Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

'ನವಭಾರತ 2022ರ ನಿರ್ಮಾಣ'

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

 

ಒಂದೆಡೆಯಲ್ಲಿ ಝಾರ್ಖಂಡ್‍ನಲ್ಲಿ ಅನ್ನ..ಅನ್ನ... ಎಂದು ಕೇಳುತ್ತಲೇ ಸಂತೋಷಿ ಕಣ್ಣುಮುಚ್ಚಿದ ಸುದ್ದಿ ಕರುಳು ಕಿವಿಚಿದರೆ  ಇನ್ನೊಂದೆಡೆ ದೆಹಲಿಯಲ್ಲಿ ಒಂದು ವರ್ಷದಿಂದ ‘ನನ್ನ ಮಗ ಎಲ್ಲಿ, ದಯವಿಟ್ಟು ಹುಡುಕಿ ಕೊಡಿ’ ಎಂದು ಕಣ್ಣೀರಿಟ್ಟು ಕೇಳುತ್ತಿದ್ದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ನ ತಾಯಿ 52 ವರ್ಷದ ಫಾತಿಮಾ ನಫಿಸ್ ಅವರನ್ನು ಬಂಧಿಸಿ ಪೋಲೀಸರು ದರ-ದರ  ಎಳೆದುಕೊಂಡು ಹೋಗುತ್ತಿರುವ ದೃಶ್ಯ ಅಚ್ಛೇದಿನ್‍ಗಳ ಬಗ್ಗೆ ಇನ್ನೂ ತುಸು ವಿಶ್ವಾಸ ಉಳಿಸಿಕೊಂಡಿರುವವರಲ್ಲೂ ತಲ್ಲಣ ಉಂಟು ಮಾಡುತ್ತಿದೆಯೇ? ಇದೇ 2022 ರ ವೇಳೆಗೆ ನವಭಾರತ ನಿರ್ಮಾಣದ ಪರಿಯೇ, ಗೊತ್ತಿಲ್ಲ.

ಜೆಎನ್‍ಯು ನಲ್ಲಿ ತನ್ನ ಹಾಸ್ಟೆಲ್ ಬಳಿ ಎಬಿವಿಪಿ ಮಂದಿಯೊಂದಿಗೆ ವಾಗ್ವಾದದ ಮರುದಿನದಿಂದ ಕಾಣೆಯಾದ ನಜೀಬ್ ಬಗ್ಗೆ ಒಂದು ವರ್ಷವಾದರೂ ಇದರ ತನಿಖೆ ನಡೆಸುತ್ತಿರುವ ಸಿಬಿಐ ಏನೂ ಮಾಡದಿರುವುದರ ವಿರುದ್ಧ ಸಿಬಿಐ ಕಚೇರಿಯೆದುರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ  ಅವರು ಭಾಗಿಯಾಗಿದ್ದರು.
ತಮಾಷೆಯೆಂದರೆ ಹೀಗೆ ಅವರನ್ನು ಬಂಧಿಸಿ ಎಳದೊಯ್ದದ್ದು ದಿಲ್ಲಿ ಹೈಕೋರ್ಟ್ ಕೂಡ ಸಿಬಿಐ ಈ ವಿಷಯದಲ್ಲಿ ಸಂಪೂರ್ಣ ನಿರಾಸಕ್ತಿ ತಳೆದಿದೆ  ಎಂದು ಅದನ್ನು ತೀವ್ರ ತರಾಟೆಗೆ ತಗೊಂಡ ಮೇಲೆ, ಅವರು ಇತರ ಪ್ರತಿಭಟನಾಕಾರರೊಂದಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತಾಡುತ್ತಿದ್ದಾಗ.

ಈ ವಾರದಲ್ಲಿ ನವಭಾರತ ನಿರ್ಮಾಣದ ಇನ್ನೆರಡು ಸುದ್ದಿಗಳು.

