Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ದೇಶಾದ್ಯಂತ ‘ವಿಜ್ಞಾನಕ್ಕಾಗಿ ನಡಿಗೆ’

ಸಂಪುಟ: 
11
ಸಂಚಿಕೆ: 
34
date: 
Sunday, 13 August 2017

 

‘ವಿಜ್ಞಾನವನ್ನು ಪ್ರೋತ್ಸಾಹಿಸಿ-ಅವಿಜ್ಞಾನವನ್ನಲ್ಲ’, ‘ವಿಜ್ಞಾನವನ್ನು ಕಲಿಸಿ, ಪುರಾಣ ಕಂತೆಗಳನ್ನಲ್ಲ’, ‘ವಿಚಾರ-ಪ್ರಶ್ನೆ-ಕ್ರಿಯೆ’, ‘ವೈಜ್ಞಾನಿಕ ಮನವ ಮೂಕಗೊಳಿಸಲಾಗದು’ ‘ವಿಜ್ಞಾನಕ್ಕಾಗಿ ನಡಿಗೆ, ಮಾನವತೆಗಾಗಿ ನಡಿಗೆ’, ‘ವಿಜ್ಞಾನದ ಉಪೇಕ್ಷೆ ಎಂದರೆ ವಿನಾಶ’- ಇವು ಆಗಸ್ಟ್ 9 ರಂದು ದೇಶದ 25-30 ನಗರಗಳಲ್ಲಿ ಮೊಳಗಿದ ಘೋಷಣೆಗಳಲ್ಲಿ ಕೆಲವು.  ಅಂದು ದೇಶಾದ್ಯಂತ ‘ವಿಜ್ಞಾನಕ್ಕಾಗಿ ನಡಿಗೆ’ ಕಾರ್ಯಕ್ರಮದಲ್ಲಿ ಸಾವಿರಾರು ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದರು.

ಈ ಕಾರ್ಯಕ್ರಮದ ಸಂಘÀಟಕರು ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದ್ದರು.

1.    ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಂಶೋಧನೆಗೆ  ಜಿಡಿಪಿಯ 3% ಮತ್ತು ಶಿಕ್ಷಣಕ್ಕೆ 10% ನೀಡಬೇಕು.

2.    ಅವೈಜ್ಞಾನಿಕತೆ, ಕುರುಡುನಂಬಿಕೆಗಳು ಮತ್ತು ಅಸಹಿಷ್ಣುತೆಯ ಪ್ರಚಾರ ನಿಲ್ಲಬೇಕು, ಸಂವಿಧಾನದ 51ಎ ವಿಧಿ ಹೇಳಿರುವಂತೆ ವೈಜ್ಞಾನಿಕ ಮನೋಭಾವ, ಮಾನವೀಯ ಮೌಲ್ಯಗಳು ಮತ್ತು ಶೋಧನೆಯ ಭಾವವನ್ನು ಬೆಳೆಸಬೇಕು.

3.    ಶಿಕ್ಷಣ ವ್ಯವಸ್ಥೆ ವೈಜ್ಞಾನಿಕ ಸಾಕ್ಷಿ ಇರುವ ವಿಚಾರಗಳನ್ನು ಮಾತ್ರ ಕಲಿಸುವಂತಿರಬೇಕು.

4.    ಸಾಕ್ಷಿ-ಆಧಾರಿತ ವಿಜ್ಞಾನದ ಆಧಾರದಲ್ಲಿಯೇ ಧೋರಣೆಗಳನ್ನು ರೂಪಿಸಬೇಕು.

ಗಮನಾರ್ಹ ಸಂಶೋಧನೆ ಮಾಡುವ ಹೆಚ್ಚಿನ ದೇಶಗಳಲ್ಲಿ ವೈಜ್ಞಾನಿಕ ಸಂಶೋಧನೆಗೆ ಜಿಡಿಪಿಯ 3% ದಷ್ಟು ನೀಡಲಾಗುತ್ತದೆ. ಆದರೆ ಭಾರತದಲ್ಲಿ 0.8ರಿಂದ 0.9 ಶೇಕಡಾ ಮಾತ್ರ. ಇತ್ತೀಚೆಗೆ ಇದರಲ್ಲೂ ಕಡಿತ ತರಲಾಗುತ್ತಿದೆ, ಇನ್ನೊಂದೆಡೆಯಲ್ಲಿ ಅವೈಜ್ಞಾನಿಕ ವಿಚಾರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಈ ನಡಿಗೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ಪಡುತ್ತಾರೆ.

ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಯ ಪ್ರಮುಖ ಸಂಸ್ಥೆಯಾದ ಸಿಎಸ್‍ಐಆರ್( ವಿಜ್ಞಾನ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿ)ಗೆ ನೀಡಲಾಗುತ್ತಿರುವ ಹಣದಲ್ಲಿ 50% ದಷ್ಟು ಕಡಿತವಾಗಿದೆ, ಈ ಸರಕಾರದ ಅಡಿಯಲ್ಲಿ ಸಂಶೋಧಕರನ್ನು ಭಿಕ್ಷಕುಕರ ಮಟ್ಟಕ್ಕೆ ಇಳಿಸಲಾಗಿದೆ, ವಿಜ್ಞಾನ ನಡೆಸಬೇಕಾದರೆ ಹಣಕ್ಕಾಗಿ ಯಾಚಿಸಬೇಕು, ಇದರಿಂದಾಗಿ ಹಲವು ಪ್ರಾಜೆಕ್ಟುಗಳು ನಿಂತು ಹೋಗಿವೆ, ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ತಿಂಗಳ ಸಂಬಳವೂ ಸಿಗದಂತಹ ಪರಿಸ್ತಿತಿ ಉಂಟಾಗಿದೆ.

ನಮ್ಮ ಸಂಶೋಧನಾ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಚಟುವಟಿಕೆಗಳನ್ನು ಪ್ರೋತ್ಸಾಹಿಸದೆ ‘ಮೇಕ್ ಇನ್ ಇಂಡಿಯ’ ಹೇಗೆ ಸಾಧ್ಯ ಎಂದೊಬ್ಬ ಪ್ರತಿಭಟನಾಕಾರರು ಕೇಳುತ್ತಾರೆ.

ಭಾರತದ ವಿಜ್ಞಾನ ರಂಗದಲ್ಲಿನ ಮತ್ತೊಂದು ಪ್ರಶ್ನೆಯೆಂದರೆ ಶಿಕ್ಷಣ ವ್ಯವಸ್ಥೆ. ಹೆಚ್ಚೆಚ್ಚು ವಿದ್ಯಾರ್ಥಿಗಳು ‘ಏಕೆ’ ಎಂದು ಕೇಳುವಂತಹ ಸುಧಾರಣೆಗಳು ಬರಬೇಕು, ಬದಲಿಗೆ ಸಾಮಾಜಿಕ ಜೀವನದಲ್ಲಿ ವಿಜ್ಞಾನವನ್ನು ಉಪೇಕ್ಷಿಸಿದರೆ ಸಮಾಜ ಮತ್ತಷ್ಟು ಕಂದಾಚಾರಿಯಾಗುತ್ತದೆ ಎಂಬ ಆತಂಕವೂ ಪ್ರತಿಭಟನಾಕಾರರಲ್ಲಿ ಕಾಣುತ್ತಿತ್ತು.

ಐದು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿನ ವಿಜ್ಞಾನದ ಕುರಿತು ತಮಾಷೆ ಮಾಡುತ್ತಿದ್ದೆ, ಭೂಮಿ ಮತ್ತು ಸ್ವರ್ಗದ ನಡುವಿನ ಅಂತರ ಹೆಚ್ಚುತ್ತಿದೆ ಎಂದೊಂದು ಸಂಶೋಧನಾ ಪ್ರಬಂಧ ಹೇಳುತ್ತದೆ ಎಂದು ನಗೆಯಾಡಿದ್ದೆ. ಆದರೆ ಈಗ ಭಾರತದಲ್ಲೂ ಇಂತಹ ಅಸಂಬದ್ಧ ವಿಚಾರಗಳನ್ನು ವಿಜ್ಞಾನದ ಹೆಸರಲ್ಲಿ ಹರಡಲಾಗುತ್ತಿದೆ ಎಂದೊಬ್ಬ ಪ್ರತಿಭಟನಾಕಾರು ಖೇದ ವ್ಯಕ್ತ ಪಡಿಸಿದರು.

