Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ದೇಶದ ರಾಜಧಾನಿಗೆ ಲಕ್ಷಾಂತರ ಕಾರ್ಮಿಕರ ಲಗ್ಗೆ - ಸಂಸತ್ ಮಾರ್ಗದಲ್ಲಿ ‘ಮಹಾಪಡಾವ್’ ಆರಂಭ

ಸಂಪುಟ: 
11
ಸಂಚಿಕೆ: 
47
date: 
Sunday, 12 November 2017

ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು (ಸಂಘಪರಿವಾರದ ಬಿಎಂಎಸ್ ಬಿಟ್ಟು ಎಲ್ಲವೂ) ಮತ್ತು ಕೈಗಾರಿಕಾವಾರು ನೌಕರರ ಒಕ್ಕೂಟಗಳ ಜಂಟಿ ಕರೆಗೆ ಓಗೊಟ್ಟು ಸುಮಾರು ಒಂದು ಲಕ್ಷದಷ್ಟು ಸಾರ್ವಜನಿಕ, ಖಾಸಗೀ, ಸರಕಾರೀ, ಖಾಯಂ, ಕಾಂಟ್ರಾಕ್ಟ್, ಕ್ಯಾಶುವಲ್, ಸ್ಕೀಮ್ ಕಾರ್ಮಿಕರು, ನೌಕರರು ಒಟ್ಟುಗೂಡಿ ನವಂಬರ್ 9 ರಂದು ಸಂಸತ್ ಮಾರ್ಗದ ಬಳಿ ತಮ್ಮ ಮೂರು ದಿನಗಳ ಚಾರಿತ್ರಿಕ ಮಹಾಧರಣಿ ಆರಂಭಿಸಿದ್ದಾರೆ. ದಿಲ್ಲಿ ನಗರವನ್ನು ಕವಿದಿರುವ ಹೊಗೆಮಂಜನ್ನೂ ಲೆಕ್ಕಿಸದೆ  ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ರೈಲು ವಿ¼ಂಬ ಮತ್ತಿತರ ಕಾರಣಗಳಿಂದ ಇನ್ನು ಹಲವಾರು ಕಾರ್ಮಿಕರು ದಿಲ್ಲಿ ತಲುಪಿಲಲ್. ಮುಂದಿನ ಎರಡು ದಿನಗಳಲ್ಲಿ ದೇಶದ ಇನ್ನೂ ಹಲವು ಭಾಗಗಳಿಂದ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು ದಿಲ್ಲಿಗೆ ಬಂದು ಈ ಮಹಾಪಡಾವ್‍ನಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ಮೂರು ತಇಂಗಳ ವ್ಯಾಪಕ ಪ್ರಚಾರಾಂದೋಲನ ನಡೆಸಿ ಈ ಸಾವಿರಾರು ಕಾರ್ಮಿಕರು ದಿಲ್ಲಿಗೆ ಲಗೆಯಿಟ್ಟಿದ್ದಾರೆ.

ಮಹಾಧರಣಿಯ ಉದ್ಘಾಟನಾ ಅಧಿವೇಶನದಲ್ಲಿ  ಬಿಜೆಪಿ ಸರಕಾರದ ಕಾರ್ಮಿಕ-ವಿರೋಧಿ, ಜನ-ವಿರೋಧಿ ಮತ್ತು ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕು, ಈಗಲೂ ಸರಕಾರ ಕಾರ್ಮಿಕರ 12 ಬೇಡಿಕೆಗಳನ್ನು ಈಡೇರಿಸಲು ಮುಂದೆ ಬಾರದಿದ್ದರೆ ಒಂದು ಅನಿರ್ದಿಷ್ಟ ಕಾಲದ ಸಾರ್ವತ್ರಿಕ ಮುಷ್ಕರಕ್ಕೆ ಸಿದ್ಧರಾಗಬೇಕೆಂಬ ಮುಖಂಡರ ಕರೆಗೆ ಉತ್ಸಾಹಪೂರ್ಣವಾಗಿ ಕಾರ್ಮಿಕರು, ನೌಕರರು ಸ್ಪಂದಿಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಮಾತಾಡುತ್ತ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು. “ನಾವು ಸರಕಾರ ಬಯಸಿದರೆ ಮಾತುಕತೆಗೆ ಸಿದ್ಧರಿದ್ದೇವೆ, ಅವರು ನಮ್ಮ ಬೇಡಿಕೆಗಳಿಗೆ ಒಪ್ಪದಿದ್ದರೆ ನಮ್ಮ ಹಕ್ಕುಗಳು ಮತ್ತು ಬೇಡಿಕೆಗಳಿಗಾಗಿ ಹೋರಾಟ ಬೀದಿಗಳಲ್ಲಿ ಮುಂದುವರೆಯುತ್ತದೆ” ಎಂದು ಅವರು ಎಚ್ಚರಿಸಿದರು.

ಕಾರ್ಮಿಕರ 12 ಬೇಡಿಕೆಗಳಲ್ಲಿ ಕನಿಷ್ಟ ಕೂಲಿಗಳು, ಸಾಮಾಜಿಕ ಭದ್ರತೆಯ ಕ್ರಮಗಳು, ಸ್ಕೀಮ್ ನೌಕರರ ಖಾಯಮಾತಿ ಮತ್ತು ಕಾನೂನುಬದ್ಧ ಸೌಲಭ್ಯಗಳು, ಸಮಾನ ಕೆಲಸಕ್ಕೆ ಸಮಾನ ಸಂಬಳ  ಮುಂತಾದವು ಸೇರಿವೆ.

