Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಥೇಲರ್‍ಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

ನವ-ಉದಾರವಾದದತ್ತ ಒಂದು ‘ನಯ-ತಿವಿತ’

“ವ್ಯಕ್ತಿಗತ ನಿರ್ಧಾರದ ಆರ್ಥಿಕ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆಗಳ ನಡುವೆ ಒಂದು ಸೇತುವೆ ನಿರ್ಮಿಸಿದ್ದಾರೆ” ಎಂದು ಪ್ರೊ.ರಿಚರ್ಡ್ ಎಚ್ ಥೇಲರ್‍ರವರಿಗೆ 2017ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ದೊರೆತಿದೆ.  ಅವರು ನಿರ್ಮಿಸಿದ ಈ ‘ಸೇತುವೆ’ ಏನು? ಅವರು ಪ್ರತಿನಿಧಿಸುವರೆನ್ನಲಾದ ‘ವರ್ತನಾ ಅರ್ಥಶಾಸ್ತ್ರ’ ಎಂದರೇನು? ಅವರಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ನೀಡಿರುವುದರ ಮಹತ್ವವೇನು? ನ್ಯೂಸ್‍ಕ್ಲಿಕ್.ಇನ್ ನಲ್ಲಿ ಅಕ್ಟೋಬರ್ 11 ರಂದು ಪ್ರಕಟವಾಗಿರುವ ಸುಭೋದ್ ವರ್ಮರವರ ಈ ಲೇಖನ ಒಂದು ಚಿತ್ರವನ್ನು ಕೊಡುತ್ತದೆ.
 

‘ಜನಶಕ್ತಿ’ ಓದುಗರಿಗಾಗಿ ಭಾರತಿ ಗಾಂವ್ಕರ್ ಅನುವಾದ ಮಾಡಿದ್ದಾರೆ.

ನವೆಂಬರ್ 8, 2016ರಂದು ಭಾರತದ ಪ್ರ ಧಾನಿ, ದೇಶದ 86% ನೋಟುಗಳ ರದ್ಧತಿಯ ಪ್ರಕಟಣೆ ಮಾಡಿದ ನಿಮಿಷಗಳ ಒಳಗೆ ಚಿಕಾಗೋ ವಿಶ್ವವಿದ್ಯಾಲಯದ, ವರ್ತನಾ ವಿಜ್ಞಾನ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ. ರಿಚರ್ಡ್ ಎಚ್.ಥೇಲರ್ ಹೀಗೆ ಟ್ವೀಟ್ ಮಾಡಿದರು:

“ಇದೊಂದು ನಾನು ಬಹಳ ಕಾಲದಿಂದ ಬೆಂಬಲಿಸಿರುವ ಧೋರಣೆ. ನಗದು ರಹಿತ ಆರ್ಥಿಕತೆಯ ಕಡೆಗೆ ಮೊದಲ ಹೆಜ್ಜೆ. ಮತ್ತು ಭ್ರಷ್ಟಾಚಾರ ಕಡಿಮೆ ಮಾಡಲು ಒಳ್ಳೆ ಆರಂಭ” ನಂತರ ಯಾರೋ ಅವರಿಗೆ, ಸರ್ಕಾರ 2000ರೂ. ನೋಟನ್ನು ಪುನಃ ತರಲಿದೆ ಎಂಬ ಮಾಹಿತಿ ಕೊಟ್ಟರು, ಆಗ ಅವರು “ಹೌದಾ? ಛೆ!! “ಎಂದು ಮರು ಟ್ವಿಟ್ ಮಾಡಿದರು.
 

