ಎಡಪಂಥೀಯರು ಲಿಂಗಾಯತ ಸ್ವತಂತ್ರ ಧರ್ಮ ಎಂಬುದಕ್ಕೆ ಒತ್ತಾಸೆಯಾಗಿ ನಿಲ್ಲಬೇಕು

ಸಂಪುಟ: 
11
ಸಂಚಿಕೆ: 
37
Sunday, 3 September 2017

(ಒಂದು ಪ್ರತಿಕ್ರಿಯೆ)

ಸ್ವತಂತ್ರ ಧರ್ಮವಾಗಿ ಲಿಂಗಾಯತವು ವಚನಕಾರರ ಮೌಲ್ಯಗಳ ಪರವಿರುತ್ತಾ? ಲೇಖನದಲ್ಲಿ ಡಾ. ರಾಜೇಂದ್ರ ಚೆನ್ನಿ ಅವರು ಕೆಲವು ಮೂಲಭೂತ ಪ್ರಶ್ನೆಗಳನ್ನು ತಮ್ಮ ಸ್ವಂತ ಅನುಭವದ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ಲಿಂಗಾಯತವು ಇಂದಿಗೂ ತನ್ನೆಲ್ಲ ಮಿತಿಗಳಲ್ಲಿ ವಚನ ಮೌಲ್ಯಗಳನ್ನು ಬದುಕುತ್ತಿದೆ. ಸಮಸ್ಯೆಯಿರುವುದು ವೀರಶೈವದಲ್ಲಿ ಮತ್ತು ಅದಕ್ಕೆ ತಲೆಬಾಗಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಎಂಬ ಸಂಸ್ಥೆಯಲ್ಲಿ.

ಸರಳವಾದ ಸಂಗತಿಯೆಂದರೆ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೆ ಎಂದು ಒಪ್ಪಿಕೊಂಡರೆ ಆಗ ಅದಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ದೊರೆಯುತ್ತದೆಯೋ ಇಲ್ಲವೋ ಅನ್ನುವುದಕ್ಕಿಂತ ಅದನ್ನು ಮಂಡಿಸಲು ಸಾಧ್ಯವೆ ಎಂಬುದನ್ನು ಯೋಚಿಸಬೇಕು. ಸ್ವತಂತ್ರ ಧರ್ಮದ ಸ್ಥಾನವನ್ನು ತಪ್ಪಿಸಬೇಕು ಎಂಬುದೇ ಮಹಾಸಭೆಯ ಘನ ಉದ್ದೇಶವಾಗಿದೆ. ಸನಾತನ ಧರ್ಮವೆಂದು ಹೇಳಿಕೊಳ್ಳುತ್ತಿರುವ ವೀರಶೈವದ ಜೊತೆಗೂಡಿದರೆ ಸ್ವತಂತ್ರ ಧರ್ಮದ ಸ್ಥಾನವನ್ನು ಹೇಗೆ ಒತ್ತಾಯಿಸುತ್ತೀರಿ? ಇದು ಸಾಧ್ಯವಿಲ್ಲ. ಇಂದು ನಾವು ಯಾವುದನ್ನು ಎಡಪಂಥೀಯ ಚಿಂತನೆ ಎಂದು ಕರೆಯುತ್ತಿದ್ದೇವೆಯೋ ಅದರ ಎಳೆಗಳನ್ನು ಲಿಂಗಾತಯತದಲ್ಲಿ ಕಾಣಬಹುದು. ಆದ್ದರಿಂದಲೇ ನಾಡಿನ ಎಡಪಂಥೀಯರು ಲಿಂಗಾಯತ ಸ್ವತಂತ್ರ ಧರ್ಮ ಎಂಬುದಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ ಮತ್ತು ನಿಲ್ಲಬೇಕು. 

 

- ಪ್ರೊ.. ಟಿ. ಆರ್. ಚಂದ್ರಶೇಖರ