ದಕ್ಷಿಣ ಆಫ್ರಿಕಾ ವಿದ್ಯಾರ್ಥಿಗಳ ಜಯ

ಸಂಪುಟ: 
9
ಸಂಚಿಕೆ: 
44
Sunday, 25 October 2015

South Africaದಕ್ಷಿಣ ಆಫ್ರಿಕಾದ ವಿದ್ಯಾರ್ಥಿಗಳ ಒಂದು ವಾರದ ಸತತ ಹೋರಾಠಕ್ಕೆ ಜಯ ಸಂದಿದೆ. ಸರಕಾರ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಶುಲ್ಕ ಹೆಚ್ಚು ಮಾಡದಿರಲು ನಿರ್ಧರಿಸಿದೆ. ಅ ಧ್ಯಕ್ಷ ಝೂಮಾ ಟಿವಿ ಭಾಷಣವೊಂದರಲ್ಲಿ ಈ ನಿರ್ಧಾರ ಪ್ರಕಟಿಸಿದರು. ಸರಕಾರ ವಿಶ್ವವಿದ್ಯಾಲಯಗಳಲ್ಲಿ ಶುಲ್ಕ ಶೇ. 10 ರಷ್ಟು ಹೆಚ್ಚಿಸಿತ್ತು. ವಿದ್ಯಾರ್ಥಿಗಳು ಅದಕ್ಕೆ ಪ್ರತಿಭಟಿಸಿದಾಗ ಅದನ್ನು ಶೇ. 6 ಕ್ಕೆ ಇಳಿಸಿತ್ತು. ಅದಕ್ಕೂ ಒಪ್ಪದ ವಿದ್ಯಾರ್ಥಿಗಳು ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ತೀವ್ರ ಪ್ರತಿಭಟನೆಗೆ ಮುಂದಾಗಿದ್ದರು. ಹಲವು ಕ್ಯಾಂಪಸುಗಳಲ್ಲಿ ವಿದ್ಯಾರ್ಥಿಗಳನ್ನು ತಡೆಯಲು ಬಂದ ಪೋಲಿಸರೊಂದಿಗೆ ಘರ್ಷಣೆ ನಡೆದು ತೀವ್ರ ಹಿಂಸಾಚಾರವೂ ನಡೆದಿತ್ತು. 22 ವಿದ್ಯಾರ್ಥಿಗಳ ಮೇಲೆ ಕೇಸುಗಳನ್ನು ದಾಖಲೆ ಮಾಡಲಾಗಿದೆ. ಈಗಿನ ಬೆಲೆ ಏರಿಕೆಯ ದುಬಾರಿ ಜೀವನ ವೆಚ್ಚಗಳ ಸನ್ನಿವೇಶದಲ್ಲಿ ಶುಲ್ಕಏರಿಕೆ ಮುಖ್ಯವಾಗಿ ಬಡ ಕರಿಯ ವಿದ್ಯಾರ್ಥಿಗಳನ್ನು ಉಚ್ಛ ಶಿಕ್ಷಣದಿಂದ ಹೊರ ತಳ್ಳುತ್ತದೆ. ಶಿಕ್ಷಣದಲ್ಲೂ ವ್ಯಾಪಕವಾಗಿ 1994ರ ವರೆಗೆ ಇದ್ದ ವರ್ಣಭೇಧ ನೀತಿಯ ದಿನಗಳಿಗೆ ವಾಪಸಾಗುತ್ತದೆ ಎಂದು ವಿದ್ಯಾರ್ಥಿಗಳ ವಾದವಾಗಿತ್ತು.