Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ವಾರ್ಲಿ ಆದಿವಾಸಿ ಬಂಡಾಯ: 72ನೇ ಹುತಾತ್ಮ ದಿನಾಚರಣೆ

ಸಂಪುಟ: 
11
ಸಂಚಿಕೆ: 
44
Sunday, 22 October 2017

ಅಕ್ಟೋಬರ್10, 1945. ಮಹಾರಾಷ್ಟ್ರ-ಗುಜರಾತ ಗಡಿಯಲ್ಲಿರುವ ತಲ್ವಾಡದಲ್ಲಿ ತಮ್ಮ ಶೋಷಣೆಯ ವಿರುದ್ಧ ಬಂಡೆದ್ದ ವಾರ್ಲಿ ಆದಿವಾಸಿ ಜನಗಳ ಮೇಲೆ ಬ್ರಿಟಿಶ್ ಪೋಲೀಸರು ಗುಂಡು ಹಾರಿಸಿದಾಗ ಜೇತ್ಯಾ ಗಂಗಡ್ ಮತ್ತು ಇತರ ನಾಲ್ಕು ಮಂದಿ ಆದಿವಾಸಿಗಳು ಹುತಾತ್ಮರಾದರು. ಆದರೆ ಪ್ರಖ್ಯಾತ ಹೋರಾಟಗಾರ್ತಿ ಗೋದಾವರಿ ಪರುಳೇಕರ್ ನೇತೃತ್ವದ ಈ ಬಂಡಾಯ ನಿಲ್ಲಲಿಲ್ಲ. ನಂತರ ಈ ಏಳು ದಶಕಗಳಲ್ಲಿ ಮತ್ತೆ 60 ಆದಿವಾಸಿಗಳು ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳ ಗುಂಡುಗಳಿಗೆ ಬಲಿಯಾಗಿದ್ದಾರೆ.

ಆದರೂ ಆಗ ಹೊತ್ತಿದ್ದ ಕಿಡಿ ಆರಿಲ್ಲ.ಇತ್ತೀಚೆಗೆ ಪಾಲ್ಘಡ್ ಜಿಲ್ಲೆಯ ವಿಕ್ರಮ್‍ಗಡ್‍ನಲ್ಲಿ 5000 ಜನಗಳ ಸಮರಧೀರ ಘೇರಾವ್‍ನಿಂದ ಅವರು ತಮ್ಮ ಸ್ಥಳೀಯ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ಬಂಡಾಯದ ಒಂದು ಪ್ರಮುಖ ಕೇಂದ್ರವಾಗಿದ್ದ ದಹಾಣುನಲ್ಲಿ 3500 ಮಂದಿ ತಹಸೀಲ್ ಕಚೇರಿಗೆ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ವಾಡ ಮತ್ತು ಜವ್‍ಹರ್ ತಹಸೀಲ್‍ಗಳಲ್ಲಿ ಮತ್ತು ಪಕ್ಕದ ಥಾಣೆ ಜಿಲ್ಲೆಯ ಶಾಹಪುರ್ ತಹಸೀಲ್‍ನಲ್ಲಿಯೂ ಯಶಸ್ವಿ ಹೋರಾಟಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಂದು ಥಾಣೆ-ಪಾಲ್ಘಡ್ ಜಿಲ್ಲೆಯಾದ್ಯಂತ ಜೇತ್ಯ ಗಂಗಡ್ ಮತ್ತು ಇತರ ನಾಲ್ಕು ಆದಿವಾಸಿ ಬಂಡಾಯಗಾರರ 72ನೇ ಹುತಾತ್ಮ ದಿನಾಚರಣೆ ಮತ್ತು ಗೋದಾವರಿ ಪರುಳೇಕರ್ ಅವರ 21ನೇ ನಿಧನ ವಾರ್ಷಿಕವನ್ನು ಆಚರಿಸಲಾಯಿತು. ಮೇಲೆ ಹೇಳಿದ ತಹಸೀಲ್‍ಗಳಲ್ಲಿ ಮಾತವಲ್ಲ, ಇದಕ್ಕೆ ತಾಕಿಕೊಂಡಿರುವ ಗುಜರಾತಿನ ಭಿಲಾದ್‍ನಲ್ಲಿಯೂ 15,000ಕ್ಕೂ ಹೆಚ್ಚು ಆದಿವಾಸಿ ಜನಗಳು ಭೀಕರ ಮಳೆಯನ್ನೂ ಲೆಕ್ಕಿಸದೆ ಭಾಗವಹಿಸಿದರು. ಆದಿವಾಸಿ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು ಈ ಆಚರಣೆಯ ವಿಶೇಷತೆ.

ಮತ್ತೊಂದು ವಿಶೇಷತೆಯೆಂದರೆ ಗುಜರಾತಿನ ಭಿಲಾದ್‍ನಲ್ಲಿ ನಡೆದ ಸಾರ್ವಜನಿಕ ಸಭೆ. ಗುಜರಾತಿನ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ. ಗುಜರಾತಿನ ಉಂಬರ್‍ಗಾಂವ್ ಮತ್ತು ಮಹಾರಾಷ್ಟ್ರದ ತಲಸಾರಿ ತಹಸೀಲ್ ಸಮಿತಿಗಳು ಜಂಟಿಯಾಗಿ ಇದನ್ನು ಸಂಘಟಿಸಿದವು.

ಸಭೆಯನ್ನುದ್ದೇಶಿಸಿ ಎಐಕೆಎಸ್ ಅಧ್ಯಕ್ಷ ಡಾ.ಅಶೋಕ ಧವಳೆ, ಕಿಸಾನ್ ಗುಜರ್, ಒಂಬರ್‍ಗಾಂವ್ ಮತ್ತು ಸುರತ್‍ನಲ್ಲಿ ಸ್ಪರ್ಧಿಸಬಹುದಾದ ಸ್ಥಳೀಯ ಸಿಪಿಐ(ಎಂ) ಮುಖಂಡರುಗಳಲ್ಲದೆ, ಇಬ್ಬರು ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಸವಿತಾ ದವ್ರೆ ಮತ್ತು ಸ್ಮಿತಾ ವಾಲ್ವಿ ಮಾತಾಡಿದರು. ಇವರಿಬ್ಬರು ಅನುಕ್ರಮವಾಗಿ ತಲಸಾರಿ ತಹಸೀಲ್ ಪಂಚಾಯತ್ ಸಮಿತಿ ಮತ್ತು ತಲಸಾರಿ ನಗರ ಮಂಡಳಿಯ ಅ ಧ್ಯಕ್ಷೆಯರು.

ಈ ಸಭೆಯ ಯಶಸ್ಸು ಬಿಜೆಪಿ ಮುಖಂಡರಲ್ಲಿ ಭೀತಿಯುಂಟು ಮಾಡಿದೆ ಎಂಬುದು ಎರಡೇ ದಿನಗಳ ನಂತರ ಅದೇ ಸ್ಥಳದಲ್ಲಿ ಗುಜರಾತಿನ ಮುಖ್ಯಮಂತ್ರಿಗಳನ್ನು ಕರೆಸಿ ಅವಸರವಸರವಾಗಿ ಸಾರ್ವಜನಿಕ ಸಭೆಯನ್ನು ನಡೆಸಿದಾಗ ಸ್ಪಷ್ಟವಾಯಿತು.