ಇದು ’ದಲಿತ vs ದಲಿತ ’ಪ್ರಶ್ನೆಯಲ್ಲ, ಭಾರತೀಯ ಗಣತಂತ್ರದ ಉಳಿವಿನ ಪ್ರಶ್ನೆ

ಸಂಪುಟ: 
11
ಸಂಚಿಕೆ: 
28
Sunday, 2 July 2017

ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್ ನಾಮಪತ್ರ ಇದು ’ದಲಿತvsದಲಿತ ’ಪ್ರಶ್ನೆಯಲ್ಲ, ಭಾರತೀಯ ಗಣತಂತ್ರದ ಉಳಿವಿನ ಪ್ರಶ್ನೆ-ಯೆಚುರಿ

೧೭ ಪ್ರತಿಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಶ್ರೀಮತಿ ಮೀರಾ ಕುಮಾರ್ ಅವರು ಜೂನ್ ೨೮ರಂದು ರಾಷ್ಟ್ರಪತಿ ಹುದ್ದೆಯ ಚುನಾವಣೆಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ ಎಂಬುದನ್ನು ಪಕ್ರಟಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಇದು ಒಂದು ’ದಲಿತ’ vs ದಲಿತ’ ಪ್ರಶ್ನೆಯಲ್ಲ, ಇದು ಭಾರತೀಯ ಗಣತಂತ್ರವನ್ನು ಕಾಯ್ದುಕೊಳ್ಳುವ ನಮ್ಮ ಹೋರಾಟ ಎಂದು ಹೇಳಿದ್ದಾರೆ.

ಆ ಕಡೆಯಲ್ಲಿ ಇರುವುದು ಭಾರತೀಯ ಗಣತಂತ್ರದ ಮತ್ತು ನಮ್ಮ ಮೂಲಭೂತ ಮೌಲ್ಯಗಳ ಬುನಾದಿಯನ್ನು ಧ್ವಂಸ ಮಾಡಲು ಹೊರಟಿರುವ ಪಕ್ಷಗಳು ಬೆಂಬಲಿಸಿರುವ ಒಬ್ಬ ಅಭ್ಯರ್ಥಿ. ಬಡಿದು ಸಾಯಿಸುವ ಜನಜಂಗುಳಿ ಹೆಚ್ಚುತ್ತಿರುವುದು ಮತ್ತು ವಿಶೇಷವಾಗಿ ದಮನಕ್ಕೊಳಗಾಗಿರುವ ವಿಭಾಗಗಳ ಜನಗಳ ಮೇಲೆ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಗಳು ಇಂತಹ ಜನಜಂಗುಳಿಯ ಹಿಂಸಾಚಾರಕ್ಕೆ ಪ್ರಭುತ್ವದ ಬೆಂಬಲವನ್ನು ಸೂಚಿಸುತ್ತದೆ.

ಭಾರತೀಯ ಸಂವಿಧಾನದ ಮೇಲೆ ಈ ದಾಳಿಗೆ, ದ್ವೇಷದ ರಾಜಕಾರಣವನ್ನು ಹುಟ್ಟು ಹಾಕಿದ ನಂತರ, ಮತ್ತು ಈಗ ಉನ್ನತ ಮುಖಂಡರಿಂದ, ವಿಶೇಷವಾಗಿ ಪ್ರಧಾನ ಮಂತ್ರಿಗಳ ಮೌನದಿಂದ, ಎಲ್ಲ ನಾಗರಿಕರಿಗೆ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಲು ದೊರೆಯುತ್ತಿರುವ ನೆರವು ಮತ್ತು ಕುಮ್ಮಕ್ಕಿಗಿಂತ ದೊಡ್ಡ ಸಾಕ್ಷ್ಯ ಬೇಕಿಲ್ಲ ಎಂದಿರುವ ಸೀತಾರಾಮ್ ಯೆಚುರಿಯವರು ಭಾರತದ ಉಳಿವಿಗೆ, ಮತ್ತು ಅದನ್ನು ಬಲಪಡಿಸಬೇಕಾದರೆ ಎಲ್ಲ ದೇಶಪ್ರೇಮಿ ಭಾರತೀಯರು ಈ ಹೋರಾಟವನ್ನು ನಡೆಸಬೇಕಾಗಿದೆ ಎಂದಿದ್ದಾರೆ.