Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ತ್ರಿವಳಿ ತಲಾಖ್ ಕುರಿತ ಸುಪ್ರಿಂ ಕೋರ್ಟ್ ತೀರ್ಪಿಗೆ ಎಐಡಿಡಬ್ಲ್ಯೂಎ ಸ್ವಾಗತ

date: 
Wednesday, 23 August 2017

“ಪ್ರಸಕ್ತ ಸರಕಾರಕ್ಕೆ ಯಾವುದೇ ಸಮುದಾಯಕ್ಕೆ ಲಿಂಗನ್ಯಾಯದ ಕಾನೂನುಗಳನ್ನು ತರುವ ಆಸಕ್ತಿಯೇನೂ ಇಲ್ಲ”

ತ್ರಿವಳಿ ತಲಾಖ್ ಕುರಿತ ರಿಟ್ ಅರ್ಜಿಯ ಮೇಲೆ ಸುಪ್ರಿಂ ಕೋರ್ಟ್ ನೀಡಿರುವ ಬಹುಮತದ(3-2) ತೀರ್ಪನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘÀಟನೆ(ಎಐಡಿಡಬ್ಲ್ಯೂಎ) ಸ್ವಾಗತಿಸಿದೆ. ತ್ರಿವಳಿ ತಲಾಖ್ ಸ್ವೆÃಚ್ಛಾಚಾರದ್ದು ಮತ್ತು ಸಂವಿಧಾನ-ಬಾಹಿರ ಎಂದು “ಶಾಯರಾ ಬಾನೊ ವರ್ಸಸ್ ಕೇಂದ್ರ ಸರಕಾರ ಮತ್ತು ಇತರರು’’(ರಿಟ್ ಅರ್ಜಿನಂ.118/2016) ಕೇಸಿನ ಮೇಲೆ ಆಗಸ್ಟ್ 22ರಂದು ನೀಡಿರುವ ತೀರ್ಪಿನಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಎಐಡಿಡಬ್ಲ್ಯೂಎ ಈ ತಕ್ಷಣದ ತ್ರಿವಳಿ ತಲಾಕ್ ಏಕಪಕ್ಷಿಯ, ಸ್ವೇಚ್ಛಾಚಾರಿ, ಹಿಂತೆಗೆದುಕೊಳ್ಳಲಾಗದ ಮತ್ತು ತಕ್ಷಣದ ಸ್ವರೂಪದ್ದು ಎಂದು ಸದಾ ಅದನ್ನು ವಿರೋಧಿಸುತ್ತ ಬಂದಿದೆ. ಇದು ಲಕ್ಷಾಂತರ ಮುಸ್ಲಿಂ ಮಹಿಳೆಯರ ಬದುಕುಗಳನ್ನು ಸದಾ ಪ್ರತಿಕೂಲವಾಗಿಯೇ ತಟ್ಟಿದೆ. ಅವರು ಇಂತಹ ತಕ್ಷಣದ ವಿಚ್ಛೆÃದನದಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ, ಯಾವುದೇ ರೀತಿಯ ಹಣಕಾಸು ಅಥವ ಇತರ ದಾರಿಗಳಿಲ್ಲದೆ ಪರಿತ್ಯಜಿಸಲ್ಪಟ್ಟಿದ್ದಾರೆ. ಇದನ್ನು ಈಗ ಹೆಚ್ಚೆಚ್ಚಾಗಿ ಎಸ್‌ಎಂಎಸ್,  ಸ್ಕೈಪ್ ಮುಂತಾದ ಇಲೆಕ್ಟಾçನಿಕ್ ಮತ್ತು ಮುಖಾಮುಖಿಯಲ್ಲದ ವಿಧಾನಗಳ ಮೂಲಕ ಮಾಡಲಾಗುತ್ತಿದೆ ಎಂದಿರುವ ಎಐಡಿಡಬ್ಲ್ಯೂಎ ತನ್ನ ಕಾನೂನು ಸೆಲ್ ಮೂಲಕ ಇಂತಹ ಹಲವು ತಕ್ಷಣದ ತಲಾಖ್‌ನ ಕೇಸ್‌ಗಳನ್ನು ಎತ್ತಿಕೊಂಡು ಇದ್ದಕ್ಕಿದ್ದಂತೆ ಮತ್ತು ಎಂದೆಂದಿಗೂ ಪರಿತ್ಯಜಿಸಲ್ಪಟ್ಟ ಮಹಿಳೆಯರ ನೋವನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ.

