Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ರಾಜ್ಯಾದ್ಯಂತ ಒಕ್ಕೊರಲಿನ ಕೂಗು: “ಕೋಮುವಾದಿ, ಮೂಲಭೂತವಾದಿ, ಭಯೋತ್ಪಾದಕ ಶಕ್ತಿಗಳೇ ! - ಭಾರತ ಬಿಟ್ಟು ತೊಲಗಿ !!”

ಸಂಪುಟ: 
11
ಸಂಚಿಕೆ: 
34
Sunday, 13 August 2017

ಕ್ವಿಟ್ ಇಂಡಿಯಾ ಚಳವಳಿಯ 75 ವರ್ಷಗಳ ದಿನಾಚರಣೆಯ ಅಂಗವಾಗಿ ಕೋಮುವಾದಿ, ಮೂಲಭೂತವಾದಿ, ಭಯೋತ್ಪಾದಕ ಶಕ್ತಿಗಳು ದೇಶ ಬಿಟ್ಟು ತೊಲಗುವಂತೆ ಒತ್ತಾಯಿಸಿ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ನೀಡಿದ ಕರೆಯ ಮೇರೆಗೆ ರಾಜ್ಯಾದ್ಯಂತ ಹೆಚ್ಚಿನ ಜಿಲ್ಲಾ ಕೇಂದ್ರಗಳಲ್ಲಿ ವಿಚಾರ ಸಂಕಿರಣ, ಬಹಿರಂಗ ಸಭೆ, ಪ್ರತಿಭಟನೆಗಳನ್ನು ನಡೆಸಿದ ವರದಿಗಳು ಬಂದಿವೆ. ಈ ಸಂದರ್ಭದಲ್ಲಿ ಜಿ.ಎನ್. ನಾಗರಾಜ್ ಬರೆದಿರುವ “ತೊಲಗು ತೊಲಗಾಚೆ ಪರದೇಶಿ ಸುಲಿಗೆಗಾರ” ಎಂಬ  ಪುಸ್ತಿಕೆಯನ್ನು ಎಲ್ಲಾ ಕಡೆ ಬಿಡುಗಡೆ ಮಾಡಲಾಯಿತು.

ಕ್ವಿಟ್ ಇಂಡಿಯಾ 75ನೇ ವಾರ್ಷಿಕವನ್ನು ವಿವಿಧ ರೀತಿಯಲ್ಲಿ ಆಚರಿಸಿದ ವರದಿಗಳು -ಬೆಂಗಳೂರು, ಚಿಕ್ಕಬಳ್ಳಾಪುರ, ಮಂಗಳೂರು(ದ.ಕ.), ಕುಂದಾಪುರ (ಉಡುಪಿ), ತುಮಕೂರು, ಗಂಗಾವತಿ (ಕೊಪ್ಪಳ), ಹಾಸನ, ಹೊಸಪೇಟೆ (ಬಳ್ಳಾರಿ), ಕೋಲಾರ, ಮೈಸೂರು, ಶಿವಮೊಗ್ಗ, ತುಮಕೂರು, ದಾಂಡೇಲಿ(ಉ.ಕ.)ಗಳಿಂದ ಬಂದಿವೆ. ಅವುಗಳಲ್ಲಿ ಕೆಲವು ಇಲ್ಲಿವೆ:

ಮಂಗಳೂರು(ದ.ಕ.) : ಕ್ವಿಟ್ ಇಂಡಿಯಾ ಚಳುವಳಿಯ 75ನೇ ವಾರ್ಷಿಕ ದಿನವನ್ನು ಮಂಗಳೂರಿನ ಹಂಚಿನ ಕಾರ್ಖಾನೆ ನೌಕರರ ಸಂಘದ ಸಭಾಂಗಣದಲ್ಲಿ ಸಭೆ ಮೂಲಕ ಆಚರಿಸಲಾಯಿತು. ಕ್ಚಿಟ್ ಇಂಡಿಯಾ ಚಳುವಳಿ ಹಾಗೂ ಭಾರತ ಸ್ವಾತಂತ್ರ್ಯ ಚಳುವಳಿಗಳಲ್ಲಿ ಕಾಂಗ್ರೆಸಿಗರೊಂದಿಗೆ ಕಮ್ಯೂನಿಸ್ಟರೂ ಕೂಡಾ ಕ್ರಾಂತಿಕಾರಿ ಹೋರಾಟಗಳಲ್ಲಿ ಭಾಗಿಯಾಗಿದ್ದ ಬಗ್ಗೆ ಸಿಪಿಐ(ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ವಿವರಿಸಿದರು. ಆದರೆ ಹಿಂದೂ ಮಹಾಸಭಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಯಾರೊಬ್ಬ ಕಾರ್ಯಕರ್ತರೂ ಈ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ.

