Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

‘ದುಡಿಯುವ ಜನರ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ’

ಸಂಪುಟ: 
11
ಸಂಚಿಕೆ: 
34
Sunday, 13 August 2017

ಆಗಸ್ಟ್ 14ರ ಸಂಜೆ 6 ರಿಂದ ಆಗಸ್ಟ್ 15ರ ಬೆಳಗ್ಗೆ 6ರವರೆಗೆ

ಕಾರ್ಮಿಕರಿಗೆ ಖಾಯಂ ಕೆಲಸ, ನ್ಯಾಯಯುತ ಸಮಾನ ಕನಿಷ್ಟ ವೇತನ, ಸಾಮಾಜಿಕ ಭದ್ರತೆಗಾಗಿ; ರೈತರ ಬೆಳೆಗಳಿಗೆ ನ್ಯಾಯಯುತ ಸಾಮಾನ್ಯ ಕನಿಷ್ಟ ಬೆಂಬಲ ಬೆಲೆ, ಸಂಪೂರ್ಣ ಸಾಲ ಮನ್ನಕ್ಕಾಗಿ; ದುಡಿಯುವ ಜನರ ಹಕ್ಕುಗಳಾದ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ಸಾರಿಗೆ, ಸಂಪರ್ಕದಂತಹ ಮೂಲಭೂತ ಅವಶ್ಯಕತೆಗಳಿಗಾಗಿ; ಅಸ್ಪøಶ್ಯತೆ, ಜಾತಿವಾದ, ಕೋಮುವಾದ, ಉಗ್ರವಾದ ಮತ್ತು ಭ್ರಷ್ಟಾಚಾರ ವಿರೋಧಿಸಿ; ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ಧ; ದೇಶದ ಸಾರ್ವಜನಿಕ ಉದ್ದಿಮೆ-ಆಸ್ತಿಯ ರಕ್ಷಣೆಗಾಗಿ; ನೀರು, ಭೂಮಿ, ಪರಿಸರ, ದೇಶದ ಉಳಿವಿಗಾಗಿ; ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಗಣತಂತ್ರದ ರಕ್ಷಣೆಗಾಗಿ; ದಮನರಹಿತ, ಶೊಷಣಾರಹಿತ, ತಾರತಮ್ಯರಹಿತ, ಸಮಾನ ಹಕ್ಕುಗಳ, ಸಮಾನ ಅವಕಾಶಗಳ, ಗೌರವ-ಘನತೆಯುಕ್ತ ಬದುಕಿನ ಸರ್ವತಂತ್ರ-ಸ್ವಾತಂತ್ರ್ಯ ಭಾರತಕ್ಕಾಗಿ ಹಾಗೂ ಸಂವಿಧಾನದ ಉಳಿವಿಗಾಗಿ, ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ತಾಲ್ಲೂಕು ಕೇಂದ್ರಗಳಲ್ಲಿ ಆಗಸ್ಟ್ 14ರ ಸೋಮವಾರ ಸಂಜೆ 6 ಗಂಟೆಯಿಂದ ಆಗಸ್ಟ್ 15 ಬೆಳಗ್ಗೆ 6 ಗಂಟೆಯವರೆಗೆ ‘ದುಡಿಯುವ ಜನರ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ’ ನಡೆಯಲಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆಯುತ್ತಿವೆ. ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಸ್ವಾತಂತ್ರ್ಯೊತ್ತರ ಭಾರತದಲ್ಲಿ ದೇಶದ ಸ್ವಾತಂತ್ರ್ಯ ಚಳುವಳಿಯ ಆಶೋತ್ತರಗಳು ಹಾಗೂ ಭರವಸೆಗಳು ಈಡೇರದೇ ಹಾಗೇ ಉಳಿದಿವೆ. ದೇಶದ ಸಾಮಾನ್ಯ ಜನರಿಗೆ 70 ವರ್ಷಗಳ ನಂತರವೂ ಆಹಾರ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ, ಸಾರಿಗೆ, ಸಂಪರ್ಕ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ದೇಶದ ಸಂವಿಧಾನದ ಆಶಯವಾದ ‘ಜನರ ಕಲ್ಯಾಣ ರಾಜ್ಯ’ದ ಪರಿಕಲ್ಪನೆಯಿಂದ ಆಳುವ ಸರ್ಕಾರಗಳು ದೂರ ಸರಿದು ಲಾಭಕೋರ ಲೂಟಿಕೋರ ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿ ಶಕ್ತಿಗಳ ಪರವಾಗಿ ನೀತಿಗಳನ್ನು ಜಾರಿಮಾಡಿದ ಪರಿಣಾಮವಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚಿಸಿದ ಸಂವಿಧಾನ ದೇಶದ ಎಲ್ಲಾ ಜನವಿಭಾಗಗಳು ಭಾಗವಹಿಸಿದ ಸ್ವಾತಂತ್ರ್ಯ ಹೋರಾಟದ ಹಲವು ಆಶಯಗಳನ್ನು ಒಳಗೊಂಡಿದೆ.

