Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಭಾರತ-ಚೀನಾ ವಿವಾದ : ಮಾತುಕತೆ ಬಿಟ್ಟು ಬೇರೆ ದಾರಿ ಇಲ್ಲ

ಸಂಪುಟ: 
30
ಸಂಚಿಕೆ: 
11
date: 
Sunday, 16 July 2017
Image: 

-    ಪ್ರಕಾಶ್ ಕಾರಟ್


ಗಡಿಯ ಬಗ್ಗೆ ಆಗಾಗ ಏಳುವ ಭಿನ್ನಾಭಿಪ್ರಾಯಗಳನ್ನು ಸೂಕ್ತ ಚೌಕಟ್ಟು ಇರುವ ಮಾತುಕತೆ-ಚೌಕಾಸಿ ಮೂಲಕ ಪರಿಹರಿಸುವುದಲ್ಲದೆ,
ಬೇರೆ ಸಾಧ್ಯತೆಯಿಲ್ಲ ಎಂದು ಮೋದಿ ಸರಕಾರ ಅರಿತುಕೊಳ್ಳಬೇಕು. ಈ ವಿವಾದದಲ್ಲಿ ಭೂತಾನ್ ಮುಖ್ಯ ವಾದಿ ಎಂಬುದನ್ನು
ಸಹ ಅರಿತುಕೊಳ್ಳಬೆಕು. ಭೂತಾನ್ ಭಾರತದ “ಸಂರಕ್ಷಿತ ಸಂಸ್ಥಾನ” ಅಲ್ಲ ಎಂಬುದನ್ನೂ ನೆನಪಿನಲ್ಲಿಡಬೇಕು.
1984ರಿಂದ ಭೂತಾನ್ ಗಡಿ ವಿಚಾರಗಳ ಬಗ್ಗೆ ಚೀನಾದ ಜತೆ ನೇರವಾಗಿ ಚೌಕಾಸಿ ಮಾಡುತ್ತಿದೆ ಎಂಬುದನ್ನೂ ಗಮನಿಸಬೇಕು.
ದೊಕ್ಲಾಂ ಪಾತಳಿ ಮತ್ತಿತರ ವಿವಾದಗಳ ಬಗೆಗೆ ಭೂತಾನ್ ನೇರವಾಗಿ ಚೀನಾದ ಜತೆ ಚೌಕಾಸಿ ಮಾಡಲು
ಅವಕಾಶ ಮಾಡಿಕೊಡುವುದು ಉತ್ತಮ. ಭಾರತ ಭೂತಾನ್ ನಿಲುವುಗಳಿಗೆ ಬೆಂಬಲ ನೀಡಬಹುದು.

ಭಾರತ, ಚೀನಾ ಮತ್ತು ಭೂತಾನ್ ಮೂರೂ ದೇಶಗಳು ಸೇರುವಲ್ಲಿರುವ ದೊಕ್ಲಾಮ್ ಪಾತಳಿಯಲ್ಲಿ ಇಂಡಿಯಾ-ಚೀನಾ ಹಣಾಹಣಿ ಶುರುವಾಗಿ ಈಗಾಗಲೇ ಒಂದು ತಿಂಗಳಾಗಿದೆ. ಗಡಿ ಸಂಬಂಧಿಸಿ ವಿವಾದಗಳು ಭಿನ್ನಾಭಿಪ್ರಾಯಗಳು ಹೊಸದೇನಲ್ಲ.  ಹಲವು ವರ್ಷಗಳಿಂದ ಆಗಾಗ ತಲೆದೋರುತ್ತಲೇ ಇದ್ದವು. ಆದರೆ ಈ ಬಾರಿ ದೊಕ್ಲಾಮ್ ವಿವಾದದ ಗಂಭೀರತೆ ಭಾರೀ ಪ್ರಮಾಣದ್ದಾಗಿದೆ. ಎರಡು ದೇಶಗಳ ಒಟ್ಟಾರೆ ಸಂಬಂಧಗಳು ಬಿಗಡಾಯಿಸಿದ್ದು ಇದಕ್ಕೆ ಕಾರಣವಾಗಿದೆ.

ಹಿಂದೆ, ಎರಡೂ ಕಡೆಯಿಂದ ನಿಯಂತ್ರಣ ರೇಖೆಯನ್ನು ದಾಟಿದ ಅಥವಾ ತಮ್ಮ ಪ್ರದೇಶದೊಳಗೆ ಅತಿಕ್ರಮಣ ಮಾಡಿದ ಪರಸ್ಪರ ಆಪಾದನೆಗಳು ಕೇಳಿ ಬರುತ್ತಿದ್ದವು. ಆದರೆ ಈ ಬಾರಿ ಒಂದು ವ್ಯತ್ಯಾಸವಿದೆ. ಈ ವಿವಾದ (ಸಿಕ್ಕಿಂ ರಾಜ್ಯದಲ್ಲಿರುವ) ಭಾರತ-ಚೀನಾ ಗಡಿಗೆ ಸಂಬಂಧಿಸಿದ್ದಲ್ಲ.

ಸುಮಾರು 269 ಚದರ ಕಿ.ಮಿ. ಇರುವ ದೊಕ್ಲಾಮ್ ಪಾತಳಿ ಬಗ್ಗೆ ಚೀನಾ ಮತ್ತು ಭೂತಾನ್ ನಡುವೆ ಇರುವ ವಿವಾದ. 1890 ರ ಆಂಗ್ಲೋ-ಚೀನಿ ಒಪ್ಪಂದದ ಪ್ರಕಾರ ದೊಕ್ಲಾಮ್ ಪಾತಳಿ ಟಿಬೆಟ್ ಗೆ ಸೇರಿದ್ದು. ಆದರೆ ಭೂತಾನ್ ಆ ಒಪ್ಪಂದಕ್ಕೆ ಸಹಿ ಹಾಕಿಲ್ಲವಾದ್ದರಿಂದ ಭೂತಾನ್ ಅದು ತನಗೆ ಸೇರಿದ ಪ್ರದೇಶ ಅಂತ ಹೇಳುತ್ತದೆ. ದೊಕ್ಲಾಮ್ ಮೂರೂ ದೇಶಗಳು ಸೇರುವಲ್ಲಿರುವ ಚುಂಬಿ ಕಣಿವೆಯ ತುದಿಯಲ್ಲಿರುವುದರಿಂದ ಅದು ಭಾರತಕ್ಕೆ ವ್ಯೂಹಾತ್ಮಕವಾಗಿ ಪ್ರಮುಖವಾದದ್ದು. 

ಭಾರತದ ಸೇನಾ ಸಿಬ್ಬಂದಿ ಚೀನಾದ ರಸ್ತೆ ನಿರ್ಮಾಣ ತಂಡ ಕೆಲಸ ನಿಲ್ಲಿಸಬೇಕೆಂದು  ಹೇಳಲು ದೊಕ್ಲಾಂಗೆ ಹೋಗಿತ್ತು. ಚೀನಾ ಇದು ತನ್ನ ಪ್ರದೇಶದೊಳಗೆ ಅತಿಕ್ರಮಣ ಎಂದು ಹೇಳುತ್ತದೆ. ಈ ವಿಷಯದಲ್ಲಿ ಭೂತಾನ್ ಸರಕಾರದ ದೂರಿನ ಮೇಲೆ ಅದರ ನೆರವಿಗೆ ಹೋಗಿದ್ದು ಎಂದು ಭಾರತ ಹೇಳುತ್ತದೆ.

ಭಾರತ ಮತ್ತು ಚೀನಾಗಳು ಗಡಿಯಲ್ಲಿ ಇಂತಹ ವಿವಾದಗಳು ಉದ್ಭವಿಸಿದಾಗ ಅದನ್ನು ಪರಿಹರಿಸಲು ಒಂದು ವಿಧಾನ ರೂಪಿಸಿವೆ. 1993ರಲ್ಲಿ ಎರಡೂ ದೇಶಗಳು ಗಡಿ ಶಾಂತಿ ಮತ್ತು ನೆಮ್ಮದಿಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ  ಮೂಲಕ ಆಗಿದ್ದ ಸ್ಥಿತಿಯನ್ನು ಒಪ್ಪಿಕೊಂಡು ಆ ಬಗೆಗೆ ಯಾವುದೇ ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ಮಾತುಕತೆಗಳ ಮೂಲಕ ಬಗೆಹರಿಸಬೇಕೆಂದು ಒಪ್ಪಿಕೊಂಡವು. ಮುಂದೆ ನೇಮಿಸಲಾದ ಎರಡೂ ದೇಶಗಳ ವಿಶೇಷ ಪ್ರತಿನಿಧಿಗಳು ಇಂತಹ ವಿಷಯಗಳ ಬಗೆಗ ಚರ್ಚಿಸಿ ಪರಿಹರಿಸುವ ಇನ್ನೊಂದು ವೇದಿಕೆ ಆಯಿತು.

ಗಡಿ ವಿವಾದದ ಪರಿಹಾರದ ಬಗ್ಗೆ ಚೌಕಾಶಿ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದು ಇತರ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಂಬಂಧ ಬೆಳೆಸಲು ಅಡ್ಡಿಯಾಗಬಾರದು ಎಂದು ಎರಡೂ ದೇಶಗಳು ಸರಿಯಾಗಿಯೇ ಗ್ರಹಿಸಿದ್ದವು. ಈ ವ್ಯಾವಹಾರಿಕ ಧೋರಣೆ ಫಲಕಾರಿಯಾಗಿತ್ತು. ಈಗ ಭಾರತ-ಚೀನಾ ವ್ಯಾಪಾರ 70 ಶತಕೋಟಿ ಡಾಲರುಗಳಷ್ಟಿದೆ.

