Error message

 • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
 • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ನೋಟು ನಿಷೇಧ: ಸೀತಾರಾಂ ಯೆಚುರಿ ಅವರ 14 ಪ್ರಶ್ನೆಗಳು

ಸಂಪುಟ: 
37
ಸಂಚಿಕೆ: 
11
date: 
Sunday, 3 September 2017
Image: 

ರಿಸರ್ವ್ ಬ್ಯಾಂಕಿನ ಮಾಹಿತಿಯ ಪ್ರಕಾರವೇ ನೋಟು ನಿಷೇಧದ ಸಂಪೂರ್ಣ ವೈಫಲ್ಯದ ಹಿನ್ನೆಲೆಯಲ್ಲಿ ಕಾ. ಸೀತಾರಾಂ ಯೆಚುರಿ ಅವರು ಒಂದು ಪತ್ರಿಕಾ ಗೋಷ್ಟಿ ಕರೆದು 14 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಅವರು ಮೋದಿ ಸರಕಾರದಿಂದ ಉತ್ತರಕ್ಕೆ ಒತ್ತಾಯಿಸಿದ್ದಾರೆ :

 1.  ನೋಟು ನಿಷೇಧದ ನಿರ್ಣಯ ತೆ ಗೆದುಕೊಂಡಿದ್ದು ಯಾರು (ಪ್ರಧಾನಿ ಮೋದಿಯವರೇ)? ಇದರಿಂದಾಗಿಯೇ ಆಗಿನ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಂ ರಾಜನ್ ರಾಜಿನಾಮೆ ಕೊಡಬೇಕಾಯಿತೇ?
 2.  ಪ್ರಧಾನಿ ಘೋಷಣೆಯಿಂದಾಗಿ ತಮ್ಮದೇ ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಪಡೆಯಲು ಕ್ಯೂಗಳಲ್ಲಿ ನಿಂತು 100ಕ್ಕೂ ಹೆಚ್ಚು ಜನ ಸತ್ತರು. ಇದಕ್ಕೆ ಯಾರು ಜವಾಬ್ದಾರರು? ಇದಕ್ಕೆ ಏಕೆ ಪರಿಹಾರ ಕೊಡಲಿಲ್ಲ? ಇದರ ಬಗ್ಗೆ ಎಫ್.ಐ.ಆರ್. ಇದೆಯೇ?
   
 3.  ಭೂತಾನ್, ನೇಪಾಳ, ಮತ್ತು ಸಹಕಾರಿ ಬ್ಯಾಂಕುಗಳ ಬಳಿ ಇರುವ ನೋಟುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ನಿಷೇಧಕ್ಕೆ ಒಳಗಾದ ಒಟ್ಟು ನೋಟುಗಳ ಮೌಲ್ಯಕ್ಕಿಂತ ಹೆಚ್ಚು ನೋಟುಗಳು ವಾಪಸು ಬರುತ್ತವೆಂದು ವರದಿಯಾಗಿದೆ. ಇದನ್ನು ನೋಡಿದರೆ ನೋಟು ನಿಷೇಧ ಕಪ್ಪು ಹಣವನ್ನು ಬಿಳಿಯಾಗಿಸುವ ಯೋಜನೆಯಂತೆ ಕಾಣುವುದಿಲ್ಲವೇ?
   
 4.  ಬಂಗಾಳದಲ್ಲೂ ಮತ್ತು ಇತರೆಡೆಗೂ, ಬಿಜೆಪಿ ಸದಸ್ಯರು ಭಾರಿ ಪ್ರಮಾಣದ ಹಣವನ್ನು ನೋಟು ನಿಷೇಧದ ಸ್ವಲ್ಪ ಮೊದಲು ಬ್ಯಾಂಕುಗಳಿಗೆ ತುಂಬಿದರು ಎಂಬುದಾಗಿ ತಿಳಿದು ಬಂದಿದೆ. ಆದ್ದರಿಂದ ಇದು ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣವಲ್ಲವೇ? ಪ್ರಧಾನಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಎಷ್ಟು ಸಾಚಾ ಎಂದು ಇದರಿಂದ ತಿಳಿಯುತ್ತದಲ್ಲವೇ?
   
