ಈಗ ಕೃಷಿಯಲ್ಲಿ ಸ್ವಯಂಪೂರ್ಣತೆ ಮತ್ತು ಸಮೃದ್ಧಿಗೆ ಕೇರಳದ ಜನತಾ ಪರ್ಯಾಯ ಮಾದರಿ

ಸಂಪುಟ: 
11
ಸಂಚಿಕೆ: 
30
Sunday, 16 July 2017

ದೇಶದ ಇತರೆರೆಗಳಲ್ಲಿ ಸರಕಾರಗಳು ರೈತ-ವಿರೋಧಿ ಧೋರಣೆಗಳನ್ನು ತಳೆದು ಒಂದು ವಯಾಪಕವಾದ ರೈತ ಹೋರಾಟ ಭುಗಿಲೆದ್ದಿರುವಾಗ ಕೇರಳದಲ್ಲಿ ಒಂದು ಭಿನ್ನ ಪರಿಸ್ತಿತಿ ಏರ್ಪಟ್ಟಿದೆ. ಎಲ್‍ಡಿಎಫ್ ಸರಕಾರ ಕಳೆದ ಒಂದು ವರ್ಷದಲ್ಲಿ ಕೃಷಿಯಲ್ಲಿ ಸ್ವಯಂಪೂರ್ಣತೆ ಸಾಧಿಸಲು ಮತ್ತು ಕೃಷಿಯಲ್ಲಿ ತೊಡಗಿರುವ ರೈತರು ಮತ್ತು ಕೃಷಿ ಕಾರ್ಮಿಕರ ಸಮೃದ್ಧಿಗೆ ವಿವಿಧ ಮಟ್ಟಗಳಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಈ ಹಿಂದೆ ಕೇರಳ ಮಾದರಿಯೆಂದು ಹೆಸರು ತಂದು ಕೊಟ್ಟ ಸಾಕ್ಷರತಾ ಆಂದೋಲನ ಮತ್ತು ಜನತಾ ಯೋಜನೆಯಂತೆ ಜನಸಾಮಾನ್ಯರನ್ನು ಒಳಗೊಳ್ಳುವ ಪ್ರಯತ್ನಗಳು ಈ ಕ್ರಮಗಳನ್ನು ವಿಶಿಷ್ಟಗೊಳಿಸಿವೆ.

ಕೇರಳ ತನ್ನ ಎಲ್ಲ ಜನರ ಬಳಕೆಗೆ ಬೇಕಾಗುವಷ್ಟು ಆಹಾರಧಾನ್ಯಗಳು ಮತ್ತು ತರಕಾರಿಗಳಿಗೂ ಬೇರೆ ರಾಜ್ಯಗಳನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. ಆದ್ದರಿಂದ ಸ್ವಯಂಪೂರ್ಣತೆ ಸಾಧಿಸಲು ಸಾಗುವಳಿ ಪ್ರದೇಶವನ್ನು ಹೆಚ್ಚಿಸುವುದು ಮೊದಲ ಆದ್ಯತೆ- ಮುಖ್ಯವಾಗಿ ರಾಜ್ಯದ ಮುಖ್ಯ ಆಹಾರಧಾನ್ಯವಾದ ಭತ್ತದ ಉತ್ಪಾದನೆಗೆ. ಹಿಂದಿನ ಎಲ್‍ಡಿಎಫ್ ಸರಕಾರ ಇದಕ್ಕಾಗಿ ‘ಭತ್ತ ಮತ್ತು ತರಿಜಮೀನು ಸಂರಕ್ಷಣಾ ಕಾಯ್ದೆ’ಯನ್ನು ಜಾರಿ ಮಾಡಿತ್ತು. ಆದರೆ ನಂತರ ಬಂದ ಯುಡಿಎಫ್ ಸರಕಾರ ಅದನ್ನು ಅಭಿವೃದ್ಧಿಯ ಹೆಸರಲ್ಲಿ ವಿಕೃತಗೊಳಿಸಿ ಭತ್ತದ ಸಾಗುವಳಿ ಪ್ರದೇಶ ಕುಂಠಿತಗೊಳ್ಳುವಂತೆ ಮಾಡಿತ್ತು. ಆದ್ದರಿಂದ ಈ ಎಲ್‍ಡಿಎಫ್ ಸರಕಾರ ಮೊದಲಿಗೆ ಇದನ್ನು ಸರಿಪಡಿಸಿ 4.27 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ತರಿಭೂಮಿ ಸಂರಕ್ಷಣೆಯನ್ನು ಜಾರಿ ಮಾಡಿದೆ, ಈ ಕಾಯ್ದೆಯ ಅಡಿಯಲ್ಲಿ ಒಂದು ಭೂಮಾಹಿತಿ ಆಗರವನ್ನು ರಚಿಸಿ ಕೃಷಿ ಭೂಮಿಯ ಅತಿಕ್ರಮಣ ಇನ್ನು ಮುಂದೆ ಅಭಿವೃದ್ಧಿ ಹೆಸರಲ್ಲಿ, ರಿಯಲ್ ಎಸ್ಟೇಟ್‍ಗಳು ಇತ್ಯಾದಿಗೆ ನಡೆಯದಂತೆ ಮಾಡಿದೆ. 2017 ರನ್ನು ‘ಭತ್ತದ ವರ್ಷ’ವಾಗಿ ಆಚರಿಸಲಾಗುತ್ತಿದ್ದು, ‘ನಮ್ಮ ಭತ್ತ ನಮ್ಮ ಆಹಾರ’ ಎಂಬ ಘೋಷಣೆಯೊಂದಿಗೆ ಜನ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭತ್ತದ ಸಾಗುವಳಿಯನ್ನು 2 ಲಕ್ಷ ಹೆಕ್ಟೇರುಗಳಿಂದ 3ಲಕ್ಷ ಹೆಕ್ಟೇರುಗಳಿಗೆ ಏರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

‘ಹರಿತ ಕೇರಳಂ’ ಮಿಶನ್ ಅನ್ನು ಆರಂಭಿಸಿ ಕೆರೆ, ಸರೋವರ, ನದಿ ಮತ್ತು ತೊರೆಗಳಂತಹ ಜಲಾಶಯಗಳಿಂದ ಕೊಳೆ ನಿವಾರಣೆಯ ಮೂಲಕವೂ ಸಾಗುವಳಿ ಜಮೀನನ್ನು ವಿಸ್ತರಿಸುವ ಪ್ರಯತ್ನ ಕೈಗೊಳ್ಳಲಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿ ಕೃಷಿಯ ಬೆಳವಣಿಗೆಗೆ 20 ಕೋಟಿ ರೂ.ಗಳ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ, ನಗರ ಪ್ರದೇಶಗಳಲ್ಲೂ ಕೃಷಿಗೆ ಪ್ರೋತ್ಸಾಹ ನೀಡಲು ಶಾಲಾ, ಕಾಲೇಜುಗಳು ಮತ್ತು ಇತರ ಸಂಸ್ಥೆಗಳ ನೆರವನ್ನು ಪಡೆಯಲಾಗುತ್ತಿದೆ.

ಎರಡನೆಯದಾಗಿ, ಕೃಷಿ ಉತ್ಪನ್ನಗಳ ಪರಿಣಾಮಕಾರಿ ಮಾರಾಟಕ್ಕೆ ಓಣಂ, ವಿಶು, ಕ್ರಿಸ್‍ಮಸ್, ರಂಝಾನ್ ಮುಂತಾದ ಹಬ್ಬಗಳ ಸಮಯದಲ್ಲಿ ಪ್ರತಿ ಪಂಚಾಯತಿನಲ್ಲಿ ವಿಶೇಷ ಸಂತೆಗಳು ಮತ್ತು ಮಾರುಕಟ್ಟೆಗಳನ್ನು ಕಲ್ಪಿಸಲಾಗಿದೆ, ಸಾವಯವ ತರಕಾರಿUಳು ಜನರಿಗೆ ಲಭ್ಯವಾಗುವಂತೆ ಮುತುವರ್ಜಿ ವಹಿಸಲಾಗಿದೆ.

ಕೃಷಿಯಲ್ಲಿ ತೊಡಗಿರುವವರಿಗೆ ಸ್ಥಿರ ಆದಾಯ ಸಿಗುವಂತೆ ಮಾಡಿ ಅದನ್ನು ಫಲದಾಯಕಗೊಳಿಸುವುದು ಈ ನಿಟ್ಟಿನಲ್ಲಿ ಮಾಡಬೇಕಾಗಿದ್ದ ಮತ್ತೊಂದು ಪ್ರಮುಖ ಕೆಲಸ. ಇದಕ್ಕಾಗಿ ರೈತರ ಪೆನ್ಶನ್ ಮೊತ್ತವನ್ನು 1100ರೂ.ಗೆ ಏರಿಸಲಾಗಿದೆ, ಕೃಷಿಯಲ್ಲಿ ತೊಡಗಿರುವವರಿಗೆ ಕನಿಷ್ಟ ಕೂಲಿ ಮತ್ತು ವಿಮಾ ಸೌಕರ್ಯ ಸಿಗುವಂತಹ ಯೋಜನೆಗಳನ್ನು ರೂಪಿಸಲಾಗುತ್ತಿದೆ. ನೈಸರ್ಗಿಕ ಅನಾಹುತಗಳಿಗೆ ತುತ್ತಾಗಿರುವ ಪ್ರದೇಶಗಳಲ್ಲಿ ಸಾಲ ಮನ್ನಾ, ತುರ್ತು ಹಣಕಾಸು ನೆರವು ನಿಧಿ ಮತ್ತು ಬೆಳೆ ವಿಮಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಭೂಹೀನ ಕೃಷಿಕರಲ್ಲಿ ಈಗಾಗಲೇ 20,000ಕ್ಕೂ ಹೆಚ್ಚು ಮಂದಿಗೆ ಜಮೀನು ಕ್ರಯಪತ್ರಗಳನ್ನು ನೀಡಲಾಗಿದೆ. ಜೀವನಾಧಾರ ಕಲ್ಪಿಸುವುಕ್ಕೆ ಒತ್ತಿನೊಂದಿಗೆ ಒಂದು ಸಾರ್ವತ್ರಿಕ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಎಲ್‍ಡಿಎಫ್ ಸರಕಾರ ಗಮನ ಹರಿಸಿರುವ ಮತ್ತೊಂದು ಕ್ಷೇತ್ರವೆಂದರೆ ಕೃಷಿ ವಲಯದ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ರೈತರ ಸಹಕಾರಿಗಳು, ಕೃಷಿ ಉದ್ದಿಮೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮಾಡುವುದು.  ಕೃಷಿ ಉತ್ಪನ್ನ ಪಾರ್ಕ್‍ಗಳನ್ನು, 20 ಹೊಸ ಕೃಷಿ ಸೇವಾಕೇಂದ್ರಗಳನ್ನು ತೆರೆಯಲಾಗಿದೆ, ಕೃಷಿ ಉತ್ಪನ್ನಗಳು ಪೋಲಾಗದಂತೆ ತಡೆಯಲು ಉತ್ಪಾದನಾ ಸೌಲಭ್ಯಗಳೊಂದಿಗೆ, ದಾಸ್ತಾನು ಸೌಲಭ್ಯಗಳನ್ನು ವೈನಾಡ್, ಕಣ್ಣೂರ ಮತ್ತು ಅಲಪುಳದಲ್ಲಿ ನಿರ್ಮಿಸಲಾಗಿದೆ.

