ಕನಿಷ್ಠ ಕೂಲಿ 300 ರೂ., ಕಲ್ಯಾಣ ಸೌಲಭ್ಯಗಳ-ಕಾರ್ಮಿಕ ಕಾನೂನು ಸಮರ್ಪಕ ಜಾರಿ : ಸಮ್ಮೇಳನದ ಆಗ್ರಹಗಳು

ಸಂಪುಟ: 
11
ಸಂಚಿಕೆ: 
32
Sunday, 30 July 2017

ಅತಿ ಕಡಿಮೆ ಕೂಲಿಯಲ್ಲಿ ಬದುಕುತ್ತಿರುವ ಬೀಡಿ ಕಾರ್ಮಿಕರು ಮಾರುಕಟ್ಟೆಯಲ್ಲಿ ಅಕಾಶ ಮುಟ್ಟುತ್ತಿರುವ ಅಗತ್ಯ ವಸ್ತುಗಳ ಬೆಲೆಗಳಿಂದಾಗಿ - ಹೊಟ್ಟೆ ತುಂಬಾ ಊಟ, ದುಬಾರಿವಾಗುತ್ತಿರುವ ಶೈಕ್ಷಣಿಕ ವೆಚ್ಚ, ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಹೊಂದಿರಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ದಕ್ಷಿಣ ಕನ್ನಡ ಮೂಡಬಿದ್ರೆಯಲ್ಲಿ ಬೀಡಿ ಕಾರ್ಮಿಕರ 2ನೇ ರಾಜ್ಯ ಸಮ್ಮೇಳನವು 1000 ಬೀಡಿಗೆ 300 ರೂ. ಕನಿಷ್ಠ ಕೂಲಿ ಹಾಗೂ 1514 ಅಂಶಗಳಿಗಿಂತ ಹೆಚ್ಚುವ ಪ್ರತಿ ಅಂಶ ಒಂದಕ್ಕೆ 5 ಪೈಸೆ ತುಟ್ಟಿ ಭತ್ಯೆ ನೀಡುವಂತೆ ನಿರ್ಣಯ ಒಂದನ್ನು ಕೈಗೊಂಡು ಸರ್ಕಾರವನ್ನು ಒತ್ತಾಯಿಸಿದೆ. ರಾಜ್ಯದಲ್ಲಿ ಸರಿಸುಮಾರು 10,000 ಬೀಡಿ ಕಾರ್ಮಿಕರು ಇದ್ದಾರೆ. ಹಾಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದೆ.

ಬೀಡಿ ಕಾರ್ಮಿಕರ ಉತ್ಪಾದಿಸುವ ಬೀಡಿಯ ಮೇಲೆ ವಿಧಿಸಲಾಗಿದ್ದ ಕಲ್ಯಾಣ ಕರ ಜಿ.ಎಸ್.ಟಿ.ಯಿಂದಾಗಿ ಇಲ್ಲದಂತಾಗಿದೆ. ಹಾಗಾಗಿ ಬೀಡಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪೂರಕವಾಗಿ ಸಿಗುತ್ತಿದ್ದ ವಿದ್ಯಾರ್ಥಿ ವೇತನ, ಗಂಭೀರ ಕಾಯಿಲೆಗಳಾದ ಟಿ.ಬಿ., ಕ್ಯಾನ್ಸರ್, ಹೃದಯ ರೋಗಗಳಿಗೆ ಸಿಗುತ್ತಿದ್ದ, ಚಿಕಿತ್ಸೆ ವೆಚ್ಚ ಮರು ಪಾವತಿಗಳನ್ನು ಮಂದುವರಿಸಲು ಕೇಂದ್ರ ಸರ್ಕಾರ - ಹಿಂದೆ ಸಂಗ್ರಹವಾಗುತ್ತಿದ್ದ  ಕಲ್ಯಾಣ ಕರಕ್ಕೆ ಸರಿ ಸಮಾನದ - ಮೊತ್ತವನ್ನೂ ಬಜೆಟ್ ನೀಡುವಂತೆಯೂ ಸಮ್ಮೇಳನ ನಿರ್ಣಯವನ್ನೂ ಅಂಗೀಕರಿಸಿದೆ. ಇದೇ ನಿರ್ಣಯದಲ್ಲಿ - ಅತಿ ಹೆಚ್ಚು ಜನರಿಗೆ ಸಿಗುತ್ತಿದೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದನ್ನೂ ಆನ್‍ಲೈನ್ ಮಾಡಿರುವ ಕ್ರಮವನ್ನೂ ಸಮ್ಮೇಳನ ಕಟುವಾಗಿ ಟೀಕಿಸಿದೆ. ಅಲ್ಲದೆ ಹಿಂದಿನ  ಪದ್ದತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿದೆ. ಕಲ್ಯಾಣ ಯೋಜನೆಗಳಲ್ಲಿ ವಿಪರೀತ ವಿಳಂಬ ಹಾಗೂ ಅಸಮರ್ಪಕತೆಯ ಬಗ್ಗೆ ಕೇಂದ್ರ ಸರ್ಕಾರ/ ಕಲ್ಯಾಣ ಆಯುಕ್ತರು ಗಮನ ಹರಿಸುವಂತೆ ಸಮ್ಮೇಳನವು ಒತ್ತಾಯಿಸಿದೆ. ಕಲ್ಯಾಣ ಯೋಜನೆ ಸೌಲಭ್ಯಗಳು ಸುಲಭವಾಗಿ ಬೀಡಿ ಕಾರ್ಮಿಕರಿಗೆ ತಲುಪಲು ಕ್ರಮವಹಿಸಲು ಒತ್ತಾಯಿಸಿದೆ.