ಆದರೆ ಈ ಸಂವಿಧಾನ ರೂಪಿಸಿ ಬೆಳೆಸಿದ ಹಲವು ಪ್ರಜಾಸತ್ತಾತ್ಮಕ ಸಂಸ್ಥೆಗಳು, ಆಚರಣೆಗಳು, ಸಂಪ್ರದಾಯಗಳ ಮೇಲೆ, ಇತ್ತೀಚಿನ ವರ್ಷಗಳಲ್ಲಿ 1990ರ ದಶಕದಲ್ಲಿ ಆರಂಭವಾದ ಆಳುವ ವರ್ಗಗಳ ನವ-ಉದಾರವಾದಿ ಧೋರಣೆಗಳ ಹಿನ್ನೆಲೆಯಲ್ಲಿ ತೀವ್ರ ದಾಳಿಗಳು ನಡೆಯುತ್ತಿವೆ. ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಆಳ್ವಿಕೆಯಲ್ಲಿ ದೇಶದ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯ ಮೇಲೆ ಈ ದಾಳಿಗಳು ತೀವ್ರವಾಗಿವೆ. ನರೇಂದ್ರ ಮೋದಿ ಇಸ್ರೇಲ್ ದೇಶಕ್ಕೆ ಬೇಟಿ ನೀಡುವ ಮುಖಾಂತರ ಭಾರತ ಇದುವರೆಗೂ ಅನುಸರಿಸಿಕೊಂಡು ಬಂದಿದ್ದ ‘ಅಲಿಪ್ತ ವಿದೇಶಾಂಗ ನೀತಿ’ಗೆ ತಿಲಾಂಜಲಿ ನೀಡಲಾಗಿದೆ. ಭಾರತದ ವಿದೇಶಾಂಗ ನೀತಿ, ಮಿಲಿಟರಿ ನೀತಿ ಹಾಗೂ ಆರ್ಥಿಕನೀತಿಗಳನ್ನು ಹಿಂದೆಂದಿಗಿಂತಲೂ ಅಮೇರಿಕಾ ಮತ್ತು ಸಾಮ್ರಾಜ್ಯಶಾಹಿ ದೇಶಗಳ ಅಡಿಯಾಳಾಗಿ ರೂಪಿಸಲಾಗುತ್ತಿದೆ ಇದರಿಂದಾಗಿ ದೇಶದ ಸಾರ್ವಭೌಮತೆಯನ್ನು ವಿದೇಶಿ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಒತ್ತೆಯಿಡಲಾಗುತ್ತಿದೆ.