ಕಳೆದ ಜೂನ್ 29ರಂದು ಝಾರ್ಖಂಡ್‍ನ ರಾಮಗಢದ ಸಮೀಪ  ‘ಗೋರಕ್ಷಕರು’ ಬಡಿದು ಸಾಯಿಸಿದ ಅಲಿಮುದ್ದೀನ್ ಅನ್ಸಾರಿಯ ಹತ್ಯೆಯ ಪ್ರತ್ಯಕ್ಷ ಸಾಕ್ಷಿ ಜಲಿಲ್ ಅನ್ಸಾರಿ ಕೋರ್ಟಿನಲ್ಲಿ ಅಕ್ಟೋಬರ್ 12ರಂದು ಸಾಕ್ಷ್ಯ ಹೇಳಬೇಕಾಗಿತ್ತು. ಆತನಿಗೆ ಸಾಕ್ಷ್ಯ ನೀಡಬಾರದು ಎಂದು ಕೊಲೆ ಬೆದರಿಕೆಗಳು ಬಂದಿರುವುದು ಮಾತ್ರವಲ್ಲ, ಆ ದಿನ ಅತನ ಪತ್ನಿ ಅದೇ ದಿನ ಕೋರ್ಟ್ ಬಳಿ ಒಂದು ಅಪಘಾತದಲ್ಲಿ ಸಂದೇಹಾಸ್ಪದ ರೀತಿಯಲ್ಲಿ  ಸತ್ತಿದ್ದಾಳೆ.

***
‘ಗೋರಕ್ಷಕ’ರ ಮೊದಲ ಬಲಿ ಮಹಮ್ಮದ್ ಅಖ್ಲಾಕ್‍ನ 15 ಕೊಲೆ ಆಪಾದಿತರರಿಗೆ ಇತ್ತೀಚೆಗೆ ಜಾಮೀನು ಸಿಕ್ಕಿದ್ದು ದಾದ್ರಿಯ ಬಿಜೆಪಿ ಶಾಸಕ  ಅವರಿಗೆಲ್ಲ ಸಾರ್ವಜನಿಕ ವಲಯದ ಎನ್‍ಟಿಪಿಸಿಯಲ್ಲಿ ಕಾಂಟ್ರಾಕ್ಟ್ ಉದ್ಯೋಗದ ಆಶ್ವಾಸನೆ ನೀಡಿರುವದಾಗಿ ಒಂದು ವರದಿ ಹೇಳಿದರೆ, ಇನ್ನೊಂದು ವರದಿ ಆಗಲೇ ಅವರಿಗೆ ಆ ಉದ್ಯೋಗಗಳನ್ನು ಕೊಡಿಸಲಾಗಿದೆ ಎಂದಿದೆ.

ಹಿಂದುಸ್ತಾನ್ ಟೈಮ್ಸ್‍ನ ಹಿಂದಿನ ಸಂಪಾದಕ ರಾಬಿನ್ ಘೋಷ್ ಆರಂಭಿಸಿದ್ದ ‘ದ್ವೇಷ ಜಾಡು ಪತ್ತೆ’’( ಹೇಟ್ ಟ್ರಾಕರ್)ಗಳ ದಾಖಲೆ ಅವರುÀ ಪತ್ರಿಕೆ ಬಿಟ್ಟ(ಕಳಿಸಿದ) ಮೇಲೆ ತುಸು ನಿಂತಂತೆ ಕಂಡರೂ, ಬಹುಶಃ ಟೀಕೆಗಳ ಹಿನ್ನೆಲೆಯಲ್ಲಿ, ಈಗ ಮುಂದುವರೆದಿದೆ. ಅದರ ಪ್ರಕಾರ ಸಪ್ಟಂಬರ್ 28, 2015ರಿಂದ ವರದಿಯಾಗಿರುವ ಇಂತಹ ಅಪರಾಧಗಳ ಸಂಖ್ಯೆ ಅಕ್ಟೋಬರ್ 13ರಂದು 170ನ್ನು ತಲುಪಿದೆ, ಇದರಲ್ಲಿ ಕನಿಷ್ಟ 44 ಸಾವುಗಳು ಸಂಭವಿಸಿವೆ.