Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಭಯ ಮುಕ್ತ ಕರ್ನಾಟಕಕ್ಕಾಗಿ ಜನವರಿ 30 ಮಾನವ ಸರಪಳಿ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

ಮಲ್ಲಿಗೆಯ ಊರು ಭಟ್ಕಳದಲ್ಲಿ ಸೌಹಾರ್ದಕ್ಕಾಗಿ ಕರ್ನಾಟಕ ಸಮಾವೇಶ 

“ಸಮೃದ್ಧಿ ಹಸಿರು ಕಾಡಿಗೆ ಯಾರೋ ಬೆಂಕಿ ಹಚ್ಚಿದ್ದರು. ಹಲವರು ನಂದಿಸದೇ ಹೋಗುತ್ತಿದ್ದರು. ಕೆಲವರು ಅಸಹಾಯಕತೆಯಿಂದಿದ್ದರು. ಆದರೆ ಅದನ್ನು ನಂದಿಸಲು ಪುಟ್ಟ ಹಕ್ಕಿಯೊಂದು ಕೊಕ್ಕಿನಲ್ಲಿ ಹನಿ ನೀರು ತರುತ್ತಿತ್ತು. ಇದನ್ನು ನೋಡಿದ ಉಳಿದವರು ಈ ಬೃಹತ್ ಬೆಂಕಿ ನಂದಿಸಲು ಈ ಹನಿ ನೀರು ಸಾಕೇ ಎಂದು ಚೇಷ್ಟೆ ಮಾಡಿದರು. ಆಗ ಆ ಹಕ್ಕಿ ಹೇಳಿತು ನಾವು ಜಗವ ಸುಡುವ ಬೆಂಕಿ ಹಚ್ಚುವ ಮತ್ತು ಹಚ್ಚುವವರ ಸಾಲಿನಲ್ಲಿ ನಿಲ್ಲಲಾರೆ; ಅದನ್ನು ನಂದಿಸುವ ಪ್ರಯತ್ನದಲ್ಲಿ ನಾನಿರುವೆ ಎಂದು ಹೇಳಿತು. ಅದರ ಮರ್ಮ ಕೇಳಿ ಉಳಿದವರು ಕೈ ಜೋಡಿಸಿದರು.” ಅಂಥ ಮಾನವೀಯತೆ, ಸೌಹಾರ್ದ, ಸಹಬಾಳ್ವೆಗೆ ಜನವರಿ 30 ಹುತಾತ್ಮ ದಿನದಂದು ಕರ್ನಾಟಕದಲ್ಲಿ ಮೂರು ಭಾಗಗಳಿಂದ ಮಾನವ ಸರಪಳಿ ನಡೆಯಲಿದೆ. ಬಸವಕಲ್ಯಾಣದಿಂದ ಚಾಮರಾಜನಗರ, ಬೆಳಗಾವಿಯಿಂದ ಚಿತ್ರದುರ್ಗ ಮತ್ತು ಕಾರವಾರದಿಂದ ಕೊಡಗಿನ ವರೆಗೆ ಶಾಂತಿ ಸೌಹಾರ್ದ ಪ್ರಿಯ ಜನತೆ ಮಾನವ ಸರಪಳಿ ನಿರ್ಮಿಸಲಿದ್ದು ಅದರ ಯಶಸ್ವಿಗಾಗಿ ಸೌಹಾರ್ದ ಕರ್ನಾಟಕ ಸಮಾಲೋಚನಾ ಸಭೆ ನಡೆಯಿತು. 

ಭಯಮುಕ್ತ ಸೌಹಾರ್ದ ಕರ್ನಾಟಕಕ್ಕಾಗಿ ಶಾಂತಿ, ಸಾಮರಸ್ಯದ ನವ ಕರ್ನಾಟಕ ನಿರ್ಮಾಣವೊಂದೇ ದಾರಿ. 2014 ರ ಚುನಾವಣೆಯ ನಂತರ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಭರದಿಂದ ಸಾಗಿದೆ. ಈ ಕೇಂದ್ರ ಸರ್ಕಾರ ಸಂವಿಧಾನ ರೀತಿಯಲ್ಲಿ ಪ್ರಜಾಪ್ರಭುತ್ವ ನೀತಿಯಲ್ಲಿ ವಿಶ್ವಾಸವಿಟ್ಟಿಲ್ಲ. ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕು ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆಡಲಿತಾರೂಡ ಮುಖ್ಯಸ್ಥರೇ ಸಕ್ರಿಯರಾಗಿದ್ದಾರೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ವಿಮರ್ಶಿಸಿದ ಕಾರಣಕ್ಕಾಗಿ ಅಂಥವರನ್ನು ದೇಶದ್ರೋಹಿಗಳು ಎನ್ನುವ ಹಣೆ ಪಟ್ಟಿ ಹಚ್ಚಲಾಗುತ್ತಿದೆ. 