ಎರಡು ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಇರುವ ವಿಷಯಗಳು ಹೆಚ್ಚುತ್ತಿರುವುದರಿಂದ ಈಗಿನ ಗಡಿ ಗೊಂದಲ ಇಷ್ಟೊಂದು ಪ್ರಾಮುಖ್ಯತೆ ಪಡೆದಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಭಿನ್ನಾಭಿಪ್ರಾಯಗಳು ಹೆಚ್ಚಿವೆ. ಈ ಭಿನ್ನತೆಗೆ ಕಾರಣವಾಗಿರುವುದು ಅಮೆರಿಕದ ಜತೆ ಭಾರತದ ವ್ಯೂಹಾತ್ಮಕ ಕೂಟ. ಏಶ್ಯಾ-ಪೆಸಿಫಿಕ್ ಮತ್ತು ಭಾರತ ಮಹಾಸಾಗರದ ಪ್ರದೇಶದಲ್ಲಿ ಚೀನಾವನ್ನು “ಹದ್ದುಬಸ್ತಿನಲ್ಲಿಡುವ” ಅಮೆರಿಕದ ವ್ಯೂಹಾತ್ಮಕ ವಿನ್ಯಾಸಕ್ಕೆ ಭಾರತ ಅದರ ಜತೆ ಸೇರಿಕೊಂಡಿರುವುದು ಈ ಭಿನ್ನತೆ ಹೆಚ್ಚಲು ಪ್ರಮುಖ ಕಾರಣ. ದಕ್ಷಿಣ ಚೀನಾ ವಿವಾದದಲ್ಲಿ ಅಮೆರಿಕದ ನಿಲುವುಗಳಿಗೆ ಭಾರತ ಬಹಿರಂಗವಾಗಿಯೇ ಬೆಂಬಲಿಸಿದೆ. ಬೆಲ್ಟ್ ಅಂಡ್ ರೋಡ್ ಇನಿಶಿಯೆಟಿವ್ ನ್ನು ವಿರೋಧಿಸಿದೆ.
ಮೋದಿ ಸರಕಾರ ದೇಶದೊಳಗೆ ದಲೈ ಲಾಮಾ ಮತ್ತು ಟಿಬೆಟನ್ ತಾತ್ಕಾಲಿಕ ಸರಕಾರ ಎಂದು ಕರೆಯಲಾಗುವ ಸಂಘಟನೆಗೆ ಕುಮ್ಮಕ್ಕು ಕೊಡುತ್ತಿದೆ. ಅರುಣಾಚಲ ಪ್ರದೇಶಕ್ಕೆ ಒಬ್ಬ ಕೇಂದ್ರ ಮಂತ್ರಿ ಜತೆಗೆ ದಲೈ ಲಾಮಾ ಭೇಟಿ ಮತ್ತು ಲಡಾಕ್ ಪ್ರದೇಶದಲ್ಲಿ ಟಿಬೆಟನ್ ತಾತ್ಕಾಲಿಕ ಸರಕಾರದ ರ್ಧವಜ ಹಾರಿಸಿದ್ದು ಚೀನಾಕ್ಕೆ ತೀವ್ರ ಕಿರಿಕಿರಿ ಉಂಟು ಮಾಡುವಂತಹುದು.

ಅಣು ಪೂರೈಕೆದಾರರ ಗುಂಪಿಗೆ ಸೇರುವುದು ಭಾರತಕ್ಕೆ ಆದ್ಯತೆಯ ವಿಷಯವಾಗಿದ್ದು ಚೀನಾ ಇದಕ್ಕೆ ತೊಡಕು ಎಂದು ಪರಿಗಣಿಸುತ್ತದೆ. ಮಸೂದ್ ಅಜರ್ ನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ವಿಷಯದಲ್ಲಿ ಸಹ ಚೀನಾ ಸಹಕರಿಸಿಲ್ಲ. ಎರಡು ದೇಶಗಳ ನಡುವೆ ನಂಬಿಕೆ ಮತ್ತು ಪರಸ್ಪರ ವಿಶ್ವಾಸದ ಕೊರತೆ ದೊಕ್ಲಾಂ ಬಗೆಗಿನ ಈಗಿನ ಸಂಘರ್ಷಮಯ ಪರಿಸ್ಥಿತಿಗೆ ಕಾರಣವಾಗಿದೆ.

