ಕ್ಲಿಯೊಪಾತ್ರಳಂತೆ ಕಾಣಲು ಗೋಮೂತ್ರ-ಸಗಣಿಯ ಪಂಚಗವ್ಯ ಬಳಸಿ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017

 

ಗುಜರಾತ್ ಗೋಸೇವಾ ಮಂಡಳಿ ಸಲಹೆ
ಪ್ರಾಚೀನ ಈಜಿಪ್ಟಿನ ರಾಣಿ ಕ್ಲಿಯೊಪಾತ್ರಳಂತಹÀ ಆರೋಗ್ಯಕರ, ಹೊಳಪಿನ ಚರ್ಮ ಪಡೆಯಲು ಗೋಮೂತ್ರ, ಸಗಣಿ, ಹಾಲು, ಮೊಸರು ಮತ್ತು ಮಜ್ಜಿಗೆಯ ಮಿಶ್ರಣವಾದ ಪಂಚಗವ್ಯವನ್ನು ಬಳಸಿ ಎಂದು ಗುಜರಾತ್ ಸರಕಾರದ ಗೋಸೇವಾ ಗೌಚಾರ್ ವಿಕಾಸ ಮಂಡಳಿ ಪ್ರಕಟಿಸಿರುವ ಸಲಹಾ ಪತ್ರ ಸೂಚಿಸಿದೆ.

ಮಹಿಳೆಯರು ರಾಸಾಯನಿಕಗಳ ಮೂಲಕ ತಮ್ಮ ಚರ್ಮವನ್ನು ಕೆಡಿಸುವ ಬದಲು ಗೋವಿನ ಹಾಲು, ಮೂತ್ರ, ಸಗಣಿಯಮತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸಬೆಕು, ಇವುಗಳ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಈ ಮಂಡಳಿಯ ಅಧ್ಯಕ್ಷರು  ಹೇಳಿದ್ದಾರೆ. ಗೋಮೂತ್ರ ಕ್ಯಾನ್ಸರ್, ಉಬ್ಬಸ ಮಾತ್ರವಲ್ಲ ಏಡ್ಸ್‍ನಂತಹ ಹೊಸರೋಗಗಳೂ ಸೇರಿದಂತೆ 108 ಕಾಯಿಲೆಗಳನ್ನು ವಾಸಿ ಮಾಡಬಲ್ಲದು ಎಂದು ಈ ಮಂಡಳಿಯ ಆರೋಗ್ಯ ಗೀತಾ ವೆಬ್‍ಸೈಟ್ ಹೇಳುತ್ತದೆ.

ಆದರೆ ಪಂಚಗವ್ಯದ ಈ ಜಾಹೀರಾತಿಗೆ ‘ವಿದೇಶಿ ಸಂಸ್ಕøತಿ’ಯ ಒಬ್ಬ ರಾಣಿಯನ್ನೇ ಏಕೆ ಆರಿಸಿಕೊಳ್ಳಲಾಗಿದೆ ಎಂಬುದು ತಿಳಿದಿಲ್ಲ.

 

ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದ ಡಾಕ್ಟರ್ ದಂಪತಿ ರಕ್ಷಣೆಗೆ ಧಾವಿಸಿದ ಬಿಜೆಪಿ ಶಾಸಕರು-4‘ಚ’ಗಳ ನಿಜ ಹೂರಣ ಮತ್ತೆ ಬಯಲು

ಕಾನೂನುಬಾಹಿರವಾಗಿರುವ ಜನನಪೂರ್ವ ಲಿಂಗ ನಿರ್ಧಾರಣೆ ಪರೀಕ್ಷೆಯಲ್ಲಿ ತೊಡಗಿದ್ದ ಡಾಕ್ಟರ್  ದಂಪತಿಗಳನ್ನು ಉತ್ತರಪ್ರದೇಶದ ಅಲಿಗಡ್‍ನಲ್ಲಿ ಬಂಧಿಸಲು ಇಬ್ಬರು ಬಿಜೆಪಿ ಶಾಸಕರು ಬಿಡದ ಘಟನೆ ಬಿಜೆಪಿ ಮಂದಿ ಹೇಳಿಕೊಳ್ಳುವ ನಾಲ್ಕು ‘ಚ’ಗಳ (ಚಾಲ್, ಚಲನ್, ಚೆಹರಾ, ಚರಿತ್ರ್) ನಿಜಸ್ವರೂಪವನ್ನು ಮತ್ತೊಮ್ಮೆ ಬಯಲು ಮಾಡಿದೆ.

