#ದಂಡಪಿಂಡಷಾಜಿ ಯಿಂದ #ಕೀಳಯ್ಯಾ ವರೆಗೆ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

 

ಮಲೆಯಾಳಿಗಳ ಪರಿಹಾಸಕ್ಕೆ ತುತ್ತಾದ ಬಿಜೆಪಿ ಜನರಕ್ಷಾ ಯಾತ್ರೆ ಮುಗಿಯಿತು

ಕೇರಳದಲ್ಲಿ ಬಿಜೆಪಿಯ ಜನರಕ್ಷಾಯಾತ್ರೆ  ಮುಗಿದಿದೆ. ಇದನ್ನು ಉದ್ಘಾಟಿಸಿದ ಮರುದಿನವೇ ಯಾತ್ರೆಯನ್ನು ಬಿಟ್ಟು ದಿಲ್ಲಿಗೆ ಧಾವಿಸಿದ ಬಿಜೆಪಿ ಅಧ್ಯಕ್ಷರು ಮತ್ತೆ ಯಾತ್ರೆಯ ಸಮಾಪ್ತಿಯಲ್ಲಿ ‘ಬೃಹತ್’ ಸಭೆಯಲ್ಲಿ ಮಾತಾಡುತ್ತ ಹಳಸಲು ಸುಳ್ಳುಗಳನ್ನು ಪುನರಾವರ್ತಿಸಿದರು. ಈ ನಡುವೆ  ಆ ಪಕ್ಷದ ಒಬ್ಬರು ‘ರಾಷ್ಟ್ರೀಯ ಕಾರ್ಯದರ್ಶಿ ಸರೋಜ್ ಪಾಂಡೆಯವರ ‘ಸಿಪಿಐ(ಎಂ)ನವರ ಕಣ್ಣುಗುಡ್ಡೆ ಕೀಳುತ್ತೇವೆ” ಎಂಬ ಬೆದರಿಕೆ ರಾಜ್ಯದಲ್ಲಿ ಭಯ ಹುಟ್ಟಿಸುವ ಬದಲು ಪರಿಹಾಸದ ಪ್ರವಾಹವೇ  ಹರಿಯುವಂತೆ ಮಾಡಿದೆ.

#ಗೌಜ್‍ಡಾ(ಕೀಳಪ್ಪಾ!) ಎಂಬ ಪ್ರಸಾರ ಸಾಮಾಜಿಕ ಜಾಲತಾಣದಲ್ಲಿ ಮಲೆಯಾಳಿ ಚಿತ್ರ ನಟರ ಕಪ್ಪು ಕನ್ನಡಕದ ಚಿತ್ರಗಳೊಂದಿಗೆ, ಕೆಲವರು ತಮ್ಮದೇ ಕಪ್ಪು ಕನ್ನಡಕ ಧರಿಸಿದ ಚಿತ್ರಗಳೊಂದಿಗೆ  ವ್ಯಂಗ್ಯೋಕ್ತಿಗಳು ಹರಿದಾಡಿದವು. ಇನ್ನು ಕೆಲವರು ‘ಕೊಕ್ಕಚಿ ಕೊಕ್ಕಚಿ’ (ಗುಮ್ಮ ಬಂತು ಗುಮ್ಮ) ಎಂದು ನಗೆಯಾಡಿದರು.

ಈ ಹಿಂದೆ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿಗಳು ಕೇರಳವನ್ನು ಸೊಮಾಲಿಯಾದೊಂದಿಗೆ ಹೋಲಿಸುವ ಪ್ರಯತ್ನ ಮಾಡಿದಾಗ ಆರಂಭಿಸಿದ #ಪೋಮೊನೆಮೋದಿ (ಪೋಮೊನೆ ಎಂದರೆ ಹೋಗಯ್ಯಾ ಮಗನೇ), ನಂತರ ಆ ಪಕ್ಷದ ಅಧ್ಯಕ್ಷರನ್ನು ಲೇವಡಿ ಮಾಡುವ #ಅಲವಲಥಿ ಷಾಜಿ (ಅಲವಲಥಿ ಎಂದರೆ ದಂಡಪಿಂಡ ಎಂದರ್ಥ), ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಬಂದು ತಮ್ಮ ರಾಜ್ಯದÀ ಆಸ್ಪತ್ರೆಗಳಿಂದ ಕೇರಳ ಪಾಟ ಕಲಿಯಬೇಕು ಎಂದು ಹೇಳಿದಾಗ #ಕ್ನಪ್ಪನ್‍ಯೋಗಿ(ಕ್ನಪ್ಪನ್ ಎಂಬುದು ವಸಾಹತುಶಾಹಿ ಆಳ್ವಿಕೆಯ ಕಾಲದ ಒಬ್ಬ ಬ್ರಿಟಿಶ್ ಆಧಿಕಾರಿಯ ಹೆಸರು, ಕೈಲಾಗದವ ಎಂಬುದರ ಅನ್ವರ್ಥನಾಮ).

ತೀರಾ ಇತ್ತೀಚಿನ #ಗೌಜ್‍ಡಾ ಸೇರಿದಂತೆ ಈ ಎಲ್ಲ ಹ್ಯಾಶ್ಟ್ಯಾಗ್‍ಗಳು ಬಹಳ ಜನಪ್ರಿಯವಾಗಿ  ಜನರಕ್ಷಾ ಯಾತ್ರೆ  ಮಲೆಯಾಳಿಗಳಿಗೆ ಮನರಂಜನೆಯ ಸಾಧನವಾಗಿ ಬಿಟ್ಟಿತು.

ಸೀತಾರಾಮ್ ಯೆಚೂರಿಯವರು ಈ ಯಾತ್ರೆ ಮುಗಿದ ನಂತರ ಟ್ವಿಟ್ ಮಾಡಿರುವಂತೆ

“ಬಿಜೆಪಿಯ ಯಾತ್ರೆ ಮತ್ತು ಹಲವು ಧೂಳೆಬ್ಬಿಸುವ ಮುಖ್ಯಮಂತ್ರಿಗಳನ್ನು ಶಾಂತಿಪ್ರಿಯ ಕೇರಳಕ್ಕೆ ಕರೆತಂzದ್ದು ಉದ್ರೇಕಿಸಲಿಕ್ಕಾಗಿಯೇ ರೂಪಿಸಿದಂತದ್ದು. ಅದು ವಿಫಲವಾಗಿದೆ.
ಲಾಲ್ ಸಲಾಮ್ ಕೇರಳ.”