ನ್ಯಾಯಮೂರ್ತಿ ಕುರಿಯನ್ ಜೋಸೆಫ್ ತ್ರಿವಳಿ ತಲಾಖ್ ಕುರಾನಿನ ಮೂಲ ಧರ್ಮಸೂತ್ರಗಳಿಗೆ ವಿರುದ್ಧವಾದದ್ದು ಮತ್ತು ಶರೀಯತ್ ನ್ನು ಉಲ್ಲಂಘಿಸುವಂತದ್ದು ಎಂದು ಹೇಳಿರುವುದು ಸರಿಯಾಗಿಯೇ ಇದೆ. ಅವರು ‘ಶಮೀಮ್ ಅರಾ ವರ್ಸಸ್ ಉತ್ತರಪ್ರದೇಶ ರಾಜ್ಯ’ ಕೇಸಿನಲ್ಲಿ ಸುಪ್ರಿಂ ಕೋರ್ಟ್ ತೀರ್ಪನ್ನು ಉದ್ಧರಿಸುತ್ತ ಇಸ್ಲಾಮೀ ಕಟ್ಟಳೆಗಳಲ್ಲಿ ಮುಸ್ಲಿಂ ಗಂಡನಿಗೆ ಈ ಸ್ವಚ್ಛಂದ, ಏಕಪಕ್ಷಿÃಯ ತಕ್ಷಣದ ವಿಚ್ಛೆÃದನೆ ಹೇರುವ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಕುರಿಯನ್ ಮತ್ತು ನ್ಯಾಯಮೂರ್ತಿ ಆರ್ ಎಫ್ ನರಿಮನ್(ಇವರು ತಮ್ಮ ಮತ್ತು ನ್ಯ್ಯಾಯಮೂರ್ತಿ ಯು.ಯು.ಲಲಿತ್ ಇಬ್ಬರ  ತೀರ್ಪನ್ನು ಬರೆಯುತ್ತ) ತ್ರಿವಳಿ ತಲಾಖ್‌ನ್ನು ಇಸ್ಲಾಮ್‌ನ ಅನಿವಾರ್ಯ ಭಾಗ ಎಂದು ಪರಿಗಣಿಸಲಾಗದು ಹಾಗೂ ಹನಾಫಿ ನ್ಯಾಯಕಟ್ಟಳೆ ತ್ರಿವಳಿ ತಲಾಖ್ ಪಾಪಕರ ಎಂದು ವರ್ಜಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಖೇಹರ್(ತಮ್ಮ ಮತ್ತು ನ್ಯಾಯಮೂರ್ತಿ ಅಬ್ದುಲ್ ನಝೀರ್ ಪರವಾಗಿ ಬರೆದ) ಅಲ್ಪಮತದ ತೀರ್ಪಿನಲ್ಲಿ ವ್ಯಕ್ತಪಡಿಸಿದ ಕಣ್ಣೊÃಟವನ್ನು ತಾನು ಒಪ್ಪುವುದಿಲ್ಲ ಎಂದು ಎಐಡಿಡಬ್ಲ್ಯೂಎ ಹೇಳಿದೆ. ಈ ತೀರ್ಪು ತಕ್ಷಣದ ತ್ರಿವಳಿ ತಲಾಖ್‌ಗೆ ಆರು ತಿಂಗಳ ತಡೆಯಾಜ್ಷೆ ನೀಡುತ್ತ ಸರಕಾರ ಈ ಅಂಶದ ಬಗ್ಗೆ ಶಾಸನ ತರಬೇಕು ಎಂದು ಸರಕಾರಕ್ಕೆ ನಿರ್ದೇಶನವಿತ್ತಿದೆ. ಒಂದು ಸಮರೂಪದ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವ ಸರಕಾರದ ಪ್ರಯತ್ನವನ್ನು ತಾನು ಸದಾ ವಿರೋಧಿಸುವುದಾಗಿ ಹೇಳಿರುವ ಎಐಡಿಡಬ್ಲ್ಯೂಎ ಪ್ರಸಕ್ತ ಆಳುವ ವ್ಯವಸ್ಥೆ ಅಲ್ಪಮತದ ತೀರ್ಪನ್ನು ಸಮರೂಪದ ನಾಗರಿಕ ಸಂಹಿತೆಯನ್ನು ಪ್ರೊÃತ್ಸಾಹಿಸಲು ಮತ್ತು ಮುಸ್ಲಿಂ ಸಮುದಾಯದ ಮೇಲೆ ಗುರಿಯಿಡಲು ಬಳಸಿಕೊಳ್ಳಬಹುದು ಎಂದು ಹೇಳಿದೆ. ಈ ಸರಕಾರಕ್ಕೆ ಯಾವುದೇ ಸಮುದಾಯಕ್ಕೆ ಲಿಂಗನ್ಯಾಯದ ಕಾನೂನುಗಳನ್ನು ತರುವ ಆಸಕ್ತಿಯೇನೂ ಇಲ್ಲ. ಅದು ಮಹಿಳೆಯರ ಹಿತಗಳನ್ನು ನೈಜವಾಗಿ ಕಾಪಾಡುವ ಒಂದು ಕಾನೂನು ತರುತ್ತದೆ ಎಂದು ನಂಬಲು ಸಾಧ್ಯವಿಲ್ಲ ಎಂದಿರುವ ಎಐಡಿಡಬ್ಲ್ಯೂಎ ಈ ತೀರ್ಪಿನ ಅಧ್ಯಯನವನ್ನು ಮಾಡುತ್ತಿದ್ದು ಕ್ರಮೇಣ ಇದಕ್ಕೆ ವಿವರವಾದ ಪ್ರತಿಕ್ರಿಯೆ ಕೊಡುವುದಾಗಿ ಹೇಳಿದೆ.

