ಜನಶಕ್ತಿ ಉತ್ಸವ ಮತ್ತು ಪ್ರಸಾರಾಂದೋಲನ 2017

ಸಂಪುಟ: 
11
ಸಂಚಿಕೆ: 
28
Sunday, 2 July 2017

ಕಳೆದ ೩ ವರ್ಷಗಳಂತೆ ಈ ವರ್ಷವೂ ಜನಶಕ್ತಿ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನಶಕ್ತಿ ಪತ್ರಿಕೆಯನ್ನು ದುಡಿಯುವ ಜನರ ಚಳುವಳಿಯ ಒಳಗೂ/ಹೊರಗೂ ಇನ್ನಷ್ಟು ಹೆಚ್ಚಿನ ಜನವಿಭಾಗಗಳಿಗೆ ಪರಿಚಯಿಸುವುದು, ವ್ಯಾಪಕವಾಗಿ ತೆಗೆದುಕೊಂಡು ಹೋಗುವುದು, ಜನಪ್ರಿಯಗೊಳಿಸುವುದು ’ಜನಶಕ್ತಿ ಉತ್ಸವ’ದ ಪ್ರಮುಖ ಗುರಿ. ಈ ವರ್ಷ ಈ ಕೆಳಗಿನ ಕೆಲವು ಹೊಸ ಅಂಶಗಳನ್ನು ಒಳಗೊಂಡ ಜನಶಕ್ತಿ ಉತ್ಸವ ಮತ್ತು ಪ್ರಚಾರಾಂದೋಲನ ೨೦೧೭ ಜುಲೈ-ಅಗಸ್ಟ್ ನಲ್ಲಿ ನಡೆಯಲಿದೆ.