ಒಂದೊಮ್ಮೆ ಧೀರ ಹೋರಾಟದಲ್ಲಿ ಭಾಗಿಯಾಗಿ ಅಂಡಮಾನಿನ ಜೈಲಿನಲ್ಲಿ ಕರಿನೀರಿನ ಶಿಕ್ಷೆಗೊಳಗಾಗಿದ್ದ ವಿ.ಡಿ.ಸರ್ವರ್ಕರ್ ಕ್ಷಮಾ ಯಾಚನೆಯ ಪತ್ರವನ್ನು ಅಂಡಮಾನ್ ಜೈಲಿನಿಂದ ಬ್ರಿಟಿಷ್ ಸರ್ಕಾರಕ್ಕೆ ಬರೆದು ತನ್ನನ್ನು ಬಿಡುಗಡೆಗೊಳಿಸಿದರೆ ಬ್ರಿಟಿಷ್ ಸಾಮ್ರಾಜ್ಯದ ನಮ್ರ ಸೇವಕನಾಗಿರುವೆನೆಂದು ಬೇಡಿಕೊಂಡರು. ಅಂತೆಯೇ ಬಿಡುಗಡೆಗೊಂಡ ಮೇಲೆ ಅವರು ಹಿಂದೂತ್ವದ ಪ್ರಮುಖ ಕಾರ್ಯಕರ್ತನಾದರು. ಅಟಲ್ ಬಿಹಾರಿ ವಾಜಪೇಯಿಯವರು ಒಂದು ಸಂದರ್ಭದಲ್ಲಿ ಪೋಲೀಸ್ ಬಂಧನಕ್ಕೆ ಹೆದರಿ, ತಾನು ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿರಲಿಲ್ಲವೆಂದೂ ಸುಮ್ಮನೆ ನೋಡಲು ಬಂದಿದ್ದೇನೆಂದು ಮುಚ್ಚಳಿಕೆ ಬರೆದು ಕೊಟ್ಟು ತಪ್ಪಿಸಿಕೊಂಡರು. ಮುಂದಿನ ದಿನಗಳಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲೇ ಇಲ್ಲ. ಹೀಗೆ ಯಾರೊಬ್ಬ ಹಿಂದೂತ್ವವಾದಿಯೂ ಸ್ವಾತಂತ್ರ್ಯ ಚಳುವಳಿಯಲ್ಲಿ ಇರಲಿಲ್ಲ. ಇದಕ್ಕೆ ವಿರುದ್ಧವಾಗಿ ನೂರಾರು ಕಮ್ಯೂನಿಸ್ಟರು ಸ್ವಾತಂತ್ರ್ಯ ಹೋರಾಟದಲ್ಲಿ ದೇಹ ತ್ಯಾಗ ಮಾಡಿದ, ಸರ್ವಸ್ವವನ್ನು ಕಳೆದುಕೊಂಡ ಉದಾಹರಣೆಗಳಿವೆ ಎಂಬುದಾಗಿ ವಸಂತ ಆಚಾರಿ ವಿವರಿಸಿದರು.

