Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಕಾವ್ಯ ಸಾವು ನ್ಯಾಯವೇ? – ಇಡೀ ಮಂಗಳೂರು ಎದ್ದು ಬಂದಾಗ

ಸಂಪುಟ: 
11
ಸಂಚಿಕೆ: 
34
date: 
Sunday, 13 August 2017
Image: 

ಕಾವ್ಯ ಅಸಹಜ ಸಾವನ್ನು ಮುಚ್ಚಿ ಹಾಕಲು ಮತ್ತು ಪ್ರಭಾವಿ ಆಳ್ವಾಸ್ ಕುಟುಂಬದ ಸಾಮ್ರಾಜ್ಯವನ್ನು ರಕ್ಷಿಸಲು ಪೋಲಿಸ್ ಮತ್ತು ಆಡಳಿತ ಪ್ರಯತ್ನಿಸುತ್ತಿದೆ. ಈಗಾಗಲೇ ಸಾಕ್ಷ್ಯ ನಾಶ ಮಾಡಲಾಗಿದೆ. ಅಲ್ಲದೆ ಬಹಿರಂಗ ಗುಟ್ಟಾಗಿದ್ದ ಆಳ್ವಾಸ್ ಸಾಮ್ರಾಜ್ಯದ ದಬ್ಬಾಳಿಕೆ ಅಕ್ರಮಗಳು ಬಯಲಿಗೆ ಬರಲಾರಂಭಿಸಿದ್ದವು. ಮಂಗಳೂರು SಈI ಜಿಲ್ಲಾಧ ನಿತಿನ್ ಕುತ್ತಾರ್ ಮಾಹಿತಿ ಹಕ್ಕು ಅಧಿನಿಯಮ 2005ರಂತೆ ಅರ್ಜಿ ಸಲ್ಲಿಸಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2006ರಿಂದ 2016ರವರೆಗೆ ನಡೆದಿರುವ ಅಸಹಜ ಸಾವು, ಆತ್ಮಹತ್ಯೆ, ಆತ್ಮಹತ್ಯೆ ಯತ್ನ ಪ್ರಕರಣಗಳ ವಿವರಗಳನ್ನು ಕೋರಿದ್ದರು. ಇದೀಗ ಮಾಹಿತಿ ಈಗ ಹೊರಬಿದ್ದಿದೆ. ಇದರಿಂದ ಆಕ್ರೋಶಕ್ಕೆ ಒಳಗಾದ ಮಂಗಳೂರು ಜನತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ವಯಂಸ್ಫೂರ್ತರಾಗಿ ಆಗಸ್ಟ್ 9ರಂದು ಜಮಾಯಿಸಿದರು. ಕಾವ್ಯ ತಾಯಿ ಬೇಬಿ ಪೂಜಾರಿ ಅವರ ಗೋಳು ಮತ್ತು ಆಕ್ರೋಶ ಯಾರನ್ನಾದರೂ ಕರಗಿಸುವಂತಿತ್ತು. ಆಡಳಿತವನ್ನು ನಡುಗಿಸುವಂತಿತ್ತು. ಬಹುಶಃ ಇಂತಹ ಭಾರೀ ಸ್ವಯಂಸ್ಫೂರ್ತರಾಗಿ ಜನ ಜಮಾಯಿಸಿದ್ದು ಚಾರಿತ್ರಿಕ ಇರಬೇಕು.

ಈ ಆಕ್ರೋಶ ಕಂಡು ಆಡಳಿತದಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ. ಆಗಸ್ಟ್ 1ರಂದು ವಿಎಸ್ ಉಗ್ರಪ್ಪ  ಮುಂದಾಳುತ್ವದ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಣ ಸಮಿತಿ ಮುಂದಿಟ್ಟಿದ್ದ ಪ್ರಶ್ನೆಗಳು ಮಂಗಳೂರು ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಟ್ಟಡ, ವಸತಿ ನಿಲಯ ಅಕ್ರಮ ಮೊದಲಾದ ಅವ್ಯವಹಾರಗಳ ಕುರಿತು ಎದ್ದಿರುವ ಪ್ರಶ್ನೆಗಳ ಸಮಗ್ರ ತನಿಖೆಗೆ ಆರು ಸಮಿತಿಗಳನ್ನು ರಚಿಸಿರುವ ಜಿಲ್ಲಾಡಳಿತ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಸಹಜ ಸಾವುಗಳು ಸಂಭವಿಸುತ್ತಿದ್ದು, ಈ ಕುರಿತಂತೆ ಸಮಗ್ರ ಅಧ್ಯಯನಕ್ಕಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುಪೇರಾಗುತ್ತಿರುವ ಲಿಂಗಾನುಪಾತದ ಕುರಿತು ವೈಜ್ಞಾನಿಕ ಕಾರಣಗಳ ಅನ್ವೇಷಣೆಗಾಗಿಯೂ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸಮಿತಿಯ ವರದಿಗಳು ಆಳ್ವಾಸ್ ಬುಡವನ್ನೇ ಅಲ್ಲಾಡಿಸುವ ಎಲ್ಲ ಸೂಚನೆಗಳೂ ಇವೆ.  ಕಾವ್ಯಾ ಪೂಜಾರಿ ನಿಗೂಢ ಸಾವನ್ನು ಆಳ್ವಾಸ್ ವಿರುದ್ಧ ಪಿತೂರಿ ನಡೆಸಲು ಬಳಸಿಕೊಳ್ಳುತ್ತಿದ್ದಾರೆಂದು ಅವಕಾಶವಾದಿ ರಾಜಕಾರಣಿಗಳು, ವಾಚಾಳಿ ಭಾಷಣಕಾರರು ಸೇರಿದಂತೆ ಕೆಲವರು ಹುಯಿಲಿಡುತ್ತಿದ್ದಾರೆ. ಕಟ್ಟಡದಿಂದ ಹಿಡಿದು ಚಿಕ್ಕಪುಟ್ಟ ಸುರಕ್ಷಾಕ್ರಮಗಳ ವರೆಗೂ ಯಾವುದೇ ನಿಯಮ ಪಾಲಿಸದೆ ತನ್ನದೇ ‘ರಿಪಬ್ಲಿಕ್’ ಸ್ಥಾಪಿಸಿಕೊಂಡು ಮೆರೆಯುತ್ತಿರುವ ಆಳ್ವಾಸ್ ಅಕ್ರಮಗಳು ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದೆ ಎಂದು ಇದೀಗ ಸಾಬೀತಾಗುತ್ತಿದೆ.