 • ಜನಶಕ್ತಿ ಉತ್ಸವ ೨೦೧೭ರ ಒಟ್ಟಾರೆ ಥೀಮ್ ಇಂಡಿಯಾ ೭೦ : ಸಾಧನೆಗಳು, ಸವಾಲುಗಳು
 • ಅಗಸ್ಟ್ ೧೯ (ಶನಿವಾರ) ರಂದು ಬೆಂಗಳೂರಲ್ಲಿ ಜನಶಕ್ತಿ ಉತ್ಸವ ೨೦೧೭ ಉತ್ಸವ ನಡೆಯಲಿದೆ. ಕಾ. ಬೃಂದಾ ಕಾರಟ್ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ.
 • ಉತ್ಸವದಲ್ಲಿ ಮೊದಲ ಅರ್ಧದಿನ ಜನಶಕ್ತಿ ಬಳಗದ ಸಮಾವೇಶ ಹಾಗೂ ಎರಡನೇ ಅರ್ಧದಿನ ವ್ಯಾಪಕವಾಗಿ ಮಾಧ್ಯಮ/ಜನತೆಯ ಗಮನ ಸೆಳೆಯುವ ವಿಚಾರ ಸಂಕಿರಣ/ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಒಳಗೊಳ್ಳಲಿದೆ. ಜನಶಕ್ತಿ ವಿಶೇಷಾಂಕ ಬಿಡುಗಡೆನೂ ಮಾಡಬೇಕು.  ಜನಶಕ್ತಿ ವಿಶೇಷಾಂಕದ ಥೀಮ್ ಸಹ ಇಂಡಿಯಾ ೭೦ : ಸಾಧನೆಗಳು, ಸವಾಲುಗಳು ಆಗಿರಬೇಕು.
 • ರಾಜ್ಯ ಮಟ್ಟದ ಉತ್ಸವಕ್ಕೆ ಮೊದಲು, ಈ ವರ್ಷದಲ್ಲಿ ಮೊದಲ ಬಾರಿಗೆ ಜುಲೈ ೨೩ರಿಂದ ಅಗಸ್ಟ್ ೬ ರ ಅವಧಿಯಲ್ಲಿ ಒಂದು ದಿನ ಜಿಲ್ಲಾ ಮಟ್ಟದ ಜನಶಕ್ತಿ ಉತ್ಸವ, ಪ್ರಸಾರಾಂದೋಲನ ಮತ್ತು ಜನಶಕ್ತಿ ಬಳಗದ ಸಮಾವೇಶ ಗಳನ್ನು ಸಂಘಟಿಸಲಾಗುತ್ತದೆ.
 • ರಾಜ್ಯ ಮಟ್ಟದ ಉತ್ಸವಕ್ಕೆ ಮೊದಲು ಹಾಗೂ ಜಿಲ್ಲಾ ಮಟ್ಟದ ಉತ್ಸವಗಳ ನಂತರ ರಾಜ್ಯ ಮಟ್ಟದ ಬರಹಗಾರರ ಮತ್ತು ವರದಿಗಾರರ ಕಾರ್ಯಾಗಾರ ಸಂಘಟಿಸಬೇಕು.
 • ಜನಶಕ್ತಿ ಪತ್ರಿಕೆಯ ಪ್ರಸಾರ ಮತ್ತು ಫೇಸ್ ಬುಕ್ ಪುಟದ ಲೈಕ್ಗಳನ್ನು ವನ್ನು ಇಮ್ಮಡಿಯಷ್ಟು ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ.
 • ಜಿಲ್ಲಾ ಮಟ್ಟದ ಜನಶಕ್ತಿ ಉತ್ಸವಗಳ ಭಾಗವಾಗಿ ಉತ್ಸವ ಥೀಮ್ ನ ಒಂದು ಆಯಾಮದ ಸುತ್ತ ಒಂದು ವಿಶೇಷ ಉಪನ್ಯಾಸ/ಸಂವಾದ, ಓದುಗರ ವೇದಿಕೆ, ಜನಶಕ್ತಿ ಬಳಗದ ಸಮಾವೇಶ, ಪ್ರಸಾರಾಂದೋಲನದ ಉದ್ಘಾಟನೆ ಇರುತ್ತದೆ.
 • ಜಿಲ್ಲಾ ಮಟ್ಟದ ಜನಶಕ್ತಿ ಉತ್ಸವ, ಬಳಗದ ಸಮಾವೇಶದಿಂದ ಆರಂಭಿಸಿ ಎರಡು ವಾರಗಳ ಕಾಲ ಜಿಲ್ಲಾ ಮಟ್ಟದ ಪ್ರಸಾರಾಂದೋಲನ ನಡೆಸಲಾಗುತ್ತದೆ.
 • ಇನ್ನಷ್ಟು ವ್ಯಾಪಕವಾಗಿ ಪಕ್ಷದ ಮತ್ತು ನಮ್ಮ ಚಳುವಳಿಯ ಹೊರಗಿರುವ ಎಡ/ಪ್ರಜಾಸತ್ತಾತ್ಮಕ ಬುದ್ಧಿಜೀವಿಗಳು ಚಳುವಳಿಕಾರರನ್ನು ವಿಶೇಷಾಂಕದ ಲೇಖಕರಾಗಿ ಮತ್ತು ಇತರ ಎಲ್ಲಾ ಚಟುವಟಿಕೆಗಳಲ್ಲಿ ಒಳಗೊಳ್ಳಲು ಪ್ರಯತ್ನಿಸಬೇಕು.
 • ಜನಶಕ್ತಿ ಬಳಗದ ರಾಜ್ಯ ಮಟ್ಟದ ಒಂದು ಸಾಮಾಜಿಕ ಮಾಧ್ಯಮ ಕಾರ್ಯಾಗಾರವನ್ನು ಕಾರ್ಯಾಗಾರವನ್ನು ಜುಲೈ ನಲ್ಲಿ ಸಂಘಟಿಸಲಾಗುತ್ತದೆ.
 • ಜನಶಕ್ತಿಯ ಮುಂದಿನ ಬೆಳವಣಿಗಳಿಗೆ ನಿಧಿ ಸ್ಥಾಪಿಸಲು ವಿಶೇಷಾಂಕದ ಜಾಹೀರಾತುಗಳ ಮೂಲಕ ರೂ. ೨೫ ಲಕ್ಷದ ನಿಧಿಯ ಗುರಿ ಇಟ್ಟುಕೊಳ್ಳಲಾಗಿದೆ.