ವೆನೆಜುವೆಲಾ ಏಕೆ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದೆ?

ಸಂಪುಟ: 
11
ಸಂಚಿಕೆ: 
26
date: 
Sunday, 18 June 2017
Image: 

ಬೊಲಿವೆರಿಯನ್ ಕ್ರಾಂತಿಯ ರಕ್ಷಣೆಗೆ ಅಣಿನೆರೆಯುತ್ತಿರುವ ವೆನೆಝುವೆಲ ಜನತೆ
 

ವೆನೆಜುವೆಲ ಈಗ ಒಂದು ತೀವ್ರ ವರ್ಗ ಹೋರಾಟವನ್ನು ಕಾಣುತ್ತಿದೆ. ಸಾಮ್ರಾಜ್ಯಶಾಹಿ-ಪ್ರೇರಿತ ಶ್ರೀಮಂತರ ಕೂಟ ಒಂದೆಡೆಯಲ್ಲಿ, ಶೋಷಿತ ಜನಕೋಟಿಗಳು ಇನ್ನೊಂದೆಡೆಯಲ್ಲಿ. ಸರಕಾರ ಚವೇಜ್ ಅನುಯಾಯಿಗಳನ್ನು ಮತ್ತು ಎಲ್ಲ ಜನತೆಯನ್ನು ಈ ಹೋರಾಟದಲ್ಲಿ ಅಣಿನೆರೆಸಲು ಶತಪ್ರಯತ್ನ ನಡೆಸುತ್ತಿದೆ. ಈ ವರ್ಷ ಮೇದಿನದಂದು ನಡೆದ ಬೃಹತ್ ರ್ಯಾಲಿ ಈ ನಿಟ್ಟಿನಲ್ಲಿ ಹೊಸ ಉತ್ಸಾಹ ಮೂಡಿಸಿದೆ. ತಮ್ಮ ದೇಶವನ್ನು ಮತ್ತೆ ಶೋಷಣೆಗೆ ಒಳಪಡಿಸುವ ಸಾಮ್ರಾಜ್ಯಶಾಹಿಯ ಬೃಹತ್ ಶಕ್ತಿಯನ್ನು ಎದುರಿಸಿ ನಿಂತಿರುವ ವೆನೆಜುವೆಲದ ಜನತೆಗೆ  ‘ಬೊಲಿವಿರಿಯನ್ ಕ್ರಾಂತಿ’ಯನ್ನು ಮುಂದುವರಿಸಲು ನಡೆಸುತ್ತಿರುವ ಈ ಹೋರಾಟಕ್ಕೆ ಎಲ್ಲ ಅಂತರ್ರಾಷ್ಟ್ರೀಯವಾದಿಗಳ ಬೆಂಬಲದ ಅತ್ಯಗತ್ಯವಿದೆ.

ಕಳೆದ ಆರು-ಏಳು ವಾರಗಳಿಂದ; ವೆನೆಜುವೆಲಾದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಧಿಕಾರದಿಂದ ಹೊರಹಾಕಲು ವಿರೋಧಿ ಗುಂಪುಗಳು ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿವೆ. ಕೆಲವು ವರದಿಗಳ ಪ್ರಕಾರ ಈ ಪ್ರತಿಭಟನೆಯಲ್ಲಿ ಇಲ್ಲಿಯವರೆಗೂ 42 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖ ಮಾಧ್ಯಮಗಳು ನಡೆಯುತ್ತಿರುವ ಹಿಂಸಾತ್ಮಾಕ ಪ್ರತಿಭಟನೆ ಕುರಿತಂತೆ, ನಿಕೋಲಸ್ ಆಡಳಿತದ ಸರ್ಕಾರವನ್ನು ದೂಷಿಸುತ್ತಿವೆ. ಮಾಧ್ಯಮಗಳ ಮೂಲಕ ವೆನೆಜುವೆಲಾದ ಬೆಳವಣಿಗೆಗಳ ಬಗ್ಗೆ ತಿಳಿದ ಅನೇಕರು ಜಗತ್ತಿನಾದ್ಯಂತ ಪ್ರಾಮಾಣಿಕವಾಗಿ ಚಿಂತೆಗೊಳಗಾಗಿ, ಮುಂದಿನ ಬೆಳವಣಿಗೆಗಳ ಬಗ್ಗೆ ಆತಂಕಕ್ಕೆ ಒಳಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಏನಾಗುತ್ತಿದೆ ಎಂಬುದನ್ನು ನೆಲಮಟ್ಟದಿಂದ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ.
 

ದಕ್ಷಿಣ ಅಮೆರಿಕಾ ಖಂಡದ ವೆನೆಜುವೆಲಾ ಎಂದ ತಕ್ಷಣ ಮೊಟ್ಟ ಮೊದಲು ನೆನಪಾಗುವುದು, ಅಮೆರಿಕಾದ ಎಲ್ಲ ವಿರೋಧಗಳ ನಡುವೆಯೂ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಕ್ರಾಂತಿ ಪುರುಷ ‘ಹ್ಯೂಗೋ ರಾಫೆಲ್ ಜಾವೆಜ್ ಪ್ರಿಯಾಜ್, ಹದಿನೈದು ವರ್ಷಗಳ ಕಾಲ ವೆನೆಜುವೆಲಾದ ಅಧ್ಯಕ್ಷರಾಗಿ ಆಡಳಿತ ನಡೆಸಿದ ಚಾವೆಜ್ ತನ್ನ ನಾಡಿನ ಲಕ್ಷಾಂತರ ಬಡ ಜನರ ಜೀವನನವನ್ನು ಮಾರ್ಪಡಿಸಿ ಉತ್ತಮ ಗೊಳಿಸಿದವರು, ಮಾತ್ರವಲ್ಲದೆ ಇಪ್ಪತೊಂದನೆ ಶತಮಾನದ ಜಾಗತಿಕ ರಾಜಕಾರಣದಲ್ಲಿ - ಸಮಾಜವಾದಿ ವಿಚಾರಗಳಿಗೆ ಪುನಶ್ಚೇತನ ನೀಡಿದ ಅವರು ಅಮೆರಿಕದ ಮುಕ್ತಮಾರುಕಟ್ಟೆ ಆರ್ಥಿಕತೆಗೆ ಪರ್ಯಾಯವಿದೆ ಎಂದು ಜಗತ್ತಿಗೆ ತೋರಿಸಿದ ಕ್ರಾಂತಿಕಾರಿ. ಚಾವೆಜ್‍ರವರ ಉತ್ತರಾಧಿಕಾರಿಯಾಗಿ ನಿಕೋಲಸ್ ಮಡುರೋ ಚಾವೆಜ್ ಬಿಟ್ಟು ಹೋಗಿರುವ ಬೊಲಿವರಿಯನ್ ಚಳುವಳೀಯ ಕ್ರಾಂತಿಯ ಹಾದಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ವೆನೆಜುವೆಲಾ ದೇಶವು ಸಾಮ್ರಾಜ್ಯಶಾಹಿ ವಿಶ್ವ ವ್ಯವಸ್ಥೆ ಹಾಗೂ ನವ-ಉದಾರವಾದ ಜಾಗತೀಕರಣಕ್ಕೆ ಸೆಡ್ಡು ಹೊಡೆದು - ಪ್ರತಿರೋಧ ಒಡ್ಡಿ ಂಐಃಂ ಮತ್ತು ಅಐಂಅ ಸ್ಥಾಪನೆ ಮಾಡಿದ ಹೊಸ ಹಾದಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು, ಲ್ಯಾಟೀನ್ ಅಮೆರಿಕದಲ್ಲಿ ಮಾತ್ರವಲ್ಲದೆ ವಿಶ್ವದ ಇತರೆ ಭಾಗಗಳಲ್ಲಿನ ಸಾಮ್ರಾಜ್ಯಶಾಹಿ ವಿರೋಧಿ ಗುಂಪುಗಳ ನಡುವೆಯೂ ಅಸಮಾನತೆಯ ವಿರುದ್ಧದ ಹೋರಾಟದಲ್ಲಿ ತೊಡಗಿರುವವರ ನಡುವೆಯೂ ಅನೇಕ ಅಭಿಮಾನಿಗಳನ್ನು ಪಡೆದುಕೊಂಡಿದೆ.