ಅದೇ ಪ್ರೊ. ಥೇಲರ್ ಈ ವರ್ಷದ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಆದರೆ ಅದು ಭಾರತದಲ್ಲಿ ನೋಟುರದ್ಧತಿಯ ದುರಂತಕ್ಕೆ ಅವರ ಬೆಂಬಲಕ್ಕೆಂದು ಸಿಕ್ಕ ಪ್ರಶಸ್ತಿಯೇನೂ ಅಲ್ಲ (ವಾಸ್ತವತೆಯೊಂದಿಗೆ ಅವರ ಸಂಪರ್ಕ ಎಷ್ಟು ದುರ್ಬಲವಾಗಿದೆ ಎಂಬುದನ್ನು ಇದು ತೋರಿಸುತ್ತದಷ್ಟೇ).“ವ್ಯಕ್ತಿಗತ ನಿರ್ಧಾರದ ಆರ್ಥಿಕ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆಗಳ ನಡುವೆ ಒಂದು ಸೇತುವೆ ನಿರ್ಮಿಸಿರುವ” ಕಾರಣಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಅವರು ಪ್ರಾಯೋಗಿಕವಾಗಿ ಕಂಡುಕೊಂಡ ಸಂಗತಿಗಳು ಹಾಗೂ ಸೈದ್ಧಾಂತಿಕ ಒಳನೋಟಗಳು ಹೊಸದಾದ ಮತ್ತು ಕ್ಷಿಪ್ರವಾಗಿ ವಿಸ್ತಾರಗೊಳ್ಳುತ್ತಿರುವ ಕ್ಷೇತ್ರವಾದ ವರ್ತನಾ ಅರ್ಥಶಾಸ್ತ್ರದ ನಿರ್ಮಾಣಕ್ಕೆ ಸಾಧನವಾಗಿದೆ, ಆರ್ಥಿಕ ಸಂಶೋಧನೆ ಮತ್ತು ಹಲವಾರು ನೀತಿಗಳನ್ನು ರೂಪಿಸುವಲ್ಲಿ ಆಳವಾದ ಪ್ರಭಾವವನ್ನು ಈ ಹೊಸ ಶಾಸ್ತ್ರ ಬೀರಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ಹೇಳಿದೆ.

ಇವೆಲ್ಲದರ ಅರ್ಥವೇನು? ಸಾಂಪ್ರದಾಯಿಕ ಅರ್ಥಶಾಸ್ತ್ರ ಪ್ರತಿಯೊಬ್ಬ ವ್ಯಕ್ತಿಯೂ ವಿವೇಚನಾಪೂರ್ಣ ಸ್ವಹಿತದ ಆಧಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ ಎಂದು ಹೇಳುತ್ತದೆ. ಇದು ಬಂಡವಾಳಶಾಹಿಯ ಒಂದು ಸಮರ್ಥನೆ ಅಲ್ಲದೇ ಬೇರೇನೂ ಅಲ್ಲ, ಅಂದರೆ ಮಾರುಕಟ್ಟೆಯಲ್ಲಿ ಪತಿಯೊಬ್ಬರೂ ಇನ್ನೊಬ್ಬರ ವಿರುದ್ಧ ಸ್ಪರ್ಧಿಸುತ್ತಾ ಇರುತ್ತಾರೆ, ಮತ್ತು ಮಾರುಕಟ್ಟೆಯ ಅಗೋಚರ ಕೈಗಳು ಎಲ್ಲವನ್ನೂ ನಿಯಂತ್ರಿಸುತ್ತಿರುತ್ತವೆ ಎಂದು.

ಆದಾಗ್ಯೂ, ಜಗತ್ತಿನ ಇತಿಹಾಸ, ಈ ಸಿದ್ಧಾಂತ ಕೆಲಸ ಮಾಡುತ್ತಿಲ್ಲ ಎಂದು ಪುನಃ ಪುನಃ ತೋರಿಸಿಕೊಟ್ಟಿದೆ. ಬಂಡವಾಳಶಾಹೀ ಮತ್ತು ಮಾರುಕಟ್ಟೆ ದುಡಿಯುವ ವರ್ಗಗಳ ಹಿತಗಳನ್ನು ಬಲಿಗೊಟ್ಟು ಆಸ್ತಿವಂತ ವರ್ಗಗಳ ಪರವಾಗಿ ಕೆಲಸಮಾಡುತ್ತವೆಯಷ್ಟೇ.