ಗಡಿಯ ಬಗ್ಗೆ ಆಗಾಗ ಏಳುವ ಭಿನ್ನಾಭಿಪ್ರಾಯಗಳನ್ನು ಸೂಕ್ತ ಚೌಕಟ್ಟು ಇರುವ ಮಾತುಕತೆ-ಚೌಕಾಸಿ ಮೂಲಕ ಪರಿಹರಿಸುವುದಲ್ಲದೆ, ಬೇರೆ ಸಾಧ್ಯತೆಯಿಲ್ಲ ಎಂದು ಮೋದಿ ಸರಕಾರ ಅರಿತುಕೊಳ್ಳಬೇಕು. ಈ ವಿವಾದದಲ್ಲಿ ಭೂತಾನ್ ಮುಖ್ಯ ವಾದಿ ಎಂಬುದನ್ನು ಸಹ ಅರಿತುಕೊಳ್ಳಬೆಕು. ಭೂತಾನ್ ಭಾರತದ “ಸಂರಕ್ಷಿತ ಸಂಸ್ಥಾನ” ಅಲ್ಲ ಎಂಬುದನ್ನೂ ನೆನಪಿನಲ್ಲಿಡಬೇಕು. ಭೂತಾನ್ ಜತೆಗಿನ 1949ರ ಸ್ನೇಹ ಒಪ್ಪಂದದ ಪರಿಷ್ಕರಣೆಯ ನಂತರ, ಭೂತಾನ್ ವಿದೇಶ ನೀತಿಯಲ್ಲಿ ಭಾರತದ ಮಾರ್ಗದರ್ಶನ ತೆಗೆದುಕೊಳ್ಳಬೇಕು. ಶಸ್ರ್ತಾಸ್ತ್ರಗಳ ಆಮದಿಗೆ ಭಾರತದ ಸಮ್ಮತಿ ಪಡೆಯಬೇಕು ಎಂಬ ಕಲಮುಗಳನ್ನು ಕೈಬಿಡಲಾಗಿದೆ ಎಂಬುದನ್ನೂ ಗಮನಿಸಬೇಕು. ಈಗಿನ ಒಪ್ಪಂದ ಭಾರತ ಮತ್ತು ಭೂತಾನ್ ಗಳು “ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಕಟವಾಗಿ ಸಹಕರಿಸಬೇಕು” ಎಂದಷ್ಟೇ ಹೇಳುತ್ತದೆ.  1984 ರಿಂದ ಭೂತಾನ್ ಗಡಿ ವಿಚಾರಗಳ ಬಗ್ಗೆ ಚೀನಾದ ಜತೆ ನೇರವಾಗಿ ಚೌಕಾಸಿ ಮಾಡುತ್ತಿದೆ ಎಂಬುದನ್ನೂ ಗಮನಿಸಬೇಕು. ದೊಕ್ಲಾಂ ಪಾತಳಿ ಮತ್ತಿತರ ವಿವಾದಗಳ ಬಗೆಗೆ ಭೂತಾನ್ ನೇರವಾಗಿ ಚೀನಾದ ಜತೆ ಚೌಕಾಸಿ ಮಾಡಲು ಅವಕಾಶ ಮಾಡಿಕೊಡುವುದು ಉತ್ತಮ. ಭಾರತ ಭೂತಾನ್ ನಿಲುವುಗಳಿಗೆ ಬೆಂಬಲ ನೀಡಬಹುದು.

ವಿದೇಶ ಕಾರ್ಯದರ್ಶಿ ಎಸ್. ಜಯಶಂಕರ್ ಭಾರತ-ಚೀನಾ ಭಿನ್ನಾಭಿಪ್ರಾಯಗಳು ದೊಡ್ಡ ವಿವಾದವಾಗಲು ಬಿಡಬಾರದು. “ಇದನ್ನು ಯಾವ ರೀತಿ ನಿರ್ವಹಿಸುತ್ತೀರೋ ಎಂಬುದು ನಿಮ್ಮ ಪಕ್ವತೆಯ ಸೂಚಕ” ಎಂದು ಹೇಳಿದ್ದಾರೆ.

ಈ ಧೋರಣೆಯನ್ನು ಮೋದಿ ಸರಕಾರ ಅಂಗೀಕರಿಸುವುದು ಒಳ್ಳೆಯದು. ಎರಡೂ ದೇಶಗಳ ನಡುವೆ ಅವುಗಳ ಪ್ರಮುಖ ಕಾಳಜಿಯ ಎಲ್ಲಾ ವ್ಯೂಹಾತ್ಮಕ ವಿಷಯಗಳ ಬಗ್ಗೆ ಹೊಸ ಸುತ್ತಿನ ಸಂವಾದದ ಅಗತ್ಯವಿದೆ. ಎರಡು ನೆರೆಯ ದೇಶಗಳ ನಡುವೆ ಉತ್ತಮ ಸಂಬಂಧಗಳಲ್ಲಿ ಹೊರಗಣ ಅಂಶಗಳು ಹಸ್ತಕ್ಷೇಪ ಮಾಡಲು ಬಿಡಬಾರದು.