ಗುತ್ತಿಗೆ ಕಾರ್ಮಿಕರನ್ನು ಇಂಧನ ಇಲಾಖೆ ಬಳಸಿ ಬಿಸಾಡುತ್ತಿದೆ : ವರಲಕ್ಷ್ಮಿ

ಸಂಪುಟ: 
11
ಸಂಚಿಕೆ: 
32
Sunday, 30 July 2017

ಶಿವಕುಮಾರ್.ಎಸ್.ಎಂ

ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ 2ನೇ ರಾಜ್ಯ ಸಮ್ಮೇಳನದಲ್ಲಿ ಆರೋಪ

ಇಂಧನ ಇಲಾಖೆಯವರು ಬಳಸಿ ಬಿಸಾಡುವ ಕೆಲಸ ಮಾಡುತ್ತಿದ್ದಾರೆ. ವಿದ್ಯುತ್ ಅನಾಹುತಗಳಲ್ಲಿ ಮೃತ ಪಟ್ಟ ಗುತ್ತಿಗೆ ಕಾರ್ಮಿಕರಿಗೆ ಪರಿಹಾರ ನೀಡದೆ ಇಂಧನ ಇಳಾಖೆ ಕಾರ್ಮಿಕರಿಗೆ ಮೋಸ ಮಾಡಿದೆ. ಎಂದು ಸಿ.ಐ.ಟಿ.ಯು ರಾಜ್ಯಾಧ್ಯಕ್ಷರಾದ ಕಾಂ.ವರಲಕ್ಷ್ಮಿ ಅವರು ಹೇಳಿದರು. ಅವರು ಕಾಂ.ಎಸ್.ಪ್ರಸನ್ನ ಕುಮಾರ್ ವೇದಿಕೆ ಶಿಕ್ಷಕರ ಸದನ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (KSEWF)ನ 2ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡುತ್ತಿದ್ದರು. ಸಿ.ಐ.ಟಿ.ಯು ವಿದ್ಯುತ್ ಗುತ್ತಿಗೆ ಕಾರ್ಮಿಕರನ್ನು ಖಾಯಮಾತಿಗಾಗಿ ನಿರಂತ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.

ಇಂಧನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವಿಭಾಗದ ಗುತ್ತಿಗೆ ಕಾರ್ಮಿಕರನ್ನು ಖಾಯಂಮಾಡಬೇಕು. ಸರ್ವೊಚ್ಚ ನ್ಯಾಯಾಲದ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಎಲ್ಲಾ ವಿದ್ಯುತ್ ಗುತ್ತಿಗೆ ಕಾರ್ಮಿಕರು 26-10-2016 ರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಅರ್ಜಿ ಸಲ್ಲಿಸ ಬೇಕು ಎಂದು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಿಐಟಿಯು ಉಪಾಧ್ಯಕ್ಷ ಕಾ. ವಿ.ಜೆ.ಕೆ, ನಾಯರ್ ಹೇಳಿದರು. ಮುಖ್ಯ ಅತಿಥಿಗಳಾದ ಅಖಿಲ ಭಾರತ ವಿದ್ಯುತ್ ನೌಕರಕರ ಒಕ್ಕೂಟದ (EEFI) ಪ್ರಧಾನ ಕಾರ್ಯದರ್ಶಿ ಕಾಂ. ಪ್ರಶಾಂತಿ ನಂದಿ ಚೌದರಿ ಅವರು ಸಂಘದ ಹೋರಾಟದಿಂದ ಆಂದ್ರ, ತೆಲಂಗಾಣ ಮತ್ತು ತಮಿಳು ನಾಡಿನಲ್ಲಿ ೭೫,೦೦೦ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ಕರ್ನಾಟಕದಲ್ಲಿಯೂ ಸಂಘ ಬಲಗೊಂಡಿದೆ ಎಂದು ತಿಳಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ

ಇನ್ನೊರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆ.ಎಸ್.ಪುಟ್ಟಣ್ಣಯ್ಯ ಅವರು ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿನ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವೋತೆ ಮಾಡ ಬೇಕು ಎಂದು ಹೇಳಿದರು. ಕೆ.ಸುಬ್ಬರಾವ್, ವಿ.ಹಿಟ್ಟಣಗಿ ಉದ್ಘಾಟನೆ ಸಮಾರಂಬದಲ್ಲಿ ಮತನಾಡಿದರು. ಸಂಘದ ಅಧ್ಯಕ್ಷರಾದ ಕಾಂ.ಜೆ.ಸತ್ಯ ಬಾಬು ಸಭೆಯ ಅಧ್ಯಕ್ಷತೆ ವಹಿಸಿದರು.  ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಗೀತಾ (ಜೀವನ ವಿಮಾ ನೌಕರರ ಸಂಘ) ಅವರು ಕಾಂ. ಪ್ರಶಾಂತಿ ನಂದಿ ಚೌದರಿ ಅವರ ಭಾಷಣವನ್ನು ಭಾಷಾಂತರ ಮಾಡಿದರು. ಶಿಕ್ಷಕರ ಸದನ ವಿದ್ಯುತ್ ಗುತ್ತಿಗೆ ಕಾರ್ಮಿಕರಿಂದ ತುಂಬಿ ತುಳುಕಿತು. ಕಾರ್ಮಿಕರು ಭಾಗವಹಿಸಿದ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿದೆ. ಸಂಗಾತಿ ಗೋಪಿಯವರು ಎಲ್ಲರನ್ನು ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್.ಎಸ್.ಎಂ ಪ್ರಾಸ್ತಾವಿಕ ಬಾಷಣ ಮಾಡಿದರು.

ಸಮ್ಮೇಳನಕ್ಕೆ ಮೊದಲು ಬೆಂಗಳೂರು ರ್‍ಯೆಲ್ವೆ ನಿಲ್ದಾಣದಿಂದ ಶಿಕ್ಷಕರ ಸದನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವವಣಿಗೆಯನ್ನು ಸಿ.ಐ.ಟಿ.ಯು ರಾಜ್ಯಾಧ್ಯಕ್ಷರಾದ ಕಾಂ.ವರಲಕ್ಷ್ಮಿ ಅವರು ಉದ್ಘಾಟಿಸಿದರು. ಮೆರವಣಿಗೆಯ ನೇತೃತ್ವನ್ನು ಸಂಘದ ಅಧ್ಯಕ್ಷರಾದ ಕಾಂ. ಜೆ. ಸತ್ಯ ಬಾಬು ವಹಿಸಿದರು. ಸುಮಾರು 3000 ಗುತ್ತಿಗೆ ಕಾರ್ಮಿಕರು ಮೆರವವಣಿಗೆಯಲ್ಲಿ ಭಾಗವಹಿಸಿದ್ದು. ಸಿ.ಐ.ಟಿ.ಯು ಮುಖಂಡರುಗಳಾದ ಮಾಲಿನಿ ಮೇಸ್ತ ಮತ್ತು ಲಕ್ಷ್ಮಿ ಗೌರಮ್ಮ ಭಾಗಿಯಾದರು. ಐದೂ ಎಸ್ಕಾಂ, ಕೆ.ಪಿ.ಟಿ.ಸಿ.ಎಲ್ ಮತ್ತು ಕೆ.ಪಿ.ಸಿ ಗುತ್ತಿಗೆ ಕಾರ್ಮಿಕರು 2 ಕಿ.ಮಿ. ದೂರದ ಶಿಕ್ಷಕರ ಸದನಕ್ಕೆ ಮೆರವಣಿಗೆಯಲ್ಲಿ ಸಾಗಿದರು.

ಪ್ರತಿನಿಧಿ ಸಮ್ಮೇಳನ

ಜುಲೈ 19 ರಂದು ಸಂಜೆ 5 ಗಂಟೆಗೆ ಪ್ರತಿನಿಧಿ ಸಮ್ಮೇಳನ ಶೇಷಾದ್ರಿಪುರಂ ಸಭಾ ಭವನದಲ್ಲಿ ಕಾಂ.ಎಸ್ .ಪ್ರಸನ್ನ ಕುಮಾರ್ ವೇದಿಕೆಯಲ್ಲಿ ನಡೆಯಿತು. ಸಿ.ಐ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾಂ.ಮೀನಾಕ್ಷಿ ಸುಂದರಂ ಅವರು ಉದ್ಘಾಟಿಸಿದರು. ಅವರ ಉದ್ಘಾಟನಾ ಭಾಷಣದಲ್ಲಿ ಕರ್ನಾಟಕ ರಾಜ್ಯದ ಈವತ್ತಿನ ಕಾರ್ಮಿಕರ ಪರಿಸ್ಥಿತಿ ಹಾಗು ಗುತ್ತಿಗೆ ಕಾರ್ಮಿಕರು ಎದುರಿಸುವ ಸಮಸ್ಯೆಗಳನ್ನು ವಿವರಿಸಿದರು.

ಪ್ರತಿನಿಧಿ ಸಮ್ಮೇಳನದ ಕಲಾಪ ನಡೆಸಲು ಸಂಘದ ಅಧ್ಯಕ್ಷರಾದ ಕಾಂ.ಜೆ.ಸತ್ಯ ಬಾಬು ಅವರ ನೇತೃತ್ವದಲ್ಲಿ ಸಮಿತ್ (ಸುಳ್ಯ), ಗೋಪಿ (ಕನಕಪುರ), ಸುರೇಶ್ (ಮ್ಯೆಸೂರು), ವಿರೇಶ್ (ಬಳ್ಳಾರಿ), ತಿಪ್ಪೇ ಸ್ವಾಮಿ, ದೊಡ್ಡಪ್ಪ ಬೋಳಗಟ್ಟಿ, ಪ್ರಸನ್ನ ಕುಮಾರ್ ಇವರನ್ನು ಒಳಗೊಂಡ ಒಂದು ಅಧ್ಯಕ್ಷೀಯ ಮಂಡಳಿಯನ್ನು ರಚಿಸಲಾಯಿತು.  ಮೊದಲಿಗೆ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ಕಾಂ.ಜೆ.ಸತ್ಯ ಬಾಬು ಅವರು ಶ್ರದ್ದಾಂಜಲಿ ನಿರ್ಣಯವನ್ನು ಮಂಡಿಸಿದರು. ಉದ್ಘಾಟನೆಯ ಬಳಿಕ ೫ ವರ್ಷದ ಚಟುವಟಿಕಾ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್.ಎಸ್.ಎಂ ಮಂಡಿಸಿದರು. ಸಿ.ಐ.ಟಿ.ಯು ರಾಜ್ಯಾಧ್ಯಕ್ಷರಾದ ಕಾಂ.ವರಲಕ್ಷ್ಮಿ ಪ್ರತಿನಿಧಿ ಸಮ್ಮೇಳವನ್ನು ಉದ್ದೇಶಿಸಿ ಕರ್ನಾಟಕ ರಾಜ್ಯದ ವಿದ್ಯುತ್ ಗುತ್ತಿಗೆ ಕಾರ್ಮಿಕರು ಎದುರಿಸುವ ಜ್ವಲಂತ ಸಮಸ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ವಿದ್ಯುತ್ ಗುತ್ತಿಗೆ ಕಾರ್ಮಿಕರು ಯಾಕ್ಕೆ ಸಂಘಟನೆ ಮಾಡಬೇಕು ಮತ್ತು ಯಾವ ರೀತಿ ಚಳವಳಿಯನ್ನು ಮುಂದುವರಿಸಬೇಕು ಎಂದು ವಿವರಿಸಿದರು. ಅಖಿಲ ಭಾರತ ವಿದ್ಯುತ್ ನೌಕರಕರ ಒಕ್ಕೂಟ (EEFI) ದ ಅಧ್ಯಕ್ಷರಾದ ಕಾಂ.ಕೆ.ಒ.ಹಬೀಬ್ ಅವರು ಪ್ರತಿನಿಧಿ ಸದಸ್ಯರನ್ನು ಉದ್ದೇಶಿಸಿ ಮಾತಾಡುವಾಗ ಭಾರತದ ಇಂಧನ ಕ್ಷೇತ್ರದಲ್ಲಿ ನಡೆಯುವ ಕಾರ್ಮಿಕರ ಶೋಷಣೆ ಮತ್ತು ಸಂಘಟನೆಯ ಮಧ್ಯ ಪ್ರವೇಶ ಹಾಗು ಸಂಘಟನೆ  ವಿಸ್ತಾರಗೊಳಿಸುವ  ಅಗತ್ಯದ ಬಗ್ಗೆ ತಿಳಿಸಿದರು. ಅಖಿಲ ಭಾರತ ವಿದ್ಯುತ್ ನೌಕರಕರ ಒಕ್ಕೂಟದ ಕಾರ್ಯದರ್ಶಿಗಳಾದ ಅಜಿತ್ ಕುಮಾರ್. ಕಾಂ.ವಿ.ಜೆ.ಕೆ ನಾಯರ್ ಪ್ರತಿನಿಧಿ ಸಮ್ಮೇಳನದ ಕಲಾಪದಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಲಾಪ ರಾತ್ರಿ ೧೦ ಗಂಟೆವರೆಗೆ ನಡೆಯಿತು. ಜಿಲ್ಲಾವಾರು ಗುಂಪು ಚರ್ಚೆ ಕೂಡ ನಡೆಯಿತು.  ಒಟ್ಟು ೨೦೦ ಪ್ರತಿನಿಧಿ ಸಂಗಾತಿಗಳು ಪ್ರತಿನಿಧಿ ಸಮ್ಮೇಳನದ ಕಲಾಪದಲ್ಲಿ ಹಾಜರಿದ್ದರು.

ವರದಿಯ ಮೇಲೆ ಚರ್ಚೆ

ಜುಲೈ ೨೦ರಂದು ಬೆಳೆಗ್ಗೆ 9.30 ಕ್ಕೆ ದ್ವಜಾರೋಹಣ ಮಾಡುವ ಮೂಲಕ 2ನೇ ದಿನದ ಪ್ರತಿನಿಧಿ ಸಮ್ಮೇಳನದ ಕಲಾಪ ಆರಂಭವಾಯಿತು. ಜಿಲ್ಲಾವಾರು ವರದಿಯ ಮೇಲೆ ನಡೆದ ಗುಂಪು ಚರ್ಚೆಯಲ್ಲಿ 25 ಮಂದಿ ಪ್ರತಿನಿಧಿಗಳು ಐದೂ ಎಸ್ಕಾಂ, ಕೆ.ಪಿ.ಟಿ.ಸಿ.ಎಲ್ ಮತ್ತು ಕೆ.ಪಿ.ಸಿ ಗುತ್ತಿಗೆ ಕಾರ್ಮಿಕರ ವತಿಯಿಂದ ವರದಿಯ ಮೇಲೆ ಮಾತನಾಡಿದರು. ಇಡೀ ರಾಜ್ಯದಲ್ಲಿ ವಿದ್ಯುತ್ ಗುತ್ತಿಗೆ ಕಾರ್ಮಿಕರ ಪರಿಸ್ಥಿತಿಯನ್ನು ಪ್ರತಿನಿಧಿ ಸಂಗಾತಿಗಳು ವಿವರಿಸಿದರು. ನಮ್ಮ ರಾಜ್ಯದಲ್ಲಿ ಅತಂತ್ರ ಸ್ತಿತಿಯಲ್ಲಿರುವ ವಿದ್ಯುತ್ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಹೋಗಲಾಡಿಸಲು ಅಗತ್ಯ ಕ್ರಮಗಳ ಬಗ್ಗೆ ಕಾರ್ಮಿಕರು ವಿವರಿಸಿದರು. ವರದಿಯ ಚರ್ಚೆಗಳ ಮೇಲಿನ ಉತ್ತರವನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳು ನೀಡಿದರು.
ಹೊಸ ರಾಜ್ಯ ಸಮಿತಿಯನ್ನು ಅಯ್ಕೆ ಮಾಡಲಾಯಿತು. ೧೭ ಜನ ಪಧಾಧಿಕಾರಿಗಳು ಹಾಗೂ ೩೦ ಮಂದಿ ಇರುವ ರಾಜ್ಯ ಸಮಿತಿಯನ್ನು ಅವಿರೋದವಾಗಿ ಅಯ್ಕೆ ಮಾಡಲಾಗಿದೆ. ಅ ಧ್ಯಕ್ಷರಾಗಿ ಜೆ.ಸತ್ಯ ಬಾಬು (ಬಳ್ಳಾರಿ), ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್.ಎಸ್.ಎಂ (ಬೆಳ್ತಂಗಡಿ, ದ.ಕ.) ಖಜಾಂಜಿಯಾಗಿ ಸುರೇಶ್. ಹೆಚ್ (ಬೆಂಗಳೂರು), ಸಂಘಟನಾ ಕಾರ್ಯದರ್ಶಿಗಳಾಗಿ ಗೋಪಿ. (ಕನಕಪುರ) ವೀರೇಶ್ ಕುಬಾರ್ (ಬಳ್ಳಾರಿ) ಎಲ್.ಪಿ.ಮಹೇಶ್ (ಬೆಳ್ತಂಗಡಿ.ದ.ಕ) ಉಪಾಧ್ಯಕ್ಷರುಗಳಾಗಿ ದೊಡ್ಡಪ್ಪ ಬೋಳಗಟ್ಟಿ (ಹಾವೇರಿ) ಸುರೇಶ್ (ಮೈಸೂರು) ಮಹೇಶ್ (ಬೆಂಗಳೂರು) ಅಮೃತ್ ಡಿ ಸಜ್ಜನಕರ (ಕಲಬುರ್ಗಿ) ಕಾರ್ಯದರ್ಶಿಗಳಾಗಿ ಸಮಿತ್ ಸುಳ್ಯ (ದ.ಕ.) ಪ್ರಸನ್ನ ಕುಮಾರ್ (ರಾಮ ನಗರ) ಆನಂದ ಅಂಗಡಿ (ಬೆಳಗಾವಿ), ತಿಪ್ಪೇ ಸ್ವಾಮಿ (ಬಳ್ಳಾರಿ) ಆಯ್ಕೆಯಾದರು.