1980ರ ದಶಕದಲ್ಲಿ,  ನವ ಉದಾರವಾರವಾದದ ಉದಯದೊಂದಿಗೆ ಬಂಡವಾಳಶಾಹಿಯ ಬೆಂಬಲಿಗರಿಂದ ಹೊಸದೊಂದು ಆರ್ಥಿಕ ಸಿದ್ದಾಂತ ಹುಟ್ಟಿಕೊಂಡಿತು. ಇದನ್ನು ವರ್ತನಾ ಅರ್ಥಶಾಸ್ತ್ರ ಎನ್ನಲಾಯಿತು. ಈ ಕ್ಷೇತ್ರದ ಪ್ರಮುಖರೆಂದರೆ  ಡ್ಯಾನಿಯಲ್ ಕಾಹ್ನೆಮನ್, ಅಮೊಸ್ ಟ್ವೆಸ್ರ್ಕಿ, ರಾಬರ್ಟ್ ಶಿಲ್ಲರ್, ಸೆನ್ತಿಲ್ ಮುಲೈನಾಥನ್, ಕಾಸ್ ಸನ್‍ಸ್ಟೈನ್, ಮತ್ತು ಈ ವರ್ಷ ನೊಬೆಲ್ ಪ್ರಶಸ್ತಿ ಪಡೆದ ರಿಚರ್ಡ್  ಥೇಲರ್.

ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಷರು ಪ್ರಸ್ತುತಪಡಿಸುವಂತೆ, ಜನರು ತಮ್ಮ ಸ್ವಹಿತದಿಂದ ವರ್ತಿಸುವುದಿಲ್ಲ, ವಿವೇಚನಾಹೀನರಾಗಿ ವರ್ತಿಸುತ್ತಾರೆ(ಮೂರ್ಖರಂತೆ ವರ್ತಿಸುತ್ತಾರೆ ಎಂದು ಅವರು ನೇರವಾಗಿ ಹೇಳದಿದ್ದರೂ, ಅರ್ಥ ಅದೇ). ನಿಜ ಜಗತ್ತಿನ ನೂರಾರು ಉದಾಹರಣೆಗಳನ್ನು ಅವರು ದಾಖಲಿಸಿದ್ದಾರೆ. ಮತ್ತು ಮನೋವಿಜ್ಞಾನ, ಜ್ಞಾನಗ್ರಹಣ ವಿಜ್ಞಾನ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಮುಂತಾದವನ್ನು ಬಳಸಿಕೊಂಡು ವರ್ತನಾ ಅರ್ಥಶಾಸ್ತ್ರವೆಂಬ ಅವರ ಪರ್ಯಾಯ ಮಾದರಿಯನ್ನು ಕಟ್ಟಿದ್ದಾರೆ.

ಇದು ಕುಡಿತದ ಕೇಳಿಯಿಂದ ಸ್ಟ್ರೈಕರ್ ವಿಮಾನಗಳ ಕಚ್ಚಾಟದಂತಹ ಎಲ್ಲ ವಿಲಕ್ಷಣ ವರ್ತನೆಗಳನ್ನು ವಿವರಿಸುವ ಒಂದು ಮನರಂಜನಾ ಪಾರ್ಲರ್ ಆಟವಾಗಿಯೇ ಉಳಿಯುತ್ತಿತ್ತೇನೋ. ಅದರೆ ಈ ನುಣುಪಾದ ಕೈಗವಚದ ಒಳಗಿರುವ ಉಕ್ಕಿನ ಮುಷ್ಟಿಯ ಹುನ್ನಾರ ಹೊರಬೀಳಲು ಹೆಚ್ಚು ಸಮಯ ಹಿಡಿಯಲಿಲ್ಲ.

ನವ ಉದಾರವಾದಿ ಆಳ್ವಿಕೆಗಳಿಗೆ  ಪ್ರತಿನಿತ್ಯ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಬಡವರು ಮತ್ತು ಅವರ ಹೆಚ್ಚುತ್ತಿರುವ ಸಿಟ್ಟನ್ನು ನಿಭಾಯಿಸಲು ಈ ವರ್ತನಾ ಅರ್ಥಶಾಸ್ತ್ರ ಪ್ರಿಯ ಸಾಧನವಾಗಿ ಬಿಟ್ಟಿತು. ಬಡಜನರು ಬಹುತೇಕ ಮೂರ್ಖತನದಿಂದ ವರ್ತಿಸುತ್ತಾರೆ, ಇದನ್ನು ಸರಕಾರೀ ಧೋರಣೆಗಳು ಗಮನಕ್ಕೆ ತಗೊಂಡು ಅವರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ‘ನಯವಾಗಿ ತಿವಿ’ ಯುವ ಸೂಕ್ತವಾದ ಧೋರಣೆಗಳನ್ನು ರೂಪಿಸಬೇಕು ಎಂಬುದು ಈ ವರ್ತನಾ ಅರ್ಥಶಾಸ್ತ್ರಜ್ಞರು ಮತ್ತು ಅವರ ಬೆಂಬಲಿಗರ ವಾದ.