 5.  ನವೆಂಬರ್ 8, 2016 ರಂದು (ನೋಟು ನಿಷೇಧ ಘೋಷಣೆಯಾದಂದು) ಡಿಜಿಟಲೀಕರಣದ ಬಗ್ಗೆ ಪ್ರಸ್ತಾಪವೇ ಇರಲಿಲ್ಲ. ಆರ್ಥಿಕತೆ ಕುಸಿಯಿತು. ‘ಡಿಜಿಟಲೀಕರಣ’ದ ನೆಪದಲ್ಲ್ಲಿ ಸರಕಾರ ಕೆಲವು ಖಾಸಗಿ ಕಂಪನಿಗಳ ನೆರವಿಗೆ ಧಾವಿಸಿತು. ಒಂದು ಖಾಸಗಿ ಕಂಪನಿಯ (ಪೇ ಟಿ.ಎಂ.)ಇಡೀ ಪುಟದ ಜಾಹೀರಾತಿನಲ್ಲಿ ಸ್ವತಃ ಕಾಣಿಸಿಕೊಂಡರು. ಏಕೆ? ಇದು ಅಂತರ್ರಾಷ್ಟ್ರೀಯ ಮತ್ತು ದೇಶೀಯ ಕಂಪನಿಗಳಿಗೆ ಲಾಭದ ಸುಗ್ಗಿ ಒದಗಿಸಲಿಕ್ಕಾಗಿ ಅಲ್ಲವೇ?
   
 6.  ರಾಷ್ಟ್ರೀಕೃತ ಬ್ಯಾಂಕುಗಳಿಂದ ಭಾರೀ ಮೊತ್ತದ (ಒಂದು ಅಂದಾಜಿನ ಪ್ರಕಾರ ರೂ. 11 ಲಕ್ಷ ಕೋಟಿ) ಸಾಲ ಪಡೆದು ಪಾವತಿ ಮಾಡಲು ನಿರಾಕರಿಸುತ್ತಿದ್ದ ಕಾರ್ಪೊರೆಟ್ ಕಂಪನಿಗಳನ್ನು ರಕ್ಷಿಸಲಿಕ್ಕಾಗಿಯೇ ಈ ಇಡೀ ಸರ್ಕಸ್ ಮಾಡಲಾಯಿತೇ? ಈ ಸಾಲದಿಂದ ಬ್ಯಾಂಕುಗಳು ಕುಸಿಯದಂತೆ ತಡೆಯಲು ಹೀಗೆ ಮಾಡಲಾಯಿತೇ? ಜನತೆಯ ಈ ಹಣವನ್ನು ಕಾರ್ಪೊರೆಟ್ ಕಂಪನಿಗಳಿಂದ ವಸೂಲಿ ಮಾಡಲು ಸರಕಾರ ಯಾಕೆ ಕ್ರಮಗಳನ್ನು ಕೈಗೊಳ್ಳಲಿಲ್ಲ?
   
 7.  ಭ್ರಷ್ಟಾಚಾರವಂತೂ ಕೊನೆಗೊಂಡಿಲ್ಲ. 2000 ನೋಟುಗಳಲ್ಲಿ ಇರುವ ಒಟ್ಟು ಹಣ 1000 ನೋಟುಗಳಲ್ಲಿ ಇದ್ದ ಹಣಕ್ಕಿಂತ ಹೆಚ್ಚು. ಭ್ರಷ್ಟ ಶ್ರೀಮಂತರಿಗೆ ನೇರವಾಗಲು ಅಲ್ಲದೆ ಬೇರೆ ಯಾವ ಕಾರಣಗಳಿವೆ ಇದಕ್ಕೆ ?
   
 8.  ನಕಲಿ ನೋಟುಗಳ ಬಗ್ಗೆ ಪ್ರಧಾನಿ ಹೇಳಿದ್ದೆಲ್ಲಾ ತಪ್ಪು. ನೋಟು ನಿಷೇಧ ಎಲ್ಲಾ ನಕಲಿ ನೋಟುಗಳನ್ನು ಕಾನೂನುಬದ್ಧ ಮಾಡಿಬಿಟ್ಟಿದೆಯಲ್ಲವೇ?
   
