Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸಂಸತ್ತಿನಲ್ಲಿರುವ ಕ್ಯಾಂಟೀನ್‌ನಲ್ಲಿ ಅತೀ ಕಡಿಮೆ ದರದಲ್ಲಿ ಊಟ ತಿಂಡಿ ಸರಬರಾಜು?

ಸಂಪುಟ: 
9
ಸಂಚಿಕೆ: 
35
date: 
Sunday, 23 August 2015

ಕೇಂದ್ರ ಬಿಪಿಲ್ ಸರಕಾರದ ’ಎಲ್‌ಪಿಜಿ ಸಬ್ಸಿಡಿ ಬಿಡಿ’ ಪ್ರಚಾರ ಆಷಾಢಭೂತಿತನದಂತೆ ವ್ಯಂಗ್ಯ ಪ್ರಹಸನದಂತೆ ತೋರುತ್ತದೆ. ಬಿಜೆಪಿ ಸರಕಾರದ ಮಂತ್ರಿಗಳು, ಸಂಸದರುಗಳು ಅವರನ್ನು ಬೆಂಬಲಿಸುವ ಬಂಡವಾಳಶಾಹಿಗಳು ಎಲ್ಲ ಸಬ್ಸಿಡಿಗಳನ್ನು ಬಿಟ್ಟು ಮಾದರಿಯಾಗಿದ್ದಾರೆಯೇ? ಮಂತ್ರಿಗಳು, ಸಂಸದರಲ್ಲಿ ಹೆಚ್ಚಿನವರು ಶತಕೋಟ್ಯಾಧೀಶರಿದ್ದಾರೆ. ಅವರೀಗೇಕೆ ಸಂಸತ್ತಿನಲ್ಲಿರುವ ಕ್ಯಾಂಟೀನ್‌ನಲ್ಲಿ ಅತೀ ಕಡಿಮೆ ದರದಲ್ಲಿ ಊಟ ತಿಂಡಿ ಸರಬರಾಜು? ನಿಜವಾದ ದೇಶಾಭಿಮಾನಿಗಳು, ಜನಪರ ಪ್ರತಿನಿಧಿಗಳಾಗಿದ್ದರೆ ಅವರೇಕೆ ಪಗಾರ ಭತ್ಯೆ ತೆಗೆದುಕೊಳ್ಳಬೇಕು? ಸರಕಾರದ ಖರ್ಚನ್ನು ಕಡಿಮೆ ಮಾಡಬೇಕೆಂಬ ಸಾಮಾಜಿಕ ಜವಾಬ್ದಾರಿ ಅವರಿಗೆ ಬೇಡವೇ?

— ರಾಘವೇಂದ್ರ ಆಯಿ, ಧಾರವಾಡ

Parliment canteenನೀವು ಹೇಳಿದಂತೆ ’ಎಲ್.ಪಿ.ಜಿ. ಸಬ್ಸಿಡಿ ಬಿಡಿ’ ಪ್ರಚಾರ ಆಷಾಢಭೂತಿತನ.  ಬಿಜೆಪಿ ಸರಕಾರದ ಮಂತ್ರಿಗಳು, ಸಂಸದರು, ಅವರನ್ನು ಬೆಂಬಲಿಸುವ ಬಂಡವಾಳಶಾಹಿಗಳು ಎಲ್ಲ ಸಬ್ಸಿಡಿಗಳನ್ನು ಬಿಟ್ಟು ಮಾದರಿಯಾಗಿ ಇಲ್ಲ. ಮಂತ್ರಿಗಳು, ಸಂಸದರಲ್ಲಿ ಹೆಚ್ಚಿನವರು ಶತಕೋಟ್ಯಾಧೀಶರು. ಅವರಿಗೆ ಸಂಸತ್ತಿನ ಕ್ಯಾಂಟಿನಿನಲ್ಲಿ ಸಬ್ಸಿಡಿ ಕೊಡುವ ಅಗತ್ಯ ಇಲ್ಲ. ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಕಾ. ಟಿ.ಕೆ. ರಾಮಚಂದ್ರನ್ ಸಂಸದರಿಗೆ ಸಂಸತ್ತಿನ ಕ್ಯಾಂಟಿನಿನಲ್ಲಿ ಸಬ್ಸಿಡಿ ಕೊಡುವ ಅಗತ್ಯ ಇಲ್ಲ. ಇದು ಸಿಪಿಐ(ಎಂ) ನಿಲುವು ಎಂದು ಸ್ಪಷ್ಟ ಪಡಿಸಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳಬೇಕಾದ್ದು ಬಿಜೆಪಿ ಪಕ್ಷದವರೇ ಆದ ಸ್ಪೀಕರ್. ಜನರಿಗೆ ಸಬ್ಸಿಡಿ ಬಿಡಿ ಎಂದು ಹೇಳುವ ಅವರ ಪಕ್ಷ ಇದಕ್ಕೆ ಮನಸ್ಸು ಮಾಡಿಲ್ಲ. ಆದರೆ ಸಂಸದರು ಜನಪ್ರತಿನಿಧಿಗಳಿಗೆ ಪಗಾರ ಭತ್ಯೆ ಇರಬಾರದು, ತೆಗೆದುಕೊಳ್ಳಬಾರದು ಎಂಬುದು ಅಷ್ಟು ಸರಿಯಾಗಲಿಕ್ಕಿಲ್ಲ. ಪಗಾರ, ಭತ್ಯದ ಮಟ್ಟ ಖರ್ಚು ಭರಿಸುವಷ್ಟು ಮಾತ್ರ ಇರಬೇಕು. ಪದೇ ಪದೇ ಯಾವುದೇ ಕಾರಣವಿಲ್ಲದೆ ಅದನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುತ್ತಾ ಹೋಗುವುದು ತಪ್ಪು. ಅದೇ ರೀತಿ ಎಲ್ಲಾ ಕಡೆ ಸಂಸದರು ಮಂತ್ರಿಗಳಿಗಾಗಿ ವಿಮಾನ ವಿಳಂಬ ಮಾಡುವುದು, ಮತ್ತಿತರ ವಿವಿಐಪಿ ವಿಶೇಷ ಸವಲತ್ತು ಕೊಡುವುದು ನಿಲ್ಲಬೇಕು.

ಆದರೆ ಮಾಧ್ಯಮಗಳ ಈ ’ವಿವಿಐಪಿ ಸವಲತ್ತು ನಿಲ್ಲಿಸಿ’ ಚರ್ಚೆ-ಗದ್ದಲ, (ಶ್ರೀಮಂತರಲ್ಲದ ನಿಜವಾದ ಜನಪ್ರತಿನಿಧಿಗಳು ಸೇರಿದಂತೆ) ಎಲ್ಲಾ ರಾಜಕೀಯ ವ್ಯಕ್ತಿಗಳನ್ನು ’ವಿಲನ್’ ಎಂದು ಚಿತ್ರಿಸಿ, ಭಾರೀ ಕಾರ್ಪೊರೇಟುಗಳ ಶ್ರೀಮಂತರ ’ಖಳ ನಾಯಕತ್ವ’ ಮುಚ್ಚಿಡುವ ಪ್ರಯತ್ನ. ಅವರಿಗೆ ಸರಕಾರ ಕೊಡುವ ’ವಿಶೇಷ ಸವಲತ್ತು’ಗಳಿಂದ ’ಸಬ್ಸಿಡಿ’ಗಳಿಂದ ಗಮನ ಬೇರೆಡೆಗೆ ತಿರುಗಿಸುವ ಹುನ್ನಾರ ಎಂದು ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮಗಳು ಇಂತಹ ಸಣ್ಣ ವಿಷಯಗಳ (ಸಂಸದರ ಕ್ಯಾಂಟೀನ್ ಸಬ್ಸಿಡಿ 60 ಕೋಟಿ ರೂ.) ಬಗೆಗೆ ಗದ್ದಲ ಎಬ್ಬಿಸಿ ದೊಡ್ಡ ವಿಷಯಗಳನ್ನು ಮರೆ ಮಾಡುತ್ತವೆ. ಸಾವಿರಾರು ಕೋಟಿ ರೂ. ಬ್ಯಾಂಕುಗಳ ಸಾಲ ಪಾವತಿ ಮಾಡದೆ ಗುಳುಂ ಮಾಡಿಯೂ ಜೈಲಿಗೆ ಹೋಗದೆ ಓಡಾಡುತ್ತಿರುವ ವಿಜಯ ಮಲ್ಯನ ಬಗ್ಗೆ, ತಮಗೆ ಸಾವಿರಾರು ಕೋಟಿ ಲಾಭ ತರುವ ಅನುಕೂಲಕರವಾದ ನೀತಿಗಳನ್ನು ಹೇಳಿ ಬರೆಯಿಸುವ ಅದಾನಿ-ಅಂಬಾನಿಗಳ ’ವಿಶೇಷ ಸವಲತ್ತು’ಗಳ ಬಗ್ಗೆ ಚಕಾರವೆತ್ತುವುದಿಲ್ಲ. ಪ್ರತಿ ಬಜೆಟಿನಲ್ಲಿ ಕಾರ್ಪೊರೇಟುಗಳಿಗೆ ಕೊಡುವ ಸುಮಾರು 5 ಲಕ್ಷಕೋಟಿ ರೂ.ಗಳ (ಆದಾಯ ತೆರಿಗೆ, ಎಕ್ಸೈಸ್, ಕಸ್ಟಮ್ಸ್ ಮಾಫಿ)ಸಬ್ಸಿಡಿ ಬಗ್ಗೆ ಮಾತನಾಡುವುದಿಲ್ಲ. ಹೇಗೆ ಮಾತನಾಡಿಯಾರು? ಶೇ.60 ರಷ್ಟು ಮಾಧ್ಯಮ ಕಂಪನಿಗಳು ಅಂಬಾನಿ ನೇರ/ಪರೋಕ್ಷ ಒಡೆತನದಲ್ಲಿ ಇವೆ.