ತ್ರಿವಳಿ ತಲಾಖ್ ನಿಷೇಧದ ಕೀರ್ತಿ ಬಾಚಿಕೊಳ್ಳುವ ಬಿಜೆಪಿ ಗೋಸುಂಬೆತನ-ಬೃಂದಾಕಾರಟ್

ತ್ರಿವಳಿ ತಲಾಖ್ ಕುರಿತ ಈ 395ಪುಟಗಳ ಸುಪ್ರಿಂ ಕೋರ್ಟ್ ತೀರ್ಪು “ದಾಖಲು ಮಾಡಿಕೊಂಡಿರುವ ವಿಭಿನ್ನ ಅಭಿಪ್ರಾಯಗಳ ಹಿನ್ನೆಲೆಯಲ್ಲಿ 3:2ಬಹುಮತದಿಂದ ತಲಾಖ್-ಎ-ಬಿದತ್ -ತ್ರಿವಳಿ ತಲಾಖ್‌ನ್ನು ರದ್ದು ಮಾಡಲಾಗಿದೆ”ಎಂಬ ಆದೇಶÀದೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಆದೇಶ ಮಹಿಳೆಯರ ಹಕ್ಕುಗಳಿಗಾಗಿ ನಡೆಸುತ್ತಿರುವ ಜಾತ್ಯತೀತ ಹೋರಾಟಕ್ಕೆ ಸಿಕ್ಕಿರುವ ಒಂದು ಜಯ ಎಂದು ದೇಶದ ಮಹಿಳಾ ಆಂದೋಲನದ ಹಿರಿಯ ಮುಖಂಡರೂ, ಸಿಪಿಐ(ಎಂ) ಪೊಲಿಟ್‌ಬ್ಯರೊ ಸದಸ್ಯರೂ ಆಗಿರುವ ಬೃಂದಾ ಕಾರಟ್ ಹೇಳಿದ್ದಾರೆ. ಯಾವುದೇ ಒಂದು ಸಮುದಾಯದ ಮಹಿಳೆಯರ ಹಕ್ಕುಗಳನ್ನು ವೃದ್ಧಿಸುವ ಯಾವುದೇ ತೀರ್ಪು ಎಲ್ಲ ಮಹಿಳೆಯರ ಮೇಲೂ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದಿರುವ ಅವರು ಮುಸ್ಲಿಮ್ ಮಹಿಳೆಯರು ಈ ಹೋರಾಟದ ಮುಂಚೂಣಿಯಲ್ಲಿದ್ದರು ಎಂಬುದನ್ನು ನೆನಪಿಸಿದ್ದಾರೆ. ಈ ತಕ್ಷಣದ ತ್ರಿವಳಿ ತಲಾಖ್ ಪಿತೃಪ್ರಧಾನ ಶಕ್ತಿಗಳು ಕುರಾನಿಗೆ ಕೊಟ್ಟಿರುವ ಅಪನಿರೂಪಣೆ ಎಂಬುದು ಈ ಮಹಿಳೆಯರ ನಿಲುವು. ಈ ವಿಜಯದ ಕೀರ್ತಿಯೆಲ್ಲ ಈ ಮಹಿಳೆಯರಿಗೆ ಮತ್ತು ಅವರ ಜತೆಗೆ ನಿಂತು ಮುಸ್ಲಿಂ ಮಹಿಳೆಯರ ನಡುವೆ ಹಲವು ದಶಕಗಳಿಂದ ಪ್ರಚಾರ ನಡೆಸುತ್ತಿರುವ ಎಐಡಿಡಬ್ಲ್ಯೂಎ ಯಂತಹ ಪ್ರಜಾಪ್ರಭುತ್ವವಾದಿ ಮಹಿಳಾ ಸಂಘಟನೆಗಳಿಗೆ ಸಲ್ಲುತ್ತದೆ ಎಂದು ಬೃಂದಾ ಕಾರಟ್ ಹೇಳಿದ್ದಾರೆ.

