Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಉಪ್ಪುಂದ : ನಿವೇಶನ ರಹಿತರಿಂದ ಅರ್ಜಿ ಸ್ವೀಕಾರಕ್ಕೆ ಚಾಲನೆ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ಜಂಟಿ ಆಶ್ರಯದಲ್ಲಿ ಉಪ್ಪುಂದ ಮತ್ತು ಬಿಜೂರು ಗ್ರಾಮಗಳ ಬಡನಿವೇಶನ ರಹಿತರಿಂದ – ನಿವೇಶನ ಸ್ಥಳ  ಮಂಜೂರು ಮಾಡುವುದಕ್ಕೆ ಒತ್ತಾಯಿಸಿ ಸಾಮೂಹಿಕವಾಗಿ ಅರ್ಜಿ ಸ್ವೀಕಾರ ಕಾರ್ಯಕ್ರಮ ಕಾಸನಾಡಿ ಜಟ್ಟಿಗೇಶ್ವರ ದೈವಸ್ಥಾನದ ವಠಾರದಲ್ಲಿ 19.10.2017 ರಂದು ಜರಗಿತು.

ಉಪ್ಪುಂದ ಮತ್ತು ಬಿಜೂರು ಗ್ರಾಮಗಳ ಬಡನಿವೇಶನ ರಹಿತರಿಂದ ಅರ್ಜಿಗಳನ್ನು ಹೋರಾಟ ಸಮಿತಿಗಳ ಮುಖಂಡರಾದ ಮಾಧವ ದೇವಾಡಿಗ, ಶ್ರೀಧರ ಉಪ್ಪುಂದ ಇವರು ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಪ್ರಸ್ತಾವಿಕರಾಗಿ ಮಾತನಾಡುತ್ತಾ ಅರ್ಜಿದಾರರನ್ನು ಸ್ವಾಗತಿಸಿದರು. ಹೋರಾಟ ಸಮಿತಿಯ ಮುಖಂಡರಾದ ಚಂದ್ರ ಉಪ್ಪುಂದ, ಅಮ್ಮಯ್ಯ ಪೂಜಾರಿ ಬಿಜೂರು, ಮಂಜುನಾಥ ಶೇರುಗಾರ ಮುಡೂರ ಪೂಜಾರಿ, ಸತೀಶ ಬಿಜೂರು, ಬಾಬು ಕೆ. ದೇವಾಡಿಗ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಗಣೇಶ ಮೊಗವೀರ, ಕುಶಲ ಮತ್ತು ಶ್ಯಾಮಲ ಉಪಸ್ಥಿತರಿದ್ದರು.

ಕಳೆದ ವಾರ ಉಪ್ಪುಂದ ಗ್ರಾಮದ ನೂರಾರು ಜನ ಮನೆ ನಿವೇಶನ ಇಲ್ಲದವರು ಮೆರವಣಿಗೆ ಹೊರಟು ಸರಕಾರದ ಜನಪ್ರತಿನಿಧಿಗಳ ನಿರ್ಲಕ್ಷ್ರವನ್ನು ಖಂಡಿಸಿ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ವೆಂಕಟೇಶ ಕೋಣಿ, ರಾಜೀವ ಪಡುಕೋಣಿ, ರಮೇಶ್ ಗುಲ್ವಾಡಿ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಕುಶಲ ಪ್ರತಿಭಟನೆಯ ನಾಯಕತ್ವ ವಹಿಸಿದ್ದರು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು.

 

 

ವರದಿ : ವೆಂಕಟೇಶ ಕೋಣಿ