 9.  ಇದರಿಂದ ಭಯೋತ್ಪಾದನೆ ಕೊನೆಯಾಗುತ್ತದೆ ಎಂದು ಹೇಳಲಾಯಿತು. ಕೊನೆಯಾಗುವುದು ದೂರ ಉಳಿಯಿತು, ಭಯೋತ್ಪಾದಕ ದಾಳಿಗಳಲ್ಲಿ ಸತ್ತ ಭದ್ರತಾ ಸಿಬ್ಬಂದಿಯ ಸಂಖ್ಯೆ ಗಮನಾರ್ಹವಾಗಿ ಏರಿದೆ.
   
 10.  ನಮ್ಮ ದುಡಿಮೆಗಾರರ ಮೂರನೇ ಎರಡು ಭಾಗದಷ್ಟು ಜನರಿಗೆ ಉದೋಗ ಕೊಡುವ ಅನೌಪಚಾರಿಕ ಕ್ಷೇತ್ರ ನೋಟು ನಿಷೇಧದಿಂದಲೇ ಕುಸಿದಿದೆ ಎಂದು ಎಲ್ಲಾ ಮಾಹಿತಿಗಳೂ ತೋರಿಸುತ್ತಿವೆ. ಇದರಿಂದ ಆಗಿರುವ ಪ್ರಾಣ, ಜೀವನೋಪಾಯ ಮತ್ತು ಉದ್ಯೋಗಗಳ ಹಾನಿಗೆ ಯಾರು ಜವಾಬ್ದಾರರು?
   
 11.  ನೋಟು ನಿಷೇಧದಿಂದ ಗ್ರಾಮೀಣ ಮಾರುಕಟ್ಟೆ ಮತ್ತು ಕೃಷಿಯ ಮೇಲಾದ ದುಷ್ಪರಿಣಾಮಗಳು, ರೈತರ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿವೆ. ಅವರ ಪ್ರತಿಭಟನೆಗಳನ್ನು ಬಿಜೆಪಿ ರಾಜ್ಯ ಸರಕಾರಗಳು ಗೋಲಿಬಾರು ಮುಂತಾದ ದಮನಗಳಿಂದ ಮಾತ್ರ ಎದುರಿಸುತ್ತಿಲ್ಲವೇ?
   
 12.  ಹೊಸ ನೋಟುಗಳನ್ನು ಮುದ್ರಿಸಲು ರೂ. 8 ಸಾವಿರ ಕೋಟಿ; ಎ.ಟಿ.ಎಂ. ಪುನಃ ಸೆಟ್ ಮಾಡಲು 35 ಸಾವಿರ ಕೋಟಿ ರೂ.; ಮತ್ತು 1.5 ಲಕ್ಷ ಕೋಟಿ ರೂ. ಗಳಷ್ಟು (ಸಿ.ಎಂ.ಐ.ಇ. ಅಂದಾಜು ಪ್ರಕಾರ) ಆರ್ಥಿಕ ಚಟುವಟಿಕೆಯ ನಷ್ಟಗಳ ಹೊರೆಯನ್ನು ಜನರ ಮೇಲೆ ಹೊರಿಸಿದ್ದು ಏಕೆ?
   
 13.  ಪ್ರಧಾನಿ ಮತ್ತು ನೋಟು ನಿಷೇಧವನ್ನು ವೈಭವೀಕರಿಸಲು ಎಷ್ಟು ತೆರಿಗೆದಾರರ ಹಣವನ್ನು ಖರ್ಚು ಮಾಡಲಾಯಿತು?
   
 14.  ಈ ದುರಂತಕ್ಕೆ ಕಾರಣರಾದವರನ್ನು ಜವಾಬ್ದಾರರನ್ನಾಗಿ ಮಾಡಿ ಸರಕಾರ ಅವರನ್ನು ಶಿಕ್ಷಿಸಬೇಕು.