ಚಿಕ್ಕಬಳ್ಳಾಪುರ: ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕೋಮುವಾದದಿಂದ ದೇಶವನ್ನು ಮುಕ್ತಗೊಳಿಸುವ ಮೂಲಕ 2022ರ ವೇಳೆಗೆ ನವಭಾರತವನ್ನು ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ ಪ್ರತಿಯೊಬ್ಬರು ದುಡಿಯಬೇಕಾಗಿದೆ ಎಂದು ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತ ಕರೆ ನೀಡಿದ್ದಾರೆ. ಅದೇ ಇಂದು ಎಲ್ಲಾ ಪತ್ರಿಕೆಗಳಲ್ಲಿ ದೊಡ್ಡ ಜಾಹೀರಾತು ಆಗಿ ಪ್ರಕಟವಾಗಿದೆ. ಇದರಲ್ಲಿ ಎರಡು ವಿಪರ್ಯಾಸಗಳಿವೆ. ಒಂದು ಕ್ವಿಟ್ ಇಂಡಿಯಾ ಮತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದಿದ್ದ, ಅದಕ್ಕೆ ದ್ರೋಹವನ್ನೇ ಬಗೆದ ಹಿಂದುತ್ವ ಶಕ್ತಿಗಳ ಪ್ರತಿನಿಧಿಯಾದ ಪ್ರಧಾನಿ ಅದರ ಬಗ್ಗೆ ಮಾತನಾಡುವುದು. ಇನ್ನೊಂದು ಕೋಮುವಾದದ ಮೂಲವಾದ ಈ ಶಕ್ತಿಗಳೇ ದೇಶವನ್ನು ಕೋಮುವಾದದಿಂದ ಮುಕ್ತ ಗೊಳಿಸುವ ಬಗ್ಗೆ ಮಾತನಾಡುವುದು ಎಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಚಲೇ ಜಾವ್ ಚಳುವಳಿಯ 75ನೇ ವಾರ್ಷಿಕದ ಸಭೆಯಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಅವರು ಹೇಳಿದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ಸ್ವತಂತ್ರ ಭಾರತದಲ್ಲಿ ಈವರೆಗೆ ಮತ್ತು ಈಗ ಅವರ ನವ-ಉದಾರವಾದಿ ಆಡಳಿತದಲ್ಲಿ ಹಿಂದುತ್ವ ಶಕ್ತಿಗಳ ಧೋರಣೆಗಳ ಬಗ್ಗೆ ವಿವರವಾಗಿ ಮಾತನಾಢಿದ ಅವರು ಈ ಶಕ್ತಿಗಳನ್ನು ದೇಶದಿಂದ ಓಡಿಸದೆ ಸ್ವಾತಂತ್ರ್ಯ ಚಳುವಳಿಯ ಮತ್ತು ಸಂವಿಧಾನದ ಆಶಯಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಕರೆ ನೀಡಿದರು. ಸಭೆಯಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಮುನಿವೆಂಕಟಪ್ಪ, ಸಿದ್ಧಗಂಗಪ್ಪ, ರಘುರಾಮರೆಡ್ಡಿ, ಜಯರಾಮರೆಡ್ಡಿ, ಮತ್ತಿತರ ನಾಯಕರು ಭಾಗವಹಿಸಿದ್ದರು.

ಬೆಂಗಳೂರು: ಕ್ವಿಟ್ ಇಂಡಿಯಾ 75 ಅಂಗವಾಗಿ ಸಿಪಿಎಂ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಸಮಿತಿಗಳು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಹಿರಂಗ ಸಭೆ ಆಯೋಜಿಸಿದ್ದವು. ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಿಪಿಎಂ ಕಾರ್ಯದದರ್ಶಿ ಮಂಡಳಿ ಸದಸ್ಯರಾದ ಜಿ.ಎನ್.ನಾಗರಾಜ್ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುತ್ತಿದ್ದ ಕಾಂಗ್ರೆಸ್ ಇದುವರೆಗೂ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಎಂದೂ ಬೇಡಿಕೆ ಇಡಲಿಲ್ಲ. ಕೇವಲ ಅಧಿಕಾರ ಹಂಚಿಕೆಗಾಗಿ ಹೋರಾಟ ನಡೆಸುತ್ತಿತ್ತು. ಅದರೆ ಇಡೀ ಹೋರಾಟದಲ್ಲಿ ರೈತರ, ಕಾರ್ಮಿಕರ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಮೊದಲು ಬೇಡಿಕೆ ಇಟ್ಟು ಅದಕ್ಕೆ ಪೂರಕವಾಗಿ ಚಳವಳಿ, ಹೋರಾಟವನ್ನು ಸಂಘಟಿಸಿದ್ದು ಕಮ್ಯುನಿಷ್ಟ್ ಪಕ್ಷಗಳು ಎಂದರು. ಕಮ್ಯುನಿಷ್ಟ್ ಪಕ್ಷಗಳು ಎತ್ತಿದ ಸಂಪೂರ್ಣ ಸ್ವಾತಂತ್ರ್ಯ ಬೇಡಿಕೆ, ಸಂಘಟಿಸಿದ ಸಮರಶೀಲ ಹೋರಾಟಗಳಿಂದ ಕೇವಲ ಬ್ರಿಟಿಷರಷ್ಟೇ ಅಲ್ಲದೆ ಅಂದಿನ ಕಾಂಗ್ರೆಸ್ ಕೂಡ ಬೆದರಿತ್ತು. ಇಂದು 'ದೇಶಭಕ್ತರು' ಎಂದು ಹೇಳಿಕೊಂಡು ತಿರುಗುವ ಯಾವ ಸಂಘಟನೆಗಳೂ ಅಂದಿನ ಸಂಪೂರ್ಣ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿರಲಿಲ್ಲ.

ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ ಸಂಘಟನೆಗಳು, ಅದರ ನಾಯಕರು ಈಗ ದೇಶಭಕ್ತಿ ಹೆಸರಿನಲ್ಲಿ ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ಹಾಳುಮಾಡುತ್ತಾ, ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ತಮಗೆ ಚುನಾವಣೆ ವೇಳೆ ದಂಡಿಯಾಗಿ ಹಣ ಪಾವತಿ ಮಾಡಿದವರ ಋಣ ತೀರಿಸಲು ದೇಶವನ್ನು ಅಡವಿಡುತ್ತಿದ್ದಾರೆ. ಇದರಿಂದ ಜನರಿಗೆ ಸಮಾನ ಶಿಕ್ಷಣ, ಉತ್ತಮ, ಉಚಿತ ಆರೋಗ್ಯ ಸಿಗುವುದಿಲ್ಲ. ಜನರು ಮತ್ತೆ ಭಯೋತ್ಪಾದನೆ, ಕೋಮುವಾದ ಜಾತಿ ಪದ್ಧತಿ, ಮತ್ತಿತರ ಅನಿಷ್ಟಗಳ ವಿರುದ್ಧ ಇನ್ನೊಂದು ಕ್ವಿಟ್ ಇಂಡಿಯಾ ಚಳವಳಿ ನಡೆಸಬೇಕಿದೆ ಎಂದು ಕರೆ ನೀಡಿದರು. ಬಹಿರಂಗ ಸಭೆಯಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಆರ್.ಶ್ರೀನಿವಾಸ್, ಗೌರಮ್ಮ, ಗೋಪಾಲಕೃಷ್ಣ, ಎನ್. ನಾಗರಾಜ್ ಮುಂತಾದ ನಾಯಕರು ಭಾಗವಹಿಸಿದ್ದರು.

ತುಮಕೂರು: ಸಂಜೆ 7 ಗಂಟೆಗೆ ತುಮಕೂರು ನಗರದ ಗಾಂಧಿನಗರದಲ್ಲಿರುವ ಜನಚಳುವಳಿಯ ಕೇಂದ್ರದಲ್ಲಿ “ಸ್ವಾತಂತ್ರ್ಯ ಚಳುವಳಿಯ ನೈಜ ಇತಿಹಾಸ” ಕುರಿತು ನಡೆದ ವಿಚಾರ ಸಂಕಿರಣದ ಮೂಲಕ ಚಲೇ ಜಾವ್ ಚಳುವಳಿಯ 75ನೇ ವಾರ್ಷಿಕವನ್ನು ಆಚರಿಸಲಾಯಿತು.  ಉದ್ಘಾಟಿಸಿ ಮಾತನಾಡಿದ ಜನಪರ ಚಿಂತಕ ಸಿ. ಯತಿರಾಜು ಅವರು ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದ ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟ ಬಲಪಂಥಿಯ ನಾಯಕರನ್ನು ರಾಷ್ಟ್ರೀಯ ನಾಯಕರೆಂದು ಬಿಂಬಿಸಲಾಗುತ್ತಿದೆ ಬ್ರಿಟೀಷರೊಂದಿಗೆ ರಾಜಿ ಮಾಡಿಕೊಂಡವರಿಂದು ತಾವೇ ನೈಜ ರಾಷ್ಟ್ರ ಪ್ರೇಮಿಗಳೆಂದು ಮೆರೆದಾಡುತ್ತಿದ್ದಾರೆ, ನೈಜ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿರುಚಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆಪಾರ ತ್ಯಾಗ ಬಲಿದಾನಗಳನ್ನು ಮಾಡಿದ ಎಡಪಂಥಿಯ ಚಳುವಳಿಗಳು ಹಾಗೂ ಕ್ರಾಂತಿಕಾರಿಗಳ ಹೋರಾಟಗಳನ್ನು ಮರೆಮಾಚಲಾಗುತ್ತಿದೆ ಎಂದು ಆರೋಪಿಸಿದರು.

