Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಕತಾರ್ ಪ್ರತ್ಯೇಕಿಸುವ-ಸೌದಿ ಅರೇಬಿಯಾ ಆಶಯ ಈಡೇರುವುದೇ?

ಸಂಪುಟ: 
11
ಸಂಚಿಕೆ: 
28
date: 
Sunday, 2 July 2017

 

ಸೌದಿ ಅರೇಬಿಯಾ ಮತ್ತು ಆ ಪ್ರದೇಶದ ಅದರ ಮಿತ್ರ ದೇಶಗಳು ‘ಕತಾರ’ ನಿಂದ ಎಮಿರೇಟ್ಸ್ (ಯು.ಎ.ಇ)ನ್ನು ಪ್ರತ್ಯೇಕಿಸಲು ಹಾಗೂ ಕತಾರನ್ನು ದುರ್ಬಲಗೊಳಿಸಲು ಸಲುವಾಗಿ ‘ಅಲ್ಲಿನ ಆಡಳಿತವನ್ನು ಬದಲಾವಣೆ ಮಾಡಬೇಕೆಂಬ ನಿರ್ಧಾರವನ್ನು ತೆಗೆದುಕೊಂಡಿದೆ. ಸೌದಿ ಅರೇಬಿಯಾದ ಈ ನಿರ್ಧಾರವನ್ನು ಗಲ್ಫ-ಕೋ-ಆಪರೇಷನ್ ಕೌನ್ಸಿಲ್ (ಜಿ.ಸಿ.ಸಿ)ನ ಒಳಗಿರುವ ಓಮಾನ್ ಮತ್ತು ಕುವೈತ್ ದೇಶಗಳು ಬೆಂಬಲಿಸದಿರುವುದು ಸೌದಿಗೆ ಮುಜುಗರವಾಗಿದೆ. ಇದರಿಂದ ಸೌದಿ ಅರೇಬಿಯಾದ ಆಶಯವು ವಿಫಲಗೊಳ್ಳುವ ಆತಂಕ ಹೆಚ್ಚಾಗಿದೆ. ಕತಾರ್ ನಲ್ಲಿ ನೆಲೆ ಹೊಂದಿರುವ ಅಮೆರಿಕಾದ ಮಿಲಿಟರಿ, ಕತಾರ್ ನ ಆಡಳಿತ ಬದಲಾವಣೆಗೆ ಗಮನ ಹರಿಸುತ್ತಿಲ್ಲ. .ಮಾತ್ರವಲ್ಲದೆ, ಟ್ರಂಪ್ ನ ವಿರುದ್ಧವೇ ಸದ್ಯದ ಪರಿಸ್ಥಿತಿಯಲ್ಲಿ ನಡೆದುಕೊಳ್ಳುತ್ತಿರುವುದರಿಂದ - ಸೌದಿಯ ಆಶಯ ವಿಫಲವಾಗುವ ಸಾಧ್ಯತೆಯೇ ಹೆಚ್ಚಾಗಿದೆ.

ಅಮೆರಿಕಾವು ೩೬ ಈ-೧೫ ಜೆಟ್ಸ್ ಫೈಟರ್ ವಿಮಾನಗಳನ್ನು ‘ಕತಾರ್’ ಗೆ ಮಾರುವ ೧೨ ಬಿಲಿಯನ್ ಡಾಲರ್ ನ ಒಪ್ಪಂದಕ್ಕೆ ಸಹಿ ಮಾಡಿರುವುದೂ ಈ ಬಿಕ್ಕಟ್ಟಿನೊಂದಿಗೆ ತಾಳೆಹಾಕಿಕೊಂಡಿದೆ. ಈ ಬಿಕ್ಕಟ್ಟಿನ ಹುಟ್ಟಿಗೆ  ಕತಾರ್ ದೊರೆ ಇರಾನ್ ನೊಂದಿಗೆ ಜಿ.ಸಿ.ಸಿ.ಯ ಘರ್ಷಣೆಯ ನೀತಿಯನ್ನು ಪ್ರಶ್ನೆ ಮಾಡಿದ್ದು, ‘ಹಾಮಾಸ್’ ಮತ್ತು ಹೆಜ್ಬುಲ್ಲಾ ಗಳ ಕತಾರ್ ಪರವಾದ ಕಾರ್ಯಯೋಜನೆಗಳನ್ನು ಬಹಿರಂಗವಾಗಿ ಪ್ರಶಂಸಿದ್ದು ಮೂಲ ಕಾರಣವಾಯಿತು.

