್ಳುತ್ತಿಲ್ಲ?

ಸಂಪುಟ: 
9
ಸಂಚಿಕೆ: 
43
date: 
Sunday, 18 October 2015

ಸಿಪಿಐ(ಎಂ) ಎಡ ಐಕ್ಯ ವೇದಿಕೆಯಲ್ಲಿ ಸಿಪಿಐ(ಮಾವೋವಾದಿ) ಪಕ್ಷವನ್ನು ಯಾಕೆ ಸೇರಿಸಿಕೊಳ್ಳುತ್ತಿಲ್ಲ? ಮಾವೋವಾದಿ ಪಕ್ಷ ಎಡ ಪಕ್ಷ ಅಲ್ಲವೇ

- ಎಸ್.ರೂಪೇಶ್, ಬೆಂಗಳೂರು

cpi mlಸಿಪಿಐ(ಎಂ) 21 ನೇ ಮಹಾಧಿವೇಶನದಲ್ಲಿ ಎಲ್ಲಾ ಎಡ  ಪಕ್ಷಗಳು, ಗುಂಪುಗಳು ಹಾಗೂ ವ್ಯಕ್ತಿಗಳು ಒಂದಾಗಿ ಒಂದು ವಿಶಾಲ ಎಡ ವೇದಿಕೆ ರೂಪಿಸಬೇಕು ಎಂದು ಕರೆಕೊಟ್ಟಿದೆ. ಪರಸ್ಪರ ಒಪ್ಪಿತವಾದ ವಿಷಯಗಳ ಮೇಲೆ ಜಂಟಿ ಕಾರ್ಯಾಚರಣೆಗಳು ಮತ್ತು ಐಕ್ಯ ಹೋರಾಟಗಳ ಮೂಲಕ ಇದನ್ನು ಸಾಧಿಸಬಹುದು. ಆರು ಎಡ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಜಂಟಿ ಕಾರ್ಯಾಚರಣೆಗಳನ್ನು ನಡೆಸಲು ಒಪ್ಪಿಕೊಂಡಿವೆ. ಕೆಲವು ರಾಜ್ಯಗಳಲ್ಲಿ, ರಾಜ್ಯದಲ್ಲಿ ಸಕ್ರಿಯವಾಗಿರುವ ಇತರ ಎಡ ಪಕ್ಷಗಳು, ಗುಂಪುಗಳು ಸೇರಿಕೊಂಡು ಇನ್ನೂ ವಿಶಾಲವಾದ ಐಕ್ಯ ಎಡ ವೇದಿಕೆಗಳನ್ನು ರೂಪಿಸಲಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ 10-ಪಕ್ಷಗಳ ಎಡ ವೇದಿಕೆ, ಪಶ್ಚಿಮ ಬಂಗಾಳದ 17-ಪಕ್ಷಗಳ ಎಡ ವೇದಿಕೆ, ಮಹಾರಾಷ್ಟ್ರದ ೮-ಪಕ್ಷಗಳ ಮೈತ್ರಿಕೂಟ ಇದಕ್ಕೆ ಉದಾಹರಣೆಗಳು.

ಸಿಪಿಐ(ಮಾವೋವಾದಿ) ಅಥವಾ ಮಾವೋವಾದಿಗಳು ಎಂದು ಕರೆದುಕೊಳ್ಳುವವರು ಭೂಗತವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಶಸ್ತ್ರ ಹೋರಾಟವೇ ಅವರ ಪ್ರಧಾನ ರಾಜಕೀಯ ತಂತ್ರ. ಸಾಮೂಹಿಕ ರಾಜಕೀಯ ಚಟುವಟಿಕೆಗಳು ಅಥವಾ ಸಾಮೂಹಿಕ ಚಳುವಳಿಗಳನ್ನು ಬೆಳೆಸುವುದರಲ್ಲಿ ಅವರಿಗೆ ನಂಬಿಕೆ ಇಲ್ಲ. ಸಿಪಿಐ(ಎಂ), ಸಿಪಿಐ ಮುಂತಾದ ಪಕ್ಷಗಳ ಬಗ್ಗೆ ಅವರು ಹಗೆ ಅಥವಾ ಶತ್ರು ಧೋರಣೆ ತೋರುತ್ತಾ ಬಂದಿದ್ದಾರೆ. ಅವರು ಎಡ ಪಕ್ಷಗಳನ್ನು ಆಳುವ ವರ್ಗಗಳ ಏಜೆಂಟರು ಎಂದು ಕರೆಯುತ್ತಾರೆ. ಬರಿಯ ಮಾತಿನಟೀಕೆಯಲ್ಲಿ ಮಾತ್ರವಲ್ಲ, ಸಿಪಿಐ(ಎಂ) ಕಾರ್ಯಕರ್ತರು, ಸದಸ್ಯರು, ಬೆಂಬಲಿಗರನ್ನು ದೈಹಿಕ ದಾಳಿಗಳಿಗೂ ಗುರಿ ಮಾಡಿ, ಅವರ ಕೊಲೆಯನ್ನೂ ಮಾಡುತ್ತಾ ಬಂದಿದ್ದಾರೆ. ಆಂಧ್ರ ಪ್ರದೇಶ, ಒಡಿಶಾ, ಜಾರ್ಖಂಡ್ ಹಾಗೂ ಇತ್ತೀಚೆಗೆ ಪಶ್ಚಿಮ ಬಂಗಾಳದ ಜಂಗಲ್ ಮಹಲ್ ಪ್ರದೇಶದಲ್ಲಿ ಸಿಪಿಐ(ಎಂ) ಕಾರ್ಯಕರ್ತರು, ಸದಸ್ಯರು, ಬೆಂಬಲಿಗರ ಮೇಲೆದಾಳಿ, ಕೊಲೆಗಳನ್ನು ಮಾಡಿದ್ದಾರೆ.

ಆದ್ದರಿಂದ ಮಾವೋವಾದಿ ಪಕ್ಷವನ್ನು ಐಕ್ಯಎಡ ವೇದಿಕೆಯಲ್ಲಿ ಸೇರಿಸಲಾಗಿಲ್ಲ. ಅವರ ರಾಜಕೀಯ ಧೋರಣೆ ಮತ್ತು ತಂತ್ರಗಳಲ್ಲಿ ಮೂಲಭೂತ ಮತ್ತು ನೈಜ ಬದಲಾವಣೆ ಆದರೆ, ಐಕ್ಯಎಡ ವೇದಿಕೆಯಲ್ಲಿ ಅವರನ್ನು ಒಳಗೊಳ್ಳುವ ಬಗ್ಗೆ ಪರಿಶೀಲಿಸಬಹುದು.