ಕನಿಷ್ಟ ಕೂಲಿ ವಾಸ್ತವವಾಗಿ 26,000ರೂ. ಆಗಬೇಕು. ಆದರೆ ನಾವು 18,000ವಷ್ಟೇ ಕೇಳುತ್ತಿದ್ದೇವೆ ಎಂದ ತಪನ್ ಸೆನ್ ಸರಕಾರ ಕಾರ್ಪೊರೇಟ್-ಪರ ಅಜೆಂಡಾ ಹೊಂದಿದೆ, ನಾವು ಈ ಬೀದಿಗಳಲ್ಲೇ ಹಲವಾರು ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣವನ್ನು ನಿಲ್ಲಿಸಿದ್ದೇವೆ, ಮತ್ತೆ ಇಲ್ಲಿಯೇ ಅದನ್ನು ನಿಲ್ಲಿಸುತ್ತೇವೆ ಎಂದರು.

ಐಎನ್‍ಟಿಯುಸಿಯ ಆಶೋಕ್ ಸಿಂಗ್ ಮಾತಾಡುತ್ತ ಸರಕಾರ ತನ್ನ ಖಾಸಗೀಕರಣ, ಎಫ್‍ಡಿಐ ಧೋರಣೆಗಳಿಂದ ದೇಶವನ್ನು ಮುಗಿಸಿ ಬಿಡಲು ಪ್ರಯತ್ನಿಸುತ್ತಿದೆ, ಆದರೆ ನಾವು ಹಾಗೆ ಮಾಡಲು ಬಿಡುವುದಿಲ್ಲ, ಅದನ್ನೇ ಮುಗಿಸುತ್ತೇವೆ  ಎಂದು ಪ್ರಧಾನ ಮಂತ್ರಿಗಳನ್ನು ಎಚ್ಚರಿಸಿದರು. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಗುರುದಾಸ್ ದಾಸ್‍ಗುಪ್ತ “ಈ ಮಹಾಪಡಾವ್ ಒಂದು ಕಾಳಗವಷ್ಟೇ, ನಾವು ಈಗ ಇಡೀ ಸಮರಕ್ಕೆ ಸಿದ್ಧರಾಗಬೇಕು” ಎಂದರು.

ಮೊದಲ ಅಧಿವೇಶನದ ಎರಡನೇ ಭಾಗದಲ್ಲಿ ವಿವಿಧ ನೌಕರರ ಒಕ್ಕೂಟಗಳ ಮುಖಂಡರು ಮಾತನಾಡಿದರು. ರೈಲ್ವೆ ನೌಕರರ ಎರಡು ಪ್ರಮುಖ ಸಂಘಟನೆಗಳಾದ ಎಐಆರ್‍ಎಫ್ ಪ್ರಧಾನ ಕಾರ್ಯದರ್ಶಿಶಿವಗೋಪಾಲ್ ಮಿಶ್ರ ಮತ್ತು ಎನ್‍ಎಫ್‍ಐಆರ್‍ನ ಪ್ರಧಾನ ಕಾರ್ಯದರ್ಶಿ ರಾಘವಯ್ಯ ಕಾರ್ಮಿಕ ಸಂಘಟನೆಗಳ ವೇದಿಕೆ ಯಾವ ದಿನದಿಂದಲಾದರೂ ಅನಿರ್ದಿಷ್ಟ ಕಾಲದ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟರೆ ಅದರಲ್ಲಿ ರೈಲ್ವೆ ನೌಕರರು ಬಾಗವಹಿಸುತ್ತಾರೆ ಎಂದು ಹೇಳಿದ್ದು ಮಹತ್ವಪೂರ್ಣವಾಗಿತ್ತು.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ, ಅಖಿಲ ಭಾರತ ರಾಜ್ಯ ಸರಕಾರೀ ನೌಕರರ ಸಂಘದ ಅಡಿಶನಲ್ ಪ್ರಧಾನ ಕಾರ್ಯದರ್ಶಿ ಸುಭಾಷ್ ಲಾಂಬ, ಭಾರತದ ವಿದ್ಯುತ್ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ದಿವಾಕರನ್, ಅಖಿಲ ಭಾರತ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಶ್ರೀಕುಮಾರ್, ಅಖಿಲ ಭಾರತ ರಕ್ಷಣಾ ನೌಕರರ  ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಗದೀಶ್ ಶ್ರೀಮಾಲಿ ಮತ್ತಿತರ ಮುಖಂಡರು ಮಾತನಾಡಿ ಅನಿರ್ದಿಷ್ಟ ಕಾಲದ ಸಾರ್ವತ್ರಿಕ ಮುಷ್ಕರ ಅಗತ್ಯವಾದರೆ ಅದರಲ್ಲಿ ತಂತಮ್ಮ ವಿಭಾಗಗಳ ನೌಕರರು ಭಾಗವಹಿಸುವುದಾಗಿ ಹೇಳಿದರು.

ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಎತ್ತಿರುವ ಈ ಬೇಡಿಕೆಗಳು ಕೇವಲ ಕಾರ್ಮಿಕರ ಬೇಡಿಕೆಗಳಲ್ಲ, ಇಡೀ ಜನತೆಯ ಬೇಡಿಕೆಗಳು ಎಂದು ಸಿಐಟಿಯು ಅಧ್ಯಕ್ಷರಾದ ಡಾ.ಹೇಮಲತಾ ಹೇಳುತ್ತಾರೆ.