ಇರಾಕ್ ನಲ್ಲಿನ ಶಿಯಾ ಭಯೋತ್ಪಾದಕ ಗುಂಪುಗಳಿಗೆ ‘ಸುಲಿಗೆ ಹಣ’ (ಡಿಚಿಟಿsom) ವನ್ನು ಪಾವತಿಸುತ್ತಿದೆ ಎಂಬ ಆರೋಪವನ್ನು ಕತಾರ್ ಎದುರಿಸುತ್ತಿದೆ. ಸುಮಾರು ೫೦೦ ಮಿಲಿಯನ್ ಡಾಲರ್‌ನಷ್ಟು ಹಣವನ್ನು ಇರಾಕಿನ ಸೆಂಟ್ರಲ್ ಬ್ಯಾಂಕ್ ಗೆ, ಸೆರೆಮನೆಯಲ್ಲಿರುವ ೨೫ ಕತಾರಿ ಒತ್ತೆಯಾಳುಗಳ ಬಿಡುಗಡೆಗೆ ಪಾವತಿ ಮಾಡಲಾಗಿದೆ ಎಂಬ ಇರಾಕಿನ ಪ್ರಧಾನಮಂತ್ರಿ ‘ಕತಾರ್’ ಮೇಲೆ ಹೊರಿಸಿದ್ದಾರೆ. ಜಿ.ಸಿ.ಸಿ.ಯ ನಿಲುವನ್ನು ಕಾರ್ಯರೂಪಕ್ಕೆ ತರುವ ಕತಾರ್ ಉಲ್ಲಂಘಿಸಿದೆ. ಇದು ಸೌದಿಯ ಪ್ರಮುಖ ಆರೋಪವಾಗಿದೆ.

ಕತಾರ್ ಮೇಲಿನ ಮತ್ತೊಂದು ಆರೋಪವೆಂದರೆ ’ಹಮಾಸ್’ ಹಾಗೂ ’ಮುಸ್ಲಿಂ ಬ್ರದರ್ ಹುಡ್’ ನಂತಹ ಸಂಘಟನೆಗಳಿಗೆ ನಿರಂತರವಾಗಿ ಕತಾರ್ ನ ಬೆಂಬಲ. ಇವುಗಳನ್ನು ಇಸ್ರೇಲ್, ಸೌದಿ ಮತ್ತಿತರ ಮಿತ್ರದೇಶಗಳು ‘ಭಯೋತ್ಪಾದಕ’ರೆಂದು ಗುರುತಿಸಿದ್ದಾರೆ. ಇಸ್ರೇಲಿನ ದಿಗ್ಭಂಧನದಲ್ಲಿರುವ ‘ಗಾಜಾ’ ದಲ್ಲಿ ‘ಹಮಾಸ್’ರು ಅಧಿಕಾರದಲ್ಲಿದ್ದಾರೆ. ಹಾಗೆಯೇ ಟುನಿಷಿಯಾ, ಮೊರಾಕೋ, ಜೋರ್ಡಾನ್ ಹಾಗೂ ಇನ್ನಿತರ ಅರಭ್ ರಾಷ್ಟ್ರಗಳಲ್ಲಿ ’ಮುಸ್ಲಿಂ ಬ್ರದರ್ ಹುಡ್’ ಗುಂಪುಗಳನ್ನು ಬೆಂಬಲಿಸುತ್ತಿದೆ. ಈಜಿಪ್ಟ್‌ನಲ್ಲಿ ’ಮುಸ್ಲಿಂ ಬ್ರದರ್ ಹುಡ್’ ನ ನಾಯಕರು ಬಂಧನದಲ್ಲಿದ್ದು, ಹಲವರು ಮರಣದಂಡನೆ ಎದುರಿಸುತ್ತಿದ್ದಾರೆ.