ಇದು ಎರಡು ಉದ್ದೇ±ಗಳನ್ನು ಈಡೇರಿಸುತ್ತದೆ: ಬಡತನ, ನಿರುದ್ಯೋಗದಂತಹ ಸಮಸ್ಯೆಗಳು ಇರುವುದಕ್ಕೆ ವ್ಯವಸ್ಥಾಗತ ಕಾರಣಗಳೇನು ಎಂಬ ಯೋಚಿಸುವ ಬದಲು ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸಿದೆ,  ಮತ್ತು ಅವುಗಳÀ ನಿರ್ಮೂಲನೆಗೆ ಸರ್ಕಾgಗಳುÀ ಮಾಡಬೇಕಿದ್ದ ವ್ಯಚ್ಚದಿಂದ ಅವನ್ನು ಮುಕ್ತಗೊಳಿಸಿದೆ. ಬಡಜನರು ತಮ್ಮ ಮೂರ್ಖ ನಿರ್ಧಾರಗಳಿಂದ ಬಡವರಾಗಿದ್ದಲ್ಲಿ ಸರಕಾರಗಳು ಮಾಡಬೇಕಾದ್ದು ಇಷ್ಟೇ- ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಮನಶ್ಶಾಸ್ತ್ರೀಯ ವಿಧಾನಗಳು, ಮೌನ ಸೂಚನೆಗಳ ಮೂಲಕ ‘ನಯವಾಗಿ ತಿವಿ’ದರಷ್ಟೇ ಸಾಕು!

ನವ ಉದಾರವಾದದ ಈ ನಾಚಿಕೆಗೆಟ್ಟ ಸಮರ್ಥನೆಗೆ  ಥೇಲರ್ ಮೂಲಕ ಒಂದು ಪ್ರಚಾರ ಸಾಧನ ಸಿಕ್ಕಂತಾಯಿತು. “ಆರೋಗ್ಯ, ಸಂಪತ್ತು ಮತ್ತು ಸಂತೋಷದ ರ್ಧಾರಗಳನ್ನು ಉತ್ತಮಗೊಳಿಸಲು ನಯತಿವಿತ:” ಎಂಬ 2008ರಲ್ಲಿ ಪ್ರಕಟವಾದ ತಮ್ಮ ಭಾರೀ ಮಾರಾಟವಾದ ಪುಸ್ತಕದಲ್ಲಿ ಅವರು   ಸರ್ಕಾರಗಳು ಜನರು ಉತ್ತಮ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ನಯವಾಗಿ ತಳ್ಳಲು ಸಣ್ಣ ಮತ್ತು ಸುಲಭವಾಗಿ ಅರ್ಥವಾಗುವ  ಕ್ರಮಗಳನ್ನು  ತೆಗೆದುಕೊಳ್ಳಬೆಕು ಎಂದು ಆಗ್ರಹಿಸಿದ್ದಾರೆ. ಉದಾಹರಣೆಗೆ, ಆ ಪುಸ್ತಕದಲ್ಲಿ ನಗದಿನ ಆವಶ್ಯಕತೆ ಇರುವ ಜನರು ನಗದು ಹೊಂದಿದವರಿಗಿಂತ ಹೆಚ್ಚು ವಿವೇಚನಾಹೀನರಾಗಿ ವರ್ತಿಸುತ್ತಾರೆ ಎಂದು ತೋರಿಸುವ(ಬಡವರು ಮೂರ್ಖರು ಎಂದು ಹೇಳುವ ಇನ್ನೊಂದು ರೀತಿ) ಒಂದು ಅಧ್ಯಯನವನ್ನು ಉದ್ಧರಿಸುತ್ತಾರೆ. ಹಾಗಾಗಿ, ಅವರಿಗೆ ನಗದನ್ನು ಒದಗಿಸುವಾಗ, ಅದರೊಂದಿಗೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಅಥವ ಬೇರಾವುದೇ ಅಪೇಕ್ಷಣೀಯ ಸಂಗತಿ ಬಗ್ಗೆ ಸಂದೇಶವನ್ನು ರವಾನಿಸಬೇಕು,  ಸಂದೇಶ ರವಾನೆ ಅವರು ನಗದು ಪಡೆಯುವುದಕ್ಕಿಂತ ಮೊದಲೇ ಅಧರೆ ಸಂದೇಶವನ್ನು ಮೂಲೆಗೆ ಹಾಕುತ್ತಾರೆ ಎನ್ನುತ್ತಾರೆ ಅವರು.

