Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ವಿದ್ಯುತ್ ರಂಗದಲ್ಲಿ 30 ಸಾವಿರ ಗುತ್ತಿಗೆ ಕಾರ್ಮಿಕರು

ಸಂಪುಟ: 
11
ಸಂಚಿಕೆ: 
32
Sunday, 30 July 2017

(ಸಮ್ಮೇಳನ ವರದಿಯಿಂದ)
ಜಾಗತೀಕರಣದ ಪ್ರಭಾವ ಕೆ.ಇ.ಬಿಗೆ ಕೂಡಾ ಅಂಟಿ 1999 ರಂದು ಕೆ.ಪಿ.ಟಿ.ಸಿ ಎಲ್ ಸ್ಥಾಪನೆ ಆಯಿತು. ನವ ಉದಾರಿಕರಣ ನೀತಿಗಳಿಂದಾಗಿ ಜೂನ್ 2002ರಲ್ಲಿ ವಿದ್ಯುತ್ ವಿತರಣೆಯನ್ನು 5 ಕಂಪನಿಗಳನ್ನಾಗಿ ವಿಭಜನೆ ಮಾಡಲಾಯಿತು. ಬೆಸ್ಕೋಂ, ಹೆಸ್ಕೋಂ, ಮೆಸ್ಕೋಂ, ಗಸ್ಕೋಂ ನಂತರ ಚೆಸ್ಕೋಂ ಕೂಡ ಪ್ರಾರಂಭವಾಯಿತು. ಈ ವರ್ಷ ಮುಂಗಡ ಪತ್ರದಲ್ಲಿ ಇಂಧನ ಇಲಾಖೆ ನೀಡಿದ ಅನುಧಾನ 12,632 ಕೋಟಿ ಅಂದರೆ ಬಜೆಟ್ ಮೊತ್ತದ 14.65%. ವಿದ್ಯುತ್ ಉತ್ಪಾಧನೆ 2016 ರಲ್ಲಿ 15,962 ಮೆ.ವ್ಯಾ. ಇತ್ತು. ವಿದ್ಯುತ್ ರಂಗದಲ್ಲಿ ಗುತ್ತಿಗೆ ಪದ್ದತಿ ಜಾಗತೀಕರಣದ ಪ್ರಭಾವ  ಜೊತೆಯಲ್ಲಿಯೇ ಆರಂಭವಾಯಿತು. ಕರ್ನಾಕದಲ್ಲ್ಲಿ 30 ಸಾವಿರಕ್ಕೂ ಮಿಕ್ಕಿ ಗುತ್ತಿಗೆ, ತಾತ್ಕಾಲಿಕ ಹಾಗು ದಿನಕೂಲಿ ನೌಕರರನ್ನು ದುಡಿಸಿ ದುರ್ಲಾಭ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಸ್ವಲ್ಪ ಮಾತ್ರದಲ್ಲಿ ಇಂಜಿನೀಯರುಗಳನ್ನು ಮತ್ತು ಮೇಲ್ವಿಚಾರಕರನ್ನು ಮಾತ್ರ ಕಾಯಂ ನೌಕರರನ್ನಾಗಿ ನೇಮಕ ಮಾಡಲಾಗಿದೆ. ವಿದ್ಯುತ್ ಕಾಯ್ದೆ 2003 ಜಾರಿ ಆದ ಬಳಿಕ ಖಾಸಗಿ ರಂಗದಲ್ಲಿ 9% ವಿದ್ಯುತ್ ಉತ್ಪಾದನೆ. ಆದರೆ 2013 ಕ್ಕೆ ಇದು 30% ಏರಿದೆ. ಖಾಸಗಿ ರಂಗದಲ್ಲಿ ಗುತ್ತಿಗೆ ನೌಕರರ ಸಂಖ್ಯೆ ಕಾಯಂ ನೌಕರರಿಗಿಂತ ಬಹಳ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ವಿತರಣೆಯನ್ನು 5 ಕಂಪನಿಗಳಾಗಿ ಮಾಡಿದ ನಂತರ ಗುತ್ತಿಗೆ ಪದ್ದತಿ ಮತ್ತು ಗುತ್ತಿಗೆ ನೌಕರರ ಶೋಷಣೆ ಮಿತಿ ಮೀರಿದೆ. ಇಲಾಖೆ ವರದಿ ಪ್ರಕಾರ 2016-17 ರಲ್ಲಿ 1501 ವಿದ್ಯುತ್ ಅಪಘಾತಗಳಾಗಿದೆ ಈ ಅಪಘಾತಗಳಲ್ಲಿ ಗುತ್ತಿಗೆ ಕಾರ್ಮಿಕರು ಬಹುತೇಕ ಸಾವನ್ನಪ್ಪುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರ ಸಾವಾದರೂ ಪೋಲೀಸ್ ಕೇಸು ದಾಖಲೆ ಮಾಡಿಕೊಳ್ಳಲು ನಿರಾಕರಿಸಿದ ಘಟನೆಗಳು ಇವೆ. ಇಲಾಖೆ ನೇರ ನೇಮಕಾತಿ ಮಾಡಿಕೊಳ್ಳುವ ಮುಖಾಂತರ ೧೫-೨೦ ವರ್ಷಗಳಿಂದ ದುಡಿದ ಗುತ್ತಿಗೆ ಕಾರ್ಮಿಕರನ್ನು ಗುತ್ತಿಗೆಯನ್ನು ರದ್ದು ಪಡಿಸಿದೆ ಎಂಬ ಒಂದು ಸಣ್ಣ ಮೆಸೇಜ್ ಮಾಡುವ ಮುಖಾಂತರ ಕೆಲಸದಿಂದ ಅಮಾನವೀಯವಾಗಿ ತೆಗೆದುಹಾಕಲಾಗುತ್ತಿದೆ. ಇಲಾಖೆಯ ಬಳಸಿ ಬಿಸಾಡುವ ನೀತಿಯಿಂದ ಕಾರ್ಮಿಕರು ಕಂಗಾಲಾಗಿರುತ್ತಾರೆ.
ಸಮ್ಮೇಳನದ ತೀರ್ಮಾನಗಳು
1.  5 ಕನಿಷ್ಠ ಬೇಡಿಕೆ ಮುಂದಿಟ್ಟು ನಿರಂತರ ಚಳವಳಿ
     ೧) ಸಮಾನ ಕೆಲಸಕ್ಕೆ ಸಮಾನ ವೇತನ
     ೨) ಇಂಧನ ಇಲಾಖೆಯ ಎಲ್ಲಾ ವಿಭಾಗದ ಗುತ್ತಿಗೆ ಕಾರ್ಮಿಕರನ್ನು ಖಾಯಮಾತಿಗಾಗಿ
     ೩) ನೇರ ನೇಮಕಾತಿ ತಕ್ಷಣ ನಿಲ್ಲಿಸಲು
     ೪) ಕನಿಷ್ಠ ಮಾಸಿಕ ವೇತನ ರೂ.೨೧,೦೦೦/
     ೫) ಗುತ್ತಿಗೆ ಕಾರ್ಮಿಕರನ್ನು ಬಳಸಿ ಬಿಸಾಡುವ ನೀತಿಯ ವಿರುದ್ದ ಹೊರಾಟ.
 
2. ಈ ಬೇಡಿಕೆಗಳನ್ನು ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟು ಹೊರಾಟಗಳು. ಅಗಸ್ಟ್ ೯ ರಂದು ಕಾರ್ಡ್ ಚಳವಳಿ. ಎಲ್ಲಾ ಗುತ್ತಿಗೆ ಕಾರ್ಮಿಕರು ಅಂದು ಸ್ವತಃ ೪ ಮಂದಿಗೆ ಕಾರ್ಡ್ ಬರೆಯುವುದು. ೧) ಮುಖ್ಯಮಂತ್ರಿ, ೨) ಇಂಧನ ಸಚಿವರಿಗೆ ೩) ಕಾರ್ಮಿಕ ಸಚಿವರಿಗೆ ೪) ಸರ್ಕಾದ ಮುಖ್ಯ ಕಾರ್ಯದರ್ಶಿಯವರಿಗೆ.

3. ಅಗಸ್ಟ್ 25 ರಂದು ಸ್ಥಳೀಯ ಶಾಸಕರಿಗೆ ಪ್ರಮುಖ ಬೇಡಿಕೆಗಳನ್ನು ಇಟ್ಟು ಮನವಿ.
4. ಅಗಸ್ಟ್ 31 ರಂದು ಚೆಸ್ಕಾಂ, ಜೆಸ್ಕಾಂ ಮತ್ತು ಬೆಸ್ಕಾಂ ಎದುರು 24 ಗಂಟೆಗಳ ಉಪವಾಸ ಸತ್ಯಾಗ್ರಹ.
5. ಸೆಪ್ಟೆಂಬರ್ 4 ರಂದು ರಂದು ಮೆಸ್ಕಾಂ ಮತ್ತು ಹೆಸ್ಕಾಂ ಎದುರು 24 ಗಂಟೆಗಳ ಉಪವಾಸ ಸತ್ಯಾಗ್ರಹ.
6. ಸೆಪ್ಟೆಂಬರ್ 14 ರಂದು ಸಿ.ಐ.ಟಿ.ಯು ವತಿಯಿಂದ ನಡೆಸುವ ಗುತ್ತಿಗೆ ಪದ್ದತಿ ರದ್ದಾಗಲು, ಕನಿಷ್ಠ ವೇತನ ನೀಡಲು ಒತ್ತಾಯಿಸಿ ನಡೆಸುವ ಹೋರಾಟದಲ್ಲಿ ಎಲ್ಲಾ ಗುತ್ತಿಗೆ ಕಾರ್ಮಿಕರು ಭಾಗವಹಿಸುವುದು.
7. ಎಲ್ಲಾ ಜಿಲ್ಲೆಯಲ್ಲಿ 1 ವರ್ಷ ಅವದಿಯಲ್ಲಿ ಜಿಲ್ಲಾ ಸಮಿತಿಗಳನ್ನು ರಚನೆ ಮಾಡುವುದು.
8. ಸಂಘದ ಸದಸ್ಯತ್ವ 10 ಸಾವಿರ ಮಾಡುವುದು,
9. ಖಾಯಂ ನೌಕರರನ್ನು ನಮ್ಮ ಸಂಘದ ಸದಸ್ಯರನ್ನಾಗಿ ಮಾಡುವುದು.
10. ಎಲ್ಲಾ ಜಿಲ್ಲೆಗಳಲ್ಲಿ ಪೂರ್ಣ ಕಾಲ ಕಾರ್ಯಕರ್ತರನ್ನು ನೇಮಕ ಮಾಡುವುದು.
 
ಅಖಿಲ ಭಾರತ ವಿದ್ಯುತ್ ನೌಕರಕರ ಒಕ್ಕೂಟ (EEFI)ದ ಅಧ್ಯಕ್ಷರಾದ ಕಾಂ.ಕೆ.ಒ.ಹಬೀಬ್,  ಕಾರ್ಯದರ್ಶಿಗಳಾದ ಅಜಿತ್ ಕುಮಾರ್.  ಕಾಂ.ವಿ.ಜೆ.ಕೆ ನಾಯರ್ ಹಿರಿಯ ಕಾರ್ಮಿಕ ಮುಖಂಡರು 2 ದಿನಗಳ ಕಾಲ ಸಮ್ಮೇಳನದ ಕಲಾಪದಲ್ಲಿ ಭಾಗವಹಿಸಿದರು. ಸಿ.ಐ.ಟಿ.ಯು ರಾಜ್ಯಾಧ್ಯಕ್ಷರಾದ ಕಾಂ.ಎಸ್.ವರಲಕ್ಷ್ಮಿ ಅವರ ನೇತೃತ್ವದಲ್ಲಿ ಮತ್ತು ಅವರ ಸಲಹೆಯಂತೆ ಈ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಹೊಸ ರಾಜ್ಯ ಸಮಿತಿಗೆ ಅವರ ಮಾರ್ಗ ನಿರ್ದೇಶನದ ಅಗತ್ಯವಿದೆ. ಸಮ್ಮೇಳನ ಯಶಸ್ವಿಗೆ ಶ್ರಮಿಸಿದ ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ ಸಂಗಾತಿಗಳ ಶ್ರಮ ಸ್ಲಾಘನೀಯ. ಸಂಗಾತಿ ಗೋಪಿ, ಮಹೇಶ್, ಪ್ರಸನ್ನಕುಮಾರ್ ಮತ್ತು ಅವರ ತಂಡದ ಎಲ್ಲಾ ಸದಸ್ಯರಿಗೂ ಈ ಸಮ್ಮೇಳನದ ಹೃದಯಸ್ಪರ್ಶಿ ಅಭಿನಂದನೆಗಳು. ಈ ಸಮ್ಮೇಳನ ಇಷ್ಟು ಯಶಸ್ವಿಯಾಗಲು ಸಿ.ಐ.ಟಿ.ಯು ರಾಜ್ಯಾಧ್ಯಕ್ಷರಾದ ಕಾಂ.ಎಸ್.ವರಲಕ್ಷ್ಮಿ ಅವರ ನಿರಂತರ ಪ್ರಯತ್ನಗಳು ಸ್ಲಾಘನೀಯ.