ಈ ದೇಶದಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯರಷ್ಟೇ ಅಲ್ಲ ಚಾರ್ವಾಕರಿಗೂ ನೆಲೆ ಕೊಟ್ಟಿದೆ. ಪ್ರಶ್ನಿಸುವ ಜನರ ಬಾಯಿ ಮುಚ್ಚಿಸುವದು ಹಿಟ್ಲರ್ ನ ಫ್ಯಾಸಿಜಂ ಸ್ವರೂಪವಾಗಿದ್ದು ವಿಭಿನ್ನ ಸಂಸ್ಕøತಿ, ಹಲವು ಭಾಷೆ, ಸಾವಿರಾರು ಜಾತಿ, ಬಹುಧರ್ಮಗಳ ಭಾರತದ ಪರಿಕಲ್ಪನೆಗೆ ಅಪಾಯಬಂದೊದಗಿದೆ. ಏಕ ರೂಪದ ಆಹಾರ ಪದ್ಧತಿಯನ್ನು ಹೇರುವ ಹುನ್ನಾರ ನಡೆದಿದೆ.  ಸರ್ವರನ್ನು ನಾಶ ಮಾಡುವ ಸಂಘಟನೆಯೊಂದು ಇಲ್ಲಿ ಕೆಲಸಮಾಡುತ್ತಿದೆ. ಗಡ್ಡ ಬಿಟ್ಟವರನ್ನು ಭಯೋತ್ಪಾದಕರೆಂದು ಬಿಂಬಿಸುವ ದುರಂತ ಈ ದೇಶದಲ್ಲಿ ಬಂದೊದಗಿದೆ. ನಾಡಿನ ಪ್ರಗತಿಪರ ಬರಹಗಾರರು, ಚಿಂತಕರು, ಮಠಾಧೀಶರುಎಲ್ಲ ಒಂದೆಡೆ ಸೇರಿ ನಾಡಿನ ಜನತೆಯ ಸೌಹಾರ್ದಗೆ ಕರೆ ಕೊಟ್ಟ 2 ಗಂಟೆಯೊಳಗೆ ಪತ್ರಕರ್ತೆ ಗೌರಿ ಲಂಕೇಶರ ಕೊಲೆ ನಡೆದು ಹೋಗಿದೆ ಎಂದರೆ ಈ ಸಮಾಜದಲ್ಲಿ ಎಂಥ ಕ್ರೌರ್ಯ ನೆಲೆಸಿದೆ ಎಂದು ಅರ್ಥವಾಗುತ್ತದೆ ಎಂದು ಮಾಜಿ ಶಾಸಕರು, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಖೇದದಿಂದ ಹೇಳೀದರು. 

ಅವರು ಉತ್ತರ ಕನ್ನಡದ ಭಟ್ಕಳದಲ್ಲಿ ಸಂಘಟಿಸಿದ ಸೌಹಾರ್ದತೆಗಾಗಿ ಕರ್ನಾಟಕ ಜಿಲ್ಲಾ ಸಮಾವೇಶ ಹಾಗೂ ಕರಾವಳಿ ಜಿಲ್ಲೆಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 

ದೇಶದ ತುಂಬೆಲ್ಲ ಕೇವಲ ಅಪಪ್ರಚಾರ ಮಾಡಿ ಕಛೇರಿಗಳ ಮೇಲೆ ದಾಳಿ, ಭಿನ್ನಾಭಿಪ್ರಾಯ ಹೊಂದಿದವರ ಕೊಲೆ, ಹಲ್ಲೆ ನಡೆಸುವುದು ಹೆಚ್ಚಿದೆ. ರೋಗಿಗಳನ್ನು ಉಪಚರಿಸುವ ವೈದ್ಯರನ್ನು ಥಳಿಸಿದ ಸಂಸದರಿಗೆ ಕೇಂದ್ರದಲ್ಲಿ ಮಂತ್ರಿಪದವಿ ನೀಡಲಾಗಿದೆ. ಉತ್ತರ ಕನ್ನಡದಿಂದ ಆಯ್ಕೆಯಾದ ಕೇಂದ್ರ ಮಂತ್ರಿಗಳು ಹಿಂದೂಗಳ ಕೊಲೆ ನಡೆಯುತ್ತಿÉ್ರಂದು ಬೊಬ್ಬೆ ಹಾಕುತ್ತಿದ್ದಾರೆ. ಅವರಿಗೆ ದೇಶದಲ್ಲಿರುವ ಮುಸ್ಲಿಂ, ದಲಿತ ಸಮುದಾಯದ ವ್ಯಕ್ತಿಗಳ ಕೊಲೆಯಾಗಿರುವುದು ಕಾಣಿಸುತ್ತಿಲ್ಲ. ಬಿಜೆಪಿ ಸಂಘಪರಿವಾರದವರೇ, ಮಹೇಶ ಪೂಜಾರಿ, ಹರೀಶ ಪೂಜಾರಿ, ವಿನಾಯಕ ಬಾಳಿಗಾರನ್ನು ಕೊಂದವರು ಯಾರು? ಏಕೆ ಎನ್ನುವುದನ್ನು ಯಾಕೆ ಈ ಮಂತ್ರಿಗಳು ಹೇಳುತ್ತಿಲ್ಲ. ಭಾರತವನ್ನು ಯಾರಿಗೂ ಗುತ್ತಿಗೆಗೆ ಕೊಟ್ಟಿಲ್ಲ ಎನ್ನುವದನ್ನು ಅವರು ಅರಿತುಕೊಳ್ಳಲಿ. 

ದೇಶ ಭಕ್ತಿ ಎಂದರೆ ಕೇವಲ ದೇಶದಲ್ಲಿರುವ ಗುಡ್ಡ ಬೆಟ್ಟಗಳನ್ನು ಪೂಜಿಸುವುದಲ್ಲ, ಸೈನಿಕರನ್ನು ಹೊಗಳುವುದಕ್ಕೆ ಸೀಮಿತವಲ್ಲ. ದೇಶಭಕ್ತಿ ಎನ್ನುವುದು ದೇಶವಾಸಿಗಳ ಬಗೆಗಿನ ಚಿಂತನೆಗಳನ್ನು ಅವಲಂಬಿಸಿದೆ. 

ಭಾರತದಲ್ಲಿ ರಾಷ್ಟ್ರೀಯತೆಯ ಪದ ಬ್ರಿಟಿಷರ ಕಾಲದಲ್ಲಿ ಉದ್ಭವಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೇ ಬ್ರಿಟಿಷರೊಂದಿಗೆ ಶಾಮೀಲಾಗಿದ್ದವರು ನಮಗೆ ದೇಶಭಕ್ತಿಯ ಪಾಠವನ್ನು ಹೇಳಲು ಆರಂಭಿಸಿದ್ದಾರೆ. ತಮ್ಮ ವೈಫಲ್ಯ ಮುಚ್ಚಿ ಹಾಕಲು, ದೇಶದಲ್ಲಿ ಪ್ರಗತಿಪರರು, ಕಮ್ಯುನಿಷ್ಟರ ಮೇಲೆ ದಾಳಿಯನ್ನು ಶುರುಮಾಡಿದ್ದಾರೆ. ಹಾಗೂ ಕೇರಳದಲ್ಲಿ ಜನರಕ್ಷಾ ಯಾತ್ರೆಯ ಹೆಸರಿನಲ್ಲಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲ ವಿಧದಲ್ಲಿ ಅಸಮಾನತೆ ಹೆಚ್ಚುತ್ತಲೇ ಹೋಗುತ್ತಿದೆ ಎಂದರು. 

ಜನತಾ ವಿದ್ಯಾಲಯದ ಪ್ರಾಂಶುಪಾಲರಾದ ಎ.ಬಿ. ರಾಮರಥ ದೇಶ ಹಾಗೂ ರಾಜ್ಯವನ್ನು ಅರಾಜಕತೆಗೆ ತಳ್ಳುವ ಗುಂಪು ಇಲ್ಲಿ ಸಕ್ರಿಯವಾಗಿದೆ. ತಮ್ಮ ಮಕ್ಕಳನ್ನು ಇಮಥ ವಿಚಾರಗಳಿಂದ ದೂರವಿರಿಸಬೇಕು. ರಾಝ್ಯದಲ್ಲಿ ವೈಚಾರಿಕ ಹತ್ಯೆಯಾಗುತ್ತಿದೆ.  ಇದು ಖಂಡನೀಯ, ಮೌನವಾಗಿರುವ ಸಮಯ ಇದಲ್ಲ ಎಂದರು. 