‘ನಯತಿವಿತ’ವನ್ನು ಪಾಶ್ಚಾತ್ಯ ಸರಕಾರUಳು ಎಷ್ಟು ಇಷ್ಟಪಟ್ಟವೆಂದರೆ, ಬ್ರಿಟನ್ನಿನಲ್ಲ್ಲಿ ಒಂದು ‘ನಯತಿವಿತ ತಂಡ’ವನ್ನು ರಚಿಸಲಾಯಿತು. ಈ ತಂಡದ ಅನುಭವಗಳ ಮೇಲೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಒಂದು ಕಾರ್ಯಗುಂಪನ್ನು ಸಂಘಟಿಸಲಾಯಿತು.. ಬ್ರೆಜಿಲ್, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ಸರಕಾರಗಳು ಕೂಡ ಇನ್ನು ಮುಂದೆ ತನ್ನ ನೀತಿ ರೂಪಿಸುವಾಗ ವರ್ತನಾ ಅರ್ಥಶಾಸ್ತ್ರವನ್ನು ಅಳವಡಿಸುವುದಾಗಿ ಹೇಳಿವೆ.

ಅಮೆರಿಕಾದಲ್ಲಿ 2009ರಲ್ಲಿ ಇದರ ನಿಜರೂಪ ಇನ್ನಷ್ಟು ಅನಾವರಣ ಗೊಂಡಿತು. ತೆರಿಗೆ ಕಡಿತಗಳು, ವಂತಿಗೆ ಆಧಾರಿತ ಆರೋಗ್ಯಪಾಲನೆ ಹೂಡಿಕೆ ಯೋಜನೆ, ನಿವೃತ್ತಿ ಉಳಿತಾಯದ ಹೂಡಿಕೆ ಮತ್ತು ಇದೇ ರೀತಿ ಇನ್ನೂ ಹಲವಾರು ’ನಯತಿವಿತ’ ಸಿದ್ದಾಂತದಿಂದ ಸ್ಫೂರ್ತಿ ಪಡೆದವು ಎಂದು ಹೇಳಿಕೊಂಡ ಹಣಕಾಸಿನ ಕ್ರಮಗಳನ್ನು ಕೈಗೊಳ್ಳಲಾಯಿತು.  ಜನಗಳಿಗೆ ನೆರವಾಗುವ ಹೆಸರಿನಲ್ಲಿ ಅವರನ್ನು ಹಣಕಾಸಿನ ದೊರೆಗಳ ಸಂಕೋಲೆಗಳಲ್ಲೇ ಉಳಿಯಲು ‘ನಯವಾಗಿ ತಿವಿ’ಯುತ್ತಿದ್ದಾರೆ.