ರಾಜ್ಯದಲ್ಲಿ 7.5 ಲಕ್ಷ ಬೀಡಿ ಕಾರ್ಮಿಕರಿಗೆ ಶಾಸನಾತ್ಮಕ ಕನಿಷ್ಠ ಕೂಲಿ, ಗುರುತಿನ ಚೀಟಿ, ಲಾಗ್ ಪುಸ್ತಕ, ಪಿ.ಎಫ್., ನೀಡದೆ ದುಡಿಸುತ್ತಿದ್ದರೂ ಸರ್ಕಾರಗಳ ಕಂಡು ಕಾಣದಂತೆ ಇದೆ. ಬೀಡಿ ಮತ್ತು ಸಿಗಾರ್ ಕಾರ್ಮಿಕ ಸೇವಾ ಷರತ್ತು-1966. ಕಾರ್ಮಿಕರ ಭವಿಷ್ಯ ನಿಧಿ, ಕನಿಷ್ಠ ವೇತನ ಕಾಯ್ದೆಗಳನ್ನು ಸಮರ್ಪಕ ಜಾರಿಗೆ ಒತ್ತಾಯಿಸಿ ನಿರ್ಣಯವನ್ನು ಕೈಗೊಂಡಿದೆ. ರಾಜ್ಯದಲ್ಲಿ 23-24 ಜಿಲ್ಲೆಗಳಲ್ಲಿ ಬೀಡಿ ಕಾರ್ಮಿಕರಿದ್ದು, ಸರ್ಕಾರ ಈ ಬಗ್ಗೆ ತಕ್ಷಣ ಗಮನ ಹರಿಸುವಂತೆ ಸಮ್ಮೇಳನ ಒತ್ತಾಯಿಸಿದೆ.

2 ದಿನಗಳ ಕಾಲ ನಡೆದ ಸಮ್ಮೇಳನವು. ಧೂಮಪಾನ ನಿಷೇಧ ಕಾಯ್ದೆ, ಕೆಲಸ ಕಳೆದು ಕೊಳ್ಳುತ್ತಿರುವ ಕುರಿತು, ಪರಿಹಾರ-ಪಿಂಚಣಿ..... ಕಳಪೆ ಎಲೆ, ಅತಿ ಹೆಚ್ಚು ಅವರೇಜ್ ಮೂಲಕ ಬೀಡಿ ಕಾರ್ಮಿಕರ ಮೇಲೆ ನಡೆಯುತ್ತಿರುವ ಶೋಷಣೆ ಖಂಡಿಸಿತು.

ಮುಂದಿನ ಅವಧಿಗೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಸಿಐಟಿಯುಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು : ಜೆ.ಬಾಲಕೃಷ್ಣ ಶೆಟ್ಟಿ

ಪ್ರಧಾನ ಕಾರ್ಯದರ್ಶಿ : ಸೈಯದ್ ಮುಜೀಬ್,

ಖಜಾಂಚಿ : ಪದ್ಮವತಿ ಎಸ್.ಶೆಟ್ಟಿ

ಉಪಾಧ್ಯಕ್ಷರುಗಳು: ರಮಣಿ(ಮೂಡಬಿದ್ರೆ), ವಿ.ಕೋದಂಡರಾಮು(ಬೆಂಗಳೂರು), ಮಹಾಬಲ ವಡೇರಹೋಬಳಿ(ಉಡುಪಿ), ನಿಸಾರ್ ಅಹಮದ್ (ಮಂಗಳೂರು), ಸಿ.ಎ.ಖರಾಡೆ(ನಿಪ್ಪಾಣಿ, ಬೆಳಗಾವಿ)

ಕಾರ್ಯದರ್ಶಿಗಳು : ಸಿ.ಕುಮಾರಿ(ಮಂಡ್ಯ), ಸದಾಶಿವ ದಾಸ್(ಮಂಗಳೂರು), ರಾಧ(ಮೂಡಬಿದ್ರೆ), ಉಬೇದ್ ಉಲ್ಲಾ(ದಾವಣಗೆರೆ), ಉಮೇಶ್ ಕುಂದಾರ್(ಉಡುಪಿ)

ಮತ್ತು 35 ಮಂದಿ ರಾಜ್ಯ ಸಮಿತಿ ಸದಸ್ಯರನ್ನು ಸಮ್ಮೇಳನವು ಆಯ್ಕೆ ಮಾಡಿದೆ.