ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದು ನಿಲ್ಲಿಸಿ

ಸಂಪುಟ: 
11
ಸಂಚಿಕೆ: 
29
Sunday, 9 July 2017

ದೇಶಾಧ್ಯಂತ ಗೋವಿನ ಹೆಸರಿನಲ್ಲಿ ಮುಸ್ಲಿಂ, ದಲಿತ ಮತ್ತು ಕೃಶ್ಚಿಯನ್ನರನ್ನು ಹಿಂದುಪರ ಸಂಘಟನೆಗಳು ಹಲ್ಲೆ ಮಾಡಿ ಕೊಲೆಮಾಡಲಾಗುತ್ತಿದ್ದು ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಮತ್ತು ಅಮಾನವೀಯ ಘಟನೆಗಳು ಇದನ್ನು ಜಾತ್ಯಾತೀತ, ಮನುಷ್ಯತ್ವಪರ ಇರುವವರೆಲ್ಲ ಖಂಡಿಸಬೇಕು ಎಂದು ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿದರು. ಇಂದು ನಗರದ ಹೇಮಾವತಿ ಪ್ರತಿಮೆಯ ಮುಂಬಾಗ ಎಲ್ಲ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ “ನಾಟ್ ಇನ್ ಮೈ ನೇಮ್” ನನ್ನ ಹೆಸರಲ್ಲಿ ಬೇಡ, ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕೇಂದ್ರದಲ್ಲಿ ನರೇಂದ್ರ ಮೋಧಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ನಾವು ಯಾವ ಆಹಾರವನ್ನು ತಿನ್ನಬೇಕೆನ್ನುವುದನ್ನು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ. ಇದು ಸಂವಿಧಾನ ವಿರೋಧಿ ಆಲೋಚನೆಯಾಗಿದೆ ಎಂದರು.

ಕಳೆದ 22 ತಿಂಗಳಲ್ಲಿ ದೇಶದಲ್ಲಿ 17 ಕಡೆ ಗೋವಿನ ಹೆಸರಿನಲ್ಲಿ ದಲಿತ ಮತ್ತು ಮುಸ್ಲಿಂರ ಹತ್ಯೆಗಳು ನಡೆದಿವೆ. ಒಂದೆಡೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಜನತೆ ಪ್ರತಿರೊಧವನ್ನು ಒಡ್ಡುತ್ತಿರುವ ಈ ಸಂಧರ್ಭದಲ್ಲಿ ಜನರನ್ನು ದಾರಿ ತಪ್ಪಿಸಿ ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡುವ ಸಂಘಪರಿವಾರದ ಹುನ್ನಾರವನ್ನು ಬಯಲಿಗೆಳೆಯಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್.ನವೀನ್‍ಕುಮಾರ್ ಮಾತನಾಡುತ್ತಾ ಹೇಳಿದರು.

ಪ್ರತಿಭಟನೆಯಲ್ಲಿ ಆಜಾದ್ ಟಿಪ್ಪು ಸಂಘರ್ಷ ಸಮಿತಿಯ ಅಧ್ಯಕ್ಷರಾದ ಮುಭಾಷಿರ್ ಅಹಮದ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎ.ರಾಘವೇಂದ್ರ, ಡಿಹೆಚ್‍ಎಸ್‍ನ ಜಿಲ್ಲಾ ಸಂಚಾಲಕರಾದ ಪೃಥ್ವಿ ಎಂ.ಜಿ ಮತ್ತು ಎಸ್‍ಎಫ್‍ಐನ ಜಿಲ್ಲಾ ಅಧ್ಯಕ್ಷರಾದ ಮಹೇಶ್ ಇದ್ದರು.