’ಮುಸ್ಲಿಂ ಬ್ರದರ್ ಹುಡ್’ ಈಜಿಪ್ಟ್‌ನಲ್ಲಿ ಮೂರು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಅಲ್ಲಿನ ಜನರಿಂದ ಆಯ್ಕೆಗೊಂಡು, ಅಧಿಕಾರಕ್ಕೆ ಬಂದಿತು. ಪುನಃ ಈಜಿಪ್ಟ್‌ನಲ್ಲಿ ಮುಕ್ತ ಹಾಗೂ ನ್ಯಾಯೋಜಿತ ಚುನಾವಣೆಗಳು ಏನಾದರೂ ನಡೆದರೆ ಅನೇಕ ರಾಜಕೀಯ ವೀಕ್ಷಕರ ಪ್ರಕಾರ ದು ಪುನಃ ಆಯ್ಕೆಯಾಗುವ ಸಂಭವವೇ ಹೆಚ್ಚಾಗಿದೆ. ಹಿಂದಿನ ಅಮೆರಿಕಾದ ಅಧ್ಯಕ್ಷರಾದ ಒಬಾಮಾ ಆಡಳಿತವೂ ಇವರೊಂದಿಗೆ ವ್ಯವಹರಿಸುತ್ತಿದ್ದರು. ೨೦೦೬ ರಲ್ಲಿ ಪಶ್ಚಿಮ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ನಡೆದ ಚುನಾವಣೆಯಲ್ಲಿ ಇಲ್ಲಿಯವರೆಗೂ ನಡೆದ ಏಕೈಕ ಚುನಾವಣೆಯಲ್ಲಿ ‘ಹಮಾಸ್’ ದಿಗ್ವಿಜಯ ಸಾಧಿಸಿತ್ತು.

ಈಜಿಪ್ಟ್‌ನಲ್ಲಿ ಅಲ್ಫಾವಧಿಯ ’ಮುಸ್ಲಿಂ ಬ್ರದರ್ ಹುಡ್’ ಸರ್ಕಾರಕ್ಕೆ ಕತಾರ್ ಸರ್ಕಾರವು ನೀಡಿದ್ದ ಬೆಂಬಲಕ್ಕೆ ಸೌದಿ ಅರೇಬಿಯಾವು ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸಿತ್ತು.

ಈ ಸಂಘಟನೆಗಳಿಗೆ ಬೆಂಬಲ ನಿಲ್ಲಿಸುವುದಲ್ಲದೆ, ಸೌದಿ ಅರೇಬಿಯಾದ ಮತ್ತಷ್ಟು ಬೇಡಿಕೆಗಳೆಂದರೆ, ತಕ್ಷಣದಿಂದಲೇ ಇರಾನ್‌ನೊಂದಿಗೆ ಕತಾರ್ ಎಲ್ಲಾ ರಾಜತಾಂತ್ರಿಕ ಸಂಬಂಧಗಳಿಂದ ಹೊರಬರಬೇಕು. ಕತಾರ್ ಮಾಲಿಕತ್ವದ ಪ್ರಸಿದ್ಧ ಜಜೀರಾ ಟಿವಿ ವಾಹಿನಿಯ ಪ್ರಸಾರ ನಿಲ್ಲಿಸಬೇಕು.. ಜೊತೆಗೆ ವಿಶ್ವದ ಅತಿದೊಡ್ಡ ದೈತ್ಯ ದಕ್ಷಿಣ ಪಾರಸ್ ಅನಿಲ್ ಕ್ಷೇತ್ರವನ್ನು ಹಂಚಿಕೊಳ್ಳಬೇಕು. ಹಾಗೂ ಎರಡೂ ದೇಶಗಳಿಗೂ ನಿರ್ಣಾಯಕವಾಗಿರುವ ಹೈಡ್ರೋ-ಕಾರ್ಬನ್ ವಲಯದಲ್ಲಿ ಎಲ್ಲರೊಂದಿಗೂ ಸಹಕರಿಸಬೇಕು. ಇದರ ಹೊರತಾಗಿಯೂ, ಗಲ್ಫ ಪ್ರದೇಶದಲ್ಲಿನ ಇತರ ರಾಷ್ಟ್ರಗಳಾದ ಓಮಾನ್, ಕುವೈತ್ ಹಾಗೂ ಇರಾನ್‌ನೊಂದಿಗೆ ದೂರವಿರಬೇಕು. (ದುಬೈ ಇರಾನ್‌ನೊಂದಿಗೆ ಉತ್ತಮ ಸಂಬಂಧಗಳನ್ನು ಬಯಸುತ್ತದೆ ಎಂಬುದನ್ನೂ ಇಲ್ಲಿ ಗಮನಿಸಬೇಕಾಗಿದೆ). ಇಲ್ಲಿ ಯು.ಎ.ಇ. ಯ ಅಪಾರ ಪ್ರಮಾಣದ ಸಂಪತ್ತನ್ನು ಸೌದಿ ಅರೇಬಿಯಾ ಮತ್ತು ಅಬುದಾಭಿ ನಿಯಂತ್ರಿಸುತ್ತದೆ. ಇದು ಪ್ರಸ್ತುತ ಜಿ.ಸಿ.ಸಿ.ಯ ವಿದೇಶಾಂಗ ನೀತಿಗೆ ಚಾಲನೆ ಒದಗಿಸುತ್ತದೆ.