ದಿಲ್ಲಿಯ ಒಂದು ಶಾಲೆಯ ವಿಜ್ಞಾನ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಈ ನಡಿಗೆಗೆ ಕರೆದು ತಂದಿದ್ದರು. ವಿದ್ಯಾರ್ಥಿಗಳ ನಡುವೆ ಅವೈಜ್ಞಾನಿಕ ಮನೋಭಾವ ಹೆಚ್ಚುತ್ತಿದೆ, ಉದಾಹರಣೆಗೆ, ಗೋಮೂತ್ರದ ಪ್ರಯೋಜನಗಳು ಇತ್ಯಾದಿ. ಮಕ್ಕಳು ಯಾವುದಾದರೂ ವಿಷಯವನ್ನು ನಂಬುವ ಮೊದಲು ಅದನ್ನು ಪ್ರಶ್ನಿಸುವುದನ್ನು ಕಲಿಯಬೇಕು ಎಂದು ಈ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದಿದ್ದೇನೆ ಎಂದು ಅವರು ಹೇಳಿದರು.

ವಿಜ್ಞಾನದ ವಿಷಯದಲ್ಲಂತೂ ಭಾರತದಲ್ಲಿ ಹಿಮ್ಮಖ ಚಲನೆ ಕಾಣುತ್ತಿದೆ ಎಂದು ಹಲವರಲ್ಲಿ ಖೇದವಿದೆ. ಈ ಹಿನ್ನಡಿಗೆಯನ್ನು ಈಗಲಾದರೂ ನಿಲ್ಲಿಸಬೇಕು, ಹಲವು ವರ್ಷಗಳ ವೈಜ್ಞಾನಿಕ ಸಂಶೋಧನೆ ವ್ಯರ್ಥವಾಗಲು ಬಿಡಬಾರದು ಎಂಬುದಕ್ಕಾಗಿ ಇದರಲ್ಲಿ ಅವರು ಬಾಗವಹಿಸಿದ್ದಾರೆ.

ಆದರೆ ಈ ನಡಿಗೆಯಿಂದ ಏನಾದರೂ ಪ್ರಯೋಜನವಾದೀತೇ ಎಂಬ ಪ್ರಶ್ನೆ ಸಹಜವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವರಲ್ಲಿದೆ. ಎಲ್ಲವೂ ವೇದಗಳಲ್ಲಿವೆ ಎಂದು ಆಧುನಿಕ ವಿಜ್ಞಾನದ ಚಟುವಟಿಕೆಗಳನ್ನು ತುಚ್ಛೀಕರಿಸುವವರಿಗೆ ಕಪಾಳಮೋಕ್ಷದ ಕೆಲಸವನ್ನು ಇದು ಮಾಡಬಹದು, ಈ ನಡಿಗೆಯಲ್ಲಿ ಭಾಗವಹಿÀಸಿದವರನ್ನು ನೋಡಿದರೆ ಹೊಸ ಸ್ಫೂರ್ತಿ ಬಂದಿದೆ ಎಂದು ಬೆಂಗಳೂರಿನಲ್ಲಿ ಒಬ್ಬರು ಹೇಳಿದರೆ, ದಿಲ್ಲಿಯಲ್ಲಿ ಒಬ್ಬರು ‘ಈ ಸರಕಾರ ಕಿವುಡಾಗಿದೆ, ಮೂಕವಾಗಿದೆ, ಏನನ್ನಾದರೂ ನಿರೀಕ್ಷಿಸುವುದು ಕಷ್ಟಸಾಧ್ಯ’ ಎಂದರು.

