Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸಿಪಿಐ(ಎಂ) ಲಿಂಗ ಸಮಾನತೆ ಬಗ್ಗೆ ಮಾತನಾಡುತ್ತದೆ.

ಸಂಪುಟ: 
9
ಸಂಚಿಕೆ: 
33
date: 
Sunday, 9 August 2015

ಸಿಪಿಐ(ಎಂ) ಲಿಂಗ ಸಮಾನತೆ ಬಗ್ಗೆ ಮಾತನಾಡುತ್ತದೆ. ಪಾರ್ಲಿಮೆಂಟಿನಲ್ಲಿ ಶೇ. 33 ಪ್ರಾತಿನಿಧ್ಯ ಕೇಳುತ್ತದೆ. ದೆಹಲಿಯ ಆಪ್ ಸರಕಾರ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕೊಟ್ಟಿಲ್ಲ ಅಂತ ಟೀಕೆ ಮಾಡ್ತದೆ. ಆದರೆ ಪಕ್ಷದ ಮೆಲ್‌ಸಮಿತಿಗಳಿಗೆ ಬಂದಾಗ ಸಿಪಿಐ(ಎಂ) ಬೇರೆ ಪಕ್ಷಗಳಿಗಿಂತ ಭಿನ್ನವಾಗಿಲ್ಲ. ಸಿಪಿಐ(ಎಂ) ಹೇಳುವುದನ್ನು ಮಾಡುವುದು ಯಾವಾಗ

– ಸುನಂದ, ಬೆಂಗಳೂರು

CPIMಸಿಪಿಐ(ಎಂ) ಲಿಂಗ ಸಮಾನತೆಯ ಹೋರಾಟಕ್ಕೆ ಬದ್ಧವಾಗಿದೆ. ಇದು ಪಕ್ಷದ ಸಂಘಟನೆಗೂ ಅನ್ವಯವಾಗುತ್ತದೆ. ಪಕ್ಷ ಮಹಿಳೆಯರ ಸದಸ್ಯತ್ವ ಹೆಚ್ಚಿಸುವುದಕ್ಕೆ ಮತ್ತು ಎಲ್ಲಾ ಹಂತಗಳಲ್ಲಿ ನಾಯಕತ್ವದ ಸ್ಥಾನಗಳಿಗೆ ಆರಿಸಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಿದೆ. ಪುರುಷ-ಪ್ರಾಧಾನ್ಯತೆಯ ಧೋರಣೆ ಪಕ್ಷದ ಹಲವು ಸದಸ್ಯರಲ್ಲಿ ಇದೆ ಎಂದು ಪಕ್ಷಕ್ಕೆ ಅರಿವಿದೆ ಮತ್ತು ಅದನ್ನು ಸರಿಪಡಿಸಲು ಸತತ ಹೋರಾಟವನ್ನೂ ನಡೆಸುತ್ತಿದೆ. ಪಕ್ಷ ಕೈಗೊಂಡಿರುವ ತಿದ್ದುಪಡಿ ಚಳುವಳಿಯಲ್ಲಿ ಇದನ್ನು ಗಮನಕ್ಕೆ ತೆಗೆದುಕೊಂಡು ತಿದ್ದುವ ಪ್ರಯತ್ನ ಸಾಗಿದೆ.

ಮಹಿಳೆಯರ ಸದಸ್ಯತ್ವ ಗಮನಾರ್ಹವಾಗಿ ಹೆಚ್ಚಿಸುವ ಕರ್ತವ್ಯ ಪಕ್ಷದ ಪ್ರಮುಖ ಕರ್ತವ್ಯಗಳಲ್ಲಿ ಒಂದು ಎಂದು ಪಕ್ಷದ ಎಲ್ಲಾ ಮಹಾಧಿವೇಶನಗಳಲ್ಲೂ ಒತ್ತಿ ಹೇಳುತ್ತಾ ಬರಲಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಸ್ವಲ್ಪ ಮಟ್ಟಿನ ಪ್ರಗತಿ ಸಹ ಆಗಿದೆ. 1995 ರಲ್ಲಿ ಪಕ್ಷದಲ್ಲಿ ಮಹಿಳಾ ಸದಸ್ಯತ್ವ ಕೇವಲ ಶೇ. 5.5 ಇತ್ತು. 2014ರಲ್ಲಿ ಅದು ಶೇ. 14ಕ್ಕೆ ಏರಿದೆ. ಆದರೆ ಅದು ಇನ್ನೂ ತೃಪ್ತಿಕರವಲ್ಲ ಮತ್ತು ಏರಿಕೆ ಸಹ ನಿಧಾನವೆಂದೇ ಹೇಳಬಹುದು. ಮೇಲ್‌ಸಮಿತಿಗಳಲ್ಲೂ ಸ್ವಲ್ಪ ಪ್ರಗತಿ ಆಗಿದೆ. ಕೇಂದ್ರ ಸಮಿತಿಯಲ್ಲಿ 1995ರಲ್ಲಿ ಶೇ. 5.5 ಮಹಿಳೆಯರು ಇದ್ದರು. ಈಗ ಅದು ಶೇ. 15.4ಕ್ಕೇರಿದೆ. 1995ರಲ್ಲಿ ಪೊಲಿಟ್‌ಬ್ಯುರೊದಲ್ಲಿ ಮಹಿಳಾ ಸದಸ್ಯರೇ ಇರಲಿಲ್ಲ. ಈಗ ಇಬ್ಬರು ಪಿಬಿ ಸದಸ್ಯರಿದ್ದಾರೆ. ರಾಜ್ಯ ಸಮಿತಿಗಳಲ್ಲೂ ಇದೇ ರೀತಿ ಮಹಿಳೆಯರ ಪ್ರಮಾಣದಲ್ಲಿ ಏರಿಕೆ ಆಗಿದೆ. ಉದಾಹರಣೆಗೆ ಕರ್ನಾಟಕ ರಾಜ್ಯಸಮಿತಿಯಲ್ಲಿ 1995ರಲ್ಲಿ ಶೇ. 6 ರಿಂದ 2015ರಲ್ಲಿ ಶೇ. 12 ಕ್ಕೇರಿದೆ. ಆದರೆ ಇವೆಲ್ಲವೂ ಖಂಡಿತ ತೃಪ್ತಿಕರವಾಗಿಲ್ಲ.

ಸಾಮೂಹಿಕ ಮತ್ತು ವರ್ಗ ಸಂಘಟನೆಗಳಲ್ಲಿರುವ ಲಕ್ಷಾಂತರ ಮಹಿಳೆಯರಿಂದ ಪಕ್ಷಕ್ಕೆ ಸದಸ್ಯರನ್ನು ತರುವುದರಲ್ಲಿ ಪ್ರಗತಿ ಬಹಳ ನಿಧಾನವಾಗಿದೆ. ವಿವಿಧ ಹಂತಗಳ ಸಮಿತಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಸಾಕಷ್ಟು ಇಲ್ಲ ಎಂಬುದು ನಿಜ. ಆದರೆ ಇದು ಈ ಸಂಬಂಧsದಲ್ಲಿ ಪಕ್ಷದ ನಿರ್ಣಯಗಳ ಅಥವಾ ನಿರ್ದೇಶನಗಳ ಕೊರತೆಯಿಂದ ಅಲ್ಲ. ಈ ಪರಿಸ್ಥಿತಿ ಇರುವುದು ಮಹಿಳೆಯರ ಸಾಮರ್ಥ್ಯವನ್ನು ಗುರುತಿಸುವ ಮತ್ತು ಲಿಂಗ ಸಮಾನತೆಯ ಆವಶ್ಯಕತೆಯ ಬಗ್ಗೆ ಪ್ರಮುಖ ನಾಯಕರ ಮತ್ತು ಸಮಿತಿಗಳ ತಪ್ಪು ಧೋರಣೆಯಿಂದಾಗಿ. ಈ ಧೋರಣೆಯ ಬದಲಾವಣೆಗೆ ಹೋರಾಡಬೇಕಾಗಿದೆ.