Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸಿಪಿಐ(ಎಂ) ಮತ್ತು ಸಿಪಿಐ ಅಷ್ಟೇನು ಹೇಳಿಕೊಳ್ಳಲಾಗದ ಅಂತರವಿದ್ದರೂ

ಸಂಪುಟ: 
9
ಸಂಚಿಕೆ: 
37
date: 
Sunday, 6 September 2015
ಕಮ್ಯುನಿಸ್ಟ್ ಸಿದ್ಧಾಂತ ಒಪ್ಪಿಕೊಂಡ ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳ ಕಾರ್ಯಕ್ರಮಗಳಲ್ಲಿ ಅಷ್ಟೇನು ಹೇಳಿಕೊಳ್ಳಲಾಗದ ಅಂತರವಿದ್ದರೂ, ಇಂದಿನ ರಾಜಕೀಯ ಬಲಪಂಥಿಯರನ್ನು ಎದುರಿಸಲು ಈ ಎರಡೂ ಪಕ್ಷಗಳು ಏಕೆ ಒಂದಾಗುತ್ತಿಲ್ಲ
- ಜಿ.ಎಂ. ಹಿರೇಮಠ, ವಕೀಲರು, ಹಾವೇರಿ

ರಾಜಕೀಯ ಬಲಪಂಥಿಯರನ್ನು ಎದುರಿಸಲು ಎಡ-ಪ್ರಜಾಸತ್ತಾತ್ಮಕ ಶಕ್ತಿಗಳ ವಿಶಾಲ ಐಕ್ಯತೆಯ ಅಗತ್ಯಇದೆ. ಇದಕ್ಕೆ ಎಡಐಕ್ಯತೆ ಕೇಂದ್ರವಾಗಬೇಕು ಎಂದು ಸಿಪಿಐ(ಎಂ) 21ನೇ ಮಹಾಧಿವೇಶನ ಗುರುತಿಸಿದೆ. ಎಡ ಅಥವಾ ಕಮ್ಯುನಿಸ್ಟ್ ಪಕ್ಷಗಳು ಒಂದಾಗುವುದಕ್ಕಿಂತಲೂ ಹೆಚ್ಚಾಗಿ ತಳಮಟ್ಟದಿಂದ ಆರಂಭಿಸಿ ಎಲ್ಲಾ ಹಂತಗಳಲ್ಲೂ ಜಂಟಿ ಕಾರ್ಯಾಚರಣೆ ನಡೆಸುವುದು ಇಂದಿನ ತುರ್ತು ಅಗತ್ಯ. ಆರು ಎಡ ಪಕ್ಷಗಳು ಇಂತಹ ಜಂಟಿ ಕಾರ್ಯಾಚರಣೆಯನ್ನು ಸುಮಾರು ಒಂದು ವರ್ಷದಿಂದ ನಡೆಸುತ್ತಿದ್ದು, ಇತ್ತೀಚಿನ ಅತ್ಯಂತ ಸಫಲ ಸಾರ್ವತ್ರಿಕ ಮುಷ್ಕರ ಅದರ ಪರಿಣಾಮಕಾರಿತನಕ್ಕೆ ಸಾಕ್ಷಿ.

ಭಾರತದಂತಹ ವೈವಿಧ್ಯತೆಗಳಿರುವ ಸಂಕೀರ್ಣ ಸಮಾಜದಲ್ಲಿ ಸಮಾಜವಾದ ಕಟ್ಟುವ ಪ್ರಕ್ರಿಯೆ ಬಗ್ಗೆ ಸೈದ್ಧಾಂತಿಕ ಮತ್ತು ಕಾರ್ಯಕ್ರಮಾತ್ಮಕ ಭಿನ್ನತೆ ಇರುವುದು ಸಹಜ. ಆದ್ದರಿಂದ ಎಡ ಅಥವಾ ಕಮ್ಯುನಿಸ್ಟ್ ಪಕ್ಷಗಳ ಬಹುತ್ವ ಅದರಷ್ಟಕ್ಕೆ ಸಮಸ್ಯಾತ್ಮಕ ಎಂದುಕೊಳ್ಳಬೇಕಾಗಿಲ್ಲ. ಅಥವಾ ಇರುವ ಭಿನ್ನತೆಗಳನ್ನು ಬದಿಗಿಟ್ಟು ಹೇಗೋ ಒಂದಾಗುವುದು ತನ್ನಿಂತಾನೆ ಎಡ ಚಳುವಳಿಯನ್ನು ಬಲಪಡಿಸುತ್ತದೆ ಎಂದೂ ಭಾವಿಸಬೇಕಾಗಿಲ್ಲ. ಆದರೆ ಈ ಭಿನ್ನತೆಗಳು ಭಿನ್ನಾಭಿಪ್ರಾಯಗಳು ಆಳುವ ವರ್ಗಗಳ ವಿರುದ್ಧ ಜಂಟಿ ಕಾರ್ಯಾಚರಣೆಗೆ ಅಡ್ಡಿ ಬರದಂತೆ ಹಾಗೂ ಪರಸ್ಪರ ವೈಷಮ್ಯ ಇರದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಭಿನ್ನಾಭಿಪ್ರಾಯಗಳ ಬಗೆಗೆ ಸತತ ಮುಕ್ತ ಸಂವಾದ ಸಾಧ್ಯವಾಗುವ ವಾತಾವರಣ ನಿರ್ಮಿಸುವುದು ಮುಖ್ಯ.