ವೆನೆಜುವೆಲಾದ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ತೀವ್ರತೆಯಿಂದಾಗಿ ಸಹಜವಾಗಿಯೇ ಕÀಂಗೆಟ್ಟ ಅಮೆರಿಕನ್ ಆಳರಸರು  ಸಂಚು ಹೂಡಿದ್ದಾರೆ. ವಿರೋಧಿ ಗುಂಪುಗಳಿಗೆ ನಿಧಿ ನೀಡುವುದು, ಹಾಗೂ ಮಿಲಿಟರಿ ಮೇಲೆ ಪ್ರಭಾವ ತರುವುದು, ದಂಗೆಗಳಿಗೆ ಉತ್ತೇಜನ ನೀಡಲು ಶತ-ಶತಕೋಟಿ ಡಾಲರ್‍ಗಳನ್ನು ಇಲಲಿಗೆ ಸುರಿಯಲಾಗುತ್ತಿದೆ.

ವೆನಿಜುವೆಲಾದ ಅಧ್ಯಕ್ಷರಾದ ‘ನಿಕೋಲಸ್ ಮಡುರೋ’ ಚಾವೆಜ್ ನಂತರ, ಬೊಲಿವೇರಿಯಸ್ ಕ್ರಾಂತಿಯನ್ನು ಬಲಪಡಿಸಲು, ಸಾಮ್ರಾಜ್ಯಶಾಹಿ ವಿರೋಧಿ ನೀತಿಗಳನ್ನು ಮುಂದುವರಿಸಲು ಶಪತ ಕೈಗೊಂಡಿದ್ದಾರೆ. ಇದರಿಂದಾಗಿ, ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಡುರೋ ಅಧ್ಯಕ್ಷರಾಗಿ, ಆಡಳಿತ ಆರಂಭಿಸಿದ ದಿನದಿಂದಲೂ ಬಲಪಂಥೀಯ ವಿರೋ ಧ ಪಕ್ಷಗಳು ಕೆಲವೇ ಶ್ರೀಮಂತರಿರುವ ಒಂದು ಕೂಟದ  ನೇತೃತ್ವದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹ್ಯೂಗೋ ಚಾವೆಜ್ ರವರ ಬೊಲಿವೇರಿಯನ್ ಕ್ರಾಂತಿಯನ್ನು ಕ್ರೋಡಿಕರಿಸುವುದನ್ನು  ಹೇಗಾದರೂ ಮಾಡಿ ತಡೆಯಬೇಕೆನ್ನುವ  ಅಮೆರಿಕಾದ ಬೆಂಬಲ ಅವರಿಗೆ ದಂಡಿಯಾಗಿ ದೊರೆಯುತ್ತಿದೆ.

ಶೇ. 80 ರಷ್ಟು ದೇಶದ ಕೈಗಾರಿಕ ಉತ್ಪಾದನೆಯ ಮೇಲೆ ಈ ಶ್ರೀಮಂತರ ಕೂಟದ ನಿಯಂತ್ರಣವನ್ನು  ಬಳಸಿಕೊಂಡು, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆರ್ಥಿಕ ಯುದ್ಧ ಆರಂಭಿಸಿದ್ದಾರೆ. ಜನರ ದೈನಂದಿನ ಬಳಕೆಯ ಅಗತ್ಯ ವಸ್ತುಗ¼ ಕಳ್ಳ ದಾಸ್ತಾನುಗಳ ಮೂಲಕ ಕೃತಕ ಕೊರತೆಯನ್ನು ಸೃಷ್ಟಿಸಿದ್ದಾರೆ. ಅಮೆರಿಕದ ಸಹಾಯದಿಂದ ಇಲ್ಲಿನ  ಬೊಲಿವರ ಕರೆನ್ಸಿಯ ವಿನಿಮಯ ದರಗಳಲ್ಲಿ ಆಟವಾಡುತ್ತ ಆರ್ಥಿಕ್ಕೆ ತೊಂದರೆಯುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ.  ಇದರಿಂದಾಗಿ ವೆನೆಝುವೆಲಾದ ಆರ್ತಿಕ ವಯವಸ್ಥೆ ನಿಜಕ್ಕೂ ಬಹಳ ಕಷ್ಟಕ್ಕೀಡಾಗಿದೆ. ಇದನ್ನು ಬಳಸಿಕೊಂಡು ಜನಗಳನ್ನು ಮಡುರೊ ಸರಕಾರದ ವಿರುದ್ಧ ಎತ್ತಿಕಟ್ಟಿ ಪದಚ್ಯುತಗೊಳಿಸುವುದು ಅವರ ಹುನ್ನಾರ.

