ಉಚಿತ ಶಿಕ್ಷಣ, ಉಚಿತ ಬಸ್ ಪಾಸ್ ಗಾಗಿ ಎಸ್.ಎಫ್.ಐನಿಂದ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
29
Sunday, 9 July 2017

ಎಲ್ಲ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವರೆಗೂ ಉಚಿತ ಬಸ್ ಪಾಸ್ ನೀಡಲು ಒತ್ತಾಯಿಸಿ ಜುಲೈ 7 ರಂದು ಸರ್ಕಾರಿ ಬಸ್ ನಲ್ಲಿ ಟಿಕೆಟ್ ರಹಿತ ಉಚಿತ ಪ್ರಯಾಣ ಮಾಡಲು, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಕರೆಗೆ ಓಗೊಟ್ಟು ರಾಜ್ಯಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಳ್ಳಾರಿ, ಕೊಪ್ಪಳ, ರಾಯಚೂರು, ಹಾವೇರಿ, ಕೋಲಾರ, ಹಾಸನ, ಉ.ಕನ್ನಡ, ಮೈಸೂರು, ದಾವಣಗೆರೆ ಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ವರದಿಗಳು ಬಂದಿವೆ.

ವಿದ್ಯಾರ್ಥಿಗಳು ಹೆಚ್ಚಿನ ನಗರಗಳಲ್ಲಿ ಟಿಕೆಟ್ ರಹಿತ ಉಚಿತ ಪ್ರಯಾಣ ಮಾಡುವ ಅಥವಾ ಬಸ್‍ಗಳನ್ನು ಬಂದ್ ಮಾಡುವ ಮೂಲಕ ಅಥವಾ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸಾರಿಗೆ ಇಲಾಖೆಯ ಅಥವಾ ಇತರ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಎಸ್‍ಎಫ್‍ಐ) ರಾಜ್ಯಾದ್ಯಂತ ಈಗಾಗಲೇ ಕಳೆದ ಹಲವು ವರ್ಷಗಳಿಂದ ರಾಜ್ಯದ್ಯಾಂತ ಉಚಿತ ಬಸ್ ಪಾಸ್ ಹಾಗೂ ಉಚಿತ ಶಿಕ್ಷಣಕಾಗ್ಕಿ ಹೋರಾಟ ನಡೆಸುತ್ತಾ ಬಂದಿದೆ. ಕಳೆದ ಒಂದು ತಿಂಗಳಿಂದ ಪ್ರತಿಭಟನೆಯನ್ನು ನಡೆಸುತ್ತಾ ಬಂದಿದೆ, ಬಜೆಟ್‍ಗೆ ಮುನ್ನಾ ಹಾಗೂ ಬಜೆಟ್ ನಂತರ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಮನ್ನಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದೆ.

ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹಾಗೂ ಇತರೆ ಸೌಲಭ್ಯಗಳನ್ನು ಕೊಡುವುದರ ಬದಲಾಗಿ ಪ್ರವೇಶಾತಿ ಶುಲ್ಕಗಳ ಏರಿಕೆಗೆ ಹೊರಟಿದೆ. ಮತ್ತೊಂದೆಡೆ ಎಸ್‍ಸಿ\ಎಸ್‍ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಸ್ ನೀಡುವುದಾಗಿ ಘೋಷಣೆ ಮಾಡಿರುವುದರಿಂದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಾತಿ ವೈಮಸ್ಸನ್ನು ಉಂಟು ಮಾಡಲು ಹೊರಟಿರುವುದನ್ನು ಮನವಿಯಲ್ಲಿ ಖಂಡಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಎಸ್‍ಸಿ\ಎಸ್‍ಟಿ ವಿದ್ಯಾರ್ಥಿಗಳಿಗೆ ಉಚಿತ ಪಾಸ್‍ನ್ನು ರಿಯಾಯಿತಿ ದರದಲ್ಲಿ ಬಸ್‍ಪಾಸ್ ನೀಡುವ ತಿರ್ಮಾನವನ್ನು ಎಸ್‍ಎಫ್‍ಐ ಸ್ವಾಗತಿಸುತ್ತದೆ. ಆದರೂ ಇತರೆ ವಿದ್ಯಾರ್ಥಿಗಳನ್ನು ಪ್ರತ್ಯೆಕಿಸುವಂತಹ ಸಂದೇಶವನ್ನು ರಾಜ್ಯ ಸರ್ಕಾರ ನೀಡಬಾರದು. ಯಾವುದೇ ಸರ್ಕಾರ ಆದರೂ ಕೂಡಾ ವಿದ್ಯಾರ್ಥಿ ಸಮುದಾಯದ ಮಧ್ಯೆ ತಾರತಮ್ಯ ಹುಟ್ಟು ಹಾಕುವ ಪ್ರವೃತ್ತಿಯನ್ನು ತಡೆಯಬೇಕು. ವಿದ್ಯಾರ್ಥಿ ಸಮುದಾಯಕ್ಕೆ ದೂರಕಬೇಕಾದ ಎಲ್ಲ ಸೌಲಭ್ಯ ಸವಲತ್ತುಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೂ ದೂರಕುವಂತೆ ಮಾಡಬೇಕು ಆದ್ದರಿಂದ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕೆಂದು ಮನವಿಯಲ್ಲಿ ಎಸ್‍ಎಫ್‍ಐ ಆಗ್ರಹಿಸಿದೆ.