ದ್ಯಾವನಕೊಂಡ ಗ್ರಾಮಕ್ಕೆ ಸಿಪಿಐ(ಎಂ) ನಿಯೋಗದ ಭೇಟಿ.

ಸಂಪುಟ: 
11
ಸಂಚಿಕೆ: 
29
Sunday, 9 July 2017

ಕಲಘಟಗಿ ತಾಲೂಕಿನ ದ್ಯಾವನಕೊಂಡ ಗ್ರಾಮದಲ್ಲಿ ಇತ್ತೀಚಿಗೆ ದಲಿತರಿಗೆ ಸಾರ್ವಜನಿಕ ಬಹಿಷ್ಕಾರ ಹಾಕಿದ ಸಮಸ್ಯೆಗೆ ಸಂಭಂದಿಸಿದಂತೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಷವಾದಿ) ಧಾರವಾಡ ಜಿಲ್ಲಾ ಸಮಿತಿಯ ಒಂದು ನಿಯೋಗವು ಆ ಗ್ರಾಮಕ್ಕೆ ದಿ. 05.07.2017 ರಂದು ಬೇಟಿ ನೀಡಿದ್ದು, ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಸೊಪ್ಪಿನ ಒಳಗೊಂಡಂತೆ ಜಿಲ್ಲಾ ಸಮಿತಿ ಸದಸ್ಯರಾದ ಆರ್.ಎಚ್. ಆಯಿ ಮತ್ತು ಬಿ.ಆಯ್. ಈಳಿಗೇರ ಅವರು ನಿಯೋಗದಲ್ಲಿ ಇದ್ದರು. ಮೊದಲು ಗ್ರಾಮದಲ್ಲಿ ನಿಯೋಗವು ದಲಿತರನ್ನು ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಭೆಟ್ಟಿಯಾಯಿತು.  ಸಮಸ್ಯೆಯ ಮೂಲ ಏನೆಂದು ವಿಚಾರಿಸಲಾಗಿ ಅತ್ಯಂತ ಒಂದು ಸಣ್ಣ ಘಟನೆ ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. 

ದುರ್ಗಾದೇವಿ ಹೆಸರಲ್ಲಿ ಇರುವ ಬಸವಿ ಆಕಳು ಕರುವನ್ನು ಪಡೆದದ್ದನ್ನು ಕಂಡ ದಲಿತನೊಬ್ಬ ಅದನ್ನು ಪ್ರಶ್ನಿಸಿದ್ದು, ಅದೇ ಕಾರಣಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿದ್ದು ಘಟನೆಗೆ ಕಾರಣವಾಗಿದೆ.  ಇದರಿಂದಾಗಿ ಅಲ್ಲಿಯ ದಲಿತರು ಭಯಗೊಂಡರು.  ಬಹಿಷ್ಕಾರದಂತ ಕ್ರಮ ಅಮಾನವೀಯ ಕ್ರಮವಾಗುತ್ತದೆ.  ನಿಯೋಗವು ದಲಿತರ ಸದ್ಯದ ಸ್ಥಿತಿಗತಿ ಅವರಿಗೆ ಕೆಲಸದ ಲಭ್ಯತೆ ಬಗ್ಗೆಯೂ ಕೂಡ ವಿಚಾರಿಸಿ ಅವರಿಗೆ ಸಹಾನುಭೂತಿ ಹೇಳುತ್ತಲೆ ಅವರ ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಭರವಸೆಯನ್ನು ನೀಡಿತು.  ನಂತರ ಗ್ರಾಮದ ಕೆಲವು ಸವರ್ಣೀಯರ ಹಿರಿಯರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಸೌಹಾರ್ದ ವಾತಾವರಣಕ್ಕೆ ಒತ್ತಾಯಿಸಲಾಯಿತು. 

ಒಂದು ಜನ ಸಮುದಾಯವನ್ನು ಬಹಿಷ್ಕಾರದ ಹೆಸರಿನಲ್ಲಿ ದೂರ ಇಡುವುದು ಅಪಮಾನಕರ ಎಂಬ ಮಾತನ್ನು ಅವರ ಗಮನಕ್ಕೆ ತರಲಾಯಿತು.  ನಂತರ ನಿಯೋಗದ ಸದಸ್ಯರು ತಹಶೀಲ್ದಾರರನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು ಆದರೆ ಅಂದು ಆರ್.ಟಿ.ಎಸ್. ಪ್ರಕರಣಗಳ ವಿಚಾರಣೆ ಇದ್ದ ಪ್ರಯುಕ್ತ ಸಾಧ್ಯವಾಗದೇ ಉಪತಹಶೀಲ್ದಾರರೊಂದಿಗೆ ದ್ಯಾವನಕೊಂಡ ಗ್ರಾಮದ ದಲಿತರ ಕೆಲವು ಬೇಡಿಕೆಗಳಾದ ರೇಶನ್ ಕಾರ್ಡ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ವಿನಂತಿಸಲಾಯಿತು.
 

 

 

ಬಿ.ಎಸ್. ಸೊಪ್ಪಿನ್