ಭತ್ತವಲ್ಲದೆ ತೆಂಗು, ಮಸಾಲೆ ವಸ್ತುಗಳು ,ಹಲಸು ಮತ್ತು ರಬ್ಬರ್ ಕೇರಳದ ಮುಖ್ಯ ಕೃಷಿ ಉತ್ಪನ್ನಗಳು. ರಾಜ್ಯದಾದ್ಯಂತ ‘ಕೇರಗ್ರಾಮ್’ಗಳ ಸರಣಿಯನ್ನು ರಚಿಸಿ 500 ಎಕ್ರೆ  ಪ್ರದೇಶದಲ್ಲಿ ತೆಂಗು ಸಾಗುವಳಿಯ ಬೆಳವಣಿಗೆಯನ್ನು ರೂಪಿಸಲಾಗಿದೆ. ಕೊಟ್ಟಾಯಂ ಮತ್ತು ಪಟ್ಟಣಂತ್ತಿತ್ತದಲ್ಲಿ ರಬ್ಬರ್ ಪಾರ್ರ್ಕಗಳು, ಇಡುಕ್ಕಿ ಮತ್ತು ವೈನಾಡಿನಲ್ಲಿ ಮಸಾಲೆ ಪಾರ್ಕ್‍ಗಳು ಮತ್ತು ತ್ರಿಶೂರಿನಲ್ಲಿ ಹಲಸು ಪಾರ್ಕ್À ರಚಿಸಲಾಗಿದೆ.

ಬೇಸಾಯವಿಲ್ಲದ ಅವಧಿಗಳಲ್ಲಿ ಉದ್ಯೋಗಹೀನತೆ, ಅದರಿಂದಾಗಿ ಆದಾಯಹೀನತೆ ಭಾರತದಲ್ಲಿ ಕೃಷಿಯಲ್ಲಿ ತೊಡಗಿರುವವರ ಒಂದು ದೊಡ್ಡ ಸಮಸ್ಯೆ. ಮನರೇಗದ ಮೂಲಕ  ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು  ಕೇಂದ್ರಸರಕಾರ ಈ ಯೋಜನೆಗೆ ಮಾಡಿರುವ ಕಡಿತದ ನಡುವೆಯೂ ಮಾಡಲಾಗುತ್ತಿದೆ. ಕೃಷಿ ಮತ್ತು  ನಾಗರಿಕ ಪೂರೈಕೆ ಇಲಾಖೆಗಳು, ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳು, ಪರಿಶಿಷ್ಟ ಜಾತಿಗಳು/ ಬುಡಕಟ್ಟುಗಳು, ವಸತಿ, ಮೀನುಗಾರಿಕೆ ಮತ್ತು ಕೈಗಾರಿಕಾ ಇಲಾಖೆಗಳು ಇವೆಲ್ಲದರ ಜತೆಗೆ ಜನರ ಭಾಗವಹಿಸುವಿಕೆಯ ಮೂಲಕ ಒಂದು ನಿಜವಾದ ಅರ್ಥದ ಜನತಾ ಪರ್ಯಾಯದತ್ತ ಕೆರಳದ ಎಲ್‍ಡಿಎಫ್ ಸರಕಾರ ಹೆಜ್ಜೆಯಿಟ್ಟಿದೆ.