Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

8 ಎಂಬುದು 18 ಕ್ಕಿಂತ ಹೆಚ್ಚು-ಬಿಜೆಪಿ ಅಧ್ಯಕ್ಷರ ಅಚ್ಛೇದಿನ್ ಗಣಿತ

ಸಂಪುಟ: 
11
ಸಂಚಿಕೆ: 
29
date: 
Sunday, 9 July 2017
Image: 

ಕಳೆದ ವಾರ ಬಿಜೆಪಿ ರಾಷ್ಟ್ರಾಧ್ಯಕ್ಷರು ಕೆಲವು ಲೆಕ್ಕಾಚಾರಗಳನ್ನು ಮುಂದಿಟ್ಟರು. ನಮ್ಮ ಹಾಲಿ ಪ್ರಧಾನಿಗಳು ವಿದೇಶ ಪ್ರವಾಸಗಳಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂಬುದನ್ನು ನಿರಾಕರಿಸುತ್ತ ವಾಸ್ತವವಾಗಿ ಹಿಂದಿನ ಯುಪಿಎ ಪ್ರಧಾನಿಗಳು ಇವರಿಗಿಂತ ಹೆಚ್ಚು ವಿದೇಶ ಪ್ರವಾಸ ಮಾಡಿದ್ದಾರೆ, ಆದರೆ ಅವರ ಭೇಟಿಗಳಿಗೆ ಜಗತ್ತು ಅಷ್ಟು ಮಹತ್ವ ಕೊಡುತ್ತಿರಲಿಲ್ಲ, ಈಗಿನ ಪ್ರಧಾನಿಗಳನ್ನು ಜಗತ್ತು ಆಶ್ಚರ್ಯದಿಂದ ನೋಡುತ್ತಿರುವುದೇ ಹೆಚ್ಚು ಗಮನಕ್ಕೆ ಬರಲು ಕಾರಣ ಎಂದಿದ್ದಾರೆ.

ಇದನ್ನು ಪರೀಕ್ಷಿಸಲು ಹೊರಟ ಹಿಂದಿ ಮಾಧ್ಯಮವೊಂದು ವಿದೇಶಾಂಗ ಇಲಾಖೆಯಿಂದ ಸಂಗ್ರಹಿÀಸಿದ ಅಧಿಕೃತ ಮಾಹಿತಿಯ ನಂತರ ಈ ಮೇಲಿನ  ಗಣಿತದ ಬಗ್ಗೆ ಹೇಳಿದೆ. ಯುಪಿಎ ಪ್ರಧಾನಿಗಳು ತಮ್ಮ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ 80 ವಿದೇಶ ಯಾತ್ರೆ ನಡೆಸಿದ್ದಾರೆ, ಅಂದರೆ ವಾರ್ಷಿಕ ಸರಾಸರಿ 8. ಹಾಲಿ ಪ್ರಧಾನಿಗಳದ್ದು ಎಪ್ರಿಲ್ 2017ರ ವರೆಗೆ ಮೂರು ವರ್ಷಗಳಲ್ಲಿ 56, ಅಂದರೆ ಸರಾಸರಿ 18. ಅಂದರೆ 8 > 18 !

ಇದಾದ ನಂತರ ಪ್ರಧಾನಿಗಳ ವಿದೇಶ ಯಾತ್ರೆಗಳ ಸಂಖ್ಯೆ 62 ಕ್ಕೇರಿದೆ ! 

 

‘ನಮ್ಮ ಮುಖ್ಯಮಂತ್ರಿಗಳಿಗೆ ಒಂದು ಬಾರ್ ಸೋಪಿನ ಭೀತಿ’

ಇದು ಇತ್ತೀಚೆಗೆ ನೂರು ದಿನಗಳನ್ನು ‘ಯಶಸ್ವಿ’ಯಾಗಿ ಪೂರ್ಣಗೊಳಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಬಗ್ಗೆ ನಿವೃತ್ತ ಉಪಕುಲಪತಿಯೊಬ್ಬರ ಟಿಪ್ಪಣಿ. ಜುಲೈ 2 ರಂದು ಗುಜರಾತಿನಿಂದ ಲಕ್ನೌಗೆ ಬರುತ್ತಿದ್ದ 45 ದಲಿತ ಕಾರ್ಯಕರ್ತರನ್ನು ಉತ್ತರ ಪ್ರದೇಶದ ಝಾಂಸಿಯಲ್ಲಿ ಬಂಧಿಸಲಾಯಿತು. ಕಾರಣ? ಅವರು 125 ಕೆಜಿ ತೂಕದ, ಗೌತಮ ಬುದ್ಧನ ಚಿತ್ರ ಕೆತ್ತಿದ್ದ ಬೃಹತ್ ಸಾಬೂನೊಂದನ್ನು ಉತ್ತರಪ್ರದೇಶದ ಮುಖ್ಯಮಂತ್ರಿಗಳಿಗೆ ಅವರು ತಮ್ಮ ‘ಬುದ್ಧಿಯನ್ನು ಸ್ವಚ್ಛಗೊಳಿಸಿಕೊಳ್ಳಿ’ ಎಂದು ಕೊಡುಗೆಯಾಗಿ ನೀಡಲು, ಒಯ್ಯುತ್ತಿದ್ದರು. ಕೆಲವು ದಿನಗಳ ಹಿಂದು ಖುಶಿನಗರದ ದಲಿತರರು ಅವರನ್ನು ಭೇಟಿ ಮಾಡುವ ಬದಲು ಸ್ವಚ್ಛವಾಗಿ ಬರುವಂತೆ ಸೋಪು, ಶಾಂಪೂಗಳನ್ನು ಹಂಚಾಲಗಿತ್ತು ಎಂಬ ವರದಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮರುದಿನ ಇದನ್ನು ಪ್ರತಿಭಟಿಸಲು ಮತ್ತು ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಖಂಡಿಸಲು ಪತ್ರಿಕಾ ಸಮ್ಮೇಳನವೊಂದಕ್ಕೆ ನೆರೆÀದಿದ್ದ ರಾಜ್ಯದ ನಿವೃತ್ತ ಐಜಿಪಿ ಎಸ್ ಆರ್ ದಾರಾಪುರಿ ಸೇರಿದಂತೆ ಎಂಟು ಪ್ರಮುಖ ಮುಖಂಡರನ್ನು ಪೋಲೀಸರು ಯುಪಿ ಪ್ರೆಸ್‍ಕ್ಲಬ್ ಒಳಗೇ ಬಂದು ಬಂಧಿಸಿದರು. ಅವರ ‘ಅಪರಾಧ’ ಮುಖ್ಯಮಂತ್ರಿಗಳ ವಿರುದ್ಧ ಒಂದು ಪ್ರತಿಭಟನಾ ರ್ಯಾಲಿಯನ್ನು ಯೋಜಿಸಿದ್ದರು ಎಂಬದು!  

ಪ್ರತಿಭಟಿಸುವ ಹಕ್ಕು ಕೂಡ ಇಲ್ಲದಿರುವ ತುರ್ತು ಪರಿಸ್ಥಿತಿಯ ಆಳ್ವಿಕೆಯನ್ನು ಹೇರಬೇಕಾದ ಸ್ಥಿತಿ ಉತ್ತರ ಪ್ರಧೇಸದಲ್ಲಿ ಈ ನೂರು ದಿನಗಳಲ್ಲಿ ಬಂದಿದೆಯೇ ಎಂದು ಪ್ರಜಾಪ್ರಭುತ್ವವಾದಿಗಳು ಪ್ರಶ್ನಿಸುತ್ತಿದ್ದಾರೆ.

 

 

- ವೇದರಾಜ್ ಎನ್ ಕೆ