ಆತ್ಮಹತ್ಯೆಯ ಸುಳಿಗೆ ಸಿಲುಕಿರುವ ರೈತರ ಸಾಲ ಮನ್ನಾ ಮಾಡಲು ಹಾಗೂ ರೈತರ ಬೆಳೆಗಳಿಗೆ ನ್ಯಾಯಯುತ ಸಾಮಾನ್ಯ ಕನಿಷ್ಟ ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ ಎನ್ನುವ ಮೋದಿ ಸರ್ಕಾರ ಕೆಲವೇ ಕೆಲವು ಶ್ರೀಮಂತ ಉದ್ಯಮಿಗಳಿಗೆ ಲಕ್ಷಾಂತರ ಕೋಟಿಗಳಷ್ಟು ತೆರಿಗೆ ವಿನಾಯಿತಿ ಸೇರಿದಂತೆ ಅವರ ಸಾವಿರಾರು ಕೋಟಿ ರೂಪಾಯಿ ಸಾಲಗಳನ್ನು ಮಾಡಿದೆ. ಶಿಕ್ಷಣ ಮತ್ತು ಉದ್ದಿಮೆಗಳ ಖಾಸಗೀಕರಣದಿಂದಾಗಿ ದಲಿತರ ಮೀಸಲಾತಿ ಅವಕಾಶಗಳು ಕಡಿಮೆಯಾಗಿವೆ. ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ಮಾಲೀಕರ ಹಾಗೂ ಉದ್ಯಮಿಗಳ ಪರವಾಗಿ ತಿದ್ದುಪಡಿ ಮಾಡಲಾಗುತ್ತಿದೆ. ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ದಾಳಿಗಳು ತೀರ್ವವಾಗಿವೆ.

ದೇಶದಲ್ಲಿ ಜಾತಿವಾದಿ, ಕೋಮುವಾದಿ, ಉಗ್ರವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ದೇಶದ ಅಧಿಕಾರ ಹಾಗೂ ದೇಶದ ಸಂವಿಧಾನ ದೇಶದ ಸ್ವಾತಂತ್ರ್ಯ ಚಳುವಳಿಗೆ ವಿರುದ್ಧ ದಿಕ್ಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಪರವಾಗಿ ಕೆಲಸ ಮಾಡಿದ ಹಾಗೂ ದೇಶದ ಸಂವಿಧಾನದ ಮೇಲೆ ಎಳ್ಳಷ್ಟೂ ಗೌರವವಿಲ್ಲದ ಸಂಘ ಪರಿವಾರದ ಪರವಾಗಿರುವ ಶಕ್ತಿಗಳ ಕೈಯ್ಯಲ್ಲಿ ಸಿಲುಕಿ ದುಡಿಯುವ ಜನರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ದೇಶದ ಸಂವಿಧಾನ ಇನ್ನಿಲ್ಲದಂತೆ ಅಪಾಯಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸಿಐಟಿಯು ಕರೆಯ ಭಾಗವಾಗಿ ಎಲ್ಲಾ ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ ಆಗಸ್ಟ್ 14ರ ಸಂಜೆ 6ಗಂಟೆಯಿಂದ ‘ದುಡಿಯುವ ಜನರ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ’ ಹೋರಾಟ ನಡೆಯಲಿದೆ.  

3000 ಕಿ.ಮಿ. ಕ್ರಮಿಸಿದ ಕಾರ್ಮಿಕ ಜಾಗೃತಿ ಜಾಥಾ
ವಿದುರಾಶ್ವತ್ಥದಿಂದ ಜುಲೈ 29ರಂದು ಹೊರಟ ಕಾರ್ಮಿಕ ಜಾಗೃತಿ ಜಾಥಾ ಈ ವರೆಗೆ 25 ಜಿಲ್ಲೆಗಳನ್ನು 37 ಸ್ಥಳಗಳಲ್ಲಿ ಸಭೆಗಳನ್ನು ನಡೆಸಿ 3000 ಕಿ.ಮಿ.ಕ್ಕಿಂತಲೂ ಹೆಚ್ಚು ದೂರ ದಾಟಿ ಅಗಸ್ಟ್ 11ರ ರಾತ್ರಿಯ ಹೊತ್ತಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದೆ.