Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಮಂಗಳೂರನ್ನು ಸೌಹಾರ್ದ ತಾಣವನ್ನಾಗಿಸಲು ಸಿಪಿಐ(ಎಂ) ಬದ್ಧ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017

ಶಾಂತಿ ಸೌಹಾರ್ದತೆಯ ಬೀಡಾಗಿದ್ದ ಮಂಗಳೂರು ನಗರಕ್ಕೆ ಭಾರೀ ಚರಿತ್ರೆಯಿದೆ. ಇಲ್ಲಿನ ಶ್ರಮಜೀವಿಗಳು ಕಷ್ಟಪಟ್ಟು ದುಡಿದು ಸೌಹಾರ್ದತೆಯನ್ನು ನೆಲೆಗೊಳಿಸಲು ಅವಿರತವಾಗಿ ಶ್ರಮಿಸುವ ಮೂಲಕ ಮಂಗಳೂರು ನಗರ ಪ್ರಸಿದ್ಧಿಯಾಗಿದೆ. ಆದರೆ ಇತ್ತೀಚಿನ ಹಲವು ವರ್ಷಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಮಂಗಳೂರನ್ನು ಪ್ರಯೋಗ ಶಾಲೆಯನ್ನಾಗಿಸಿ, ಕೋಮುಜ್ವಾಲೆಯನ್ನು ಹಬ್ಬಿಸಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ.

ಮಾತ್ರವಲ್ಲದೆ ತುಳುನಾಡಿನ ಸಂಸ್ಕøತಿಯನ್ನೇ ನಾಶ ಪಡಿಸುವ ಮೂಲಕ ಭಯದ ವಾತಾವರಣವನ್ನು ನಿರ್ಮಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಸೌಹಾರ್ದತೆಯನ್ನು ನೆಲೆಗೊಳಿಸಲು ಹಾಗೂ ಮಂಗಳೂರನ್ನು ಸೌಹಾರ್ದ ತಾಣವನ್ನಾಗಿಸಲು ಸಿಪಿಐ(ಎಂ) ಕಂಕಣಬದ್ಧವಾಗಿದೆ ಎಂದು ಸಿಪಿಐ(ಎಂ) ದ.ಕ ಜಿಲ್ಲಾ ಸಮಿತಿ ಸದಸ್ಯರಾದ ವಾಸುದೇವ ಉಚ್ಚಿಲ್ ಹೇಳಿದರು.

ಅವರು ಸಿಪಿಐ(ಎಂ) ನೇತೃತ್ವದಲ್ಲಿ ಸೌಹಾರ್ದತೆಯಿಂದ ಅಭಿವೃದ್ಧಿಯೆಡೆಗೆ ಎಂಬ ಘೋಷಣೆಯೊಂದಿಗೆ ಡಿಸೆಂಬರ್‍ನಲ್ಲಿ ಜರಗಲಿರುವ ‘ಜನತೆಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸುತ್ತಾ ಈ ಮಾತುಗಳನ್ನು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‍ರವರು ಮಾತನಾಡುತ್ತಾ, ಸ್ವಚ್ಛ, ಸುಂದರ, ಸಮೃದ್ಧ, ಸೌಹಾರ್ದ ಮಂಗಳೂರಿನ ನಿರ್ಮಾಣ ಸಿಪಿಐ(ಎಂ)ನ ಕನಸಾಗಿದ್ದು, ಅದನ್ನು ಸಾಕಾರಗೊಳಿಸಲು ಸ್ಪಷ್ಟವಾದ, ವೈಜ್ಞಾನಿಕವಾದ ಕಣ್ಣೋಟವನ್ನು ಹೊಂದಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ದಿನೇಶ್ ಶೆಟ್ಟಿ, ಪ್ರೇಮನಾಥ ಜಲ್ಲಿಗುಡ್ಡೆ, ಭಾರತಿ ಬೋಳಾರರವರು ಉಪಸ್ಥಿತರಿದ್ದರು.