ಅವರು ಸರ್ಕಾರಗಳು ಬಂಡವಾಳಿಗರ, ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿವೆ ನವವಸಹತುಶಾಹಿ, ಬಹುರಾಷ್ಟ್ರೀಯ ಕಂಪನಿಗಳ ರೂಪದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನನು ತನ್ನ ಅಧೀನದಲ್ಲಿರಿಸಿಕೊಂಡು ಜನತೆಯ, ರೈತ-ಕಾರ್ಮಿಕರ ಶೋಷಣೆಯನ್ನು ತೀವೃಗೊಳಿಸಿದೆ. ಸ್ವದೇಶಿ ಮಂತ್ರ ಜಪಿಸುತ್ತಿದ್ದವರು ವಿದೇಶಿ ಕಂಪನಿಗಳ ದಾಸರಂತೆ ವರ್ತಿಸುತ್ತಿದ್ದಾರೆ ರಾಜ್ಯಾಂಗ ವ್ಯವಸ್ಥೆಯನ್ನು ದೂಳಿಪಟ ಮಾಡಲಾಗುತ್ತಿದೆ. ಬಲಪಂಥಿಯ ಶಕ್ತಿಗಳು ಚೈನಾದ ವಸ್ತುಗಳನ್ನು ಮಾತ್ರ ವಿರೋಧಿಸುವವರು ಅಮೇರಿಕಾದ ವಸ್ತುಗಳನ್ನೇಕೆ ಬಹಿಷ್ಕರಿಸುತ್ತಿಲ್ಲ ಎಂದು ಟೀಕಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಚಿಂತಕ ಪ್ರೊ.ಕೆ. ದೊರೈರಾಜ್‍ರವರು ನೈಜತೆಯನ್ನು ಮರೆಮಾಚಿದ ಕುತಂತ್ರಗಳಿಂದ ಇತಿಹಾಸವನ್ನು ತಿರುಚಿ ಜನತೆಗೆ ಓದಿಸಲಾಗುತ್ತಿದೆ ಇದರ ಬಗ್ಗೆ ಎಚ್ಚರಿಕೆ ಹಾಗೂ ನೈಜ ಇತಿಹಾಸವನ್ನು ಜನಪ್ರಿಯಗೊಳಿಸುವುದು ಅಗತ್ಯವಿದೆ ಎಂದರು.  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸೈಯದ್‍ಮುಜೀಬ್ ಅವರುಗಳೂ ಮಾತನಾಢಿದರು. ಅಧ್ಯಕ್ಷತೆಯನ್ನು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ವಹಿಸಿದ್ದರು ವೇದಿಕೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಸಿಐಟಿಯು ಜಿಲ್ಲಾಧ್ಯಕ್ಷ ಬಿ. ಉಮೇಶ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ. ಅಜ್ಜಪ್ಪ ಉಪಸ್ಥಿತರಿದ್ದರು ಆರಂಭದಲ್ಲಿ ಸಿಪಿಐ(ಎಂ) ನಗರ ಸಮಿತಿ ಸದಸ್ಯ ಬಿ.ಷಣ್ಮುಖಪ್ಪ ಸ್ವಾಗತಿಸಿ ನಗರ ಕಾರ್ಯದರ್ಶಿ ಎಸ್. ರಾಘವೇಂದ್ರ ವಂದಿಸಿದರು.