ಉದ್ಬವಗೊಂಡಿರುವ ಕತಾರ್ - ಎಮಿರೇಟ್ಸ್‌ನ ಬಿಕ್ಕಟ್ಟಿನಲ್ಲಿ ಅಮೇರಿಕಾದ ಪಾತ್ರವೇನು? ಅಮೆರಿಕಾದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾಕ್ಕೆ ಬೇಟಿಯಾದ ನಂತರ, ಆ ಕೂಡಲೇ ಸೌದಿ ಹಾಗೂ ಅದರ ಮಿತ್ರ ರಾಷ್ಟ್ರಗಳು ಕತಾರ್ ವಿರುದ್ಧ ಜಿ.ಸಿ.ಸಿ. ಯೊಳಗೆ ತಮ್ಮ ಬೇಡಿಕೆಗಳು ಹಾಗೂ ಆರೋಪಗಳನ್ನು ಮಂಡಿಸಿದವು. ಕತಾರ್ ಅನ್ನು ಎಮಿರೇಟ್ಸ್‌ನಿಂದ ಪ್ರತ್ಯೇಕಿಸುವ ಸೌದಿಯ ಈ ಕ್ರಮವನ್ನು ಕನಿಷ್ಠ ಮೇಲ್ನೋಟಕ್ಕೆ ಎಲರಿಗೂ ಒಂದು ಆಶ್ಚರ್ಯಕರವಾದ ವರ್ತನೆಯಂತೆ ಕಂಡಿತು. ಏಕೆಂದರೆ ಕತಾರ್ ನ ಪ್ರದೇಶದಲ್ಲಿಯೇ, ಅಮೆರಿಕಾವು ತನ್ನ ಮಿಲಿಟರಿಯ ಅತಿದೊಡ್ಡ ನೆಲೆಯನ್ನು ಹೊಂದಿದೆ. ಅದು ೧೦,೦೦೦ ಕ್ಕಿಂತ ಹೆಚ್ಚು ಅಮೆರಿಕಾದ ಸೇನಾ ಪಡೆಗಳು ಹಾಗೂ ಅತಿದೊಡ್ಡ ಅಮೆರಿಕನ್ ಅಲ್ ಯುಡೈಡ್ ಎಂಬ ಏರ್‌ಪೋರ್ಸ್ ಬೇಸ್ ನೆಲೆ ಹೊಂದಿದೆ.

ಅಮೆರಿಕಾದ ಸೇನೆ ಸೆಂಟ್‌ಕಾಮ್, ಕತಾರನಲ್ಲಿ ಮುಂಚೂಣಿಯಲ್ಲಿದೆ. ಪೆಂಟಗನ್ ಹೇಳಿಕೆಯಂತೆ ಸಿರಿಯಾ ಮೇಲಿನ ಸೇನಾ ಕಾರ್ಯಚರಣೆಗಳಿಗೆ ಅಮೆರಿಕನ್ ಹೇಳಿಕೆಯಂತೆ ಸಿರಿಯಾ ಮತ್ತು ಇರಾಕ್ ಮೇಲಿನ ಸೇನಾ ಕಾರ್ಯಚರಣೆಗಳಿಗೆ ಅಮೆರಿಕನ್ ಮಿಲಿಟರಿಗೆ ಕತಾರ್ ನ ಈ ನೆಲೆ ನಿರ್ಣಾಯಕವಾಗಿದೆ. ಅಮೆರಿಕಾದ ರಾಜ್ಯ ಕಾರ್ಯದರ್ಶಿ ರೆಕ್ಸ್ ಟೆಲ್ಲರ್‌ರ್ಸನ್ ಕೂಡ ಈ ಬಗ್ಗೆ ಪ್ರಸ್ತಾಪಿಸುತ್ತ ಗಲ್ಫ ನ ನೆರೆಹೊರೆಯವರ ಮಧ್ಯೆ ಸಮಾಲೋಚನೆಯ ಒಪ್ಪಂದ ಅಗತ್ಯತೆಯ ಬಗ್ಗೆ ಹೇಳಿದ್ದಾರೆ.

ಅಧ್ಯಕ್ಷ ಟ್ರಂಪ್‌ರ ಇಬ್ಬಂದಿತನ ಬಯಲಿಗೆ:

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಸೌದಿ ರಾಜಧಾನಿ ರಿಯಾದ್ ನ ಎಲ್ಲ ಅಭಿಪ್ರಾಯಗಳಿಗೂ ತನ್ನ ಸಂಪೂರ್ಣ ಒಪ್ಪಿಗೆ ಸೂಚಿಸುತ್ತಾ, ಭಯೋತ್ಪಾದನೆಯ ಪ್ರಮುಖ ಪ್ರಾಯೋಜಕತ್ವದಲ್ಲಿ ಇರಾನ್ ದೇಶವು ಪ್ರಮುಖ ಸ್ಥಾನದಲ್ಲಿದೆ ಎಂಬ ಸೌದಿಯ ಬಲವಾದ ಅಭಿಪ್ರಾಯವನ್ನು ಬೆಂಬಲಿಸುತ್ತದೆ. ಇದೇ ಟ್ರಂಪ್ ೨೦೧೧ ರಲ್ಲಿ ಸೌದಿ ಅರೇಬಿಯಾವನ್ನು ಜಗತ್ತಿನ ಅತಿದೊಡ್ಡ ಭಯೋತ್ಪಾದಕ ದೇಶವೆಂದಿದ್ದರು. ಇತ್ತೀಚಿಗಿನ ಟ್ರಂಪ್‌ನವರ ರಿಯಾದ್ ಬೇಟಿಯ ಸಂದರ್ಭದಲ್ಲಿ ಸೌದಿಯು ಅಮೇರಿಕಾದೊಂದಿಗೆ ೧೧೦ ಶತಕೋಟಿ ಡಾಲರ್‌ನಷ್ಟು ಮೊತ್ತದ ಶಸ್ತ್ರಾಸ್ತ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಪ್ಲೇಟು ಬದಲಿಸಿದ್ದಾರೆ. ಟ್ರಂಪರ ಇಬ್ಬಂದಿತನಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ಕತಾರ್ ಸುಮಾರು ಮೂರು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಒಂದು ದೇಶವಾಗಿದೆ. ಅದರಲ್ಲಿ ಎರಡು ಮಿಲಿಯನ್ ವಿದೇಶಿಯರಿದ್ದಾರೆ. ಅವರಲ್ಲಿ ಭಾರತೀಯ ಉಪಖಂಡದ ಹೆಚ್ಚಿನ ಕೆಲಸಗಾರರಿದ್ದಾರೆ. ಅನಿಲ ಸಮೃದ್ಧ ಈ ಎಮಿರೇಟ್ ದೇಶ ಆಹಾರ ಪದಾರ್ಥಗಳನ್ನು ಆಮದಿನ ಮೇಲೆ ಅವಲಂಬಿತವಾಗಿದೆ. ಸೌದಿ ಮತ್ತು ಮಿತ್ರ ರಾಷ್ಟ್ರಗಳು ಸರಕು ಸಾಗಣೆ ಮತ್ತು ವಾಣಿಜ್ಯ ಪ್ರಯಾಣ ನಡೆಸಲು ಭೂ ಮತ್ತು ವಾಯು ಪ್ರದೇಶದ ಬಳಕೆಯನ್ನು ನಿಷೇದಿಸಿದ್ದಾರೆ. ಇದೀಗ ತನ್ನ ವಿಮಾನದ ಮೂಲಕ ಟರ್ಕಿ ಹಾಗೂ ಅದರ ಮಿತ್ರರು ಕತಾರಿಗೆ ಆಹಾರ ಸರಬರಾಜು ಮಾಡುತ್ತಿವೆ. ಇರಾನ್ ಕೂಡ ತನ್ನ ಅರಬ್ ಮಿತ್ರ ರಾಷ್ಟ್ರಗಳಿಗೆ ಅಗತ್ಯವಿರುವ ಆಹಾರ ಸರಕುಗಳನ್ನು ವಿಮಾನದ ಮೂಲಕ ತಲುಪಿಸುತ್ತಿದೆ.

ಟ್ರಂಪ್ಟಿಕೇಷನ್

ಇದೀಗ ಜರ್ಮನ ವಿದೇಶಾಂಗ ಸಚಿವ ಸಿಗ್ಮಾರ್ ಗೇಬ್ರಿಯಲ್, ಗಲ್ಫ್‌ನಲ್ಲಿನ ಈ ಹೊಸ ಬಿಕ್ಕಟ್ಟಿನಲ್ಲಿ ಅಮೇರಿಕಾದ ಅಧ್ಯಕ್ಷರ ಪಾತ್ರದ ಬಗ್ಗೆ ತೀವ್ರವಾಗಿ ಟೀಕೆ ಮಾಡಿದ್ದಾರೆ. ಈ ವಿವಾದದ ಉದ್ಬವಕ್ಕೆ ಟ್ರಂಪ್ಟಿಕೇಷನ್ ಎಂಬುದಾಗಿ ಬಯಲುಗೊಳಿಸಿದ್ದಾರೆ. ಪ್ರಾದೇಶಿಕ ರಾಜಕೀಯದಲ್ಲಿ ಮೂಗು ತೂರಿಸಿ, ಅಪಾಯಕಾರಿ ಬೆಳವಣಿಗೆಗೆ ಕಾರಣರಾದ ಟ್ರಂಪ್‌ರ ನೀತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಜರ್ಮನಿಯೊಂದಿಗೆ, ಟರ್ಕಿ ಮತ್ತು ಇರಾನ್ ಕೂಡ ಕತಾರ್ ಗೆ ಮುಕ್ತ ಬೆಂಬಲ ವ್ಯಕ್ತಪಡಿಸಿದೆ. ಜರ್ಮನಿ ಮತ್ತು ಟರ್ಕಿ ನ್ಯಾಟೋ ನ ಸದಸ್ಯ ರಾಷ್ಟ್ರಗಳಾಗಿವೆ ಎಂಬುದನ್ನೂ ಇಲ್ಲಿ ಗಮನಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕತಾರ್ ವಿರುದ್ಧ ಯಾವುದೇ ಮಿಲಿಟರಿ ಪ್ರಯೋಗ ಗಲ್ಫ್ ಮೈತ್ರಿ ಕೂಟದಲ್ಲಿ ಮಾತ್ರವಲ್ಲದೆ ಪಶ್ಚಿಮ ಮಿಲಿಟರಿ ಮೈತ್ರಿಗಳ ಮೇಲೆಯೂ ಗಂಭೀರವಾಗಿ ಛಿದ್ರಗಳನ್ನು ಉಂಟಾಗುವ ಸಂಭವವಿದೆ. ಟರ್ಕಿಯು ಕೂಡ ಒಂದು ಸಣ್ಣ ಮಿಲಿಟರಿ ನೆಲೆಯನ್ನೂ ಕತಾರ್‌ನಲ್ಲಿ ಹೊಂದಿದೆ. ಎಮಿರೇಟ್ಸ್ (ಯು.ಎ.ಇ.) ಹೆಚ್ಚುವರಿ ಸೈನಾಪಡೆಗಳನ್ನು ಕತಾರ್‌ಗೆ ಕಳುಹಿಸಲು ನಿರಾಕರಿಸಿದೆ.