ಮಡುರೊ ಅವರ ಬೊಲಿವಿರಿಯನ್ ಸರಕಾರವು ಈ ಕಷ್ಟಕರಗೊಳಿಸಿರುವ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಬೆಲೆಗಳ ನಿಯಂತ್ರಣಗಳನ್ನು ಜಾರಿಗೆ ತರುವ ಮೂಲಕ ಕಳ್ಳ ದಾಸದತಾನುಗಳನ್ನು ಹೊರಗೆಳೆದು ಅಗತ್ಯ ವಸ್ತುಗಳ ಸೂಕ್ತ ಪೂರೈಕೆಗೆ ಪ್ರಯತ್ನನಡೆಸಿದೆ. ಕರೆನ್ಸಿ ನಿಯಂತ್ರಣ, ಹಣದುಬ್ಬರ ನಿಯಂತ್ರಣ ಇಂತಹ ಹಲವು ಕ್ರಮಗಳನ್ನು ತೆಗೆದುಕೊಂಡಿತು. ಆದರೆ ಈ ಅವಧಿಯಲ್ಲಿ ತೈಲ ಬೆಲೆಗಳು ಇಳಿಮುಖಗೊಂಡು ಇದನ್ನು ಬಹುವಾಗಿ ಆಧರಿಸಿರುವ ಆರ್ಥಿಕತೆಗೆ ಹಾನಿ ಉಂಟಾಗಿದ್ದ ಕಾರಣ, ತೆಗೆದುಕೊಂಡ ಎಲ್ಲಾ ಕ್ರಮಗಳು ಪರಿಸ್ಥಿತಿ ಸುಧಾರಣೆಗೆ ಸಹಕರಿಸಲಿಲ್ಲ.

ಈ ಕಷ್ಟಗಳ ಸಂದರ್ಭದಲ್ಲಿಯೂ, ಬೊಲಿವೇರಿಯನ್ ಸರ್ಕಾರವು ತಾನು ಆರಂಭಿಸಿದ್ದ ಯಾವುದೇ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತಗೊಳಿಸಲಿಲ್ಲ ಎಂಬುದು ಗಮನಾರ್ಹ. ದೇಶದ ಜನತೆಗೆ ಒದಗಿಸುತ್ತಿದ್ದ ಉಚಿತ ಆರೋಗ್ಯ ಮತ್ತು ಶಿಕ್ಷಣವನ್ನು ಮುಂದುವರಿಸುತ್ತಿದೆ. ಇತ್ತೀಚಿನ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ವೆನೆಜುವೆಲಾ 188 ದೇಶಗಳ ಪೈಕಿ, 71 ನೇ ಸ್ಥಾನದಲ್ಲಿರುವುದು, ಉನ್ನತ ಮಾನವಭಿವೃದ್ಧಿಯ ಗುಂಪಿನಲ್ಲಿ ನಿಂತಿದೆ. ಇದು ಲ್ಯಾಟೀನ್ ಅಮೇರಿಕಾದದಿತರ ಹಲವು ದಏಶಗಳಿಗಿಂತ ಮೇಲಿನ ಸಥಾನದಲ್ಲಿದೆ- ಮೆಕ್ಸಿಕೋ (77) ನೇ ಸ್ಥಾನ, ಬ್ರೆಜಿಲ್ (79) ಸ್ಥಾನ, ಪೆರು (87) ನೇ ಸ್ಥಾನ ಹಾಗೂ ಕೊಲೊಂಬಿಯಾ (95) ನೇ ಸ್ಥಾನ ಹೊಂದಿವೆ.