ಅಲ್ಟ್ರಾಸಾನಿಕ್ ತಂತ್ರಜ್ಞಾನದ ಮೂಲಕ ಭ್ರೂಣದ ಲಿಂಗಪತ್ತೆ ಮಾಡಿ ಹೆಣ್ಣು ಭ್ರೂಣಹತ್ಯೆ ಮಾಡುವ ಚಾಳಿಯನ್ನು ನಿಲ್ಲಿಸಲು ಪಿಸಿಪಿಎನ್‍ಡಿಟಿ ಕಾಯ್ದೆ ತರಲಾಯಿತು. ಇದರಲ್ಲಿ ಇಂತಹ ಜನನಪೂರ್ವ ಲಿಂಗ ಪತ್ತೆಯ ಪರೀಕ್ಷೆಯನ್ನು ಕಾನೂನುಬಾಹಿರಗೊಳಿಸಿ ಅದರ ಉಲ್ಲಂಘನೆಯನ್ನು ಕನಿಷ್ಟ ಮೂರು ವರ್ಷಗಳ ಜೈಲುವಾಸ ಮತ್ತು ದಂಡ ತೆರುವ ಅಪರಾಧವಾಗಿ ಮಾಡಲಾಗಿದೆ.

ಈ ಕಾನೂನಿನ ಉಲ್ಲಂಘನೆಯಾಗುತ್ತಿದೆ ಎಂಬ ಗುಮಾನಿಯ ಮೇಲೆ ರಾಜಸ್ತಾನ ಸರಕಾರದ ವಿಭಾಗವೊಂದು ಮಹಿಳೆಯೊಬ್ಬರನ್ನು ಈ ಡಾಕ್ಟರ್ ಬಳಿ ಕಳಿಸಿತ್ತು. ಆ ಡಾಕ್ಟರ್ ಇಂತಹ ಲಿಂಗಪರೀಕ್ಷೆಗಿಳಿದಾಗ ಸಿಕ್ಕಿಬಿದ್ದರು ಎನ್ನಲಾಗಿದೆ. ಅವರನ್ನು ಬಂಧಿಸಲಾಯಿತು. ಆದರೆ ಇದನ್ನು ಕೇಳಿ ಪೋಲಿಸ್ ಠಾಣೆಗೆ ಧಾವಿಸಿದ ಬಿಜೆಪಿ ಶಾಸಕರಾದ ಅನಿಲ್ ಪಾರಸ್ಕರ್ ಮತ್ತು ಸಂಜೀವ್ ರಾಜ ರಾಜಸ್ತಾನ ಸರಕಾರದ ಅಧಿಕಾರಿಗಳು ವಶಪಡಿಸಿಕೊಂಡ ಅಲ್ಟ್ರಾಸೌಂಡ್ ಯಂತ್ರವನ್ನು ಒಯ್ಯದಂತೆ ತಡೆದರು, ಮತ್ತು ಆ ಡಾಕ್ಟರ್ ದಂಪತಿಗಳನ್ನು ಬಿಡದೆ ತಾವು ಪೊಲಿಸ್ ಠಾಣೆಯಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು ಎನ್ನಲಾಗಿದೆ.

ಇವೆಲ್ಲವೂ ಸ್ವತಃ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮ್ಮುಖವೇ ನಡೆಯಿತು. ಅವರ ಮನವರಿಕೆ ಪ್ರಯತ್ನವೂ ಸಫಲವಾಗಲಿಲ್ಲವಂತೆ. ಯಥಾಪ್ರಕಾರ ಬಿಜೆಪಿ ಶಾಸಕರು ತಾವು ಹೀಗೇನೂ ಮಾಡಿಲ್ಲ ಎಂದು ಹೇಳಿದ್ದಾರೆ. ರಾಜಸ್ತಾನ ಸರಕಾರವೂ ಬಿಜೆಪಿಯದ್ದೇ ಅಗಿರುವುದರಿಂದ ಬೇರೆಕಾರಣಗಳನ್ನು ಕೊಡುವುದು ಅವರಿಗೆ ಆಗಿರಲಿಕ್ಕಿಲ್ಲ.