ಕುಂದಾಪುರ : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಯ ಸಂಧರ್ಭದಲ್ಲಿ ಬಂಗಾಲದಲ್ಲಿ ಜನಸಂಘದ ಸ್ಥಾಪಕ ಮುಖಂಡ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಹಿಂದೂ ಮಹಾ ಸಭಾದ ಭಾಗವಾಗಿ ಮುಸ್ಲಿಂ ಲೀಗ್ ಜೊತೆ ಮೈತ್ರಿ ಸರಕಾರ ದಲ್ಲಿ ಅರ್ಥ ಮಂತ್ರಿಯಾಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷರಿಗೆ ಸಹಕರಿಸಬೇಕು ಎಂದು ಕರೆ ನೀಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ನ ಪಾತ್ರ ಹಲವಾರು ಸಂದರ್ಭಗಳಲ್ಲಿ ಬ್ರಿಟೀಷರಿಗೆ ವಿದೇಯಕನಾಗಿರುವುದು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ಸಿಪಿಐ(ಎಂ) ರಾಜ್ಯ ಮುಖಂಡರಾದ ಕಾಂ.ಕೆ.ಪ್ರಕಾಶ್ ಹೇಳಿದರು.

ಹಂಚು ಕಾರ್ಮಿಕ ಭವನದಲ್ಲಿ ಸಿಪಿಐ(ಎಂ) ಪಕ್ಷದ ಆಶ್ರಯದಲ್ಲಿ ನಡೆದ "ಬ್ರಿಟೀಷರೇ ಭಾರತ  ಬಿಟ್ಟು ತೊಲಗಿ "75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಐಕ್ಯ ಸ್ವಾತಂತ್ರ್ಯ  ಹೋರಾಟದ ಪರಂಪರೆ ಫಲವಾಗಿ ಭಾರತದಲ್ಲಿ ಜಾತ್ಯಾತೀತ ಸಂವಿಧಾನ ರೂಪಗೊಂಡಿತು. ಬ್ರಿಟೀಷರಿಗೆ ವಿದೇಯರಾಗಿದ್ದವರು ಇಂದು ಅಧಿಕಾರದಲ್ಲಿರುವುದು ದೇಶದ ಸಂವಿಧಾನಕ್ಕೆ ದೊಡ್ಡ ಅಪಾಯವಾಗಿದೆ. ಇಂತಹ ಐಕ್ಯತೆ ಒಡೆಯುವ  ಕೋಮುವಾದಿ, ಮೂಲಭೂತವಾದಿ, ಭಯೋತ್ಪಾದಕ ಶಕ್ತಿಗಳೇ ದೇಶ ಬಿಟ್ಟು ತೊಲಗಿ ಎಂದು ಸಿಪಿಎಂ ರಾಷ್ಟ್ರ ವ್ಯಾಪಿ ಕರೆ ನೀಡಿದೆ ಎಂದರು. ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ ಕೆ.ಶಂಕರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ.ಬಾಲಕ್ರಷ್ಣ ಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿದರು. ಕಾಂ.ಸುರೇಶ್ ಕಲ್ಲಾಗರ ಸ್ವಾಗತಿಸಿ, ಕಾಂ ಹೆಚ್ ನರಸಿಂಹ ವಂದಿಸಿದರು.

