ಬರ ಮತ್ತು ನೆರೆ ಹಾವಳಿಯಿಂದ ವೀಳ್ಯದೆಲೆ ಬಳೆಗಾರರು ಕಂಗಾಲು

ಸಂಪುಟ: 
11
ಸಂಚಿಕೆ: 
44
Sunday, 22 October 2017

ಮಳವಳ್ಳಿ ತಾಲೂಕಿನಲ್ಲಿ ಎಪ್ಪತ್ತೆಂಬತ್ತು ಎಕರೆಯಲ್ಲಿ ವೀಳ್ಯದೆಲೆ ಬೆಳೆದು ನೂರಾರು ಕುಟುಂಬಗಳು ಜೀವನ ನಡೆಸುತ್ತಿದ್ದರು. ಆದರೆ ಮಳೆ .ನೀರು ಇಲ್ಲದ ಕಾರಣ ಬರದಿಂದ ಹತ್ತಾರು ಎಕರೆ ವೀಳ್ಯದೆಲೆ ತೋಟ ಒಣಗಿ ಹಾಳಾದರೆ ಈಗ ವಿಪರಿತ ಮಳೆಯಿಂದ ಶೀತವಾಗಿ ಗಿಡದ ತಾಳು ಕೊಳತು ಬೆಳೆಯೆಲ್ಲ ಹಾಳಾಗಿದೆ. ಆದ್ದರಿಂದ ಬೆಳೆಗಾರರಿಗೆ ಸೂಕ್ತ ಪರಿಹಾರಿ ನೀಡಬೇಕೆಂದು ವೀಳ್ಯದೆಲೆ ಬೆಳೆಗಾರರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.

ಒಂದು ಎಕರೆಯಲ್ಲಿ ವೀಳ್ಯದೆಲೆ ಬೆಳೆಯಬೇಕಾದರೆ ಕನಿಷ್ಟ ಮೂರುವರೆಯಿಂದ ನಾಲ್ಕು ಲಕ್ಷ ರೂ.ಗಳು ಖರ್ಚು ಬರುತ್ತದೆ. ಎರಡು ವರ್ಷಗಳ ನಂತರ ಎಲೆ ಕುಯ್ದು ಮಾರಾಟ ಮಾಡಲಾಗುತ್ತದೆ.

ಆದರೆ ಒಂದು ಪಿಂಡಿಗೆ (10,000 ಎಲೆ) ಕೇವಲ 1500 ರೂ ಬೆಲೆಯಿದೆ. ಇದನ್ನ ಕುಯ್ದು ಮಾರುಕಟ್ಟ್ಟೆಗೆ ತೆಗೆದು ಕೊಂಡು ಹೊಗಲು ಅಷ್ಟೇ ಖರ್ಚು ಬರುತ್ತದೆ. ಬಹುತೇಕ ರೈತರು ಗೇಣಿದಾರರಾಗಿದ್ದು ಸಾಲ ಮಾಡಿ ಬಂಡವಾಳ ಹಾಕಿದ್ದರು. ಮಾಡಿದ ಖರ್ಚು ಸಹ ಸಿಗದೆ ಸಾಲದ ಸುಳಿಯಲ್ಲಿ ಬದುಕುತಿದ್ದಾರೆ. ಪ್ರಮುಖವಾಗಿ ಹಿಂದಳಿದ ಗಂಗಾಮತಸ್ಥ ಜಾತಿಗೆ ಸೆರಿದ ಕುಟುಂಬದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳವಳ್ಳಿ, ತಮ್ಮಡಹಳ್ಳಿ, ಮಾಗನೂರು, ದಾಸನದೊಡ್ಡಿ, ಹುಸ್ಕೂರು, ಕುಲುಮೆದೊಡ್ಡಿ, ಬಾಳೆಹೊನ್ನಿಗ, ದಳವಾಯಿಕೊಡಿಹಳ್ಳಿ, ಬೆಳಕವಾಡಿ, ತಳಗವಾದಿ, ರಾವಣಿ ಮುಂತಾದ ಗ್ರಾಮಗಳಲ್ಲಿ 40-50ಲಕ್ಷ ರೂ.ಗಳು ನಷ್ಟವಾಗಿ ಬಾದೆಗೆ ಒಳಗಾಗಿದ್ದಾರೆ. ಅದ್ದರಿಂದ ತಕ್ಷಣ ಪರಿಹಾರ ನೀಡಬೇಕು ಇಲ್ಲವಾದರೆ ತಹಸೀಲ್ದಾರ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್, ವೀಳ್ಯದೆಲೆ ಬೆಳೆಗಾರರ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ, ಕಾರ್ಯದರ್ಶಿಗಳಾದ ರವಿ ಎಂ.ಕೆ. ಎಚ್ಚರಿಸಿದ್ದಾರೆ.