ಆದರೆ ಮತ್ತೊಬ್ಬರು, ಎಲ್ಲವೂ ರಾತ್ರಿ ಹಗಲಾಗುವಷ್ಟರಲ್ಲಿ ಸಾಧ್ಯವಿಲ್ಲ, ಸರಕಾರ ಈಗಲಾದರೂ ಎದ್ದು ಕೂತು ಗಮನಿಸುತ್ತದೆ, ಸರಕಾರ ಮತ್ತು ವಿಜ್ಞಾನಿಗಳ ನಡುವೆ ಸಂವಾದವನ್ನು ಆರಂಭವಾಗಿ ಮುನ್ನಡೆಯುವ ಮುತುವರ್ಜಿ ಮೂಡಿ ಬರಬಹುದು ಎಂದು ಆಶಾಭಾವನೆಯನ್ನೂ ವ್ಯಕ್ತಪಡಿಸಿದರು. ಸರಕಾರ  ವಿಜ್ಞಾನ ತಂತ್ರಜ್ಞಾನಕ್ಕೆ ಜಿಡಿಪಿಯ 3% ನ್ನು ನೀಡಬೇಕು ಎಂಬ ಬೇಡಿಕೆಯನ್ನಾದರೂ ಪರಿಶೀಲಿಸಬೇಕು ಎಂದು ಇನ್ನೊಬ್ಬರು ಆಶಿಸಿದರು.  ಹಲವರಿಗೆ ಈ ನಡಿಗೆಯಲ್ಲಿ ಯುವಜನರ ಭಾಗವಹಿಸುವಿಕೆಯೂ ಹೊಸ ಆಶಾಬಾವನೆಯನ್ನು ಮೂಡಿಸಿರುವಂತೆ ಕಾಣುತ್ತದೆ.

ದಿಲ್ಲಿಯ ಹಲವಾರು ಸಿಎಸ್‍ಐಆರ್ ಸಂಸ್ಥೆಗಳಲ್ಲಿ ದುಡಿಯುತ್ತಿರುವ ವಿಜ್ಞಾನಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲೆಗಳ ವಿದ್ಯಾರ್ಥಿಗಳು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಜನಹರಲಾಲ್ ನೆಹರೂ ಆನ್ವಯಿಕ ಸಂಶೋಧನಾ ಸಂಸ್ಥೆ, ಐಸಿಟಿಎಸ್, ಎನ್‍ಐಎಎಸ್,ನಲ್ಲಿ ಕೆಲಸ ಮಾಡುವ ಸಂಶೋಧಕರು, ಕಲಿಯುತ್ತಿರುವ ವಿದ್ತಾರ್ಥಿಗಳು, ಕಾಲೇಜುಗಳು, ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪುಣೆಯಲ್ಲಿ ಐಐಎಸ್‍ಇಆರ್, ಐಯುಸಿಎಎಇತ್ಯಾದಿ ಸಂಸ್ಥೆಗಳ ಬೋಧಕರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಹಲವಾರು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಜನವಿಜ್ಞಾನ ಆಂದೋಲನದ ಕಾರ್ಯಕರ್ತರು ಭಾಗವಹಿÀಸಿದ್ದರು ಎಂದು ವರದಿಗಳು ಬಂದಿವೆ.  

ಸಹಜವಾಗಿಯೇ ಇತ್ತಿಚೆಗೆ ನಿಧನರಾಗಿರುವ ದಿಗ್ಗಜ ವಿಜ್ಞಾನಿಗಳಾದ ಪ್ರೊ.ಯಶಪಾಲ್, ಪ್ರೊ. ಭಾರ್ಗವ ಮತ್ತು  ಡಾ.ಯು.ಆರ್.ರಾವ್ ಹಾಗೂ ವೈಜ್ಞಾನಿಕ ವಿಚಾರಗಳ ಪ್ರಸಾರದಲ್ಲಿ ತೊಡಗಿರುವಾಗ  ಕಂದಾಚಾರಿಗಳ ಬಂದೂಕುಗಳು ಬಲಿತೆಗೆದುಕೊಂಡ ಡಾ.ನರೇಂದ್ರ ಧಬೋಲ್ಕರ್, ಡಾ.ಎಂ.ಎಂ. ಕಲಬುರ್ಗಿ ಮತ್ತು ಕಾಂ.ಪನ್ಸರೆಯವರ ಆದರ್ಶಗಳನ್ನು ಅನುಸರಿಸುವ ಪ್ರತಿಜ್ಞೆಗಳನ್ನೂ ಕೈಗೊಳ್ಳಲಾಯಿತು.