Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಯಶಸ್ವಿ ಕಾರ್ಮಿಕ ಜಾಗೃತಿ ಜಾಥಾ-ಕೆಲವು ಅನುಭವಗಳು

ಸಂಪುಟ: 
11
ಸಂಚಿಕೆ: 
37
date: 
Sunday, 3 September 2017

 

ಕರ್ನಾಟಕದ ಜಲಿಯಾನ್ ವಾಲಾಬಾಗ್ ಎಂದು ಪ್ರಸಿದ್ಧವಾದ ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಥದಲ್ಲಿ ಸರಳವಾಗಿ, ಅಲ್ಲಿಯ ಹುತಾತ್ಮರ ಸ್ಪೂರ್ತಿಯೊಂದಿಗೆ ಆರಂಭವಾಗಿ ಅಗಸ್ಟ್ 13 ರಂದು ಕೊನೆಗೊಂಡ ರಾಜ್ಯವ್ಯಾಪಿ ಕಾರ್ಮಿಕ ಜಾಗೃತಿ ಜಾಥಾ ಸುಮಾರು 4200 ಕಿ.ಮೀ.ಗಳನ್ನು ಕ್ರಮಿಸಿ, 15 ದಿನಗಳಲ್ಲಿ ಒಟ್ಟು 29 ಜಿಲ್ಲೆಗಳಲ್ಲಿ 52 ಸ್ಥಳಗಳನ್ನು ಮತ್ತು 15 ಸಾವಿರ ಕಾರ್ಮಿಕರನ್ನು ಮುಟ್ಟಿತ್ತು. 52 ಸ್ಥಳಗಳಲ್ಲಿ ಸಭೆಗಳನ್ನು ನಡೆಸಲು ಸಾಧ್ಯವಾಯಿತು. 29 ಸ್ಥಳಗಳಲ್ಲಿ ನಾಟಕವನ್ನು ಪ್ರದರ್ಶಿಸಲಾಯಿತು. ಕರ್ನಾಟಕ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಮತ್ತು ಹೋರಾಟಗಳನ್ನು ನೆನಪಿಸಿಕೊಳ್ಳುತ್ತಾ ಮುಂದಿನ ಹೋರಾಟಕ್ಕೆ ಸಜ್ಜುಗೊಳಿಸಲು ಇದರಿಂದ ನೆರವಾಗಿದೆ. ಜಾಥಾದ ಕೆಲವು ಮರೆಯಲಾರದ ಅನುಭವಗಳು:

*    ಚಾಮರಾಜನಗರದಲ್ಲಿ 10-15 ವರ್ಷಗಳಿಂದೀಚಿಗೆ ಬಂದ ಅಂಗನವಾಡಿ, ಬಿಸಿಯೂಟ ಮಹಿಳೆಯರು ವಾಹನ ಇಳಿಯುತ್ತಿದ್ದಂತೆ ಮುಗಿಲು ಮುಟ್ಟುವ ಘೋಷಣೆಗಳು. ಹೂವಿನ ಸುರಿಮಳೆ ಮತ್ತು ಸಂಗಾತಿಗಳ ಅಪ್ಪುಗೆ ಎಲ್ಲವೂ ರೋಮಾಂಚನಕಾರಿಯಾಗಿತ್ತು. ಬೆಳಿಗ್ಗೆ 10-00ಗಂಟೆಗೆ ಆ ಮಹಿಳೆಯರು ದೂರ ದೂರ ತಾಲ್ಲೂಕು ಮತ್ತು ಹಳ್ಳಿಗಳಿಂದ ಬರಬೇಕೆಂದರೆ ಎಷ್ಟೊತ್ತಿಗೆ ಅವರ ಮನೆ ಬಿಟ್ಟಿರಬಹುದು?

*    ``ನಿದ್ದೆಯು ನಮಗಿಲ್ಲ ಎದ್ದೇಳಿ’’ ಎಂಬ ನಾಟಕವನ್ನು ಹನುಮಂತು, ಶೃತಿ, ಮೋನಿಷಾ, ಬಸವರಾಜಕಮ್ಮಾರ, ವಿಜಿ ಮತ್ತು ಈರಪ್ಪರವರು ಅಚ್ಯುತರವರ ನಿರ್ದೇಶನದಲ್ಲಿ 2 ದಿನದಲ್ಲಿ ನಾಟಕ ಕಲಿತ ವಿದ್ಯಾರ್ಥಿಗಳು. ಎಲ್ಲರೂ ಉನ್ನತ ಪದವಿಗಳನ್ನು ಓದುತ್ತಿದ್ದವರು. 20 ದಿನಗಳ ಕಾಲ ಮನೆ ಬಿಟ್ಟು ನಮ್ಮೊಟ್ಟಿಗಿದ್ದ ಸಂಗಾತಿಗಳು. ಇವರ ನಾಯಕ ಬಸವರಾಜ ಪೂಜಾರ. ಇವರದ್ದು ಒಂದೆಡೆ ನಾಟಕ ಮತ್ತೊಂದೆಡೆ ಸಾಮಾಜಿಕ ಜಾಲತಾಣ ನಿರ್ವಹಣೆಯ ಕೆಲಸ. ಇಡೀ ಜಾಥಾವನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ.

*    ಈ ನಾಟಕ ಹಾಸನದಲ್ಲಿ ಮಾಡುವಾಗ ಗುತ್ತಿಗೆ ಕಾರ್ಮಿಕನಿಗೆ ಮಗಳನ್ನು ಕೊಡುವುದಿಲ್ಲವೆಂದು ಅವನನ್ನು ಹೀನಾಯಿಸಿದ ದೃಶ್ಯದಿಂದ ಒಬ್ಬ ಮಹಿಳೆ ಅತ್ತುಕೊಂಡು ನನ್ನ ಮಗಳನ್ನು ಹೀಗೇ ಸಾಯಿಸಿದರು. ಅವನನ್ನು ಸಾಯಿಸಬೇಡಿ ಎಂದು ಕಣ್ಣೀರು ಹಾಕಿದ್ದು, ಇದೇ ದೃಶ್ಯದಲ್ಲಿ ಚಪ್ಪಲಿಯಿಂದ ಹೊಡೆಯುತ್ತಿದ್ದವನಿಗೆ ಒಂದು ಮಗು ಅದನ್ನು ತಡೆಯಲು ಕುಳಿತಲ್ಲಿಂದಲೇ ಪ್ರಯತ್ನ ಮಾಡಿದ್ದು, ಗಂಗಾವತಿಯಲ್ಲಿ ಕಡು ಬಡವಿ ಮುಸ್ಲಿಂ ಮಹಿಳೆ ತನ್ನ ಹರಿದ ಬುರ್ಕಾ ತೊಟ್ಟಿದ್ದರೂ 50 ರೂ.ಗಳ ದೇಣಿಗೆ ನೀಡಿದ್ದು, ಹೆಚ್ಚು ಕಡಿಮೆ ಹುಮ್ನಾಬಾದ್ ಪ್ರದೇಶದ ಎಲ್ಲಾ ಜಿಲ್ಲೆಗಳ ನೌಕರರು ಭಾವನಾತ್ಮಕವಾಗಿ ಆ ನಾಟಕಕ್ಕೆ ಸ್ಪಂಧಿಸಿ ಅವರೊಟ್ಟಿಗೆ ಘೋಷಣೆಗಳನ್ನು ಕೂಗುತ್ತಾ ಇದ್ದದ್ದು ನಾಟಕವನ್ನು ಜೀವಂತವಾಗಿಡುವಲ್ಲಿ ಯಶಸ್ವಿಯಾಯಿತು.

*    ಅಂದು ರಾತ್ರಿ ಸಿಂಧಗಿಯಲ್ಲಿ ರಾತ್ರಿಯೂಟ. ಸಿಂಧಗಿ ಪ್ರವಾಸಿ ಮಂದಿರ ತಲುಪಿದಾಗ ರಾತ್ರಿ 10 ಗಂಟೆ. ಆ ರಾತ್ರಿಯಲ್ಲೂ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ ನೌಕರರು 7.30ಕ್ಕೆ ಅಡುಗೆ ತಯಾರಿಸಿ ಕಾದು ಸುಣ್ಣವಾಗಿದ್ದರು. ನಮ್ಮನ್ನು ಕಂಡ ಕೂಡಲೇ ಸಂಭ್ರಮ ಎದ್ದು ಕಾಣುತ್ತಿತ್ತು.

ಸಿಂಧಗಿಯಂತಹ ಹಿಂದುಳಿದ ತಾಲ್ಲೂಕಿನಲ್ಲಿ ಅದು ಪ್ರವಾಸಿ ಮಂದಿರ ಬಳಿ, ನಡುರಾತ್ರಿಯ ಮಳೆ, ಮಹಿಳೆಯರು ಈ ಎಲ್ಲಾ ಸಂಪ್ರಾದಾಯಗಳನ್ನು ಕಿತ್ತೆಸೆದಿದ್ದರು.

*    ವಿಜಯಪುರ, ಜಿಲ್ಲೆಯ ಪೊಲೀಸರು ಸಭೆಗೆ ಹಾಕಿದ ಕುರ್ಚಿಗಳನ್ನು ಎತ್ತಲು ಮುಂದಾದಾಗ ಅದನ್ನು ಖಂಡಿಸಿ ರಸ್ತೆಯಲ್ಲಿ ಕುಳಿತು ನಾಟಕ, ಭಾಷಣಗಳನ್ನು ಮಾಡಲಾಯಿತು.

*    ಪ್ಲಾಂಟೇಶನ್ ಕಾರ್ಮಿಕರೇ ವಾಸಿಸುವ ಸಂತವೇರಿ ಗ್ರಾಮದಲ್ಲಿ ಸಭೆ. ಊರಿಗೆ ಊರೇ ಈ ಸಭೆಯನ್ನು ಯಶಸ್ಸು ಮಾಡಲು ಶೃಂಗಾರಗೊಂಡಿತ್ತು. ಅಲ್ಲಿಯ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಹಿಡಿದು ಊರಿನ ಸಮಸ್ತ ಜನತೆ ಪಾಲ್ಗೊಂಡಿದ್ದು ನಮ್ಮ ಜಾಥಾಕ್ಕೆ ಹೆಚ್ಚಿನ ಪ್ರೇರಣೆ ಕೊಟ್ಟಿದ್ದು ಮಾತ್ರವಲ್ಲ ಅವರು ಈ ಜಾಥಾವನ್ನು ಸ್ವೀಕರಿಸಿದ್ದು

``ನಮ್ಮ ಬದುಕನ್ನು ಹಸನು ಮಾಡುವ ಜಾಥಾ’’ ಆಗಿ.

*     ಕುಂದಾಪುರ ನಗರ ಪ್ರಾರಂಭದ ಸ್ಥಳದಿಂದ ನೂರಾರು ಬೈಕ್‍ಗಳು, ಘೋಷಣೆಗಳು ವರ್ಣರಂಜಿತವಾಗಿತ್ತು. ಸುಮಾರು 2 ಕಿ.ಮೀ. ಬೈಕ್ ಜಾಥಾ ಮಾಡಿ ಬಹಿರಂಗ ಸಭೆಯನ್ನು ನಡೆಸಲಾಯಿತು. ಈ ಸಭೆ ಜಾಥಾದ ಸಮಾರೋಪ ಸಭೆಯಾದ್ದರಿಂದ ಮಾರನೇ ದಿನ ಆಗಸ್ಟ್ 14 ರ ಕಾರ್ಯಕ್ರಮ, ಕೃಷ್ಣಾಷ್ಟಮಿಯಿದ್ದರೂ ಕೂಡಾ ಸಂಗಾತಿಗಳು ಟೈಲ್ಸ್, ಕಟ್ಟಡ, ಬೀಡಿ, ಬಿಸಿಯೂಟ, ಅಂಗನವಾಡಿ, ಆಶಾ, ಗೋಡಂಬಿ, ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರು, ಕೆಪಿಟಿಸಿಎಲ್, ಆಟೋಚಾಲಕರು ಇನ್ನೂ ಮುಂತಾದ ಕಾರ್ಮಿಕರು ಸೇರಿದ್ದರು.

 

 

ಎಸ್.ವರಲಕ್ಷ್ಮಿ