ವೆನೆಜುವೆಲಾ ನಾಗರೀಕರಿಗೆ ವಿಶ್ವದಾದ್ಯಂತ ಒದಗಿಸುವ ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ವಿಶ್ವದಾದ್ಯಂತದಲ್ಲಿ ಎರಡನೆ ಸ್ಥಾನದಲ್ಲಿದೆ ಪ್ರತಿ 250 ಕುಟುಂಬಗಳಿಗೆ ಒಂದು ಪ್ರಥಮಿಕ ಆರೋಗ್ಯ ಕೇಂದ್ರ ಹೊಂದಿದೆ. ಆರೋಗ್ಯ ಕೇಂದ್ರ ಹೊಂದಿದೆ. ಕೇವಲ ಸಮಾಜವಾದಿ ಕ್ಯೂಬಾ ಮಾತ್ರ ವೆನೆಜುವೆಲಾಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಶೇ. 97.3 ರಷ್ಟು ವೆನೆಜುವೆಲಾದ ಜನರು ಸಮೃದ್ಧ ಪ್ರೋಟಿನ್ ಸೇವಿಸುತ್ತಾರೆ ಮತ್ತು 98 ಪ್ರತಿಶತದಷ್ಟು ಮಕ್ಕಳಿಗೆ ಹಾಲು ಲಭ್ಯವಿದೆ.

ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಲ್ಯಾಟಿನ್ ಅಮೆರಿಕಾದಲ್ಲಿ ಕ್ಯೂಬಾದ ನಂತರದ ಸ್ಥಾನ ಈಗಲೂ ವೆನೆಜುವೆಲಾದ್ದೇ, ಹಾಗೂ ಪ್ರಪಂಚದಲ್ಲಿಯೇ ಐದನೆಯ ಸ್ಥಾನ ಹೊಂದಿದೆ. ಸಾರ್ವತ್ರಿಕ ಸಾಕ್ಷರತೆಯಲ್ಲಿಯೂ ಈ ಪ್ರದೇಶದಲ್ಲಿ ಎರಡನೆ ಸ್ಥಾನದಲ್ಲಿದೆ. ಇಲ್ಲಿಯಾ ಕ್ಯೂಬಾ ಮೊದಲನೆ ಸ್ಥಾನದಲ್ಲಿದೆ. ಕಳೆದ ಆರು ವರ್ಷಗಳಲ್ಲಿ 14,00,137 ಲಕ್ಷ ಮನೆಗಳನ್ನು ನಿರ್ಮಿಸಿ, ಎಲ್ಲರಿಗೂ ವಸತಿ ಕಲ್ಪಿಸಲು ಇದು ಶ್ರಮಿಸುತ್ತಿದೆ.
 

ಕೃತಕ ಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರವು ಸ್ಥಳೀಯ ಸರಬರಾಜು ಮತ್ತು ಉತ್ಪಾದನಾ ಸಮಿತಿಗಳನ್ನು (ಅಐಂಅ) ರಚಿಸಿ, ಇವುಗಳ ಮೂಲಕ ದೇಶದಾದ್ಯಂತ ನ್ಯಾಯಯುತ ದರಗಳಲ್ಲಿ ಮೂಲ ಆಹಾರ ಬ್ಯಾಸ್ಕಟ್‍ಗಳ ಮೂಲಕ ನೇರವಾಗಿ ಆಹಾರದ ವಿತರಣಾ ವ್ಯವಸ್ಥೆಯನ್ನು ರಚಿಸಿ ಕಾರ್ಯ ನಿರ್ವಹಿಸುತ್ತಿದೆ. ಡಾಟನಾಲಿಸಿಸ್ ಸಂಶೋಧನಾ ಸಂಸ್ಥೆಯು, ಶೇ.50 ರಷ್ಟು ಜನರು ವೆನೆಜುವೆಲಾದಲ್ಲಿ ಅಐಂಅ ಉತ್ಪನ್ನಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದೆ. 2017 ರ ಪೆಬ್ರವರಿಯಲ್ಲಿ 57,34,705 ಕುಟುಂಬಗಳು ಈ ಸರಕುಗಳನ್ನು ಪಡೆದಿವೆ.