ಹಾಸನ : ಕ್ವಿಟ್ ಇಂಡಿಯಾ ಚಳುವಳಿಗೆ 75 ವರ್ಷಗಳು ಸಂದಿದ್ದರೂ ಅಂದಿನ ಆಶಯಗಳು ಇಂದಿಗೂ ಈಡೇರದೆ ದೇಶದಲ್ಲಿ ಕೋಮುವಾದಿ, ಜಾತಿವಾದಿ, ಭಯೋತ್ಪಾದಕ ಶಕ್ತಿಗಳು ಮೇಲುಗೈ ಸಾಧಿಸುತ್ತಿವೆ. ಸ್ವಾತಂತ್ರ್ಯ ಚಳುವಳಿಯ ಕನಸಿನ ಭಾರತವನ್ನು ನಿರ್ಮಾಣ ಮಾಡಬೇಕಾದರೆ ದೇಶ ಒಡೆಯುವ ಈ ಶಕ್ತಿಗಳನ್ನು ಭಾರತದಿಂದ ತೊಲಗಿಸಬೇಕು ಎಂದು ಜನಶಕ್ತಿ ವಾರಪತ್ರಿಕೆಯ ಕಾರ್ಯನಿರತ ಸಂಪಾದಕರಾದ ಎನ್.ಕೆ.ವಸಂತರಾಜ್ ಅಭಿಪ್ರಾಯಪಟ್ಟರು, ನಗರದ ಸ್ವಾಭಿಮಾನಿ ಭವನದಲ್ಲಿ ಜನಶಕ್ತಿ ಓದುಗರ ಬಳಗದ ವತಿಯಿಂದ ನಡೆದ ಕ್ವಿಟ್ ಇಂಡಿಯಾ ಚಳುವಳಿ ಭಾರತ ಬಿಟ್ಟು ತೊಲಗಿ 75 ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಎಂದೂ ಭಾಗವಹಿಸದ ಮತಾಂಧ ಶಕ್ತಿಗಳು ಇಂದು ದೇಶಪ್ರೇಮದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಸಂಘಪರಿವಾರದ ಪ್ರಕಾರ ಬ್ರಿಟೀಷರು ಈ ದೇಶದ ಶತ್ರುಗಳಲ್ಲ. ಬದಲಿಗೆ ದೇಶದಲ್ಲಿರುವ ಮುಸಲ್ಮಾನರು, ಕ್ರಿಶ್ಚಿಯನ್ನರು ನಮ್ಮ ಶತ್ರುಗಳು ಎಂದು ವಾದ ಮಾಡಿದ್ದರು ಜೊತೆಗೆ ದೇಶದ ತ್ರಿವರ್ಣ ಧ್ವಜವನ್ನು ಒಪ್ಪಲಿರಲಿಲ್ಲ ಮತ್ತು ಸಂವಿಧಾನವನ್ನೇ ಅವರು ಒಪ್ಪಿಕೊಂಡಿರಲಿಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಡಾ.ಎಚ್.ಆರ್ ಸ್ವಾಮಿಯವರು ಭಾಗವಹಿಸಿ ಮಾತನಾಡುತ್ತಾ ಗಾಂಧಿಜಿ ಕನಸು ಬ್ರಿಟೀಷರು ಭಾರತದಿಂದ ಹೋದ ನಂತರದಲ್ಲೂ ದೇಶದೊಳಗಿರುವ ಜಾತೀಯತೆ, ಕೋಮುವಾದ ಮತ್ತು ಅಸ್ಪ್ರಶ್ಯತೆಯಂತಹ ಕರಾಳ ಆಚರಣೆಗಳಿಂದ ಭಾರತಕ್ಕೆ ಮುಕ್ತಿ ಸಿಗಬೇಕಿದೆ, ಮೌಢ್ಯ ತೊಲಗಿಸಿ ವೈಜ್ಣಾನಿಕ ಮನೋಧರ್ಮವನ್ನು ಬಿತ್ತಬೇಕಿದೆ ಎಂದರು.  ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೆಶ್ ಅಧ್ಯಕ್ಷತೆ ವಹಿಸಿದ್ದರು.  ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ನವೀನ್ ಕುಮಾರ್ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಮೈಸೂರು: ಸಿಪಿಐ(ಎಂ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಹೋಟೆಲ್ ಗೋವರ್ಧನ ಸಭಾಂಗಣದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷಾಚರಣೆಯ ಅಂಗವಾಗಿ ವಿಚಾರ ಮಂಥನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ವಿ.ಜೆ.ಕೆ.ನಾಯರ್, ಪ್ರೊ.ವಿ.ಎನ್.ಲಕ್ಷ್ಮೀನಾರಾಯಣ, ಸಿಪಿಐ(ಎಂ) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎನ್.ವಿಜಯಕುಮಾರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ವಹಿಸಿದ್ದರು. ಪುಸ್ತಿಕೆ ಬಿಡುಗಡೆಯನ್ನು ವಿ.ಜೆ.ಕೆ.ನಾಯರ್ ನೆರವೇರಿಸಿದರು.