ಈ ‘ನಯತಿವಿತ’ ಎಂದಾದರೂ ಯಶಸ್ವಿಯಾಗಿದೆಯೇ? ಅಥವಾ ಶ್ರೀಮಂತರ ಮೇಲೆ ಒಂದು ಶೇಕಡಾದಷ್ಟಿರುವ ಮಂದಿಯ ಮೇಲೆ  ಪ್ರಯೋಗಿಸಲಾಗಿದೆಯೇ? ಯಾವುದಾದರೂ ಕೊಟ್ಯಾಧಿಪತಿ ತನ್ನ ಸಂಪತ್ತನ್ನು ಬಿಟ್ಟುಕೊಡುವತ್ತ  ನಯವಾಗಿ ನೂಕಲಾಗಿದೆಯೇ? ಇದರ ಬಗ್ಗೆ ಯಾವುದೇ ಅಧ್ಯಯನ ಅಥವಾ ಆಧಾರಗಳಿಲ್ಲ. ಶ್ರೀಮಂತರ ವರ್ತನೆ ವಿವೇಚನಾಹೀನವಾಗಿರುವುದಿಲ್ಲ, ಆದ್ದರಿಮದ ಅವರಿಗೆ ನಯತಿವಿತದ ಅಗತ್ಯವಿಲ್ಲ  ಎಂದು ಈ ವರ್ತನಾ ಅರ್ಥಶಾಸ್ತ್ರಜ್ಞರು ಹೇಳಬಹುದೇನೋ. ಆದರೆ 2008 ರಲ್ಲಿ ಇದೇ ಶ್ರೀಮಂತರ ವಿವೇಚನಾರಹಿತ ದುರಾಸೆ ಹಣಕಾಸಿನ ಬಿಕ್ಕಟ್ಟನ್ನು ಉಂಟುಮಾಡಿತು ಎಂಬುದನ್ನು ಅವರು ಮರೆತಿದ್ದಾರೆ.

ವರ್ತನಾ ಅರ್ಥಶಾಸ್ತ್ರದ ಚೌಕಟ್ಟಿನ ಇನ್ನೊಂದು ಪರಿಣಾಮ ಎಂದರೆ, 1% ಮತ್ತು 99% ಜನರ ಆದಾಯಗಳ ನಡುವಿನ ಕಂದರ ಇನ್ನಷ್ಟು ಹೆಚ್ಚುತ್ತಿರುವುದರ  ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳನ್ನು ನಿಭಾಯಿಸಲು ಒಂದು ಸಾಧನವನ್ನು ಒದಗಿಸುತ್ತದೆ.

ಥೇಲರ್ ಮತ್ತು ಅವರ ಸಹೋದ್ಯೋಗಿಗಳು ಹಾಗೂ ಅನುಯಾಯಿಗಳು ಬಡವರ ನಡವಳಿಕೆಯ ಗುಣಲಕ್ಷಣಗಳನ್ನು ದಾಖಲಿಸುವ, ಮತ್ತು ಹೊಂದಿಕೊಳ್ಳುವತ್ತ, ಸ್ವೀಕರಿಸುವತ್ತ ಮತ್ತು ಶರಣಾಗುವತ್ತ ಅವರನ್ನು ಹೇಗೆ ತಳ್ಳಬಹುದು, ಅದನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಬೃಹತ್ ಸಾಹಿತ್ಯವನ್ನೇ ಬೆಳೆಸಿದ್ದಾರೆ.

ನವ-ಉದಾರವಾದದ ಈ ಬಾವುಟ ಹಿಡಿದಾತನಿಗೆ, ಅದರಲ್ಲೂ ಬಡವರು ಮತ್ತು ವಂಚಿತರ ಬಗ್ಗೆ ಹೆಚ್ಚು ಸಹಾನುಭೂತಿಪರನೂ, ಅವರನ್ನು ಹೆಚ್ಚು ಅರ್ಥಮಾಡಿಕೊಳ್ಳಬಲ್ಲವನೂ, ಮತ್ತು ಅವರ ಬಗ್ಗೆ ಜ್ಞಾನವುಳ್ಳವನೂ ಹಾಗೂ ಅವರ ಪರವಾಗಿ ಚಿಂತಿಸುವವನು ಎಂಬಂತೆ ಕಾಣುವುದರಿಂದ ಇನ್ನಷ್ಟು ಅಮೂಲ್ಯವಾಗಿರುವಾತನಿಗೆ ನೋಬೆಲ್ ಪ್ರಶಸ್ತಿ ಹೋಗಿದ್ದರೆ ಆಶ್ಚರ್ಯವೇನೂ ಇಲ್ಲ.