ಮುಸ್ಲಿಂ ಮಹಿಳೆಯರ ಹೋರಾಟದ ಎದುರು ಮುಸ್ಲಿಂ ಕಾನೂನು ಮಂಡಳಿ ತನ್ನ ನಿಲುವನ್ನು ಬದಲಿಸಲೇ ಬೇಕಾಗಿ ಬಂತು. ಅದರ ಮೊದಲ ಅಫಿಡವಿಟ್ ಮಹಿಳೆಯರನ್ನು ತುಚ್ಛಿÃಕರಿಸುವ ಅತ್ಯಂತ ನಿಂದನೀಯ, ಆಕ್ಷೇಪಾರ್ಹ ಮತ್ತು ಪುರುಷ ಶ್ರೇಷ್ಠತೆಯ ತರ್ಕಗಳಿಂದ ಕೂಡಿದ್ದರೆ, ಅದರ ಕೊನೆಯ ಅಫಿಡವಿಟ್ ಈ ಆಚರಣೆ ‘ಪಾಪಕರ’ ಎನ್ನುತ್ತ ಇದರ ಬಳಕೆಯನ್ನು ನಿಲ್ಲಿಸುವ ಪ್ರತಿಜ್ಞೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರ ಪ್ರತಿಕ್ರಿಯೆಗಳು, ಇದು ತಮ್ಮ ವಿಜಯ ಎನ್ನುತ್ತಿರುವುದು  ತಮಾಷೆಯಾಗಿ ಕಾಣುತ್ತವೆ ಎಂದು ಬೃಂದಾ ಕಾರಟ್ ಅಭಿಪ್ರಾಯ ಪಟ್ಟಿದ್ದಾರೆ. ನ್ಯಾಯಾಲಯ ಸಂವಿಧಾನ ವೈಯಕ್ತಿಕ ಕಾನೂನುಗಳಿಗೆ ನೀಡಿರುವ ರಕ್ಷಣೆ ಮತ್ತು ನ್ಯಾಯಾಂಗ ಮಧ್ಯಪ್ರವೇಶದ ನಡುವೆ ಸೂಕ್ಷ್ಮಸಮತೋಲನವನ್ನು ಕಾಯ್ದುಕೊಂಡಿದೆ. ಬಹುಮತದ ತೀರ್ಪು ಕೂಡ ಇದು ಕೇವಲ ಒಂದು ವಿಧದ ತ್ರಿವಳಿ ತಲಾಖ್‌ಗೆ ಅಂದರೆ ತಲಾಖ್-ಎ-ಬಿದತ್‌ಗೆ ಅದು ಕುರಾನಿನ ಧರ್ಮಸೂತ್ರಗಳಲ್ಲಿ ಸೇರಿಲ್ಲವಾದ್ದರಿಂದ ಅನ್ವಯವಾಗುತ್ತದೆ ಎಂದು ಜಾಗರೂಕತೆಯಿಂದ ಹೇಳಿದೆ. ನ್ಯಾಯಾಲಯದ ಮಧ್ಯಪ್ರವೇಶವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿಚ್ಛೇದನದ ಇತರ ಅಂಶಗಳಿಗೂ ವಿಸ್ತರಿಸುವಂತೆ ಮಾಡುವ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್ ಅವರ ಪ್ರಯತ್ನಗಳು ಮತ್ತು ತರ್ಕಗಳನ್ನು ಸುಪ್ರಿಂ ಕೋರ್ಟ್ ಸ್ವೀಕರಿಸಿಲ್ಲ. ಸಮರೂಪದ ನಾಗರಿಕ ಸಂಹಿತೆಯ ಪರವಾದ ತರ್ಕಗಳನ್ನು ತರುವ ಪ್ರಯತ್ನಗಳನ್ನೂ ನ್ಯಾಯಾಲಯ ಪರಿಗಣನೆಗೆ ತಗೊಂಡಿಲ್ಲ, ಭಾರತದ ಮುಖ್ಯ ನ್ಯಾಯಾಧೀಶರಂತೂ ಅಟಾರ್ನಿ ಜನರಲ್ ಅವರ ವಾದಗಳನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸುತ್ತ ಒಂದು “ಜಲಪಾತದಂತಹ ಪರಿಣಾಮ’ ಉಂಟಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಸಂಗತಿಯತ್ತ  ಬೃಂದಾ ಕಾರಟ್ ಗಮನ ಸೆಳೆದಿದ್ದಾರೆ.