ಸೌದಿ ಅರೇಬಿಯಾಕ್ಕೆ ಮುಕ್ತವಾಗಿ ಬೆಂಬಲ ಸೂಚಿಸುವ ಏಕೈಕ ಪ್ರಮುಖ ದೇಶ ಈಜಿಪ್ಟ್. ಅವರಿಗೆ ಕತಾರ್ ಮೇಲೆ ಕೋಪಕ್ಕೆ ಕಾರಣ ’ಮುಸ್ಲಿಂ ಬ್ರದರ್ ಹುಡ್’ ಹಾಗೂ ಆಲ್-ಜಜೀರಾ ವಾಹಿನಿಗಳಿಗೆ ಕತಾರ್ ನ ಬೆಂಬಲ.

ಆದರೆ ಜಿಸಿಸಿ ಯ ಈ ಎಲ್ಲಾ ರಾಷ್ಟ್ರಗಳು ಲಿಬಿಯಾದ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡಿದ್ದಾರೆ. ಇದು ಸಿರಿಯಾ ಪ್ರಕರಣಕ್ಕೂ ಅನ್ವಯಿಸುತ್ತದೆ. ಈ ಪ್ರದೇಶದಲ್ಲಿ ಇದೀಗ ಸೌದಿಯವರಿಗೆ ಸವಾಲು ಒಡ್ಡುವ ಏಕೈಕ ರಾಷ್ಟ್ರವಾಗಿ ಕತಾರ್ ನಿಂತಿದೆ. ಯು.ಎ.ಇ.ಯು, ಸಿರಿಯಾ, ಲಿಬಿಯಾ ಮತ್ತು ಇತರೆ ಪ್ರದೇಶಗಳಲ್ಲಿ ಸೌದಿ ಅರೇಬಿಯಾದ ಬಲವಾದ ಮಿತ್ರದೇಶ ಆಗಿದೆ. ಇದು ಯೆಮೆನ್, ಲಿಬಿಯಾ ಮತ್ತು ಆಪ್ರಿಕಾದ ಕೆಲವು ದೇಶಗಳಲ್ಲಿ ತನ್ನ ಪ್ರಭಾವ ರೂಪಿಸಲು ಪ್ರಯತ್ನಿಸುತ್ತಿದೆ. ಆದ ಕಾರಣ ತನ್ನದೇ ಆದ ಅಜೆಂಡಾವನ್ನು ಯು.ಎ.ಇ. ಹೊಂದಿದೆ. ಈ ಹಿನ್ನೆಲೆಯಲ್ಲಿ ಕತಾರ್ ನಿಂದ ಎಮಿರೇಟ್ಸ್ ಪ್ರತ್ಯೇಕಿಸುವ ಸೌದಿ ಅರೇಬಿಯಾದ ಬೇಡಿಕೆಗೆ ಬೆಂಬಲವಾಗಿ ನಿಂತಿದೆ.

ಸೌದಿಯಿಂದ-ಕತಾರ್ ಆಡಳಿತ ಪ್ರತೇಕಿಸಲು ಕೋರಿಕೆಗೆ ಟ್ರಂಪ್ ಬೆಂಬಲ

ಸೌದಿ ಮತ್ತು ಎಮಿರೇಟ್ಸ್ (ಯು.ಎ.ಇ.) ಇಬ್ಬರೂ ಕತಾರ್ ಸರಕಾರ ಬದಲಾವಣೆಯ ವಿಚಾರದಲ್ಲಿ ಒಂದಾಗಿದ್ದಾರೆ. ರಾಜವಂಶದ ವಂಶಾವಳಿಯಿಂದ ಪ್ರಸ್ತುತ ಆಡಳಿತವನ್ನು ಬದಲಿಸಲು ಯಾರನ್ನಾದಾರೂ ಹುಡುಕುತ್ತಿರುವುದು ಸ್ವಷ್ಟವಾಗಿ ಕಂಡುಬರುತ್ತಿದೆ. ಇಂಥಹ ಆಂತರಿಕ ಬದಲಾವಣೆ ದಂಗೆಗಳು ೧೯೯೬ ರಲ್ಲಿ ಮಾಡಲ್ಪಟ್ಟಿತ್ತು. ಕತಾರೀಸ್ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ರವರು ನಮ್ಮ ದೇಶವೂ ಎಂದಿಗೂ ಶರಣಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಪರವಾಗಿ ಬೆಂಬಲವನ್ನು ರಷ್ಯಾ ಮತ್ತು ಜರ್ಮನಿಯಂಥ ದೇಶಗಳೂ ಇವೆ ಎಂದಿದ್ದಾರೆ.