ಭಾರತದಲ್ಲಿ ನಾವು ಇನ್ನೂ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ  ಮೋದಿ ಸರಕಾರ ಜನರು ‘ಸರಿಯಾದ’ ನಿರ್ಧಾರಗಳನ್ನು ಕೈಗೊಳ್ಳುವಂತೆ ‘ಮಾಡುವ ‘ನಯತಿವಿತ’ದ ತನ್ನದೇ ಒಂದು ಸಣ್ಣ ಆವೃತ್ತಿಯನ್ನು ಹೊಂದಿದೆ. ಒಂದೇ ಅಪವಾದವೆಂದರೆ, ಮೋದಿಯವರಿಗೆ ಜನಗಳು ನಗದುರಹಿತ ಆರ್ಥಿಕ ವ್ಯವಹಾರಗಳನ್ನು ಅಪ್ಪಿಕೊಳ್ಳುವಂತೆ ಮಾಡಲು ನಯತಿವಿತಕ್ಕಿಂತ ಬಲವಾಗಿ ದಬ್ಬುವುದರಲ್ಲೇ ಹೆಚ್ಚು ನಂಬಿಕೆ. ಆದ್ದರಿಂದಲೇ ಥೇಲರ್‍ರಿಂದ ತಕ್ಷಣದ ಪ್ರಶಂಸೆ ಗಳಿಸಿದ್ದು. ನೇರ ನಗದು ವರ್ಗಾವಣೆ ಇನ್ನೊಂದು ದಬಾವಣೆ, ಏಕೆಂದರೆ, ಜನಗಳು ಭ್ರಷ್ಟರು ಮತ್ತು ಮೂರ್ಖರು ತಾನೇ?

ನವ ಉದಾರವಾದಿ ಆಳ್ವಿಕೆಗಳಿಗೆ  ಪ್ರತಿನಿತ್ಯ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಬಡವರು ಮತ್ತು ಅವರ ಹೆಚ್ಚುತ್ತಿರುವ ಸಿಟ್ಟನ್ನು ನಿಭಾಯಿಸಲು ಈ ವರ್ತನಾ ಅರ್ಥಶಾಸ್ತ್ರ ಪ್ರಿಯ ಸಾಧನವಾಗಿ ಬಿಟ್ಟಿದೆ. ಬಡಜನರು ಬಹುತೇಕ ಮೂರ್ಖತನದಿಂದ ವರ್ತಿಸುತ್ತಾರೆ, ಇದನ್ನು ಸರಕಾರೀ ಧೋರಣೆಗಳು ಗಮನಕ್ಕೆ ತಗೊಂಡು ಅವರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ‘ನಯವಾಗಿ ತಿವಿ’ಯುವ ಸೂಕ್ತವಾದ ಧೋರಣೆಗಳನ್ನು ರೂಪಿಸಬೇಕು ಎಂಬುದು ಪ್ರೊ.ಥೇಲರ್ ಮತ್ತು ಇತರ ಈ ವರ್ತನಾ ಅರ್ಥಶಾಸ್ತ್ರಜ್ಞರು ಮತ್ತು ಅವರ ಬೆಂಬಲಿಗರ ವಾದ. ಭಾರತದಲ್ಲಿ ಮೋದಿ ಸರಕಾರ ಜನರು ‘ಸರಿಯಾದ’ ನಿರ್ಧಾರಗಳನ್ನು ಕೈಗೊಳ್ಳುವಂತೆ ‘ಮಾಡುವ ‘ನಯತಿವಿತ’ದ ತನ್ನದೇ ಒಂದು ಸಣ್ಣ ಆವೃತ್ತಿಯನ್ನು ಹೊಂದಿದೆ.  ಆದ್ದರಿಂದಲೇ ಥೇಲರ್‍ರಿಂದ ತಕ್ಷಣದ ಪ್ರಶಂಸೆ ಗಳಿಸಿದ್ದು. ಆದರೆ ಒಂದು ಸಮಸ್ಯೆಯೆಂದರೆ, ಮೋದಿಯವರಿಗೆ ಜನಗಳು ನಗದುರಹಿತ ಆರ್ಥಿಕ ವ್ಯವಹಾರಗಳನ್ನು ಅಪ್ಪಿಕೊಳ್ಳುವಂತೆ ಮಾಡಲು ನಯತಿವಿತಕ್ಕಿಂತ ಬಲವಾಗಿ ದಬ್ಬುವುದರಲ್ಲೇ ಹೆಚ್ಚು ನಂಬಿಕೆ!