ನಾಗಶೆಟ್ಟಿಹಳ್ಳಿಯಿಂದ ರಾಮನಗರಕ್ಕೆ ಜಾಥಾ

ಸಂಪುಟ: 
11
ಸಂಚಿಕೆ: 
29
Sunday, 9 July 2017

ನಾಗಶೆಟ್ಟಿಹಳ್ಳಿ ದಲಿತರಿಗೆ ನೀಡಿದ್ದ ನಿವೇಶನದ ಎದುರು ಡಾ|| ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿ ಉದ್ಘಾಟಿಸಿ ಮಾತನಾಡಿದರು. ಜಾತಿ ತಾರತಮ್ಯ, ಅಸ್ಪøಶ್ಯತೆ ಆಚರಣೆ ಮಾಡುತ್ತಿರುವ ಕೆಲವು ಲಿಂಗಾಯಿತ ಜಾತಿವಾದಿ ಮುಖಂಡರುಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ಸರ್ಕಾರಕ್ಕೆ ವಂಚಿಸಿ ಮಂಡಲ ಪಂಚಾಯಿತಿಯವರು ಈ ಜಾಗಗಳನ್ನು ಖಾತೆ ಮಾಡಿಕೊಟ್ಟಿರುವುದು ಕಾನೂನು ಬಾಹಿರವಾಗಿದೆ. ಅದನ್ನು ಸರ್ಕಾರ ಕೂಡಲೇ ರದ್ದುಪಡಿಸಿ ಹಕ್ಕುಪತ್ರ ಹೊಂದಿರುವ ದಲಿತರಿಗೆ ಖಾತೆ ಮಾಡಿಕೊಟ್ಟು ನಿವೇಶನ ಹಿಂದಿರುಗಿಸಲು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎನ್. ಉಮೇಶ್ ಮಾತನಾಡಿ ಬಸವಣ್ಣನವರ ಹೆಸರಿನಲ್ಲಿ ದೇವಸ್ಥಾನ ಕಟ್ಟಿ ಅಪಚಾರ ಮಾಡುತ್ತಿದ್ದಾರೆ. ತುಮಕೂರಿನ ಸಿದ್ದಲಿಂಗಸ್ವಾಮಿ ಹೆಸರಿನಲ್ಲಿ ಬೋರ್ಡ್ ಹಾಕಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಸಿದ್ದಲಿಂಗಸ್ವಾಮಿಯವರನ್ನು ನಾವು, ಪೊಲೀಸಿನವರು, ಕೃತ್ಯವೆಸಗಿರುವ ಜಂಗ ದ್ರೋಹಿಗಳೂ ಒಟ್ಟಿಗೆ ಹೋಗಿ ಕೇಳೋಣ ಬನ್ನಿ. ಆಗ ನಿಮ್ಮ ಬಣ್ಣ ಬಯಲಾಗುತ್ತದೆ ಎಂದರು. ದಲಿತರಿಗೆ ಸರ್ಕಾರ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ. ಸಮುದಾಯದ ರಾಜ್ಯ ಉಪಾಧ್ಯಕ್ಷರಾದ ಟಿ. ಸುರೇಂದ್ರರಾವ್, ಡಿಹೆಚ್‍ಎಸ್ ಬೆಂಗಳೂರು ದಕ್ಷಿಣ ಜಿಲ್ಲಾ ಸಂಚಾಲಕರಾದ ಬಿ. ರಾಜಶೇಖರ ಮೂರ್ತಿ, ಎಸ್‍ಎಫ್‍ಐ ರಾಜ್ಯ ಉಪಾಧ್ಯಕ್ಷರಾದ ಚಿಕ್ಕರಾಜ್ ಇವರುಗಳು ಮಾತನಾಡಿದರು.

ಈ ಜಾಥಾದಲ್ಲಿ ಬೆಂ. ದಕ್ಷಿಣ ಸಮಿತಿಯಿಂದ ಡಿಹೆಚ್‍ಎಸ್ ರಾಜ್ಯ ಸಮಿತಿ ಸದಸ್ಯರಾದ ರಾಜಣ್ಣ.ಎನ್, ಡಿಹೆಚ್‍ಎಸ್ ರಾಜಾಜಿನಗರ ವಲಯ ಸಮಿತಿ ಮುಖಂಡರಾದ ರಾಜಣ್ಣ (ಬಿಎಸ್‍ಎನ್‍ಎಲ್), ಶಂಕರ್ (ಕಮಲನಗರ), ಚೆಲುವಯ್ಯ (ಕಮಲನಗರ), ಚಂದ್ರಶೇಖರ್ (ಶ್ರೀರಾಮಪುರ), ಶ್ರೀನಿವಾಸ್ (ನಿವೃತ್ತ ಆರ್‍ಬಿಐ ನೌಕರರು), ಪಾರ್ಥಿಬನ್ ಭಾಗವಹಿಸಿದರು.

ಮಂಡ್ಯ ಜಿಲ್ಲಾ ಸಂಚಾಲಕರು ಕೃಷ್ಣ .ಆರ್, ಶಂಕರ್ (ಶ್ರೀರಂಗಪಟ್ಟಣ), ಯಶವಂತ (ಕೆಪಿಆರ್‍ಎಸ್ ಮಂಡ್ಯ), ಜೆಎಂಎಸ್ ಮುಖಂಡರಾದ ಗೌರಮ್ಮ ಮತ್ತಿತರರು ಭಾಗವಹಿಸಿದ್ದರು.

ನೇತೃತ್ವವನ್ನು ಮಾಗಡಿ ತಾಲೂಕ್ ವನಜ, ನಾಗಶೆಟ್ಟಿಹಳ್ಳಿ ಮುಖಂಡರಾದ ಗಂಗಹೊನ್ನಸ್ವಾಮಯ್ಯ (ಮಾಸ್ತರು), ಗೋವಿಂದರಾಜ್ ವಹಿಸಿದರು. ಬೆಂ. ದಕ್ಷಿಣ ಜಿಲ್ಲಾ ಸಮಿತಿಯಿಂದ ನಂದಿಸ್, ಮಾದೇಶ್ (ಅನೇಕಲ್) ವಹಿಸಿದ್ದರು.

ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹರ್ಣ ಅಧಿಖಾರಿ ಶ್ರೀಮತಿ ಶೈಲಜಾ ರವರಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಯಿತು. ಜುಲೈ 13 ನೇ ತಾರಿಖು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಳುವುದಾಗಿ ರಾಮನಗರ ಸಿಇಓ ತಿಳಿಸಿದ್ದಾರೆ.
 

- ಗೋಪಾಲಕೃಷ್ಣ ಹರಳಹಳ್ಳಿ