ಪ್ರಮುಖವಾಗಿ ಕುಟುಂಬಗಳಿಗೆ ಆಹಾರ ಚೀಲಗಳನ್ನು ತಿಂಗಳಿಗೆ ಕೊಡುತ್ತಿದ್ದನ್ನು ಕಮ್ರೇಣ 15 ದಿನಗಳಿಗೆ ಒಮ್ಮೆ ವಿತರಿಸಲು ಆರಂಭಿಸಿದ್ದರು. ಈ ಆಹಾರ ಚೀಲಗಳಲ್ಲಿ ಹಿಟ್ಟು, ಖಾದ್ಯತೈಲ, ಅಕ್ಕಿ, ಮೆಣಸಿನ ಪುಡಿ, ಹಾಲು, ಸಕ್ಕರೆ, ಗೋಧಿ, ಟೊಮೆಟೊಗಳು, ಸಾಸ್, ಕಾಫೀ-ಟೀ ಪುಡಿ ಇತ್ಯಾದಿಗಳನ್ನು ಪೂರೈಸಲಾಗುತ್ತಿದೆ. ಹ್ಯೂಗೋ ಚಾವೆಜ್ ತಂದ  ಸಂವಿಧಾನ ಆಹಾರ ಲಭ್ಯತೆಯನ್ನು ನಾಗರಿಕರ ಹಕ್ಕಾಗಿ ಮಾಡಿತ್ತು. ಇದನ್ನು ಎಲ್ಲ ಕಷ್ಟಗಳ ನಡುವೆಯೂ ಮುಂದುವರೆಸಲಾಗುತ್ತಿದೆ. ಆದರೂ ವಿರೋಧಿ ಗುಂಪುಗಳು ಗಲಭೆ, ಹಿಂಸಾಚಾರದಲ್ಲಿಯೇ ನಿರತರಾಗಿವೆ.

 ಅಮೆರಿಕವು ಕೊಲಂಬಿಯಾದ ಪ್ಯಾರಾ-ಮಿಲಿಟರಿ ಗುಂಪುಗಳ ಸಹಾಯದಿಂದ ವೆನಜುವೆಲಾ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳನ್ನು ಪ್ರೇರೇಪಿಸಿ ಹಿಂಸಾತ್ಮಕ ಕ್ರಿಯೆಯಲ್ಲಿ ತೊಡಗಿದೆ. ರಾಕೆಟ್ ಲಾಂಚರ್‍ಗಳ ಮೂಲಕವು ಈ ಗುಂಪುಗಳು ಹಿಂಸೆ ನಡೆಸುತ್ತಿವೆ.

ವಿರೋಧ ಪಕ್ಷಗಳೊಂದಿಗೆ ಸರಕಾರ ಸಂವಾದಕ್ಕೂ  ಸಿದ್ಧವಾಗಿದೆ. ಹಲವರು, ಸ್ವತಃ ಪೋಪ್ ಪ್ರಾನ್ಸಿಸ್ ಹೇಳಿದರೂ ವಿರೋಧ ಪಕ್ಷಗಳು ಇಂತಹ ಸಂವಾದಕ್ಕೆ ಸಿದ್ಧವಾಗಿಲ್ಲ, ಏಕೆಂದರೆ ಅವರು  ಶಾಂತಿ ಸ್ಥಾಪನೆಗೆ ಸಿದ್ದರಿಲ್ಲ. ಅವರದ್ದು  ಅಮೆರಿಕ ಪ್ರೇರಿತ ವಿರೋಧವಾಗಿದೆ. ಅವರ ಒಂದೆ ಬೇಡಿಕೆ ಅಧ್ಯಕ್ಷ ನಿಕೋಲಸ್ ಮಡೋರೋ ರವರ ಪದಚ್ಯುತಿಯೊಂದೆ.

