ಸಂಸತ್ತಿನ ಜಿಎಸ್‍ಟಿ ‘ಅಧಿವೇಶನ’ ಕುರಿತು ಸೀತಾರಾಮ್ ಯೆಚುರಿ

ಸಂಪುಟ: 
11
ಸಂಚಿಕೆ: 
29
Sunday, 9 July 2017

ಸರಕಾರ ಸರಿಯಾದ ತಯಾರಿ ನಡೆಸಿಲ್ಲ, ಮತ್ತು ದೇಶ ಜುಲೈ 1 ರಂದು ಜಿಎಸ್‍ಟಿ ಆರಂಭಕ್ಕೆ ಸಿದ್ಧವಾಗಿಲ್ಲ. ಅದರೊಂದಿಗೆ ಹಲವು ಸಮಸ್ಯೆಗಳಿವೆ, ಉದಾ: ಬಹುವಿಧ ದರಗಳು, ಮತ್ತು ನಮ್ಮ ಮಧ್ಯಮ, ಸಣ್ಣ ಮತ್ತು ಪುಟ್ಟ ಉದ್ದಿಮೆಗಳ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟಾಗಲಿದೆ.

ನಾವು ಜಿಎಸ್‍ಟಿ ಮಂಡಳಿ ನಿರ್ಣಯಗಳ  ಸಂಸದೀಯ ಪರೀಕ್ಷಣೆಗೆ ಕೇಳಿದ್ದೆವು, ಆದರೆ ಬಿಜೆಪಿಗೆ ಇಂತಹ ಪರೀಕ್ಷಣೆ ಬೇಕಿಲ್ಲ. ಇದು ಒಂದು ಒಳ್ಳೆಯ ಪ್ರಜಾಪ್ರಭುತ್ವ ನಡವಳಿಕೆಯೂ ಅಲ್ಲ, ಅದು ಆರೋಗ್ಯಕರ ಆರ್ಥಿಕ ನಡವಳಿಕೆಯೂ ಅಲ್ಲ.

ಜಿಎಸ್‍ಟಿ ಆರಂಭ ಸ್ವಾತಂತ್ರ್ಯ ಆಂದೋಲನದ ಸಮಾರಂಭಗಳಿಗೆ ಹೋಲಿಸಬಹುದಾದಂತದ್ದು ಖಂಡಿತಾ ಅಲ್ಲ. ಸಂಸತ್ತು ಕೇವಲ ಮೂರು ಬಾರಿ ಮಧ್ಯರಾತ್ರಿಯಲ್ಲಿ ಸಭೆ ಸೇರಿದೆ, ಅದು ಸ್ವಾತಂತ್ರ್ಯ ಆಂದೋಲನದ ದಿನಾಂಕಗಳ ಸ್ಮರಣೆಗೆ ಮಾತ್ರ. ಅದು ಮಧ್ಯರಾತ್ರಿಯ ಸಭೆಗಳ ಪಾವಿತ್ರ್ಯ.

ಇದು ಈ ಸರಕಾರದಲ್ಲಿ ಪ್ರತಿಯೊಂದು ಸಂಗತಿಯಂತೆ ಶುದ್ಧ ಪ್ರದರ್ಶನ-ಖಯಾಲಿ ಅಷ್ಟೇ, ಸಾರ್ವಜಿನಿಕ ಹಣದ ಪೂರ್ಣ ಪೋಲು, ಈ ಸಮಾರಂಭಕ್ಕೆ ನವೀಕರಣಕ್ಕೆ 5 ಕೋಟಿ ರೂ. ಖರ್ಚಾಗಿದೆ ಎಂದು ವರದಿಯಾಗಿದೆ. ಜಿಎಸ್‍ಟಿಯನ್ನು ಗುರುತಿಸುವ ಇಂತಹ ದಾರಿಯನ್ನು ನಾವು ಒಪ್ಪುವುದಿಲ್ಲ.