ಉಪರಾಷ್ಟ್ರಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ

ಸಂಪುಟ: 
11
ಸಂಚಿಕೆ: 
30
Sunday, 16 July 2017

ಜುಲೈ 11 ರಂದು ಸಂಸದ್ ಭವನದಲ್ಲಿ ಸಭೆ ಸೇರಿದ 18 ಪ್ರತಿಪಕ್ಷಗಳ ಮುಖಂಡರು ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧಿಯವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಅವರು ಅಭ್ಯರ್ಥಿಯಾಗಲು ಒಪ್ಪಿದ್ದಾರೆ ಎಂದೂ ಪ್ರತಿಪಕ್ಷಗಳ ಮುಖಂಡರು ಪ್ರಕಟಿಸಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಯಲ್ಲಿ ದೂರವುಳಿದಿದ್ದ ಜೆಡಿ(ಯು) ಪಕ್ಷದ ಹಿರಿಯ ಮುಖಂಡ ಶರದ್ ಯಾದವ್ ಕೂಡ ಈ ಸಭೆಯಲ್ಲಿ ಈ ಒಮ್ಮತದ ಆಯ್ಕೆಯಲ್ಲಿ ಭಾಗವಹಿಸಿದರು.

ಉಪರಾಷ್ಟ್ರಪತಿ ಸ್ಥಾನಕ್ಕೆ ಶ್ರೀ ಗೋಪಾಲಕೃಷ್ಣ ಗಾಂಧಿಯವರಿಗಿಂತ ಉತ್ತಮ ಅಭ್ಯರ್ಥಿ ಇರಲು ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಅವರು ಅವಿರೋಧವಾಗಿ ಆರಿಸಿ ಬರುತ್ತಾರೆ ಎಂದು ಆಶಿಸಿದರು. ಎನ್‍ಡಿಎ ಇನ್ನೂ ತನ್ನ ಅಭ್ಯರ್ಥಿಯ ಬಗ್ಗೆ ಏನೂ ಹೇಳಿಲ್ಲ. ಜುಲೈ 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಆಗಸ್ಟ್ 5ರಂದು ಚುನಾವಣೆ ನಡೆಯಲಿದೆ.

ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಜುಲೈ 17 ರಂದು ನಡೆಯುತ್ತದೆ.