ಹೊಸಪೇಟೆ (ಬಳ್ಳಾರಿ): ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದವರ ವಿರುದ್ಧ ಚಕಾರವೆತ್ತದ ಸಂಘ ಪರಿವಾರದವರು ಇಂದು ದೇಶಪ್ರೇಮದ ಬಗ್ಗೆ ಮಾತನಾಡುವುದಕ್ಕೆ ಯವುದೇ ನೈತಿಕತೆ ಇಲ್ಲ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿದ್ದವರು ಇಂದು ದೇಶಭಕ್ತರೆಂದು ಹೇಳಿಕೊಳ್ಳುವರನ್ನು ಜನ ಎಚ್ಚರಿಕೆಯಿಂದ ಗಮನಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ರತ್ನಾಕರ ಶೆಣೈ ಹೊಸಪೇಟೆಯಲ್ಲಿ ನಡೆದ “ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷ : ಒಂದು ಐತಿಹಾಸಿಕ ವಿಶ್ಲೇಷಣೆ” ಸಭೆಯಲ್ಲಿ ಎಚ್ಚರಿಸಿದರು. ಜಿಲ್ಲಾ ಸಿಪಿಐ(ಎಂ) ಕಾರ್ಯದರ್ಶಿ ಆರ್.ಎಸ್.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಜಂಬಯ್ಯ ನಾಯಕ, ಭಾಸ್ಕರ ರೆಡ್ಡಿ, ಮಾಳಮ್ಮ, ಸತ್ಯಾಬಾಬು, ತಿಪ್ಪಯ್ಯ, ಜಗನ್ನಾಥ, ಗಾಳಿ ಬಸವರಾಜ್ ಭಾಗವಹಿಸಿದ್ದರು.

ಕೋಲಾರ: ಕ್ವಿಟ್ ಇಂಡಿಯಾ ಚಳವಳಿಯ 75 ವರ್ಷಗಳ ದಿನಾಚರಣೆಯ ಅಂಗವಾಗಿ ಕೋಮುವಾದಿ ಶಕ್ತಿಗಳು, ಮೂಲಭೂತ ಶಕ್ತಿಗಳು, ಭಯೋತ್ಪಾದಕರು ದೇಶ ಬಿಟ್ಟು ತೊಲಗುವಂತೆ ಒತ್ತಾಯಿಸಿ ಕೋಲಾರ ನಗರದ ಗಾಂಧಿವನದಲ್ಲಿ ಪ್ರತಿಭಟನೆ ನಡೆಸಲಾಯಿತು.  ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿದರು.  ಪ್ರತಿಭಟನೆಯಲ್ಲಿ ಮುಖಂಡರಾದ ಪಿ.ಶ್ರೀನಿವಾಸ್, ವಿ.ಗೀತಾ, ಟಿ.ಎಂ.ವೆಂಕಟೇಶ್, ಪಾತಕೋಟೆ ನವೀನ್ ಕುಮಾರ್, ವಿಜಯಕೃಷ್ಣ, ಚಲಪತಿ ಮತ್ತಿತರರಿದ್ದರು.

ದಾಂಡೇಲಿ(ಉ.ಕ.): ಸಿಪಿಐ(ಎಂ) ಉತ್ತರಕನ್ನಡ ಜಿಲ್ಲಾ ಸಮಿತಿ ವತಿಯಿಂದ ದಾಂಡೇಲಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷಾಚರಣೆಯ ಅಂಗವಾಗಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಎಸ್ ವರಲಕ್ಷ್ಮೀ, ಮೀನಾಕ್ಷಿ ಸುಂದರಂ, ಕೆಎನ್ ಉಮೇಶ್, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ಸದಸ್ಯರಾದ ಹರೀಶ್ ನಾಯ್ಕ, ಡಿ. ಸ್ಯಾಮ್ಸನ್ ಉಪಸ್ಥಿತರಿದ್ದರು.

ಗಂಗಾವತಿ(ಕೊಪ್ಪಳ): ಗಂಗಾವತಿ ನಗರದಲ್ಲಿ ಕ್ವಿಟ್ ಇಂಡಿಯಾ ನೆನಪಿಗಾಗಿ ಸ್ವಾತಂತ್ರ್ಯ ಚಳುವಳಿಯ ಆಶಯಗಳನ್ನು ಗಾಳಿಗೆ ತೂರಿ ದೇಶವನ್ನು ಮತ್ತೆ ವಿದೇಶೀ ಕಾರ್ಪೋರೇಟರ್ ಹಿಡಿತಕ್ಕೆ ದೂಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಚಳುವಳಿಯನ್ನು ಮಾಡಲಾಯಿತು ಇಸ್ಲಾಂಪುರ ದಿಂದ ಕಲ್ನಾಡಿಗಿಯ ಮುಖಾಂತರ ಶ್ರೀ ಕೃಷ್ಣದೇವರಾಯನ ಸರ್ಕಲ್ ವರೆಗೂ ಮೆರವಣಿಗೆ ಮಾಡಲಾಯಿತು.