ಜೆಡಿಎಸ್ ಧುರೀಣ ಇನಾಯತುಲ್ಲಾ ಶಬಂದ್ರಿ ಮಾತನಾಡಿ ಭಟ್ಕಳವನ್ನು ಸದಾ ಸುದ್ದಿಯಲ್ಲಿಡಲು ಬಯಸುವ ಕೆಲವರಿಂದ ಆಗಾಗ ಘರ್ಷಣೆಗಳು ನಡೆಯುತ್ತಿವೆ. ಆದರೆ ನಾವು ಅದನ್ನು ತಣ್ಣಗೆ ಮಾಡಲು ಸಾಕಷ್ಟು ಶ್ರಮಿಸುತ್ತಿದ್ದೇವೆ. ಇನ್ನು ಮುಂದೆ ನಾವು ನೀವೆಲ್ಲರೂ ಸೇರಿ ಐಕ್ಯತೆಯಿಂದ ಈ ಶಾಂತಿ ಕದಡುವವರಿಗೆ ಉತ್ತರಿಸೋಣ ಎಂದರು.  ಭಟ್ಕಳ ಶಿಕ್ಷಣ ಸಂಸ್ಥೆಗಳ ಹಿರಿಯರಾದ ತಲ್ಹಾ ಸಿದ್ದಿ ಬಾಪಾ ಸಾಂದರ್ಭಿಕವಾಗಿ ಮಾತನಾಡಿ, ದೇಶದ ಜನರನ್ನು ನಿರ್ಲಕ್ಷಿಸಿ ಪ್ರಗತಿ ಸಾಧ್ಯವಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕೆ ಅವರ ಸೌಭಾಗ್ಯಕ್ಕೆ ಜಿಎಸ್.ಟಿ ಮತ್ತು ನೋಟು ಅಮಾನ್ಯಿಕರಣವಾಗಿದೆ. ರಾಷ್ಟ್ರವೆಂದರೆ ಒಂದು ಚಿಂತನೆಯ ಅಥವಾ ಒಂದು ಧರ್ಮದ್ದಲ್ಲ. ರಾಷ್ಟ್ರದ ಅಭಿವೃದ್ಧಿ ಮುಂದೆ ಸಾಗಲು ಚಿಂತಕರು, ಸೈನಿಕರು, ವಿಜ್ಞಾನಿಗಳು, ಜನತೆ ಕೆಲಸ ಮಾಡುತ್ತಿದ್ದಾರೆ. ಬಾರತ ಎಂದೆಂದಿಗೂ ಶಾಂತಿಪ್ರಿಯವಾಗಿಯೇ ಇರುತ್ತದೆ, ಸೌಹಾರ್ದ ಕರ್ನಟಕ ಮಾನವ ಸರಪಳಿ ಯಶಸ್ವಿಗೆ ಕೆಲಸ ಮಾಡುತ್ತೇವೆ ಎಂದರು. 

ಕರ್ನಾಟಕ ಪ್ರಾಂತ ರೈತ ಸಂಘದ ಶಾಂತಾರಾಮ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕೆ. ಶಂಕರ ಉಪಸ್ಥಿತರಿದ್ದರು. ಯಮುನಾ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು. ಅಂಜುಮನ್ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಆರ್.ಎಸ್. ನಾಯಕ ಸ್ವಾಗತಿಸಿದರು. ಪತ್ರಕರ್ತರಾದ ಆರ್. ಮಾನ್ವಿ ಮಾತನಾಡಿ, ದೇಶಕೆ ಬೆಂಕಿ ಹಾಕುವವರ ಮಧ್ಯೆ ನಾವು ಬೆಂಕಿ ನಂದಿಸುವ ಕೆಲಸ ಮಾಡಬೇಕಾಗಿದೆ. ಸಮಾಜವನ್ನು ಅರಾಜಕತೆಗೆ ಕೊಂಡೊಯ್ಯುವ ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದಿಗಳು ಸಕ್ರಿಯವಾಗಿದ್ದಾರೆ. ನಾವು ಇದಕ್ಕೆ ಉತ್ತರವಾಗಿ ಶಾಂತಿಯ ಸಂದೇಶವನ್ನು ರವಾನಿಸೋಣ ಎಂದರು ಹೇಳಿ ಎಲ್ಲರನ್ನು ವಂದಿಸಿದರು. ಸಭೆಯಲ್ಲಿ ಜಿಲ್ಲೆಯ ಕಾರ್ಮಿಕ, ರೈತ, ದಲಿತ, ಮಹಿಳಾ ಹಾಗೂ ಅಲ್ಪಸಂಖ್ಯಾತ ಸಂಘಟನೆಗಳ ಮುಖಂಡರು ಮತ್ತು ಸಾಹಿತಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.