ಅರಭ್ ಜನರಲ್ಲಿ ಗಲ್ಫ್ ನ ಈ ಬಿಕ್ಕಟ್ಟಿನ್ ಇತ್ತೀಚಿನ ಬೆಳವಣಿಗೆಗಳು ಯಾವುದೇ ಸಹಾನುಭೂತಿ ಮೂಡಿಸಿಲ್ಲ. ಈ ಬಿಕ್ಕಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಎಲ್ಲಾ ದೇಶಗಳು ಸಿರಿಯಾ, ಇರಾಕ್, ಮತ್ತು ಯೆಮೆನ್ ನಲ್ಲಿನ ಗಂಭೀರವಾದ ಮಾನವೀ ದುರಂತಕ್ಕೆ ಪರಿಸ್ಥಿತಿಗೆ ಭಾರೀ ಪ್ರಮಾಣದಲ್ಲಿ ಜವಾಬ್ಧಾರರಾಗಿದ್ದಾರೆ. ಯೆಮೆನ್ ಮೇಲೆ ನಡೆಸಿದ ಸೌದಿ ಬಾಂಬ್ ದಾಳಿ ಮತ್ತು ದಿಗ್ಭಂದನವು ಇಂದು ವಿಶ್ವವು ಎದುರಿಸುತ್ತಿರುವ ಕೆಟ್ಟ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಸಿರಿಯಾ ಮತ್ತು ಲಿಬಿಯಾಗಳಿಗೆ - ಶಸ್ತ್ರಾಸ್ತ್ರ ಮತ್ತು ಹಣಕಾಸನ್ನು ಉಗ್ರವಾದಿಗಳ ಗುಂಪುಗಳಿಗೆ ಒದಗಿಸುವಲ್ಲಿ ಕತಾರ್ ಮುಂಚೂಣಿಯಲ್ಲಿತ್ತು.

ಇಸ್ರೇಲ್‌ಗೆ ಮೊದ-ಮೊದಲು ಕತಾರ್ ಸ್ನೆಹ ದಿಂದ ಇತ್ತು. ಇದೀಗ ಇಸ್ರೇಲಿ ತಂತ್ರಗಳಿಗೆ ಗುರಿಯಾಗಿದೆ. ಪ್ಯಾಲೇಸ್ಟೇನಿಯನ್ ಭಯೋತ್ಪಾದನೆಗೆ ಬೆಂಬಲಿಸಿದ್ದಕ್ಕಾಗಿ ಅಮೇರಿಕಾದ ದಿಗ್ಭಂದನದ ಹೇರಿಕೆಯನ್ನು ಎದುರಿಸುತ್ತಿದೆ. ಇಸ್ರೇಲಿ ಗುಂಪುಗಳು ಈಗ ಸೌದಿ ಅರೇಬಿಯಾ ಮತ್ತು ಯುಎಇಗಳ ಪರ ಬಹಿರಂಗವಾಗಿಯೇ ಅಭಿಯಾನ ಆರಂಭಿಸಿದೆ.

ಈ ತ್ರಿಪಕ್ಷಿಯ ಒಕ್ಕೂಟದ ಕಾರ್ಯತಂತ್ರಗಳು ಕತಾರ್ ವಿರುದ್ಧ ಯಶಸ್ವಿಯಾಗುವುದೇ? ಬಿಕ್ಕಟ್ಟಿನಿಂದ ಕತಾರ್ ಹೊರ ಬರುವುದೇ? ಕಾದು ನೋಡಬೇಕಾಗಿದೆ.

 

 

- ನಾಗರಾಜ್ ನಂಜುಂಡಯ್ಯ