ದಲಿತ ದೌರ್ಜನ್ಯ ಕಾಯ್ದೆ ತಿದ್ದುಪಡಿಯಾಗಲಿ

ಸಂಪುಟ: 
11
ಸಂಚಿಕೆ: 
44
Sunday, 22 October 2017

ದಲಿತರ ಮೇಲೆ ದೌರ್ಜನ್ಯ ನಡೆದಾಗ ದೌರ್ಜನ್ಯಕ್ಕೊಳಗಾದ ದಲಿತ ದೂರು ನೀಡಿದರೆ ಆಪಾದಿತನನ್ನು 24 ಗಂಟೆಯೊಳಗೆ ಕ್ರಮ ಜರುಗಿಸಬೇಕಾಗುತ್ತದೆ.ಆದರೆ ಇಂದಿನ ವ್ಯವಸ್ಥೆ ಮಾತ್ರ ಉಳ್ಳವರ ಪರವಾಗಿ ರುವುದರಿಂದ ದಲಿತರಿಗೆ ನ್ಯಾಯ ಸಿಗುವ ಬದಲು ಕೆಲವು ಕಡೆಗಳಲ್ಲಿ ಬಿ ರಿಪೋರ್ಟ್ ಹಾಕಿ ದುರ್ಬಲಗೊಳಿಸಲಾಗುತ್ತಿದೆ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಮುಖಂಡರಾದ ಲಿಂಗಪ್ಪ ನಂತೂರು ಹೇಳಿದರು.

ಅವರು ಅಕ್ಟೊಭರ್ 15ರಂದು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ದಲಿತ ಹಕ್ಕುಗಳ ಸಮಾವೇಶ ಉಧ್ಘಾಟಿಸಿ ಮಾತನಾಡಿದರು.

2015ರಲ್ಲಿ ದಲಿತ ಹಕ್ಕುಗಳ ರಾಷ್ಟ್ರೀಯ ಮುಕ್ತಿ ಮಂಚ್ ಸಂಘಟನೆ ದುರುಪಯೋಗವಾಗುತ್ತಿರುವ ದಲಿತ ದೌರ್ಜನ್ಯ ಕಾಯ್ದೆಯನ್ನು ಬಿಗಿಗೊಳಿಸಲು ತಿದ್ದುಪಡಿ ಮಾಡಬೇಕೆಂದು ಹೋರಾಟ ನಡೆಸುತ್ತಿದೆ. ಪ್ರಭುತ್ವವೇ ಇಂದು ದಲಿತರಾದ ನಮ್ಮನ್ನು ತಿನ್ನಲು, ಬದುಕಲು ಬಿಡುತ್ತಿಲ್ಲ. ಮತಾಂಧರು ದಲಿತರನ್ನು ರಾಜಕೀಯ ಲಾಭಕ್ಕಾಗಿ ಕೋಮುಗಲಭೆಗಳಿಗಾಗಿ ಬಳಸಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 2 ಲಕ್ಷ 60 ಸಾವಿರ ದಲಿತ ಯುವಕರ ಮೇಲೆ ದೂರು ದಾಖಲಾಗಿದೆ. ದಲಿತ ಅನುಭವಿಸುವ ಅವಮಾನ, ಅಪಮಾನದ ವಿರುದ್ದ ಹೋರಾಟ ಮಾಡುವ ಮನೋಭಾವ ಬೆಳೆಸುವ ಬದಲು ದಾರಿತಪ್ಪಿಸಲಾಗುತ್ತಿದೆ.

ಆದ್ದರಿಂದ ದಲಿತರ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕು ಎಂದರು. ಈ ವೇಳೆಯಲ್ಲಿ ಸಭೆಯ ಅದ್ಯಕ್ಷತೆಯನ್ನು ರವಿ ವಿ ಎಂ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಾಲಕ್ರಷ್ಣಶೆಟ್ಟಿ ಮಾತನಾಡಿದರು. ದಲಿತ ಹಕ್ಕುಗಳ ಸಂಚಲನಾ ಸಮಿತಿಗೆ ರವಿ ವಿ.ಎಂ,ಅರುಣ್ ಕುಮಾರ್ ನಾಗರತ್ನ ನಾಡ ರವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಕೆ.ಶಂಕರ್, ಮಹಾಬಲ ವಡೇರಹೋಬಳಿ, ಹೆಚ್ ನರಸಿಂಹ, ಸುರೇಶ್ ಕಲ್ಲಾಗರ ಉಪಸ್ಥಿತರಿದ್ದರು.