ಇಂತಹ ಸನ್ನಿವೇಶದಲ್ಲಿ ಅಧ್ಯಕ್ಷ ಮಡುರೋ ರವರು ಸಂವಿಧಾನ ಬದ್ಧವಾದ ತಮ್ಮ ಅಧಿಕಾರವನ್ನು ಬಳಸಿಕೊಂಡು, 500 ಸದಸ್ಯರಿರುವ ಸಂವಿಧಾನ ಸಭೆಗೆ ಚುನಾವಣೆಗೆ ಕರೆ ನೀಡಿದರು. ಆದರೆ ವಿರೋಧ ಪಕ್ಷಗಳು ಇಈ ಚುನಾವಣೆಯಲ್ಲಿ ಭಾಗವಹಿಸಲು ಕೂಡ ಸಿದ್ಧವಿಲ್ಲ. ಏಕೆಂದರೆ ಆಗ ತಮ್ಮ ಧೋರಣೆಗಳನ್ನು ಜನಗಳ: ಮುಂದಿಡಬೇಕಾಗುತ್ತದೆ, ಜನಗಳ ಮುಂದೆ ತಮ್ಮ ಜನ-ವಿರೋಧಿ ನಿಲುವು ಬಯಲಾಗಿ ಚುನಾವಣೆಯಲ್ಲಿ ತಮ್ಮ ಸೋಲು ಖಚಿತವೆಂಬ ಭಯ ಅವಕ್ಕೆ.

ಒಟ್ಟಾರೆಯಾಗಿ ಅಮೆರಿಕಾದ ಸಾಮ್ರಾಜ್ಯಶಾಹಿ ಬಿಗಿಮುಷ್ಠಿಯಿಂದ ಸಿಕ್ಕಿ ಉಸಿರುಕಟ್ಟುವಂಥ ಸ್ಥಿತಿಯಲ್ಲಿದ್ದ ಲ್ಯಾಟಿನ್ ಅಮೆರಿಕ ದೇಶಗಳನ್ನು ಸಮಾಜವಾದ ವ್ಯವಸ್ಥೆಯತ್ತ ಕೊಂಡೊಯ್ಯುವ ಹ್ಯೂಗೋ ಚಾವೇಜ್‍ರ ‘ವೆನಿಜುವೆಲಾ’ ಇಂದು ಹೊತ್ತಿ ಉರಿಯುವಂತೆ ಮಾಡುವ ಅಮೇರಿಕದ ಪಿತೂರಿಯನ್ನು ಸೋಲಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ವಾಸ್ತವವಾಗಿ ವೆನೆಜುವೆಲ ಈಗ ಒಂದು ತೀವ್ರ ವರ್ಗ ಹೋರಾಟವನ್ನು ಕಾಣುತ್ತಿದೆ. ಸಾಮ್ರಾಜ್ಯಶಾಹಿ-ಪ್ರೇರಿತ ಶ್ರೀಮಂತರ ಕೂಟ ಒಂದೆಡೆಯಲ್ಲಿ, ಶೋಷಿತ ಜನಕೋಟಿಗಳು ಇನ್ನೊಂದೆಡೆಯಲ್ಲಿ. ಸರಕಾರ ಚವೇಜ್ ಅನುಯಾಯಿಗಳನ್ನು ಮತ್ತು ಎಲ್ಲ ಜನತೆಯನ್ನು ಈ ಹೋರಾಟದಲ್ಲಿ ಅಣಿನೆರೆಸಲು ಶತಪ್ರಯತ್ನ ನಡೆಸುತ್ತಿದೆ. ಈ ವರ್ಷ ಮೇದಿನದಂದು ನಡೆದ ಬೃಹತ್ ರ್ಯಾಲಿ ಈ ನಿಟ್ಟಿನಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ತಮ್ಮ ದೇಶವನ್ನು ಮತ್ತೆ ಶೋಷಣೆಗೆ ಒಳಪಡಿಸುವ ಸಾಮ್ರಾಜ್ಯಶಾಹಿಯ ಬೃಹತ್ ಶಕ್ತಿಯನ್ನು ಎದುರಿಸಿ ನಿಂತಿರುವ ವೆನೆಜುವೆಲದ ಜನತೆಗೆ ‘ಬೊಲಿವಿರಿಯನ್ ಕ್ರಾಂತಿ’ಯನ್ನು ಮುಂದುವರಿಸಲು ನಡೆಸುತ್ತಿರುವ ಈ ಹೋರಾಟಕ್ಕೆ ಎಲ್ಲ ಅಂತರ್ರಾಷ್ಟ್ರೀಯವಾದಿಗಳ ಬೆಂಬಲದ ಅತ್ಯಗತ್ಯವಿದೆ.
 

 

 

- ನಾಗರಾಜ ನಂಜುಂಡಯ್ಯ