Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಗಾಂಜಾ ಜಾಲದ ವಿರುದ್ಧ ಡಿವೈಎಫ್‍ಐ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

ಉಳ್ಳಾಲ ಪ್ರದೇಶದಲ್ಲಿ ಗಾಂಜಾ ಮಾರಾಟ ಜಾಲದ ವಿರುದ್ಧ ವಿಸಿಲ್ ಬ್ಲೋವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಳ್ಳಾಲ ಮುಕ್ಕಚ್ಚೇರಿಯ ಜುಬೈರ್ ಎಂಬ ಸಾಮಾಜಿಕ ಕಾರ್ಯಕರ್ತ ಕೆಲವು ದಿನಗಳ ಹಿಂದೆ ಗಾಂಜಾ ಮಾರಾಟ ಜಾಲದ ತಂಡವೊಂದರಿಂದ ಹತ್ಯೆಗೀಡಾಗಿದ್ದರು. ಆ ಪ್ರದೇಶದ ಶಾಸಕ ಹಾಗೂ ರಾಜ್ಯದ ಸಚಿವ ಅಬ್ದುಲ್ ಖಾದರ್ ಅವರು ಹಾಗೂ ಸ್ಥಳೀಯ ಪೋಲೀಸ್ ಅಧಿಕಾರಿಗಳು ಗಾಂಜಾ ಮಾರಾಟ ಮಾಫೀಯಾದ ಕೃತ್ಯವಲ್ಲವೆಂದು ಘೋಷಿಸಿದ್ದು, ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಉಳ್ಳಾಲ ಪ್ರದೇಶದಲ್ಲಿ ಮಾದಕ ದ್ರವ್ಯ ವ್ಯಸನಕ್ಕೆ ಬಹಳ ಮಂದಿ ಪಕ್ಕಾಗಿದ್ದು, ಅದಕ್ಕಾಗಿ ಮಾನಸಿಕವಾಗಿ ಹಾಗೂ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ನೂರಾರು ಪ್ರಕರಣಗಳು ವರದಿಯಾಗುತ್ತಿವೆ. ಪೋಲೀಸ್ ಇಲಾಖೆ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.

ಝಬೈರ್ ಹತ್ಯೆಯನ್ನು ಖಂಡಿಸಿ ಘಟನೆ ನಡೆದ ಎರಡನೇ ದಿನ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಪ್ರತಿಭಟನೆ ನಡೆಸಿ, ಗಾಂಜಾ ಮಾರಾಟ ಜಾಲವನ್ನು ನಿಗ್ರಹಿಸುವಂತೆ ಆಗ್ರಹಿಸಿತ್ತು. ಆದರೆ ಆ ಬಳಿಕವೂ ಪೋಲೀಸ್ ಇಲಾಖೆ ಝಬೈರ್ ಹತ್ಯೆಯು ಖಾಸಗಿ ವೈರದ ಕೊಲೆಯೆಂದು ನಿರೂಪಿಸುತ್ತಿರುವುದು, ಉಳ್ಳಾಲ ಪ್ರದೇಶದ ಜನರನ್ನು ಮತ್ತಷ್ಟು ಕುದಿಯುವಂತೆ ಮಾಡಿದೆ.

ಜನತೆಯ ಕುರಿತಾದ ಧ್ವನಿಯಾಗಿ ಡಿವೈಎಫ್‍ಐ ಉಳ್ಳಾಲ ಸಮಿತಿಯು ಅಕ್ಟೋಬರ್ 15 ರಂದು ದೊಡ್ಡ ಸಂಖ್ಯೆಯ ಜನಸಮೂಹವನ್ನೊಳಗೊಂಡು ಮುಕ್ಕಚ್ಚೇರಿಯಿಂದ ಉಳ್ಳಾಲ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ ನಿಲ್ದಾಣದ ಬಳಿಯ ಸಾರ್ವಜನಿಕ ಬಯಲು ರಂಗ ಮಂಟಪದಲ್ಲಿ ಪ್ರತಿಭಟನಾ ಸಭೆ ನಡೆಸಿತು. ಪತ್ರಿಭಟನೆಯನ್ನುದ್ದೇಶಿಸಿ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿದರು.  ಝಬೈರ್ ಹತ್ಯೆ ಪ್ರಕರಣಕ್ಕೆ ವೈಯುಕ್ತಿಕ ಕಾರಣ ಎಂದು ಹೇಳಿ ಪೋಲೀಸರು ಪ್ರಕರಣದ ತನಿಖೆಯನ್ನು ಹಾದಿ ತಪ್ಪಿಸುತ್ತಿದ್ದಾರೆ. ಪೋಲೀಸರು

ಗಾಂಜಾ

ವಿಚಾರದಲ್ಲಿ ಕೇವಲ ಸೇವಿಸಿದವರನ್ನು ಮಾತ್ರ ಬಂಧಿಸುತ್ತಾರೆಯೇ ಹೊರತು, ಅವರಿಗೆ ಪೂರೈಸಲು ಕೇಜಿಗಟ್ಟಲೆ ಗಾಂಜಾವನ್ನು ಜಿಲ್ಲೆಗೆ ಪೂರೈಸುವ ಸೂತ್ರಧಾರಿಗಳನ್ನು ಬಂಧಿಸದಿರಲು ಕಾರಣವೇನು ಎಂದು ಪ್ರಶ್ನಿಸಿದರು. ಅಂಥ ಪೂರೈಕೆದಾರರಿಗೆ ಠಾಣೆಗಳಲ್ಲಿ ರಾಜಾತಿಥ್ಯ ದೊರಕುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನಾ ಸಭೆಯಲ್ಲಿ ಡಿವೈಎಫ್‍ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ವಲಯ ಡಿವೈಎಫ್‍ಐ ಅಧ್ಯಕ್ಷ ಜೀವನ್‍ರಾಜ್ ಕುತ್ತಾರ್ ಮಾತನಾಡಿದರು. ಉಳ್ಳಾಲವನ್ನು ಮಾದಕದ್ರವ್ಯ ವ್ಯಸನಮುಕ್ತಗೊಳಿಸುವ ಪ್ರತಿಜ್ಞಾ ವಿಧಿಯನ್ನು ನಿತಿನ್ ಕುತ್ತಾರ್ ನೆರವೇರಿಸಿದರು.

ಸಫ್ವಾನ್ ಎಲ್ಲಿ?

ಅಕ್ಟೋಬರ್ 2ರಂದು ರೌಡಿ ತಂಡದಿಂದ ಅಪಹರಣಕ್ಕೊಳಗಾದ ಕಾಟಿಪಳ್ಳದ ಸಫ್ವಾನ್ ಪತ್ತೆಹಚ್ಚಲು ಒತ್ತಾಯಿಸಿ, ಕ್ರಿಮಿನಲ್ ಚಟುವಟಿಕೆ ಹತ್ತಿಕ್ಕುವಲ್ಲಿ ಪೊಲೀಸ್ ವೈಫಲ್ಯ ಖಂಡಿಸಿ ಸುರತ್ಕಲ್ ನಲ್ಲಿ ಅಕ್ಟೋಬರ್ 17ರಂದು ಡಿ.ವೈ.ಎಫ್.ಐ. ಪ್ರತಿಭಟನೆ ನಡೆಸಿತು.

 

 

ವರದಿ: ವಾಸುದೇವ ಉಚ್ಚಿಲ

 

Tags: