Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಲಿಂಗಾಯತ ಸ್ವತಂತ್ರ ಧರ್ಮ : ಚರ್ಚೆ

ಸಂಪುಟ: 
11
ಸಂಚಿಕೆ: 
37
Sunday, 3 September 2017
ಜನಶಕ್ತಿಯ ಸಂಚಿಕೆ 33 (ಅಗಸ್ಟ್ 7-13, 2017) ಸಂಚಿಕೆಯಲ್ಲಿ ಅತಿಥಿ ಅಂಕಣದಲ್ಲಿ ಪ್ರೊ. ರಾಜೇಂದ್ರ ಚೆನ್ನಿ ಅವರು ಬರೆದ
“ಲಿಂಗಾಯತ ಸ್ವತಂತ್ರ ಧರ್ಮ ವಚನಕಾರರ ಮೌಲ್ಯಗಳ ಪರವಿರುತ್ತಾ?” ಎಂಬ ಲೇಖನಕ್ಕೆ  ಮತ್ತು
ಈ ವಿಷಯದ ಚರ್ಚೆಯನ್ನು ಮುಂದೊಯ್ಯುವ ಎರಡು ಬರಹಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯೆ ಮತ್ತು ಚರ್ಚೆಗೆ ಇನ್ನಷ್ಟು ಬರಹಗಳನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ಜನ ಏನಂತಾರೆ?  - ಲಿಂಗರಾಜು ಮಳವಳ್ಳಿ

‘ಲಿಂಗಾಯತ ಸ್ವತಂತ್ರ ಧರ್ಮ’ ಎಂಬ ಕೂಗು ಕೆಲ ಮಠಾಧೀಶರ ಅಥವಾ ಕೆಲ ರಾಜಕಾರಣಿಗಳ ಗಂಟಲು ಹರಿತದಿಂದಾಗಿ ಬಂದಿದೆಯೇ ವಿನಃ ಜನರಿಂದ ಬರುತ್ತಿರುವ ಕೂಗಲ್ಲ ಎಂಬ ತೇಪೆಯ ವಾದವೂ ಇದೆ. ಹಾಗಿದ್ದರೆ ವಾಸ್ತವವೇನು? ಎಂಬ ಪ್ರಶ್ನೆಗೆ ಈಚೆಗೆ ನಡೆದ ಒಂದೆರಡು ನಿದರ್ಶನಗಳು ಉತ್ತರವಾಗಬಲ್ಲವು.

ಹನ್ನೆರಡನೇ ಶತಮಾನ ಕರುನಾಡು ಕಂಡ ಸುವರ್ಣಯುಗ. ಅಂದು ಮನುಷ್ಯ ವಿರೋಧಿ ಹಿಂದೂ ಆಚರಣೆಗಳ ವಿರುದ್ಧ ಕ್ರಾಂತಿಕಿಡಿ ಹೊತ್ತಿಸಿದ ‘ಬಸವತತ್ವ’ ಕಾಲಾನಂತರದಲ್ಲಿ ವೈದಿಕದ ದಾಳಿಗೆ ಸಿಲುಕಿ ‘ಬಸವ’ ದೇವನಾಗಿ, ವಿರೂಪಗೊಂಡ ‘ತತ್ವ’ ಜಾತಿಯಾಗಿ ಪಲ್ಲಟಗೊಂಡಿದ್ದು ಈಗ ಇತಿಹಾಸ. ರಾಜ್ಯದಲ್ಲೀಗ ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ; ಅದೊಂದು ವೈಚಾರಿಕತೆ, ಮಾನವೀಯತೆ ಹಾಗು ಶ್ರಮಸಂಸ್ಕøತಿ ಸಿದ್ಧಾಂತದ ಮೇಲೆ ನಿಂತ ಒಂದು ಸ್ವತಂತ್ರ ಧರ್ಮ ಎಂಬ ಚರ್ಚೆ ಸ್ಪೋಟಗೊಂಡು ಚಳವಳಿ ಸ್ವರೂಪ ಪಡೆಯುತ್ತಿರುವುದು ಸ್ಪಟಿಕದಷ್ಟೇ ಸತ್ಯ. ಬೆಳಗಾವಿಯಲ್ಲಿ ಸೇರಿದ ಜನಸ್ತೋಮವೇ ಇದಕ್ಕೆ ಸಾಕ್ಷಿ. ಸಂವಿಧಾನಕ್ಕೆ ತಿದ್ದಪಡಿ ತಂದು ಬಸವಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ಕೂಗು ಕೆಲ ಮಠಾಧೀಶರ ಅಥವಾ ಕೆಲ ರಾಜಕಾರಣಿಗಳ ಗಂಟಲು ಹರಿತದಿಂದಾಗಿ ಬಂದಿದೆಯೇ ವಿನಃ ಜನರಿಂದ ಬರುತ್ತಿರುವ ಕೂಗಲ್ಲ ಎಂಬ ತೇಪೆಯ ವಾದವೂ ಇದೆ. ಹಾಗಿದ್ದರೆ ವಾಸ್ತವವೇನು? ಎಂಬ ಪ್ರಶ್ನೆಗೆ ಈಚೆಗೆ ನಡೆದ ಒಂದೆರಡು ನಿದರ್ಶನಗಳು ಉತ್ತರವಾಗಬಲ್ಲವು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅರೆಕೆರೆ ಎಂಬಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭಾ’ ಬೊಮ್ಮನಹಳ್ಳಿ ವಿಧಾನಸಭಾ ಘಟಕ ಕಳೆದ ಎಂಟು ವರ್ಷಗಳಿಂದ ‘ಆದಿ ಜಗದ್ಗುರು ರೇಣುಕಾರ್ಯರ ಯುಗಮಾನೋತ್ಸವ ಹಾಗು ಬಸವಜಯಂತಿ’ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ. ಮಹಾಸಭಾದ ಪದಾಧಿಕಾರಿಗಳ ಪ್ರಕಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಐವತ್ತು ಸಾವಿರಕ್ಕಿಂತಲೂ ಹೆಚ್ಚು ವೀರಶೈವ ಜನಸಂಖ್ಯೆ ಇದೆ. ಹೆಚ್ಚು ಕಡಿಮೆ ಇರಲೂಬಹುದು. ಪ್ರತಿವರ್ಷ ಈ ಕಾರ್ಯಕ್ರಮದಲ್ಲಿ ಎರಡರಿಂದ ಮೂರು ಸಾವಿರ ಜನ ಸೇರುತ್ತಿದ್ದ ದಾಖಲೆಯೂ ಇವರ ಬಳಿ ಇದೆ.

ಇತ್ತೀಚಿಗೆ 8ನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ಪ್ರಮುಖ ಹಾಗು ಪ್ರಭಾವಿ ಮಠಗಳ ಸುತ್ತೂರು ಶ್ರೀ, ಮರಳೆಗವಿ ಮಠ ಹಾಗು ವಿಭೂತಿಪುರ ಮಠದ ಶ್ರೀಗಳು ಭಾಗವಹಿಸಿದ್ದರು. ಆಹ್ವಾನಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವ ಹಾಗು ವೀರಶೈವ ಸಮಾಜದ ಮುಖಂಡ ವಿ.ಸೋಮಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಹಾಗು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ ಜ್ಯೋತಿಪ್ರಕಾಶ್ ಮಿರ್ಜಿ, ಇದೇ ಕ್ಷೇತ್ರ ಮತ್ತು ಪಕ್ಕದ ಕ್ಷೇತ್ರದ ಶಾಸಕರಾದ ಸತೀಶ್‍ರೆಡ್ಡಿ ಹಾಗು ಎಂ.ಕೃಷ್ಣಪ್ಪ ಸೇರಿದಂತೆ ಮೂರು ಜನ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರು ಹೀಗೆ ಘಟನಾಘಟಿಗಳ ಹೆಸರುಗಳಿದ್ದವು. ಯಡಿಯೂರಪ್ಪ ಹಾಗು ಅನಂತಕುಮಾರ್ ಹೊರತುಪಡಿಸಿ ಉಳಿದೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರೆಲ್ಲ ಇದ್ದಾಗಿಯೂ ಅಲ್ಲಿ ನೆರೆದಿದ್ದ ಜನರ ಸಂಖ್ಯೆ 250 ಮೀರಿರಲಿಲ್ಲ ಎನ್ನುವುದು ವಾಸ್ತವ.

ಈ ಬಗ್ಗೆ ಸಂಘದ ಪದಾಧಿಕಾರಿಯೊಬ್ಬರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ‘ಪ್ರತಿವರ್ಷ  ಎರಡರಿಂದ ಮೂರು ಸಾವಿರ ಜನ ಸೇರುತ್ತಿದುದು ಹೌದು. ಆದರೆ ಈ ಬಾರಿ ಸಂಖ್ಯೆ ತೀರ ಕಡಿಮೆ ಆಯ್ತು. ಲಿಂಗಾಯತ-ವೀರಶೈವ ಒಡಕೇ ಇದಕ್ಕೆ ಮೂಲ ಕಾರಣ’ ಎನ್ನುತ್ತಾರೆ. ಹಾಗೆ ಅವರು ಮುಂದುವರಿದು ಮೊದಲಿಗೆ ‘ನಮ್ಮ ಸಮಾಜ’ದ ಜನರನ್ನು ಸಭೆಗೆ ಆಮಂತ್ರಿಸುವುದು ಹೇಗೆಂಬ ಗೊಂದಲ ಮೂಡಿತ್ತು. ಅಂದರೆ ವೀರಶೈವರೋ ಅಥವಾ ಲಿಂಗಾಯತರೋ ಎಂದು ಕಂಡು ಹಿಡಿಯುವುದು ಹೇಗೆಂಬ ಚಿಂತೆ ನಮ್ಮನ್ನು ಕಾಡಿತ್ತು. ಈ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆಯೂ ನಡೆಯಿತು. ಕೊನೆಗೊಂದು ಪರಿಹಾರ ಸೂತ್ರ ಕಂಡುಕೊಂಡು ಅದರಂತೆ ನಾವೇ ಮುಂದಾಗಿ “ನೀವು ಲಿಂಗಾಯತರೋ ಅಥವಾ ವೀರಶೈವರೋ” ಎಂದು ಪ್ರಶ್ನಿಸಿದೆವು. ಆದರೆ ಬಹುತೇಕರು ‘ಅದೆಲ್ಲಾ ಯಾಕೆ?, ಕಾರ್ಯಕ್ರಮಕ್ಕೆ ಕರೀತ್ತೀದ್ದೀರಿ, ಬರ್ತೇವೆ’ ಎಂದಷ್ಟೇ ಹೇಳಿ ಗುಟ್ಟು ಬಿಟ್ಟುಕೊಡಲಿಲ್ಲ, ಈಗ ನೋಡಿ ಸುತ್ತೂರು ಸ್ವಾಮಿಗಳು ಜನರಿಗಾಗಿ ಕಾಯುವ ಸ್ಥಿತಿ ಬಂತು’ ಎಂದು ಬೇಸರಿಸಿದರು. ಇದಾದ ಮೂರು ದಿನಗಳ ನಂತರ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವೀರಶೈವ ಸಮಾಜದ ಸಮಾವೇಶ ನಡೆಯಿತು. ಇಲ್ಲಿಗೆ ಪಂಚಪೀಠದ ರಂಭಾಪುರಿ ಶ್ರೀಗಳು ಸಾನಿಧ್ಯ ವಹಿಸಿದ್ದರೂ ಇಲ್ಲಿಯೂ ಜನರ ಸಂಖ್ಯೆ 250 ಮುಟ್ಟಲಿಲ್ಲ.

ಅಂದರೆ ಲಿಂಗಾಯತ-ವೀರಶೈವ ವಿಭಜನೆಯ ಚರ್ಚೆ ಕೇವಲ ಮೇಲ್ಮಟ್ಟದ ಒಣ ಚರ್ಚೆಯಾಗುಳಿಯದೇ ವಾಸ್ತವದಲ್ಲಿ ಇಬ್ಬಾಗ ಆಗಿರುವುದನ್ನು ಅಲ್ಲಿ ಖಾಲಿ ಇದ್ದ ಖುರ್ಚಿಗಳೇ ಹೇಳುತ್ತಿದ್ದವು. ಹಾಗೆಯೇ ಸಮುದಾಯದ ಬಹುಸಂಖ್ಯಾತ ಜನ ವೀರಶೈವಕ್ಕೆ ವಿರುದ್ಧವಾಗಿರುವುದೂ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಜತೆಗೆ ಸಂಘಟಿತ ಪ್ರಯತ್ನ ಎಂಬುದು ಒತ್ತಟ್ಟಿಗಿದ್ದರೂ, ಬೆಳಗಾವಿಯಲ್ಲಿ ಸಂಘಟಿಸಲಾದ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಭಾಗವಹಿಸಿರುವುದು ಕಡ್ಡಿ ಮುರಿದಂತಿದೆ.