ಭಾರತದ ಕಮ್ಯುನಿಸ್ಟ್ ಚಳುವಳಿಯಲ್ಲಿ ಪ್ರಭುತ್ವದ ವರ್ಗ ಸ್ವರೂಪದ ಬಗ್ಗೆ ಮತ್ತು ಅದರ ಪರಿಣಾಮವಾಗಿ ರಾಜಕೀಯ ವ್ಯೂಹ ಮತ್ತು ತಂತ್ರಗಳ ಬಗ್ಗೆ ಇರುವ ಭಿನ್ನಾಭಿಪ್ರಾಯಗಳು ಕಡಿಮೆಯಾಗಿರುವುದು ನಿಜ. ಆದರೆ ಅವೆಲ್ಲವೂ ಪರಿಹಾರವಾಗಿವೆ ಎನ್ನುವುದು ನಿಜವಲ್ಲ. ಸಿಪಿಐ-ಸಿಪಿಐ(ಎಂ) ನಡುವೆ ಭಾಷಾವಾರು ಆಧಾರವಿಲ್ಲದ(ತೆಲಂಗಾಣ ಇತ್ಯಾದಿ) ಸಣ್ಣ ರಾಜ್ಯಗಳ ರಚನೆ ಬಗ್ಗೆ ಭಿನ್ನಾಭಿಪ್ರಾಯ ಇದೆ. ಕಮ್ಯುನಿಸ್ಟ್ ಚಳುವಳಿಯಲ್ಲಿ ಬಂದ ವಿಭಜನೆಗಳು ಚಳುವಳಿಯನ್ನು ದುರ್ಬಲಗೊಳಿಸಿವೆ ಎಂಬುದು ನಿಜ. ಆದರೆ ಈ ವಿಭಜನೆಗಳು ಆಗಿರದಿದ್ದರೆ ಕಮ್ಯುನಿಸ್ಟ್ ಚಳುವಳಿಯೇ ಅಳಿದು ಹೋಗುವ ಸಾಧ್ಯತೆ ಸಹ ಇತ್ತು ಎನ್ನುವುದು ಅಷ್ಟೇ ನಿಜ. ಉದಾಹರಣೆಗೆ ಅವಿಭಜಿತ ಪಕ್ಷ ಇಂದಿರಾ ಕಾಂಗ್ರೆಸ್ ಜತೆ ಸೇರುವ ತುರ್ತು ಪರಿಸ್ಥಿತಿ ಬೆಂಬಲಿಸುವ ಪರಿಷ್ಕರಣವಾದಿ ತಪು ಅಥವಾ ಜನತಾ ಗೆರಿಲ್ಲಾ ಯುದ್ಧ ಸಾರುವ ಎಡದುಸ್ಸಾಹಸವಾದಿ ತಪ್ಪು ಮಾಡಿದ್ದರೆ ಕಮ್ಯುನಿಸ್ಟ್ ಚಳುವಳಿಯೇ ಅಳಿದು ಹೋಗುತ್ತಿತ್ತೇನೊ. ಇದು ಬರಿಯ ಕಲ್ಪನೆ ಅಲ್ಲ. ಏಶ್ಯಾದ ಹಲವು ದೇಶಗಳಲ್ಲಿ (ಉದಾ: ಈಜಿಪ್ಟ್, ಇಂಡೋನೇಶ್ಯಾ, ಮಲೇಶ್ಯಾ) ಇಂತಹದು ಆಗಿದೆ ಎಂಬುದನ್ನು ಗಮನಿಸಬಹುದು.

 

CPIM-CPI